Saturday, January 15, 2011

'ಸಂತೃಪ್ತಿಯ ಗ್ರಾಮೀಣ ಬದುಕಿನಲ್ಲಿ ಗ್ರಾಮೋದ್ಯೋಗದ ಪಾತ್ರ ಹಿರಿದು'

ಮಂಗಳೂರು,ಜನವರಿ.15: ಪ್ರಧಾನ ಮಂತ್ರಿಗಳ ಸ್ವ ಉದ್ಯೋಗ ಸೃಜನ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕೆ ಇಂದು ಮಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಮೇಯರ್ ರಜನಿ ದುಗ್ಗಣ್ಣ ಅವರು ಚಾಲನೆ ನೀಡಿದರು.

ಈ ಸಂದ ರ್ಭದಲ್ಲಿ ಆಯೋ ಜಿಸಿದ್ದ ಸಮಾ ರಂಭದ ಅಧ್ಯ ಕ್ಷತೆ ವಹಿ ಸಿದ್ದ ವಿಧಾನ ಸಭೆಯ ಉಪ ಸಭಾ ಪತಿ ಗಳಾದ ಎನ್.ಯೋಗೀಶ್ ಭಟ್ ಮಾತ ನಾಡಿ, ಗ್ರಾಮೀಣ ಬದು ಕನ್ನು ಹಸ ನಾಗಿ ಸುವಲ್ಲಿ ಈ ಗ್ರಾಮೋ ದ್ಯೋಗಳ ಪಾತ್ರ ಮಹತ್ತ ರವಾ ಗಿದ್ದು, ಈ ಬಗ್ಗೆ ಗ್ರಾಮೀಣ ಜನರಿಗೆ ಹೆಚ್ಚಿನ ಮಾಹಿತಿಯ ಅಗತ್ಯವಿದೆ ಎಂದರು.ಗ್ರಾಮೀಣ ಜನರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಸ್ವರ್ಣ ಗ್ರಾಮ ಯೋಜನೆಗಳ ಮೂಲಕ ರಾಜ್ಯ ಸರಕಾರ ಕಾಯಕಲ್ಪ ನೀಡಿದ್ದು, ಸರ್ವಾಂಗೀಣ ಅಭಿವೃದ್ಧಿಯಿಂದ ಮಾತ್ರವೇ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದರು.ಕೃಷಿಗೆ ಪೂರಕವಾದ ಉಪ ಕಸಬುಗಳ ಮೂಲಕ ಕೃಷಿಕರು ತಮ್ಮ ಬದುಕನ್ನು ಹಸನಾಗಿಸುವ ಮೂಲಕ ಗ್ರಾಮೀಣ ಜನರು ನಗರಪ್ರದೇಶಗಳತ್ತ ವಲಸೆ ಹೋಗುವುದನ್ನು ತಪ್ಪಿಸಲು ಸಾಧ್ಯ.ಈ ಹಿನ್ನೆಲೆಯಲ್ಲಿ ಹೆಚ್ಚಿನ ಕೆಲಸ ಆಗಬೇಕಿದೆ ಎಂದರು.
ಖಾದಿ ಮತ್ತು ಗ್ರಾಮೋ ದ್ಯೋಗ ಮಂಡಳಿಯ ಜಿಲ್ಲಾ ಅಧಿಕಾರಿ ಮಂಜು ನಾಥ ಕಲ ಕೇರಿ,ಜಿಲ್ಲಾ ಲೀಡ್ ಬ್ಯಾಂಕ್ ಸಿಂಡಿ ಕೇಟ್ ಬ್ಯಾಂಕ್ ವ್ಯವ ಸ್ಥಾಪಕ ಉದಯ ಕುಮಾರ್ ಹೊಳ್ಳ, ಪಿತಾಂ ಬರಂ ವೇದಿಕೆ ಯಲ್ಲಿ ಉಪಸ್ಥಿ ತರಿದ್ದರು. ರಮಣ್ ಕಾರ್ಯಕ್ರಮ ನಿರೂಪಿಸಿದರು.
ಜ.23ರವರೆಗೆ ನಡೆಯಲಿರುವ ಈ ಪ್ರದರ್ಶನ ಮತ್ತು ಮಾರಾಟದಲ್ಲಿ ಖಾದಿ ಮತ್ತು ರೇಷ್ಮೆ ಉತ್ಪಾದನಾ ಘಟಕಗಳು ಭಾಗವಹಿಸಲಿವೆ. ಕರ್ನಾಟಕ ರಾಜ್ಯ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಅರಳೆ ಖಾದಿ ಮತ್ತು ಪಾಲಿವಸ್ತು ಬಟ್ಟೆಗಳ ಮೇಲೆ ಶೇ. 35ರಷ್ಟು ಮತ್ತು ರೇಷ್ಟೆ ಖಾದಿ ಬಟ್ಟೆಗಳ ಮೇಲೆ ಶೇ. 20ರಷ್ಟು ರಿಯಾಯಿತಿ ನೀಡುತ್ತಿದ್ದು, ಈ ವಸ್ತು ಪ್ರದರ್ಶನದಲ್ಲಿ ಲಭ್ಯವಿದೆ. ವಸ್ತುಪ್ರದರ್ಶನದಲ್ಲಿ ಗ್ರಾಮೋದ್ಯೋಗ ವಸ್ತುಗಳಾದ ಜೇನುತುಪ್ಪ, ಲಾವಂಚದಿಂದ ತಯಾರಿಸಿದ ಆಕರ್ಷಕ ವಸ್ತುಗಳು, ವಿವಿಧ ಮಾದರಿಯ ಹಣ್ಣಿನ ಉತ್ಪನ್ನಗಳು, ಹಪ್ಪಳ,ಸಂಡಿಗೆ ಇತ್ಯಾದಿ ಆಹಾರ, ಗೇರುಬೀಜ, ಸೆಣಬಿನಿಂದ ತಯಾರಿಸಿದ ವಿವಿಧ ಮಾದರಿಯ ಬ್ಯಾಗ್ ಗಳು, ಕರಕುಶಲ ವಸ್ತುಗಳು, ಚರ್ಮದಿಂದ ತಯಾರಿದ ಉತ್ಪನ್ನಗಳು,ಬಿದಿರಿನ ಕರಕುಶಲ ವಸ್ತುಗಳು ಮೊದಲಾದವುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿದೆ.