Saturday, January 29, 2011

ಸಮಗ್ರ ಕೃಷಿಯಿಂದ ಖುಷಿ - ಪ್ರಗತಿ ಪರ ಕೃಷಿಕ ಪ್ರಭಾಕರ ಮಯ್ಯ

ಮಂಗಳೂರು, ಜನವರಿ.29: ವೈಜ್ಞಾನಿಕ ಮಾಹಿತಿಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ದುಡಿದರೆ ಕೃಷಿಯಿಂದ ಸಿಗುವ ಖುಷಿ ಇನ್ನಾವುದೇ ಉದ್ಯೋಗದಿಂದಲೂ ದೊರೆಯುವುದಿಲ್ಲ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮಪಂಚಾಯಿತಿ ಸುರಿಯಾದ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಅವರ ಸ್ಪಷ್ಟ ಅಭಿಪ್ರಾಯ.

ಮಯ್ಯ ಅವರು ಶಿಕ್ಷಕ ಕೆಲಸವನ್ನು ಬಿಟ್ಟು ಕೃಷಿಯನ್ನು ಆರಂಭಿಸಿದ್ದು 5 ಕೆ. ಜಿ. ಶುಂಠಿ ಹಾಗೂ ಸ್ವಲ್ಪ ಸುವರ್ಣಗೆಡ್ಡೆ ಯೊಂದಿಗೆ.ಮುಂದೆ ಈ ಕೃಷಿಯಿಂದ ದೊರೆತ ಹಣದೊಂದಿಗೆ 6 ಎಕರೆ ಜಮೀನಿಗೆ ನೀರುಣಿಸಲು ನೀರಾವರಿಗಾಗಿ ಬೋರ್ ವೆಲ್ ತೆಗೆದಾಗ ಉತ್ತಮ ನೀರು ದೊರೆಯಿತು. ಬಳಿಕ ಪ್ರತೀ ವರ್ಷ ಸರಾಸರಿ 300 ರಿಂದ 350 ಅಡಿಕೆ ಸಸಿಗಳನ್ನು ನೆಡಲು ಆರಂಭಿಸಿ, ಈಗ ಅವರ ತೋಟದಲ್ಲಿ ಒಟ್ಟು 1700 ಅಡಿಕೆ ಮರಗಳಿದ್ದು ಫಲ ಕೊಡುತ್ತಿವೆ.ಮಯ್ಯ ಅವರ ತೋಟದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಹಾಕಿದರೆ ಅಗತ್ಯ ಅನ್ವೇಷಣೆಯ ತಾಯಿಯಂತೆ; ಇದರ ಸಾಕ್ಷಾತ್ಕಾರ ನಮಗಾಗುತ್ತದೆ. ಪ್ರತ್ಯಕ್ಷ ಸಾಕ್ಷಾತ್ಕಾರಗಳು ತೋಟದಲ್ಲಾಗುವುದರಿಂದ ಕೃಷಿ ಇಲಾಖೆಯು ಇವರ ತೋಟವನ್ನೇ ಹಲವು ರೈತರಿಗೆ ತರಬೇತಿ ನೀಡಲು, ಪ್ರಾತ್ಯಕ್ಷಿಕೆ ನೀಡಲು ಬಳಸಿಕೊಂಡಿದೆ. ಉತ್ತಮ ಕೃಷಿಕರಾಗಿರುವ ಇವರಿಗೆ ಶಿಕ್ಷಕ ವೃತ್ತಿಯ ಹಿನ್ನಲೆಯೂ ಇರುವುದರಿಂದ ಇವರು ಸಂಪನ್ಮೂಲ ವ್ಯಕ್ತಿಯೂ ಹೌದು.ಗ್ರಾಮೀಣ ಪ್ರದೇಶ ಗಳಲ್ಲೂ ಕೃಷಿ ಕೂಲಿ ಕಾರರು ಅಲಭ್ಯ ವಾಗಿ ರುವ ಇಂದಿನ ದಿನ ಗಳಲ್ಲಿ ಕಾರ್ಮಿಕ ರನ್ನು ಅವ ಲಂಬಿ ಸದೆಯೂ ಯಶಸ್ವಿ ಕೃಷಿಕ ರಾಗಲು ಸಾಧ್ಯ ಎನ್ನುವ ಮಯ್ಯ ಅವರು, ಅಡಿಕೆ ಕೃಷಿ ಯನ್ನು ಹೀಗೆ ವಿವರಿಸುತ್ತಾರೆ - ಹಲವೆಡೆಗಳಲ್ಲಿ ಕಾಂಟಾರ ಮಾದರಿ ಕೃಷಿಯನ್ನು ನೋಡಿರುವ ಇವರು, ತಮ್ಮ ಜಮೀನಿನಲ್ಲಿ ಅಡಿಕೆ ತೋಟದಲ್ಲಿ ಟ್ರಂಚ್ ಮಾದರಿಯನ್ನು ಅವಲಂಬಿಸಿದ್ದಾರೆ. ಈ ಮಾದರಿಯಿಂದ ನೀರಿಂಗಿಸುವಿಕೆ,ಗೊಬ್ಬರ ಹಾಕುವುದು ಸುಲಭ. ಪ್ರತೀ ವರ್ಷ ಗಿಡದ ಬುಡ ಬಿಡಿಸಬೇಕು ಎಂಬ ಕಲ್ಪನೆಯೇ ತಪ್ಪು. ಈ ಬುಡಬಿಡಿಸುವ ಕೆಲಸಕ್ಕೆ ಕಾರ್ಮಿಕರ ಅಗತ್ಯವೂ ಜಾಸ್ತಿ. ಟ್ರಂಚ್ ಮಾದರಿಯಿಂದ ಇಂತಹ ಬಹುತೇಕ ಸಮಸ್ಯೆಗಳಿಗೆ ಇಲ್ಲಿ ಉತ್ತರ ದೊರೆಯುತ್ತದೆ.
