Monday, January 10, 2011

ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಿಗೆ ರೂ.3.75 ಕೋಟಿ ಸಾಲ ಸೌಲಭ್ಯ ನೆರವು

ಮಂಗಳೂರು, ಜನವರಿ 10:ಕರ್ನಾಟಕ ಸರ್ಕಾರ ಮತೀಯ ಅಲ್ಪ ಸಂಖ್ಯಾತರ ಏಳಿಗೆಗಾಗಿ ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿದ್ದು ದಕ್ಷಿಣಕನ್ನಡ ಜಿಲ್ಲೆಯಲ್ಲಿ 2010-11 ನೇ ಸಾಲಿನ ಡಿಸೆಂಬರ್ ಅಂತ್ಯದ ವರೆಗೆ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ರೂ.3.75 ಕೋಟಿ ಗಳಿಗೂ ಅಧಿಕ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಸೋಮಪ್ಪ ಅವರು ತಿಳಿಸಿದ್ದಾರೆ.

ಅವರು ಮಂಗ ಳೂರು ತಾಲ್ಲೂಕು ಮಂಜ ನಾಡಿ ಸರ ಕಾರಿ ಹಿರಿಯ ಮಾಧ್ಯ ಮಿಕ ಶಾಲಾ ಆವರ ಣದಲ್ಲಿ ಇಂದು ವಾರ್ತಾ ಇಲಾಖೆ,ಮಂಗ ಳೂರು ವತಿ ಯಿಂದ ಏರ್ಪ ಡಿಸಿದ್ದ ಅಲ್ಪ ಸಂಖ್ಯಾ ತರಿಗೆ ಸರ ಕಾರ ದಿಂದ ಸಿಗುವ ಸೌಲಭ್ಯ ಗಳು ಕುರಿತ ವಿಚಾರ ಸಂಕಿ ರಣ ದಲ್ಲಿ ಉಪ ನ್ಯಾಸ ನೀಡಿ ಮಾತನಾಡಿದರು.ಶ್ರಮಶಕ್ತಿ ಯೋಜನೆಯಡಿ ಅಲ್ಪಸಂಖ್ಯಾತರ ಗ್ರಾಮೀಣ ಕುಶಲ ಕರ್ಮಿಗಳ ಹಾಗೂ ವೃತ್ತಿ ಕುಲ ಕಸಬುದಾರರ ಕುಶಲತೆ ಹಾಗೂ ತಂತ್ರಜ್ಞಾನ ಉತ್ತಮ ಪಡಿಸಲಿಕ್ಕಾಗಿ 508 ಜನರಿಗೆ ರೂ.79.20 ಲಕ್ಷ ಸಾಲ ನೀಡುವ ಗುರಿಯನ್ನು ಹೊಂದಲಾಗಿದ್ದು,2010ರ ಡಿಸೆಂಬರ್ ಅಂತ್ಯಕ್ಕೆ 632 ಫಾನುಭವಿಗಳಿಗೆ ರೂ.94.80 ಲಕ್ಷ ಸಾಲ ಒದಗಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಲಾಗಿದೆ.ಕಿರು ಸಾಲ ಅಥವಾ ಮೈಕ್ರೋ ಕ್ರೆಡಿಟ್ ಯೋಜನೆಯಡಿ ನಗರ ಪ್ರದೇಶದಲ್ಲಿ ಹಾಗೂ ಗ್ರಾಮಗಳಲ್ಲಿ ವಾಸಿಸುವ ಅಲ್ಪ ಸಂಖ್ಯಾತರು ನಡೆಸುವ ತಳ್ಳು ಗಾಡಿ ವ್ಯಾಪಾರ,ತರಕಾರಿ,ಹಣ್ಣು ವ್ಯಾಪಾರ,ಕಲಾಯಿ,ಹಾಸಿಗೆ ಮಾಡುವಿಕೆ,ಪಾನ್ ಶಾಪ್,ಕಡಲೆಕಾಯಿ ವ್ಯಾಪಾರ, ಸೈಕಲ್ ಶಾಪ್ ಇತ್ಯಾದಿ ಸಣ್ಣ ಪಟ್ಟ ವಹಿವಾಟುಗಳ 1008 ಮಂದಿಗೆ 1.80 ಕೋಟಿ ಸಾಲ ನೀಡುವ ಗುರಿಯನ್ನು 1022 ಮಂದಿಗೆ 1 ಕೋಟಿ 2 ಲಕ್ಷ ಸಾಲ ಸೌಲಭ್ಯ ಒದಗಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಲಾಗಿದೆ. ಇದೇ ರೀತಿ ಸ್ವಾವಲಂಬನೆ ಯೋಜನೆಯನ್ವಯ 199 ಜನರಿಗೆ 27.13 ಲಕ್ಷ, ಅರಿವು ಯೋಜನೆಯಲ್ಲಿ ಗಂಗಾ ಕಲ್ಯಾಣ ಯೋಜನೆಯನ್ವಯ 109 ಜನರಿಗೆ 93 ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿ ಹಾಗೂ ಪಂಪ್ಸೆಟ್ಗಳನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸೋಮಪ್ಪ ತಿಳಿಸಿದರು.ವಿಚಾರ ಸಂಕಿ ರಣ ವನ್ನು ಉದ್ಘಾ ಟಿಸಿದ ಮಂಜ ನಾಡಿ ಗ್ರಾಮ ಪಂಚಾ ಯತ್ ಅಧ್ಯಕ್ಷ ರಾದ ಇಸ್ಮಾ ಯಿಲ್ ದೊಡ್ಡ ನೆ ಅವರು ಮಾತ ನಾಡಿ ಮತೀಯ ಅಲ್ಪ ಸಂಖ್ಯಾ ತರಿಗೆ ಸರ್ಕಾರ ದಿಂದ ದೊರ ಕುವ ಸೌಲಭ್ಯ ಗಳ ಬಗ್ಗೆ ವಾರ್ತಾ ಇಲಾಖೆ ಅರಿವು ಮೂಡಿ ಸುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಶಾಲಾ ಸಹ ಶಿಕ್ಷಕಿ ವಿಶಾಲಾಕ್ಷಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಇಫ್ತಿಕಾರ್,ಅಬ್ಬಾಸ್,ಅತಾವುಲ್ಲಾ,ಗ್ರಾಮ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.ವಾರ್ತಾ ಇಲಾಖೆ ಬಿ.ಆರ್.ಚಂದ್ರಶೇಖರ್ ಆಜಾದ್ ಸ್ವಾಗತಿಸಿ,ಶಾಲೆಯ ಶಿಕ್ಷಕ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್ ವಂದಿಸಿದರು. ಕರಾವಳಿ ಜನಪದ ಕಲಾ ವೇದಿಕೆಯವರಿಂದ ಸಾವಯುವ ಅಜ್ಜ ನಾಟಕ ಏರ್ಪಡಿಸಲಾಗಿತ್ತು.