Monday, January 31, 2011

ವಿಜ್ಞಾನ ಪಾರ್ಕ್ ಅರಂಭಿಸಿ - ಎನ್.ಯೋಗೀಶ್ ಭಟ್

ಮಂಗಳೂರು, ಜನವರಿ.31: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳು ಅರಳಲು ಅವರಿಗೆ ಸೂಕ್ತವಾದ ಪ್ರೋತ್ಸಾಹ ನೆರವು ಆವಶ್ಯಕ.ಇಂತಹ ನೆರವು ಬಾಲಭವನದಿಂದ ಸಾಧ್ಯವಾಗುತ್ತಿದ್ದು,ಮಕ್ಕಳು ವೈಜ್ಞಾನಿಕವಾಗಿಯೂ ತಮ್ಮಲ್ಲಿನ ಬುದ್ದಿ ಮತ್ತೆಯನ್ನು ಬೆಳಕಿಗೆ ತರಲು ಕದ್ರಿ ಉದ್ಯಾನವನದಲ್ಲಿ ವಿಜ್ಞಾನ ಪಾರ್ಕ್ ಆರಂಭಿಸುವ ಆವಶ್ಯಕತೆ ಇದೆ ಎಂದು ಕರ್ನಾಟಕ ವಿಧಾನಸಭೆಯ ಉಪ ಸಭಾಪತಿ ಎನ್.ಯೋಗೀಶ್ ಭಟ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅವರು ಇಂದು ರಾಜ್ಯ ಬಾಲ ಭವನ ಸೊಸೈಟಿ ಬೆಂಗ ಳೂರು,ಜಿಲ್ಲಾ ಬಾಲ ಭವನ ಸಮಿತಿ ಮಂಗ ಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ ಮಂಗ ಳೂರು ಇವರ ಸಂಯುಕ್ತಾ ಶ್ರಯ ದಲ್ಲಿ ಮಂಗಳೂರು ನಗರದ ಕದ್ರಿ ಉದ್ಯಾನವನ ಬಾಲಭವನದಲ್ಲಿ ಆಯೋಜಿಸಿದ್ದ ಕಲಾಶ್ರೀ ಪ್ರಶಸ್ತಿ ವಿಜೇತರಿಗೆ ಸನ್ಮಾನ ಹಾಗೂ ಜಿಲ್ಲಾ ಬಾಲ ಭವನ ನವೀಕೃತ ಕಟ್ಟಡ ಹಾಗೂ ಚಿಣ್ಣರ ರೈಲು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಬಾಲ ಭವನ ದ ಪಕ್ಕ ದಲ್ಲಿ ಖಾಲಿ ಇರುವ ಜಾಗವು ವಿಜ್ಞಾನ ಪಾರ್ಕಿಗೆ ಪ್ರಶಸ್ತ ವಾಗಿದ್ದು,ಕಟ್ಟಡ ನಿರ್ಮಾ ಣಕ್ಕೆ ದಾನಿ ಗಳು ಧನ ಸಹಾಯ ಮಾಡಲು ಉತ್ಸುಕ ರಾಗಿ ದ್ದಾರೆ ಎಂದರು. ಮಕ್ಕಳ ಪ್ರತಿಭೆಗಳ ವಿಕಾಸಕ್ಕೆ ಸಂಘ ಸಂಸ್ಥೆಗಳು ಸಹ ಕೈ ಜೋಡಿಸಬೇಕೆಂದರು.
ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಮಕ್ಕಳ ಪ್ರತಿಭಾ ವಿಕಾಸಕ್ಕೆ ರಾಜ್ಯ ಸರ್ಕಾರ ಎಲ್ಲಾರೀತಿಯ ನೆರವು ನೀಡಿದೆಯೆಂದರು.ರಾಜ್ಯ ಬಾಲಭವನ ಸೊಸೈಟಿಯ ಅಧ್ಯಕ್ಷರಾದ ಸುಲೋಚನಾ ಜಿ.ಕೆ.ಭಟ್ ಅವರು ಮಾತನಾಡಿ ಬಾಲಭವನ ನಿರಂತರ ಚಟುವಟಿಕೆಯ ತಾಣವಾಗಿರಬೇಕು,ಇಲ್ಲಿಯ ಕಾರ್ಯ ಚಟುವಟಿಕೆಗಳು ತಾಲ್ಲೂಕು ಮಟ್ಟಕ್ಕೂ ವಿಸ್ತರಿಸುವ ಅಗತ್ಯವಿದೆ ಎಂದರು.
ಸಮಾ ರಂಭ ದಲ್ಲಿ ಮೇಯರ್ ರಜನಿ ದುಗ್ಗಣ್ಣ ,ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ.ನಾಗ ರಾಜ ಶೆಟ್ಟಿ,ಮಹಾ ನಗರ ಪಾಲಿಕೆ ಆಯುಕ್ತ ರಾದ ಡಾ.ವಿಜಯ ಪ್ರಕಾಶ್,ಪಾಲಿಕೆ ಸದಸ್ಯೆ ರೂಪಾ.ಡಿ.ಬಂಗೇರ,ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರಾ ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.
ರಾಜ್ಯ ಮಟ್ಟದಲ್ಲಿ ಬಾಲಶ್ರೀ ಪ್ರಶಸ್ತಿ ಪಡೆದು ರಾಷ್ಟ್ರ ಬಾಲಶ್ರೀ ಪ್ರಶಸ್ತಿ ಪಡೆದಿರುವ ದ.ಕ. ಜಿಲ್ಲೆಯ ಸುಳ್ಯದ ಮಾಸ್ಟರ್ ಸೂರಜ್ ಸೇರಿದಂತೆ ರಾಜ್ಯಬಾಲಶ್ರೀ ಪ್ರಶಸ್ತಿಗೆ ಬಾಜನರಾದ ಕು.ಶಮಾಪರ್ವಿನ್ ತಾಜ್ ಪುತ್ತೂರು,ಕು.ಶರಣ್ಯ.ಬಿ.ಕೆ.,ಕು.ತನುಶ್ರೀ ಇವರುಗಳನ್ನು ಸನ್ಮಾನಿಸಲಾಯಿತು.ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ ರಾಜ್ಯ ಮಟ್ಟಕ್ಕೆಹೋಗಿದ್ದ ಚಿನ್ಮಯ್, ನವ್ಯ, ಅನನ್ಯ ರಾಮ್ ಸಿಂಧೂರ ಸರಸ್ವತಿ ಇವರನ್ನು ಸಹ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಶಕುಂತಳಾ ಇವರು ಸ್ವಾಗತಿಸಿದರು.