Friday, December 31, 2010

ಜಿಲ್ಲೆಯಲ್ಲಿ ಶಾಂತಿಯುತ 67.76% ಮತದಾನ: ಜಿಲ್ಲಾಧಿಕಾರಿ

ಮಂಗಳೂರು, ಡಿಸೆಂಬರ್.31: ದಕ್ಷಿಣ ಕನ್ನಡ ಜಿಲ್ಲಾಡಳಿತ ನಡೆಸಿದ ಚುನಾವಣಾ ಪೂರ್ವ ಸಿದ್ಧತೆಗಳಿಂದಾಗಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತಿಳಿಸಿದರು.
ಪೂರ್ವ ಸಿದ್ಧತೆಗಳು ಫಲಕಾ ರಿಯಾ ಗಿದ್ದು, ಜಿಲ್ಲೆ ಯಲ್ಲಿ ಒಟ್ಟು 7 ಕಡೆ ಮತ ಯಂತ್ರ ದಲ್ಲಿ ತೊಂದರೆ ವರದಿ ಯಾಗಿ ದ್ದರೂ ತಕ್ಷಣವೇ ಸೂಕ್ತ ಕ್ರಮ ಕೈಗೊಂಡಿದ್ದು, ಎಲ್ಲೆಡೆ ಮತ ದಾರ ರಿಂದ ಜಿಲ್ಲಾ ಡಳಿತದ ಕ್ರಮ ಗಳಿಗೆ ಶ್ಲಾಘನೆ ವ್ಯಕ್ತ ವಾಗಿದೆ ಎಂದರು. ಮಂಗಳೂರು ತಾಲೂಕಿನ ಪೆರ್ಮುದೆ, ಕಿನ್ನಿಗೋಳಿ ಯಲ್ಲಿ ಬಂಟ್ವಾಳದ ಶಂಬೂರಿನಲ್ಲಿ, ಸುಳ್ಯದ ಅಡ್ಪಾಂಗಾಯ, ಬೆಳ್ಳಾರೆ, ಬೆಳ್ತಂಗಡಿ, ಕೊಕ್ಕಡದಲ್ಲಿ ಮತಯಂತ್ರ ಲೋಪ ವರದಿಯಾದ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. 1027 ಮತದಾನ ಕೇಂದ್ರಗಳಲ್ಲಿ ಒದಗಿಸಿದ್ದ ಸುವಿಧಾ ವ್ಯವಸ್ಥೆ, ಹಾಗೂ ಸಂಪರ್ಕ ವ್ಯವಸ್ಥೆ (ಕಮ್ಯುನಿಕೇಷನ್ ಸಿಸ್ಟಮ್) ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಬಗ್ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದರು.
ಬೆಳ್ತಂಗಡಿಯ ಎಳನೀರು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದು, ಅಂತಿಮ ಕ್ಷಣ ದವ ರೆಗೂ ಜಿಲ್ಲಾ ಡಳಿತ ಮತ ದಾನ ಮಾಡಲು ಮತ ದಾರರ ಮನ ವೊಲಿ ಕೆಗೆ ಪ್ರಯ ತ್ನಿಸಿದೆ; ಆದರೆ ಮತ ದಾನ ವಾಗಿಲ್ಲ ಎಂದ ಜಿಲ್ಲಾಧಿ ಕಾರಿಗಳು, ಉಳಿದಂತೆ ನಕ್ಸಲ್ ಪೀಡಿತ ಪ್ರದೇಶ ಸೇರಿದಂತೆ ಅತಿಸೂಕ್ಷ್ಮ ಹಾಗೂ ಸೂಕ್ಷ್ಮ ಪ್ರದೇಶ ಗಳಲ್ಲೂ ಜನರು ಮತದಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಂಚಾರಿ ಜನತಾ ನ್ಯಾಯಾಲಯ

ಮಂಗಳೂರು,ಡಿಸೆಂಬರ್ 31:ದಕ್ಷಿಣಕನ್ನಡ ಜಿಲ್ಲಾಡಳಿತ,ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್,ವಕೀಲರ ಸಂಘ,ಜಿಲ್ಲಾ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ,ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ,ಜನಶಿಕ್ಷಣ ಟ್ರಸ್ಟ್,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮ,ಮೆಗಾ ಲೋಕ ಅದಾಲತ್ ,ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಾಕ್ಷರತಾ ರಥ ಸಂಚಾರಿ ಜನತಾ ನ್ಯಾಯಾಲಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇದರ ದ್ಯೇಯೋದ್ದೇಶಗಳಾದ ಕಾನೂನು ಸಾಕ್ಷರತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ' ನಾಮಾಂಕಿತ ವಾಹನವು ದಿನಾಂಕ 1-1-2011 ರಿಂದ 15-1-2011 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಚರಿಸಲಿದೆ.ಜನಸಾಮಾನ್ಯರು ,ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದು ಕೊಳ್ಳಬಹುದಾಗಿದೆ ಎಂದು ಮಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.
ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ನಾಮಾಂಕಿತ ವಾಹನವು ದಿನಾಂಕ 1-1-2011 ರಿಂದ 3-1-2011 ರ ವರೆಗೆ ಸುಳ್ಯ ತಾಲೂಕಿನಲ್ಲಿ, 4-1-11 ರಿಂದ 6-1-11 ರ ವರೆಗೆ ಪುತ್ತೂರು ತಾಲೂಕಿನಲ್ಲಿ, 7-1-11 ರಿಂದ 9-1-11 ರ ವರೆಗೆ ಬಂಟ್ವಾಳ ತಾಲೂಕಿನಲ್ಲಿ,10-1-11 ರಿಂದ 12-1-11ರ ವರೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಹಾಗೂ 13-1-11 ರಿಂದ 15-1-11 ರ ವರೆಗೆ ಮಂಗಳೂರು ತಾಲೂಕಿನಲ್ಲಿ ಸಂಚರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಸಾಕ್ಷರತಾ ರಥ ತಾಲೂಕುಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ,ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ.