ಕೃಷಿಕರು ಮೊದಲು ಯೋಜನೆ ರೂಪಿಸಬೇಕು; ಬಳಿಕ ಅದನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಬೇಕು. ಮಾಧ್ಯಮಗಳಲ್ಲಿ ಬರುವ ಮಾಹಿತಿ, ವಿಜ್ಞಾನಿಗಳ ಸಲಹೆ, ಸ್ಥಳೀಯ ಕೃಷಿ ಅಧಿಕಾರಿಗಳ ಸಹಕಾರವನ್ನು ಪಡೆಯಬೇಕು. ಕೃಷಿಯಿಂದ ಸಂತೃಪ್ತ ಬದುಕು ಸಾಗಿಸಲು ಸಾಧ್ಯ; ಆದರೆ ಒಂದೇ ಬೆಳೆಯನ್ನು ಬೇಳೆಯುವ ಬದಲು ಮಿಶ್ರ ಬೆಳೆಗೆ ಹೆಚ್ಚಿನ ಆದ್ಯತೆ ಕೊಡಬೇಕು.ಒಂದೇ ಬೆಳೆಯಿಂದ ಕಷ್ಟವಾಗದಿದ್ದರೂ ಅನಿಶ್ಚಿತ ಮಾರುಕಟ್ಟೆಯಿಂದ ಕೃಷಿಕರು ಸಮಸ್ಯೆ ಎದುರಿಸುತ್ತಾರೆ.ದೈ ನಂದಿನ ಖರ್ಚಿಗೆ ಹೈನು ಗಾರಿಕೆ, ವಾರದ ಖರ್ಚಿಗೆ ತರ ಕಾರಿ, ವೀಳ್ಯ ದೆಲೆ, ತಿಂ ಗಳ ಖರ್ಚಿಗೆ ತೆಂಗಿನ ಫಲ, ವಾರ್ಷಿಕ ವರ ಮಾನ ಅಡಿಕೆ,ನಡುವೆ ಎರಡು ಭತ್ತದ ಬೆಳೆ ಗಳು. ಸಾಗು ವಾನಿ, ಮಾಗು ವಾನಿ, ಕೋಕೋ, ಕಾಳು ಮೆಣಸು ಬೆಳೆದು ಸಮಗ್ರ ಕೃಷಿ ಮಾಡಿ ದರೆ ಕೃಷಿ ಕನೂ ನೆಮ್ಮದಿ ಯಿಂದ ಬಾಳ ಬಹುದು.
ಕೃಷಿಕ ರಿಗೋ ಸ್ಕರ ಸರ್ಕಾರ ಹಲವು ಯೋಜನೆ ಗಳನ್ನು ಹಮ್ಮಿ ಕೊಂ ಡಿದ್ದು, ರೈತರು ನೇರ ವಾಗಿ ಈ ತರ ಹದ ಸೌಲಭ್ಯ ಗಳನ್ನು ಪಡೆದು ಕೊಳ್ಳ ಬೇಕು. ನಡ ಗ್ರಾಮ ಪಂಚಾ ಯಿತಿ ವ್ಯಾಪ್ತಿ ಯಲ್ಲಿ ಬೆಳ್ತಂ ಗಡಿ ಜಿಲ್ಲಾ ಕೃಷಿ ತರ ಬೇತಿ ಕೇಂದ್ರ ದ ನೆರವಿ ನಿಂದ ಕೃಷಿ ಇಲಾಖೆ ಅಧಿಕಾ ರಿಗಳ ನೆರವಿ ನಿಂದ ಆತ್ಮ ಯೋಜನೆ ಯನ್ನು ಅನುಷ್ಠಾ ನಕ್ಕೆ ತರಲಾ ಗುತ್ತಿದೆ. ಪ್ರಾತ್ಯ ಕ್ಷಿಕೆ ಮೂಲಕ ತರಗ ತಿಗ ಳನ್ನು ನಡೆಸ ಲಾಗು ತ್ತಿದೆ. ಇಲ್ಲಿನ ಗದ್ದೆ ಗಳೇ ಇಲ್ಲಿ ಆಸಕ್ತ ಕೃಷಿ ಕರಿಗೆ ಪಾಠ ಶಾಲೆ ಯಾಗಿದೆ. ಕೃಷಿ ಕಾರ್ಮಿ ಕರ ಅಗತ್ಯ ನಿವಾ ರಿಸಲು ನಾಟಿ ಯಂತ್ರ, ಕಟಾವು ಯಂತ್ರ ಸೇರಿ ದಂತೆ ಹಲವು ಕಡಿಮೆ ವೆಚ್ಚ ದಾಯಕ ಯಂತ್ರ ಗಳನ್ನು ಕೃಷಿ ಕರಿಗೆ ಪರಿಚ ಯಿಸ ಲಾಗು ತ್ತಿದೆ. ಈ ಎಲ್ಲಾ ಕಾರಣಗಳಿಂದ ಇಲ್ಲಿನ ಭತ್ತದ ಗದ್ದೆಗಳು ನಳನಳಿಸುತ್ತಿವೆ.