Monday, January 31, 2011

ಹಾಲು ಉತ್ಪಾದಕರ ರೈತರಿಗೆ ಪ್ರತೀ ಲೀಟರಿಗೆ 50 ಪೈಸೆ ಪ್ರೋತ್ಸಾಹಧನ

ಮಂಗಳೂರು, ಜನವರಿ.31:ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕುವ ಸದಸ್ಯರಿಗೆ ದಿನಾಂಕ 1-2-2011 ರಿಂದ ಅನ್ವಯವಾಗುವಂತೆ ಪ್ರತೀ ಲೀಟರಿಗೆ 50 ಪೈಸೆಯನ್ನು ಪ್ರೋತ್ಸಾಹ ಧನವನ್ನಾಗಿ ನೀಡಲು ನಿರ್ಧರಿಸಲಾಗಿದೆ. ಈ ಹೆಚ್ಚಳವು ದಿನಾಂಕ 31-3-11 ರ ವರೆಗೆ ಅನ್ವಯವಾಗುತ್ತದೆ.ಉಭಯ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಪ್ರೋತ್ಸಾಹನೀಡುವ ನಿಟ್ಟಿನಲ್ಲಿ ಈ ಹಿಂದೆ 1-12-10 ರಿಂದ ಹೆಚ್ಚಿಸಿದ 50 ಪೈಸೆ ಪ್ರೋತ್ಸಾಹ ಧನ ಸೇರಿದಂತೆ ಒಟ್ಟಾರೆ ರೂ.1.00 ನ್ನು ಪ್ರೋತ್ಸಾಹಧನವಾಗಿ ನೀಡಿದಂತಾಗುವುದರಿಂದ ಈಗಿರುವ ಕನಿಷ್ಠ ಹಾಲು ಖರೀದಿ ಬೆಲೆಯು ರೂ.17.50 ಕ್ಕೆ ಹೆಚ್ಚಿದಂತಾಗುತ್ತದೆ. ಒಕ್ಕೂಟದ ಆಡಳಿತ ಮಂಡಳಿಯ ಈ ತೀರ್ಮಾಣ ನದ ಪೂರ್ಣ ಪ್ರಯೋಜನವನ್ನು ಪಡೆದು ಉಭಯ ಜಿಲ್ಲೆಗಳ ರೈತರು ಉತ್ತಮ ಗುಣಮಟ್ಟದ ಅಧಿಕ ಹಾಲನ್ನು ಉತ್ಪಾದಿಸಿ ತಮ್ಮ ಸಂಘಗಳ ಮೂಲಕ ಒಕ್ಕೂಟಕ್ಕೆ ಒದಗಿಸುವಂತೆ ಒಕ್ಕೂಟದ ಅದ್ಯಕ್ಷರು ವಿನಂತಿಸಿದ್ದಾರೆ.