Thursday, December 30, 2010

ಪಂಚಾಯತ್ ಮತದಾನಕ್ಕೆ ದ.ಕ ಜಿಲ್ಲಾಡಳಿತ ಸರ್ವಸನ್ನದ್ದ

ಮಂಗಳೂರು,ಡಿ.30:ದಕ್ಷಿಣ ಕನ್ನಡ ಜಿಲ್ಲೆಯ 35 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮತ್ತು 129 ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಡಿಸೆಂಬರ್ 31,2010ರಂದು ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ಒಟ್ಟು 1027 ಮತಗಟ್ಟೆಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತಿಳಿಸಿದರು.
ಅವರಿಂದು ತಮ್ಮ ಕಚೇರಿಯಲ್ಲಿ ಚುನಾವಣೆ ಪೂರ್ವಸಿದ್ಧತೆಗೆ ಸಂಬಂಧ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯ ನ್ನುದ್ದೇಶಿಸಿ ಮಾತನಾಡು ತ್ತಿದ್ದರು.ಚುನಾವಣೆಯನ್ನು ಮುಕ್ತವಾಗಿ, ನಿಷ್ಪಕ್ಷಪಾತವಾಗಿ,ಶಾಂತಿಯುತವಾಗಿ ನಡೆಸಲು ಎಲ್ಲ ರೀತಿಯ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು, ಮತದಾರರು, ಮತ್ತು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಸಹಕರಿಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಂತಿಮವಾಗಿ 116 ಮಂದಿ ಕಣದಲ್ಲಿರುವರು. ತಾಲೂಕುಪಂಚಾಯಿತಿಯಲ್ಲಿ 374 ಸ್ಪರ್ಧಿಗಳಿರುವರು. ಒಟ್ಟು 925969 ಮತದಾರರಿದ್ದು,462135 ಪುರುಷ ಮತದಾರರು, 463834 ಮಹಿಳಾ ಮತದಾರರಿದ್ದಾರೆ. 1027 ಮತಗಟ್ಟೆಗಳಲ್ಲಿ 109 ಅತಿಸೂಕ್ಷ್ಮ, 133 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಒಟ್ಟು 6780 ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿರುವರು. 133 ಸೆಕ್ಟರ್ ಅಧಿಕಾರಿಗಳಿರುವರು.ಒಟ್ಟು 423 ವಾಹನಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಲಾಗಿದೆ. 242 ವಿಡಿಯೋ ಕ್ಯಾಮರಾಗಳನ್ನು ಮತಗಟ್ಟೆಯಲ್ಲಿ ಸಂದಿಗ್ದ ಘಟನೆಗಳ ವಿಡಿಯೋ ಚಿತ್ರೀಕರಣಕ್ಕೆ ಬಳಸಲಾಗಿದೆ. ಸೇವಾ ಮತದಾರರ ಸಂಖ್ಯೆ 883. ಅಂಚೆ ಮತಪತ್ರ ನೀಡಿಕೆ 883. ಸಿಬ್ಬಂದಿಗಳ ಸಂಖ್ಯೆ 1211. ಅಂಚೆ ಮತಪತ್ರ ನೀಡಿಕೆ 1126. ಒಟ್ಟು 2009.
ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಅಗತ್ಯ ಔಷಧವಿರುವ ಮೆಡಿಕಲ್ ಕಿಟ್ ನ್ನು ಸರಬರಾಜು ಮಾಡಲಾಗಿದೆ. ಸಿಬ್ಬಂದಿಗಳಲ್ಲಿ ಯಾವುದೇ ರೀತಿ, ಗೊಂದಲ ಅಥವಾ ಮಾಹಿತಿ ಕೊರತೆ ನಿವಾರಿಸಲು ಜಿಲ್ಲಾ ಚುನಾವಣಾ ಮ್ಯಾನೇಜ್ ಮೆಂಟ್ ಪ್ಲಾನ್ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಹೆಲ್ಪ್ ಡೆಸ್ಕ್, ಪೋಲಿಂಗ್ ಸ್ಟೇಷನ್ ನಲ್ಲಿ ಸುವಿಧಾ ಕೇಂದ್ರಗಳನ್ನು ಮತದಾರರ ನೆರವಿಗೆ ಸ್ಥಾಪಿಸಲಾಗಿದೆ.ಹಿರಿಯ ನಾಗರೀಕರಿಗೆ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ.
ರಾಜ್ಯ ಚುನಾವಣಾ ಆಯೋಗ ಚುನಾವಣಾ ವೀಕ್ಷಕರನ್ನು ನೇಮಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಜಿ. ರಾಮಚಂದ್ರ ಐಎಎಸ್ 94498 58679, ಮಂಗಳೂರು ಉಪವಿಭಾಗಕ್ಕೆ ಕೆ ಟಿ ಕಾವೇರಿಯಪ್ಪ 9448421965, ಪುತ್ತೂರು ಉಪವಿಭಾಗಕ್ಕೆ ಇಕ್ಬಾಲ್ ಹುಸೇನ್ 98862 83990.
ಮತದಾರರ ಸಹಾಯವಾಣಿ: ಮಂಗಳೂರು ತಾಲೂಕು- 0824- 2220587, ಬಂಟ್ವಾಳ: 08255-232120, 232500, ಬೆಳ್ತಂಗಡಿ: 08256-233123, ಪುತ್ತೂರು: 08251-234099, ಸುಳ್ಯ: 08257-231231.
ಸಂಪರ್ಕ ಯೋಜನೆ: ಪ್ರತಿ 2 ಗಂಟೆಗೊಮ್ಮೆ ಮತದಾನದ ಅಂಕಿ ಅಂಶ ಮಾಹಿತಿ ಪಡೆಯಲು ತಾಲೂಕು ಮತ್ತು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ಸಂಪೆರ್ಕಿಸಬಹುದಾಗಿದೆ. ಮಂಗಳೂರು ತಾಲೂಕು- ಗೋವಿಂದ ಮಡಿವಾಳ- 96113-90191, ಬಂಟ್ವಾಳ ಕಿಶೋರ್ ಕುಮಾರ್-9449014905, ಬೆಳ್ತಂಗಡಿ-ಎನ್ ಮಾಣಿಕ್ಯ- 99844-82625. ಪುತ್ತೂರು- ಕೆ ಪಿ ನಾಗರಾಜ್-9449107111. ಸುಳ್ಯ ಪಿ.ಬೆಳ್ಳಿಯಪ್ಪ ಗೌಡ-94485-67127.
ಜಿಲ್ಲಾ ಮಟ್ಟದಲ್ಲಿ ಚಂದ್ರಶೇಖರ್- 99722035297, ಕವಿತ-99455 98333, ಪ್ರಶಾಂತ್ ಶೆಟ್ಟಿ- 93436- 07783,ಕಾರ್ತಿಕ್ 98453-96622,ಡಯಾನ- 99013-21864. ಪತ್ರಿಕಾ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಉಪಸ್ಥಿತರಿದ್ದರು.

Wednesday, December 29, 2010

ಜಿಲ್ಲೆಯಲ್ಲಿ 81 ಅತಿಸೂಕ್ಷ್ಮ ಮತಗಟ್ಟೆ

ಮಂಗಳೂರು,ಡಿ.29:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 31ರಂದು ನಡೆಯಲಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆಸಲು ಎಲ್ಲ ರೀತಿಯ ಬಂದೋಬಸ್ತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

ಇಂದು ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿ ಯಲ್ಲಿ ಮಾತ ನಾಡುತ್ತಿದ್ದ ಅವರು, ಚುನಾವಣಾ ಬಂದೋಬಸ್ತ್ ಸಂಬಂಧ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬೆಳ್ತಂಗಡಿ ತಾಲೂಕಿನ 31 ನಕ್ಸಲ್ ಪೀಡಿತ ಪ್ರದೇಶ ಸೇರಿದಂತೆ ಒಟ್ಟು 81 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು. ಉಳಿದಂತೆ 101 ಸೂಕ್ಷ್ಮ ಹಾಗೂ 546 ಸಾಮಾನ್ಯ ಮತಗಟ್ಟೆಗಳು, 4 ಡಿ ಎಸ್ ಪಿ, 12 ಸಿಪಿಐಗಳು, 30 ಜನ ಎಎಸ್ ಪಿ, 85 ಹೆಡ್ ಕಾನ್ಸ್ ಟೇಬಲ್ ಗಳು ಹಾಗೂ 814ಜನ ಪೊಲೀಸರು ಸೇರಿದಂತೆ 750 ಜನ ಹೋಮ್ ಗಾರ್ಡ್ಸ್ ಗಳನ್ನು ನಿಯೋಜಿಸಲಾಗಿದೆ ಎಂದರು.
ಚುನಾವಣೆ ಸಂಬಂಧ ಏನಾದರೂ ಗೊಂದಲ, ಗಲಭೆ ಉಂಟಾದಲ್ಲಿ 4-5 ನಿಮಿಷದಲ್ಲಿ ಸಂಚಾರಿ ಪೊಲೀಸ್ ದಳದವರು ತಲುಪುವ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮತದಾನ ಶಾಂತಿಯುತವಾಗಿ ನಡೆಸಲು ಸರ್ವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

