Wednesday, January 26, 2011

'ಸಮಾಜ ಮುಖಿ ಕರ್ತವ್ಯಗಳಲ್ಲಿ ತೊಡಗಿಸಿ'

ಮಂಗಳೂರು,ಜನವರಿ.26:ಸಮಾಜಮುಖಿ ಕರ್ತವ್ಯಗಳಲ್ಲಿ ನಿರತವಾದ ಸಂಘಟನೆಗಳು ತಮ್ಮ ಮಾದರಿ ಕಾರ್ಯಕ್ರಮಗಳಿಂದ ಸಮಾಜಕ್ಕೆ ಉತ್ತಮ ಮಾದರಿಗಳನ್ನು ನೀಡಬೇಕಿದೆ. ಇಂತಹ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಯುವಶಕ್ತಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರೇ ಸ್ಫೂರ್ತಿ ಎಂದು ವಿಧಾನಸಭೆ ಉಪ ಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಹೇಳಿದರು.

ಅವರಿಂದು ಮಂಗ ಳೂರು ವಿಶ್ವ ವಿದ್ಯಾ ನಿಲಯ ಕಾಲೇಜು ಮಂಗ ಳೂರು ಇಲ್ಲಿನ ರ ವೀಂದ್ರ ಕಲಾ ಭವನ ದಲ್ಲಿ ಏರ್ಪಡಿ ಸಲಾದ ಜಿಲ್ಲಾ ಮಟ್ಟದ ಯುವ ಸಮಾ ವೇಶ ಮತ್ತು 2009-10ರ ಅತ್ಯುತ್ತಮ ಯುವ ಮಂಡಲ ಹಾಗೂ ಯುವ ಪ್ರಶಸ್ತಿ ವಿತರಣಾ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಎನ್ ಎಸ್ ಎಸ್ ಘಟಕಗಳು ಪಾಲಿಕೆಯ 60 ವಿಭಾಗಗಳಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ರಕ್ತದಾನದಂತಹ ಕಾರ್ಯಕ್ರಮಗಳು ಹಲವರಿಗೆ ಬದುಕು ನೀಡುತ್ತದೆ; ಶಿಕ್ಷಣದಲ್ಲಿ ಸಾಮಾಜಿಕ ಸೇವೆಗೂ ಅಂಕ ನೀಡುವಂತಾಗಬೇಕು ಎಂದರು.
2009 -10ನೇ ಸಾಲಿನ ಯುವ ಪ್ರಶಸ್ತಿ ಯನ್ನು ಕುಳಾ ಯಿಯ ಕುಮಾರಿ ವಾಣಿ ಹಾಗೂ ಬೆಳ್ತಂ ಗಡಿ ಲಾಯಿಲಾ ಗ್ರಾಮದ ಉದಯ್ ಕುಮಾರ್ ಅವರಿಗೆ ಪ್ರದಾನ ಮಾಡ ಲಾಯಿತು. ಹೊಸಂ ಗಡಿಯ ಫ್ರೆಂಡ್ಸ್ ಕ್ಲಬ್ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಯನ್ನು ಪಡೆಯಿತು. ಸಮಾ ರಂಭ ದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆ ಮಿಯ ಎಂ. ಬಿ. ಅಬ್ದುಲ್ ರೆಹಮಾನ್, ಡಾ ಗಣನಾಥ ಎಕ್ಕಾರು, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಸಿ. ಜೆ. ಎಫ್. ಡಿ'ಸೋಜ ಅವರು ಉಪಸ್ಥಿತರಿದ್ದರು.