Tuesday, December 28, 2010

ವೈಜ್ಞಾನಿಕ ವಾಗಿ ತ್ಯಾಜ್ಯ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು,ಡಿಸೆಂಬರ್ 28:ಘನತ್ಯಾಜ್ಯ ವಿಲೇವಾರಿ ಪ್ರಸಕ್ತ ಬೃಹತ್ ಸವಾಲಾಗಿದ್ದು, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ; ಸಾರ್ವಜನಿಕರ ಕ್ಷೇಮವನ್ನು ಗಮನದಲ್ಲಿರಿಸಿ ಜಿಲ್ಲಾಡಳಿತ ಈಗಾಗಲೇ ತೆಗೆದುಕೊಂಡಿರುವ ನಿರ್ಧಾರದಂತೆ ಸುಳ್ಯ ನಗರಪಂಚಾಯತ್ ವ್ಯಾಪ್ತಿಯಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇಗೆ ಕ್ರಮ ಜರುಗಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ಸುಳ್ಯಕ್ಕೆ ಭೇಟಿ ನೀಡಿದ ಜಿಲ್ಲಾಧಿ ಕಾರಿಗಳು, ಮಾಣಿ-ಸಂಪಾಜೆ ರಸ್ತೆ ವಿಸ್ತರಣೆ ಹಾಗೂ ಘನತ್ಯಾಜ್ಯ ವಿಲೇವಾರಿ ಕುರಿತು ಪುತ್ತೂರು ಸಹಾಯಕ ಆಯುಕ್ತರು, ಕೆಆರ್ ಡಿಸಿಎಲ್, ಕೆಯುಡಬ್ಲ್ಯುಎಸ್,ತಹಸೀಲ್ದಾರ್ ಸುಳ್ಯ ಮತ್ತು ನಗರ ವ್ಯಾಪಾರಸ್ಥರ ಜೊತೆ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡರು.ಘನತ್ಯಾಜ್ಯ ವಿಲೇಗೆ ಮನಾಪದ ಪರಿಸರ ಅಭಿಯಂತರರ ನೆರವು ಪಡೆಯಲು ಸೂಚಿಸಿದ ಜಿಲ್ಲಾಧಿಕಾರಿಗಳು, ಕಾಮಗಾರಿಗೆ ಕಟ್ಟಡ ತೆರವು ಗೊಳಿಸಿದ ಮಾಲೀಕರಿಗೆ ತೆರಿಗೆ ಪುನರ್ ಪರಿಶೀಲಿಸಲು, ಹಾಗೂ ಕಟ್ಟಡ ನವೀಕರಿಸುವಾಗ ಸೆಟ್ ಬ್ಯಾಕ್ ಬಿಡುವ ಅಗತ್ಯವಿಲ್ಲ ಎಂದು ತಿಳಿಸಲಾಯಿತು. ಆದರೆ ಪುನರ್ ನಿರ್ಮಾಣ ಸಂದರ್ಭದಲ್ಲಿ ಪಿಡಬ್ಲ್ಯುಡಿ ನೀತಿ ಹಾಗೂ ನಗರ ಪಂಚಾಯಿತಿ ನಿಯಮಗಳಂತೆ ಅನುಮತಿ ಪತ್ರ ಪಡೆಯಲು ಸೂಚಿಸಿದರು. ಮಾಣಿ-ಸಂಪಾಜೆ ರಸ್ತೆ ಕಾಮಗಾರಿ ನಗರದ ಮುಖ್ಯ ಪೇಟೆಯಲ್ಲಿ ಹಾದುಹೋಗುತ್ತಿದ್ದು, 30-4-2011 ರೊಳಗೆ ಮುಗಿಸಲು ನಿರ್ದೆಶಿಸಿದರು. ಅಭಿವೃದ್ಧಿಗೊಳ್ಳುತ್ತಿರುವ ಸುಳ್ಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸುವ ವಿಷಯವನ್ನು ನಗರ ಪಂಚಾಯತ್ ಕೌನ್ಸಿಲ್ ಸಭೆಯಲ್ಲಿ ಮಂಡಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಒಳಚರಂಡಿ, ನೀರಿನ ಪೈಪ್ ಲೈನ್ ಹಾಕುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. 178 ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಮೆಸ್ಕಾಂನವರಿಗೆ ಎಸ್ಟಿಮೇಷನ್ ನೀಡಲು ಹಾಗೂ ಪರಿಶೀಲಿಸಿ ಕ್ರಮಕೈಗೊಳ್ಳಲು ಇ ಇ ಕೆ ಆರ್ ಡಿಸಿಎಲ್ ಅವರಿಗೆ ಸೂಚಿಸಿದರು.

Monday, December 27, 2010

ಅಳಿವೆ ಬಾಗಿಲಿನ ಹೂಳುತ್ತುವಿಕೆಗೆ ಕ್ರಮ

ಮಂಗಳೂರು ಡಿಸೆಂಬರ್ 27: ನೇತ್ರಾವತಿ-ಗುರುಪುರ ನದಿಗಳು ಸಮದ್ರದಲ್ಲಿ ಸೇರುವ ಅಳೆವೆ ಬಾಗಿಲಿನ ದಕ್ಷಿಣ ಬ್ರೇಕ್ ವಾಟರ್ ಹತ್ತಿರದಲ್ಲಿ ತುಂಬಿರುವ ಹೂಳನ್ನು ತೆಗೆಯುವಂತೆ ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದು ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರ ನಿರ್ದೇಶನದಂತೆ ಜಿಎಂಆರ್ ಎನರ್ಜಿ ಸಂಸ್ಥೆಯವರು ಸಿಂಧೂರಾಜ್ ಎಂಬ ಡ್ರೆಜ್ಜರನ್ನು ಕೇರಳದಿಂದ ತರಿಸಿ ಹೂಳು ತೆಗೆಯುವ ಕಾರ್ಯಾಚರಣೆಗೆ ತೊಡಗಿಸಿರುತ್ತಾರೆ. ಸಿಂದೂರಾಜ್ ಜಪಾನ್ ನಿರ್ಮಿತ ಅತ್ಯಾಧುನಿಕ ಡ್ರೆಜ್ಜರ್ ಇದಾಗಿದ್ದು, ಕೇಂದ್ರ ಸರ್ಕಾರದಿಂದ ಇದನ್ನು ಖರೀದಿಸಿದೆ. ಇದರ ವೈಶಿಷ್ಟ್ಯವೆಂದರೆ ಕಡಿಮೆ ಆಳದ ಪ್ರದೇಶದಲ್ಲಿ ಡ್ರೆಜಿಂಗ್ ಮಾಡಲು ಶಕ್ತವಾಗಿದೆ. ಇದರಲ್ಲಿ ಅಳವಡಿಸಿರುವ ಜಿಪಿಎಸ್ ವ್ಯವಸ್ಥೆಯಿಂದಾಗಿ ಡ್ರೆಜ್ ಮಾಡುತ್ತಿರುವ ಪ್ರದೇಶದ ಆಳ ತಿಳಿಯಬಹುದಾಗಿದೆ. ಡಿಸೆಂಬರ್ 24ರಂದು ಡ್ರೆಜ್ ಮಾಡಲಾದ ಸ್ಥಳವನ್ನು ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳ ಮೀನುಗಾರರ ಪ್ರತಿನಿಧಿಗಳ ಜೊತೆಗೆ ಪರಿಶೀಲಿಸಲಾಗಿ ಅಲ್ಲಿ 3 ರಿಂದ 4.5 ಮೀಟರ್ ಆಳ ಇರುವುದು ಪತ್ತೆಯಾಗಿದ್ದು,, ಮೀನುಗಾರರ ಪ್ರತಿನಿಧಿಗಳು ಇನ್ನು ಸ್ವಲ್ಪ ಡ್ರೆಜಿಂಗ್ ಮಾಡಲು ವಿನಂತಿಸಿದ್ದು ಜಿಎಂಆರ್ ಎನರ್ಜಿ ಸಂಸ್ಥೆಯವರು ಇದಕ್ಕೆ ಒಪ್ಪಿರುತ್ತಾರೆ. ಈ ಬಗ್ಗೆ ಸಲಹೆಗಳೇನಾದರೂ ಇದ್ದಲ್ಲಿ ಜಿಲ್ಲಾಡಳಿತ ಗಮನಕ್ಕೆ ತರಬೇಕಾಗಿ ಮೀನುಗಾರಿಕಾ ಉಪನಿರ್ದೇಶಕರಾದ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಕದ್ರಿ ಉದ್ಯಾನದಲ್ಲಿ ಪ್ಲಾಸ್ಟಿಕ್ ನಿಷೇಧ: ಜಿಲ್ಲಾಧಿಕಾರಿ

ಮಂಗಳೂರು, ಡಿಸೆಂಬರ್,27:ನಗರದ ಆಕರ್ಷಣೀಯ ಉದ್ಯಾನವಾದ ಕದ್ರಿ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಯಾತ್ರಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಉದ್ಯಾನವನದ ಒಳಗೆ ಫಲಕಗಳನ್ನು ಹಾಕಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತೋಟಗಾರಿಕಾ ಇಲಾಖಾಧಿಕಾರಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳು ಕದ್ರಿ ಉದ್ಯಾನವನದ ಸ್ಥಳ ಪರಿಶೀಲನೆ ನಡೆಸಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಹೆದ್ದಾರಿ ಬದಿಯಲ್ಲಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ಆವರಣ ಗೋಡೆಯನ್ನು ಕಟ್ಟುತ್ತಿದ್ದು, ಈ ಕಾಮಗಾರಿಯನ್ನು ತುರ್ತಾಗಿ ಪೂರೈಸಲು ಸಂಬಂಧಪಟ್ಟ ಇಂಜಿನಿಯರ್ ಗೆ ಸೂಚಿಸಿದರು. ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಉದ್ಯಾನವನದಲ್ಲಿ ಪುಟಾಣಿ ರೈಲನ್ನು ಇನ್ನು 20 ದಿನಗಳೊಳಗೆ ಚಾಲನೆಗೆ ತರಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಹೇಳಿದರು. ರೈಲಿನ ಶೆಡ್ ಹಾಗೂ ನಿರ್ವಹಣೆಯನ್ನು ಮಹಾನಗರ ಪಾಲಿಕೆ ಟೆಂಡರ್ ದಾರರಿಗೆ ಷರತ್ತಿನೊಂದಿಗೆ ವಹಿಸಲು ಸೂಚಿಸಿದೆ. ಉದ್ಯಾನವನದ ಹೈಮಾಸ್ಟ್ ಲೈಟನ್ನು ಮತ್ತು ಇತರ ವಿದ್ಯುತ್ ಜೋಡಣೆಗಳನ್ನು ಕೂಡಲೇ ಸರಿಪಡಿಸುವಂತೆ ಪಾಲಿಕೆ ಇಂಜಿನಿಯರ್ ಗೆ ಸೂಚಿಸಿದರು.
ಪಾರ್ಕಿನ ಇನ್ನೊಂದು ತುದಿಯಲ್ಲಿರುವ ಬೋಟ್ ಲೇಕನ್ನು ನಿರ್ವಹಿಸದಿರುವುದನ್ನು ಹಾಗೂ ತ್ಯಾಜ್ಯ ವಿಲೇ ಸಮರ್ಪಕವಾಗಿರದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ತ್ಯಾಜ್ಯ ವಿಲೇವಾರಿಗೆ ಮಹಾನಗರಪಾಲಿಕೆ ಸೂಕ್ತ ಕ್ರಮಕೈಗೊಳ್ಳಬೇಕೆಂದರು.
ಉದ್ಯಾನವನದ ಅಭಿವೃದ್ಧಿಗಿರುವ ತಾಂತ್ರಿಕ ತೊಂದರೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ನಿರ್ದೇಶಕರು, ತೋಟಗಾರಿಕಾ ಇಲಾಖೆ ಇವರೊಂದಿಗೆ ಚರ್ಚಿಸುವುದಾಗಿ ನುಡಿದರು. ಉದ್ಯಾನವನದ ಅಭಿವೃದ್ಧಿಗೆ 16 ಕೋಟಿ ರೂ. ಯೋಜನೆಯ ಪ್ರಸ್ತಾವವಿದ್ದು, ನಗರಾಭಿವೃದ್ಧಿ ಇಲಾಖಾ ಕಾರ್ಯದಶರ್ಿಯವರಿಗೂ ಕ್ರಮ ಕೈಗೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು.
1.25 ಎಕರೆ ಅಂಬೇಡ್ಕರ್ ಭವನಕ್ಕೆ ಜಮೀನು ಕಾದಿರಿಸಲು ಸೂಚನೆ:
ಮಂಗಳೂರು ತಾಲೂಕಿನ ದೇರೇಬೈಲು ಗ್ರಾಮದ ಸರ್ವೇ ನಂಬರ್ 178/1 ರಲ್ಲಿ 2.88 ಎಕರೆ ಸರಕಾರಿ ಜಮೀನಿನ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಅವರು, ಒಂದು ಎಕರೆ ಜಮೀನನ್ನು ಅಂಬೇಡ್ಕರ್ ಭವನಕ್ಕೆ ಕಾದಿರಿಸಲು ತಹಸೀಲ್ದಾರರಿಗೆ ಸೂಚಿಸಿದರು. ಈಗಾಗಲೇ 0.25 ಎಕರೆ ಜಮೀನು ಭವನಕ್ಕೆ ಮಂಜೂರಾಗಿದೆ. ಮಂಗಳೂರು ತಹಸೀಲ್ದಾರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಅಂಬೇಡ್ಕರ್ ಭವನಕ್ಕೆ ಕನಿಷ್ಠ 1.25 ಎಕರೆ ಅಥವಾ ಅದಕ್ಕಿಂತ ಮೇಲ್ಪಟ್ಟ ಜಮೀನನ್ನು ಸ್ಥಳದಲ್ಲಿ ಸೂಚಿಸಿರುವಂತೆ ಪಶ್ಚಿಮ ದಿಕ್ಕಿನ ಮುಂದುಗಡೆ ಜಮೀನಿನಲ್ಲಿ ಕಾದಿರಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ರೇಡಿಯೋ ಪೆವಿಲಿಯನ್ ಗೆ ಪ್ರಸ್ತಾಪವಿರುವ ಕಟ್ಟಡ ಜಮೀನು ಹಾಗೂ ಇದಕ್ಕೆ ಸಂಪರ್ಕ ರಸ್ತೆಗೆ ಜಮೀನು ಕಾದಿರಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಉಳಿದ 0.40 ಯಿಂದ 0.50 ಎಕರೆ ಮೆಸ್ಕಾಂ ಇಲಾಖೆಗೆ ಮಂಜೂರಾತಿ ಮಾಡಲು ಪ್ರಸ್ತಾವನೆ ಸಲ್ಲಿಸಲು ತಹಸೀಲ್ದಾರರಿಗೆ ಸೂಚಿಸಿದರು. ಈ ಪರಿಸರದಲ್ಲಿ 0.50 ಸೆಂಟ್ಸ್ ಜಾಗದಲ್ಲಿ ಸರ್ಕಾರಿ ವಸತಿ ಗೃಹಗಳಿವೆ. 0.10 ಸೆಂಟ್ಸ್ ಜಮೀನಿನಲ್ಲಿ ದೇವರಾಜ ಅರಸು ಸಮುದಾಯಭವನದ ಕಟ್ಟಡವಿದೆ. ಇದನ್ನು ಸಂಬಂಧಪಟ್ಟ ಇಲಾಖೆಗೆ ಮಂಜೂರಾತಿ ನೀಡಲು ಪ್ರತ್ಯೇಕವಾದ ಬೇಡಿಕೆ ಸಲ್ಲಿಸಲು ಜಿಲ್ಲಾಧಿಕಾರಿಗಳೂ ಸೂಚಿಸಿದರು.

Thursday, December 23, 2010

'ಕಡಲತೀರ ಅಭಿವೃದ್ಧಿಗೆ ಸಮಯಮಿತಿ ನಿಗದಿ'

ಮಂಗಳೂರು ಡಿಸೆಂಬರ್ 23:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ನೀಡಿರುವ 202.83 ಲಕ್ಷ ರೂ.ಗಳಲ್ಲಿ ಪಣಂಬೂರು ಬೀಚ್, ತಣ್ಣೀರು ಬಾವಿ ಕಡಲ ತೀರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಿಕ್ಕಾಗಿ ಕೈಗೊಂಡಿರುವ ಕಾಮಗಾರಿಗಳನ್ನು ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಪರಿಶೀಲಿಸಿದರು.

ಪಣಂಬೂ ರಿನಲ್ಲಿ ಬೀಚ್ ಅಭಿವೃದ್ಧಿಗೆ ಇಂಟರ್ ಲಾಕ್ ವ್ಯವಸ್ಥೆಗೆ 44 ಲಕ್ಷ ರೂ. ವೆಚ್ವ ಮಾಡುವ ಬದಲಿಗೆ ಡಾಂಬರಿ ಕರಣ ಮಾಡಿ ಇತರೆ ಅಭಿವೃದ್ಧಿ ಕೈಗೊಂಡಿದ್ದರೆ ಜನರಿಗೆ ಉಪಕಾರವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು. ಅಭಿವೃದ್ಧಿಯ ಬಳಿಕ ನಿರ್ವಹಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಎನ್ ಎಂ ಪಿ ಟಿ ಕಾರ್ಯಕಾರಿ ಅಭಿಯಂತರರಿಗೆ ಸೂಚಿಸಿದರು. 3.25 ಲಕ್ಷ ರೂ.ಗಳಲ್ಲಿ ಅಳವಡಿಸಿದ ಹೈಮಾಸ್ಟ್ ಲೈಟ್ ಗೆ ವಿದ್ಯುತ್ ಸಂಪರ್ಕ ವಿಲ್ಲದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ತಕ್ಷಣ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು. ಕಾಮಗಾರಿಗಳನ್ನು ತುರ್ತಾಗಿ ಅನುಷ್ಠಾನಗೊಳಿಸಿ 15 ದಿನಕ್ಕೊಮ್ಮೆ ವರದಿ ಸಲ್ಲಿಸಲು ಅನುಷ್ಠಾನ ಅಧಿಕಾರಿಗಳಿಗೆ ಸೂಚಿಸಿದರು.
ಪಣಂಬೂರು ಕಡಲತೀರದಲ್ಲಿ ಪಾತ್ ವೇ, ಪಾರ್ಕಿಂಗ್, ಲ್ಯಾಂಡ್ ಸ್ಕೇಪ್, ಗಾಡ್ರ್ ನ್, ಲೈಟಿಂಗ್, ರಿಕ್ರಿಯೇಷನ್, ಪೆನ್ ಸಿಂಗ್, ನೀರು ಪೂರೈಕೆ, ಪಾರ್ಕಿಂಗ್, ವಿದ್ಯುತ್ ಸಂಪರ್ಕ ಕಾಮಗಾರಿಗೆ ನಿರ್ಮಿತಿ ಕೇಂದ್ರಕ್ಕೆ ಜನವರಿ 2010 ರಂದೇ 76.80 ಲಕ್ಷ ಆಡಳಿತಾತ್ಮಕ ಮಂಜೂರಾತಿಯಿದ್ದು, ಪ್ರಥಮ ಹಂತದಲ್ಲಿ 22 ಲಕ್ಷ ರೂ. ಮಂಜೂರು ಮಾಡಿದೆ. ಆದರೆ ನಿರ್ಮಿತಿ ಕೇಂದ್ರದವರು ಈ ಕಾಮಗಾರಿ ಬಗ್ಗೆ ಆಲಸ್ಯ ವಹಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು 3 ದಿನಗಳೊಳಗೆ ವರದಿ ಹಾಜರು ಪಡಿಸಲು ನಿರ್ಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗಾಗಲೇ ಬೀಚ್ ನಲ್ಲಿ ಪಾತ್ ವೇಯನ್ನು ಇಂಟರ್ ಲಾಕ್ ಮೂಲಕ ಮಾಡಿರುವುದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಬೀಚ್ ನಿರ್ವಹಣೆ ವಹಿಸಿರುವ ಯತೀಶ್ ಬೈಕಂಪಾಡಿಯವರಿಗೆ ಸೂಚಿಸಿದರು.
ತಣ್ಣೀರು ಬಾವಿ ಕಡಲ ತೀರ ಅಭಿವೃದ್ಧಿಗೆ 76.80 ಲಕ್ಷ ರೂ. ಅನುಮೋದನೆಯಾಗಿದ್ದು, ಕಾಮಗಾರಿ ಅನುಷ್ಠಾನಕ್ಕೆ ನಿರ್ಮಿತಿ ಕೇಂದ್ರಕ್ಕೆ 22 ಲಕ್ಷ ರೂ. ನೀಡಲಾಗಿದೆ. ಇಲ್ಲೂ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ ಎಂಬುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಕಾಮಗಾರಿ ಬಗ್ಗೆ ಸವಿವರ ಕ್ರಿಯಾಯೋಜನೆ ತಯಾರಿಸಿ, ಪ್ರತೀ ಹಂತದ ಕಾಮಗಾರಿ ಬಗ್ಗೆ ವರದಿ ನೀಡಲು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ತೂಗು ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಪ್ರಗತಿಯಾಗಿಲ್ಲ ದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ತಕ್ಷಣ ಅನುಷ್ಠಾನಕ್ಕೆ ಸೂಚಿಸಿದರು. ಈ ಪ್ರದೇಶ ವ್ಯಾಪ್ತಿಯಲ್ಲೇ ಪ್ರಸ್ತಾವಿತ ಗಾಲ್ಫ್ ಕೋಸ್ರ್ ಪ್ರದೇಶಕ್ಕೆ 162 ಎಕರೆ ಪ್ರದೇಶ ಕಾದಿರಿಸಲಾಗಿದ್ದು, ಈ ಜಮೀನನ್ನು ಪ್ರವಾಸೋದ್ಯಮ ಇಲಾಖೆ ಹೆಸರಿಗೆ ಆರ್ ಟಿ ಸಿ ಯಲ್ಲಿ ನಮೂದಿಸಲು ತಹಸೀಲ್ದಾರರಿಗೆ ಸೂಚಿಸಿದರು.

Wednesday, December 22, 2010

ಕರಾವಳಿ ಉತ್ಸವಕ್ಕೆ ಚಾಲನೆ

ಮಂಗಳೂರು,ಡಿಸೆಂಬರ್ 22: ದಕ್ಷಿಣ ಕನ್ನಡ ಜಿಲ್ಲಾಡಳಿತ ಆಯೋಜಿ ಸಿರುವ ಕರಾ ವಳಿ ಉತ್ಸ ವಕ್ಕೆ ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾ ಧಿಕಾರಿ ಡಾ. ಡಿ. ವಿ ರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಿ ದರು.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಾ ಜೆ.ಪಾಲೇಮಾರ್, ಶಾಸಕರಾದ ಎನ್. ಯೋಗಿಶ್ ಭಟ್,ಅಭಯಚಂದ್ರ ಜೈನ್, ಜಿಲ್ಲಾ ಧಿಕಾರಿ ಸುಬೋಧ್ ಯಾದವ್,ಮಂಗ ಳೂರು ಮೇಯರ್ ರಜನಿ ದುಗ್ಗಣ್ಣ,ಪೋಲಿಸ್ ಆಯುಕ್ತ ಸೀ ಮಂತ್ ಕುಮಾರ್ ಸಿಂಗ್,ಜಿಲ್ಲಾ ಪೋಲಿಸ್ ವರಿಷ್ಟಾ ಧಿಕಾರಿ ಡಾ. ಸುಬ್ರಹ್ಮ ಣ್ಯೇಶ್ವರ ರಾವ್, ಜಿಲ್ಲಾ ಪಂಚಾ ಯತ್ ಸಿಇಓ ಪಿ.ಶಿವ ಶಂಕರ್, ಕನ್ನಡ ಸಾಹಿತ್ಯ ಪರಿ ಷತ್ ಜಿಲ್ಲಾ ಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮತ್ತಿತರ ಗಣ್ಯರು ಸಮಾ ರಂಭ ದಲ್ಲಿ ಪಾಲ್ಗೊಂಡಿದ್ದರು.

Tuesday, December 21, 2010

ವಿಜಯಲಕ್ಷ್ಮಿಯವರಿಗೆ ಪರಿಹಾರ ಚೆಕ್ ಹಸ್ತಾಂತರ

ಮಂಗಳೂರು,ಡಿಸೆಂಬರ್ 21:ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಬೆನ್ನು ಮೂಳೆ ಚಿಕಿತ್ಸೆ ಪಡೆಯು ತ್ತಿರುವ ಸುಳ್ಯ ಕಲ್ಮಡ್ಕದ ಶ್ರೀಮತಿ ವಿಜಯ ಲಕ್ಷ್ಮಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾನವೀಯ ನೆಲೆಯಲ್ಲಿ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ನೀಡಿದ ರೂ. ಒಂದು ಲಕ್ಷ ರೂ.ಗಳ ಚೆಕ್ ಅನ್ನು ಮಂಗಳೂರು ಸಹಾಯಕ ಆಯುಕ್ತರಾದ ಶ್ರೀ ಪ್ರಭುಲಿಂಗ ಕವಳಿಕಟ್ಟಿ ಅವರು ಹಸ್ತಾಂತರಿಸಿದರು.

ಜಿ.ಪಂ, ತಾ.ಪಂ ಚುನಾವಣೆ: 215, 575 ನಾಮಪತ್ರ ಸಲ್ಲಿಕೆ

ಮಂಗಳೂರು,ಡಿ.21: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಿಗೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 20 ಅಂತಿಮ ದಿನವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಯ 35 ಸ್ಥಾನಗಳಿಗೆ ಒಟ್ಟು 215 ಹಾಗೂ ತಾಲೂಕು ಪಂಚಾಯಿತಿಯ 129 ಸ್ಥಾನಗಳಿಗೆ 575 ನಾಮಪತ್ರ ಸಲ್ಲಿಕೆಯಾಗಿದೆ. ಮಂಗಳೂರು ತಾಲೂಕಿನ ಜಿಲ್ಲಾ ಪಂಚಾಯತ್ 10 ಸ್ಥಾನಗಳಿಗೆ ಒಟ್ಟು 60 ನಾಮಪತ್ರ ಸಲ್ಲಿಕೆಯಾಗಿದೆ. ಬಂಟ್ವಾಳ ಜಿ.ಪಂ ನ 9 ಸ್ಥಾನಗಳಿಗೆ 58 ನಾಮಪತ್ರ ಸಲ್ಲಿಕೆ, ಪುತ್ತೂರು ಜಿಲ್ಲಾ ಪಂಚಾಯತ್ ನ ಒಟ್ಟು 6 ಸ್ಥಾನಗಳಿಗೆ 41 ನಾಮಪತ್ರ ಸಲ್ಲಿಕೆಯಾಗಿದೆ. ಸುಳ್ಯದ 4 ಜಿ.ಪಂ ಕ್ಷೇತ್ರಗಳಿಗೆ 26 ನಾಮಪತ್ರ, ಬೆಳ್ತಂಗಡಿಯ 6 ಜಿ.ಪಂ ಕ್ಷೇತ್ರಗಳಿಗೆ 30 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮಂಗಳೂರು ತಾಲೂಕು ಪಂಚಾಯಿತಿಯ 37 ಸ್ಥಾನಗಳಿಗೆ 173 ನಾಮಪತ್ರ, ಬಂಟ್ವಾಳ ತಾಲೂಕು ಪಂಚಾಯಿತಿಯ 33 ಸ್ಥಾನಗಳಿಗೆ 129 ನಾಮಪತ್ರ, ಪುತ್ತೂರು ತಾ.ಪಂ.ನ 22 ಸ್ಥಾನಗಳಿಗೆ 106 ನಾಮಪತ್ರ, ಸುಳ್ಯ ತಾ.ಪಂ. ನ 13 ಸ್ಥಾನಗಳಿಗೆ 53 ನಾಮಪತ್ರ, ಬೆಳ್ತಂಗಡಿ ತಾ ಪಂ.ನ 24 ಸ್ಥಾನಗಳಿಗೆ 112 ನಾಮಪತ್ರ ಸಲ್ಲಿಕೆಯಾಗಿವೆ.

Monday, December 20, 2010

ವಾಮಾಚಾರ,ಮಗು ಬಲಿ ಪ್ರಕರಣ:ಜಿಲ್ಲಾಡಳಿತದಿಂದ ತನಿಖೆ ಆರಂಭ

ಮಂಗಳೂರು,ಡಿಸೆಂಬರ್ 20 :ಡಿಸೆಂಬರ್ 16 ರಂದು
ಮಂಗಳೂರಿನ ಯೆಯ್ಯಾಡಿ ಸಮೀಪ ಕಂಪದ ಕೋಡಿ ಎಂಬಲ್ಲಿ ನಡೆದಿದೆ ಶಂಕಿತ ವಾಮಾಚಾರಕ್ಕೆ ಮಗು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ತನಿಖೆ ಆರಂಭಿಸಿದೆ. ರವಿವಾರ ಮಂಗಳೂರು ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಅವರು ಘಟನೆ ನಡೆದ ಸ್ತಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳಿಯರಿಂದ ಮತ್ತು ಹತ್ಯೆಯಾದ ಮಗು ಪ್ರಿಯಾಂಕಳ ಹೆತ್ತವರಿಂದ ಮಾಹಿತಿ ಸಂಗ್ರಹಿಸಿದರು.ಇನ್ನೆರಡು ದಿನಗಳಲ್ಲಿ ಘಟನೆಯ ಕುರಿತಂತೆ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ಸಹಾಯಕ ಆಯುಕ್ತರು ನೀಡಲಿದ್ದಾರೆ.
ರಾಜ್ಯ ಮಕ್ಕಳ ಹಕ್ಕು ಆಯೋಗ ಖಂಡನೆ:
ದಿನಾಂಕ 16-12-10 ರಂದು ಕಂಪದಕೋಡಿ ಮಂಗಳೂರಿನಲ್ಲಿ 3 ವರ್ಷದ ಮುಗ್ಧ ಮಗುವನ್ನು ಪೂಜೆಯ ಕಾರಣ ನೀಡಿ ಕಾಳ ಭೈರವ ಗುಡಿಯೊಂದರಲ್ಲಿ ಅಮಾನವೀಯವಾಗಿ ಅಮಾನುಷವಾಗಿ ಕೊಲೆ ಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ವಿಷಯವಾಗಿರುತ್ತದೆ. ಈ ನಂಬಲಸಾಧ್ಯ ಘಟನೆಯಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತೀವ್ರ ಅಘಾತಕ್ಕೊಳಗಾಗಿರುತ್ತದೆ.21 ನೇ ಶತಮಾನದ ನಾಗರೀಕ ಸಮಾಜದಲ್ಲಿ ಇಂತಹ ಮೂಢನಂಬಿಕೆಗೆ ಮುಗ್ಧ ಹೆಣ್ಣು ಮಗುವಿನ ಕೊಲೆ ನಡೆದಿರುವುದು ಖಂಡನೀಯ.ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ರೀತಿಯ ಘಟನೆಗಳು ಎಲ್ಲಿಯೂ/ಯಾವಾಗಲೂ ನಡೆಯದಂತೆ ತಡೆಯಲು ಸಾರ್ವಜನಿಕರಲ್ಲಿ ಸಹಕಾರವನ್ನು ಕೋರುತ್ತದೆ. ಇಂತಹ ಘಟನೆ ನಡೆಯುವುದು ಕಂಡು ಬಂದರೆ ಸಾರ್ವಜನಿಕರು ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ,4ನೇ ಮಹಡಿ ,ಕೃಷಿ ಭವನ,ನೃಪತುಂಗ ರಸ್ತೆ,ಬೆಂಗಳೂರು ದೂ.ಸಂ.22115292 ಕ್ಕೆ ಮಾಹಿತಿ ನೀಡಲು ಕೋರಿದೆ.

Saturday, December 18, 2010

ಪಂಚಾಯತ್ ಚುನಾವಣೆ: ಕಾನೂನು ಸುವ್ಯವಸ್ಥೆ ಪಾಲನೆ ಸಭೆ

ಮಂಗಳೂರು, ಡಿಸೆಂಬರ್ 18: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಸದಾಚಾರ ಸಂಹಿತೆ ಪಾಲಿಸಲು ಹಾಗೂ ಕಾನೂನು, ಸುವ್ಯವಸ್ಥೆ ರೂಪಿಸಲು ನೆರವಾಗುವಂತೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಪೊಲೀಸ್ ಮತ್ತು ಚುನಾವಣಾ ಕರ್ತವ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಅಧಿಕಾರಿಗಳ ಸಭೆ ನಡೆಯಿತು.

ಇಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗ ನೀಡಿದ ಸೂಚನೆ ಯಂತೆ ಚುನಾವಣೆ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸವಿವರ ಚರ್ಚೆ ನಡೆಸಿದರು. ಪೊಲೀಸ್ ಮತ್ತು ಅಬಕಾರಿ, ವಾಣಿಜ್ಯ ತೆರಿಗೆ ಇಲಾಖೆಗಳು ಚುನಾವಣೆ ಸಂದರ್ಭದಲ್ಲಿ ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಿಲ್ಲಾಧಿಕಾರಿಗಳು ಮಾರ್ಗದರ್ಶನ ನೀಡಿದರು. ಅಬಕಾರಿ ಇಲಾಖೆಯಿಂದ 24 ಗಂಟೆ ನಿಯಂತ್ರಣ ಕೊಠಡಿ, ಜಂಟಿ ತಂಡ ನಿಯೋಜನೆಗೆ ಸಹಕಾರ, ತಂಡಗಳಲ್ಲಿ ಅಬಕಾರಿ ಇಲಾಖೆಯಿಂದ ತಂಡಕ್ಕೊಬ್ಬರಂತೆ ಜನರು. ಜಿಲ್ಲೆಯ ಗಡಿಗಳೊಂದಿಗೆ ಅಬಕಾರಿ ಇಲಾಖಾಧಿಕಾರಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ಸತತ ಸಂಪರ್ಕವಿರಿಸಿಕೊಂಡು ಅಪರಾಧಗಳು ಸಂಭವಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದರು. ಗೃಹರಕ್ಷಕ ದಳದ ಬೆಂಬಲ ತೆಗೆದುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಮದ್ಯ ಸಾಗಾಣಿಕೆ ತಡೆ, ಮದ್ಯದಂಗಡಿಗಳು ಸಮಯ ಉಲ್ಲಂಘನೆ ಮಾಡದಂತೆ ನೋಡಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಲು ಅಬಕಾರಿ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಎಲ್ಲ ಇಲಾಖೆಯಿಂದ ತಲಾ ಒಬ್ಬರು. ಕೆ.ಸಿ. ರೋಡ್ ನಲ್ಲೇ ಚೆಕ್ ಪೋಸ್ಟ್ ಸ್ಥಾಪನೆ ಬಗ್ಗೆ ಇಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಲಾಯಿತು. ತಲಪಾಡಿ ಚೆಕ್ ಪೋಸ್ಟ್ ಇದ್ದರೂ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿದ್ದು, ಇಲ್ಲಿ ಗಸ್ತು ತಿರುಗುವುದನ್ನು ಬಲಪಡಿಸುವಂತೆ ಸಲಹೆ ಮಾಡಿದರು.
ವಾಣಿಜ್ಯ ತೆರಿಗೆ ಇಲಾಖೆಯವರು ಸಗಟು ಖರೀದಿಯ ಮೇಲೆ ಕಣ್ಗಾವಲಿರಿಸಬೇಕು. ವ್ಯಾಪಾರಿಗಳ ಸಭೆ ಕರೆದು ಇಂತಹ ಪ್ರಕರಣಗಳೇನಾದರೂ ಬಂದ ಬಗ್ಗೆ ದಿನ ನಿತ್ಯ ವರದಿ ಮಾಡಲು ಸೂಚಿಸಬೇಕು. ಸಗಟು ಖರೀದಿಯಲ್ಲಿ ಅಕ್ರಮಗಳು ದಾಖಲಾದರೆ ವ್ಯಾಪಾರಿಗಳನ್ನೇ ಹೊಣೆಯಾಗಿಸಬೇಕೆಂದರು. ಪ್ರತಿನಿತ್ಯ ಎಲ್ಲ ಇಲಾಖೆಗಳು ಜಿಲ್ಲಾಧಿಕಾರಿಗಳ ಚುನಾವಣಾ ಶಾಖೆಗೆ ವರದಿಯನ್ನು ಕಳುಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಈಗಾ ಗಲೇ ನೀತಿ ಸಂಹಿತೆ ಅನುಷ್ಠಾ ನಾಧಿ ಕಾರಿ ಗಳ ಸಭೆ ನಡೆಸ ಲಾಗಿದ್ದು, ನಾಮ ಪತ್ರ ಸಲ್ಲಿಕೆ ಸಂದರ್ಭ ದಲ್ಲಿ, ಪ್ರಚಾರಕ್ಕೆ ವಾಹನ ಗಳಿಗೆ ಪ ರವಾನಿಗೆ ನೀಡುವ ಬಗ್ಗೆ ಯೂ ಚರ್ಚಿಸ ಲಾಯಿತು. ಪರ ವಾನಿಗೆ ಪತ್ರದ ಮೂಲ ಪ್ರತಿಯನ್ನು ವಾಹನಕ್ಕೆ ಅಂಟಿಸಿ ಕೊಂಡಿರಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಜನಸಂಪರ್ಕ ಸಭೆಗಳನ್ನು ಮಾಡುವ ಬಗ್ಗೆ, ಚುನಾವಣೆಯಲ್ಲಿ ಧ್ವನಿವರ್ಧಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಬಳಸಬೇಕು ಎಂದರು. ಸ್ಥಳೀಯ ಪೊಲೀಸ್ ಮತ್ತು ತಹಸೀಲ್ದಾರರು ಜಂಟಿಯಾಗಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವರದಿ ಸಲ್ಲಿಸುವ ಬಗ್ಗೆ, ಸೆಕ್ಟರ್ ಅಧಿಕಾರಿಗಳಿಗೆ ಚುನಾವಣೆಯಂದು ಮ್ಯಾಜಿಸ್ಟೀರಿಯಲ್ ಅಧಿಕಾರ ನೀಡುವ ಬಗ್ಗೆ, ಹಾಗೂ ಈ ಸಂಬಂಧ ಅವರಿಗೆ ತರಬೇತಿ ನೀಡುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.ಚುನಾವಣೆಯಲ್ಲಿ ನಿರತ ಸಿಬ್ಬಂದಿಗಳ ಯೋಗಕ್ಷೇಮಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಒಬ್ಬ ಅಧಿಕಾರಿ ಹಾಗೂ ತಾಲೂಕಿಗೊಬ್ಬರಂತೆ ಒಟ್ಟು 6 ಜನ ಅಧಿಕಾರಿಗಳನ್ನು ನೇಮಿಸಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವವರು ಯಾವುದೇ ಸಮಸ್ಯೆ ಎದುರಾದರೂ ಇವರನ್ನು ಸಂಪರ್ಕಿಸುವಂತೆ 6 ಅಧಿಕಾರಿಗಳನ್ನು ನೇಮಿಸಲು ಸಭೆ ನಿರ್ಧರಿಸಿತು. ಚುನಾವಣಾ ಕೇಂದ್ರಗಳಲ್ಲಿ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲು, ಕರ್ತವ್ಯ ನಿರತ ಸಿಬ್ಬಂದಿಗಳು ಪೋಸ್ಟಲ್ ಬ್ಯಾಲೆಟ್ ಮುಖಾಂತರ ಮತದಾನ ಮಾಡಲು ನೆರವಾಗುವಂತೆ ಇಲಾಖೆಯ ಮುಖ್ಯಸ್ಥರು ಇಂತಹವರ ಬಗ್ಗೆ ಸಮಗ್ರ ಮಾಹಿತಿಯನ್ನು ಡಿ.22ರೊಳಗೆ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಚುನಾವಣಾ ಕರ್ತವ್ಯಕ್ಕಾಗಿ ಖಾಸಗಿ ವಾಹನ ಬಳಸಿಕೊಂಡ ಸಂದರ್ಭಗಳಲ್ಲಿ ಅಂತಹ ವಾಹನಗಳ ಚಾಲಕರಿಗೆ ಅಂಚೆ ಮತಪತ್ರದ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಡಲು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ವ್ಯವಸ್ಥೆ ಕಲ್ಪಿಸಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಡಿಸಿಪಿ ಮುತ್ತುರಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ಡಾ. ರವೀಂದ್ರನ್, ಆರ್ ಟಿ ಒ ಸೇವಾನಾಯಕ್, ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ, ವಾಣಿಜ್ಯ ತೆರಿಗೆ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

Thursday, December 16, 2010

ದಕ್ಷಿಣ ಕನ್ನಡ ಜಿಲ್ಲೆ : 1027 ಮತಗಟ್ಟೆಗಳು

ಮಂಗಳೂರು,ಡಿಸೆಂಬರ್,16: ರಾಜ್ಯದಲ್ಲಿ ಈ ಬಾರಿ ನಡೆಯಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮೊದಲ ಬಾರಿ ವಿದ್ಯುನ್ಮಾನ ಮತಯಂತ್ರ ಬಳಕೆಯಾಗಲಿದೆ. ಇದರಿಂದ ಫಲಿತಾಂಶ ತ್ವರಿತವಾಗಿ ಲಭಿಸಲಿದೆ. ಮಾತ್ರವಲ್ಲ ಅಸಿಂಧು ಮತದಾನ ಕಾಲಂ ಮಾಯವಾಗಲಿದೆ.
ದಕ್ಷಿಣ ಕನ್ನಡದಲ್ಲಿ ಶಾಂತಿ ಮತ್ತು ಸುವ್ಯವಸ್ಥಿತವಾಗಿ ಚುನಾವಣಾ ಪ್ರಕ್ರಿಯೆಗಳು ನಡೆಯಲು ಅನುಕೂಲ ವಾಗು ವಂತೆ ಜಿಲ್ಲಾಡಳಿತದ ನೆರವಿ ನೊಂದಿಗೆ ಚುನಾವಣಾ ಆಯೋಗ ಸಕಲ ಸಿದ್ದತೆ ಗಳನ್ನು ಮಾಡುತ್ತಿದೆ. ಸುಮಾರು 3000 ಮತಯಂತ್ರಗಳು ಬಳಕೆಯಾಗಲಿವೆ. ಜಿಲ್ಲೆಯಲ್ಲಿ ನ.10ಕ್ಕೆ ಅನ್ವಯಿಸುವಂತೆ 9,34,143ಮತದಾರರಿದ್ದಾರೆ. ಈ ಪೈಕಿ 4,69,005ಮತದಾರರು ಮಹಿಳೆಯರು. 1027 ಮತಗಟ್ಟೆಗಳಿವೆ. 174 ಅತೀಸೂಕ್ಷ್ಮ ಮತ್ತು 233 ಸೂಕ್ಷ್ಮ ಎಂದು ಪರಿಗಣಿಸಲಾಗಿದೆ.
ವೆಚ್ಚ ಮಿತಿ: ಜಿಲ್ಲಾ ಪಂಚಾಯತ್ ಗೆ ಸ್ಪರ್ಧಿಸುವವರು ರೂ.ಒಂದು ಲಕ್ಷ ಹಾಗೂ ತಾಲೂಕು ಪಂಚಾಯತ್ ಗೆ ಸ್ಪರ್ಧಿಸುವವರು ರೂ.50,000 ವೆಚ್ಚ ಮಾಡಬಹುದಾಗಿದೆ. ಅಭ್ಯರ್ಥಿಗಳು ಚುನಾವಣಾಧಿಕಾರಿ ಹಾಗೂ ಚುನಾವಣಾ ಲೆಕ್ಕಾಧಿಕಾರಿಯವರಿಗೆ ಲೆಕ್ಕಪತ್ರಗಳನ್ನು ಒಪ್ಪಿಸಬೇಕಾಗುತ್ತದೆ. ಫಲಿತಾಂಶ ಪ್ರಕಟವಾಗಿ 30 ದಿನಗಳೊಳಗೆ ವಿವರವನ್ನು ಸಲ್ಲಿಸಬೇಕು.
ವೀಕ್ಷಕರು: ಮುಕ್ತ ಹಾಗೂ ಶಾಂತಿಯುತ ಚುನಾವಣೆಗಾಗಿ ಜಿಲ್ಲೆಗೆ ಇಬ್ಬರು ವೀಕ್ಷಕರನ್ನು ನೇಮಿಸಲಾಗಿದೆ. ದ.ಕ.ಜಿಲ್ಲಾ ಅರಣ್ಯ ವ್ಯವಸ್ಥಾಪನಾಧಿಕಾರಿ ಕೆ.ಟಿ.ಕಾವೇರಿಯಪ್ಪ ಹಾಗೂ ಮೈಸೂರಿನ ಆಡಳಿತಾತ್ಮಕ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕ ಇಕ್ಬಾಲ್ ಹುಸೇನ್ ಕ್ರಮವಾಗಿ ಮಂಗಳೂರು ಮತ್ತು ಪುತ್ತೂರು ವಿಭಾಗಕ್ಕೆ ವೀಕ್ಷಕರಾಗಿದ್ದಾರೆ.
ಸಿಬಂದಿ: ಜಿಲ್ಲೆಯಲ್ಲಿ ಚುನಾವಣೆಗಾಗಿ 6779 ಸಿಬ್ಬಂದಿಗಳ ಆವಶ್ಯಕತೆಯಿದೆ. ಇದರಲ್ಲಿ ಶೇ.10 ಕಾಯ್ದಿಟ್ಟ ಸಿಬ್ಬಂದಿಗಳಾಗಿದ್ದಾರೆ. 1130 ಅಧ್ಯಕ್ಷಾಧಿಕಾರಿ, 4519 ಮತಗಟ್ಟೆ ಅಧಿಕಾರಿ ಹಾಗೂ 1130 ಗ್ರೂಪ್ ಡಿ ಸಿಬ್ಬಂದಿ ಒಟ್ಟು ಸಿಬ್ಬಂದಿಗಳಲ್ಲಿ ಒಳಗೊಂಡಿದ್ದಾರೆ.
ಮತ ಎಣಿಕೆ: ಜನವರಿ 4 ರಂದು ಮತ ಎಣಿಕೆ ಕಾರ್ಯ ಆಯಾ ತಾಲೂಕಿನಲ್ಲಿ ಗುರುತಿಸಲಾದ ಕೇಂದ್ರಗಳಲ್ಲಿ ನಡೆಯಲಿದೆ. ಮಂಗಳೂರಿನ ರೊಸಾರಿಯೋ ಸಂಯುಕ್ತ ಪದವಿಪೂರ್ವ ಕಾಲೇಜು, ಬಂಟ್ವಾಳ ಮೊಡಂಕಾಪಿನ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ಉಜಿರೆಯ ಎಸ್ ಡಿ ಎಂ ಕಾಲೇಜು, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಹಾಗೂ ಸುಳ್ಯದ ಎನ್ಎಂಸಿ ಮತ ಎಣಿಕಾ ಕೇಂದ್ರಗಳಾಗಿವೆ. 5 ತಾಲೂಕುಗಳಿಗೆ 104 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 10 ಮತಗಟ್ಟೆಗಳಿಗೆ ಒಬ್ಬರು ಸೆಕ್ಟರ್ ಅಧಿಕಾರಿ ಇರುತ್ತಾರೆ.

Wednesday, December 15, 2010

ನಿಗದಿತ ವೇಳೆಯಲ್ಲಿ ನ್ಯಾಯಬೆಲೆ ಅಂಗಡಿಗಳು ತೆರೆದಿರಬೇಕು: ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಡಿಸೆಂಬರ್ 15: ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 8ರಿಂದ 12ಗಂಟೆಯವರೆಗೆ, ಸಂಜೆ 4ರಿಂದ 8 ಗಂಟೆಯವರೆಗೆ ತೆರೆದಿರಬೇಕು. ಅಂಗಡಿಗಳಲ್ಲಿರುವ ಪದಾರ್ಥಗಳು ಮತ್ತು ಬೆಲೆ ಬಗ್ಗೆ ಸವಿವರ ಬೋರ್ಡ್ ಹಾಕಿರಬೇಕು; ತೂಕದಲ್ಲಿ ವ್ಯತ್ಯಾಸವಿದೆ ಎಂಬ ಆರೋಪಗಳು ಬರಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಹೇಳಿದರು.ಅವರಿಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ನಡೆದ ಸಮ ನ್ವಯ ಸಮಿತಿ ಪ್ರಗತಿ ಪರಿಶೀಲನೆ ಸಭೆಯನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಪಡಿ ತರ ವಿತರಣೆ ವ್ಯವಸ್ಥೆ ಯಲ್ಲಿ ಸಾ ಜನಿ ಕರಿಂದ ಯಾವುದೇ ದೂರು ಗಳು ಬರ ಬಾರದು ಎಂದು ಹೇಳಿದ ಅವರು, ಎರಡು ತಿಂಗಳಿಗೊಮ್ಮೆ ನಡೆಯುವ ನ್ಯಾಯಬೆಲೆ ಜಾಗೃತಿ ಸಮಿತಿಯ ವರದಿಯನ್ನು ಸಲ್ಲಿಸಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. ಪಡಿತರ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿರಿಸಲು ಹೆಚ್ಚಿನ ಜಾಗೂರಕತೆ ವಹಿಸಬೇಕೆಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಖಾನೆ ಮತ್ತು ಬಾಯ್ಲರುಗಳ ಹಿರಿಯ ಸಹಾಯಕ ನಿರ್ದೇಶಕರು ಮಾತನಾಡಿ, ಗೇರುಬೀಜ ಸಂಸ್ಕರಣಾ ಘಟಕಗಳಿಗೆ ಸಂಬಂಧಿತ ಇಲಾಖೆಗಳು ಸಹಾಯಧನ ನೀಡುವಾಗ ಬಾಯ್ಲರ್ ಗಳು ಉತ್ತಮ ಗುಣಮಟ್ಟದ್ದ (ಸ್ಟ್ಯಾಂಡರ್ಡ್) ನ್ನೇ ಖರೀದಿಸಬೇಕೆಂಬ ಷರತ್ತು ವಿಧಿಸಬೇಕು. ಇಲ್ಲದಿದ್ದರೆ ಅವಘಡ ಗಳು ಸಂಭವಿಸಿದರೆ ಹೆಚ್ಚಿನ ಅನಾಹುತ ಸಂಭವಿಸಬಹುದೆಂಬುದನ್ನು ಸಭೆಯ ಗಮನಕ್ಕೆ ತಂದರು.
ಕಾರ್ಮಿಕ ಇಲಾಖೆಯವರು ಸ್ಥಳ ಸಂದರ್ಶನದ ವೇಳೆ ಅಕ್ರಮಗಳು ಪತ್ತೆಯಾದರೆ ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಲ್ಲ ಎಂದು ನಿರ್ಲಕ್ಷ್ಯ ವಹಿಸದೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕೆಂದು ಸಭೆಗೆ ಸೂಚಿಸಿದರು. ಅಕ್ರಮ ಗಣಿಗಾರಿಕೆ, ಜೀತ, ಬಾಲ ಕಾರ್ಮಿಕ ಆಚರಣೆಗಳು ಪತ್ತೆಯಾದರೆ ತಕ್ಷಣವೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕೆಂದರು.ಆರೋಗ್ಯ ಇಲಾಖೆ, ಪರಿಸರ ಇಲಾಖೆ, ಲೋಕೋ ಪಯೋಗಿ ಇಲಾಖೆ, ತೋಟ ಗಾರಿಕೆ ಇಲಾಖೆ ಗಳಲ್ಲಿ ಸಮನ್ವ ಯದ ಕೊರತೆ ಯಿಂದ ಸಂಭ ವಿಸಿದ ಲೋಪ ಗಳನ್ನು ಸರಿ ಪಡಿಸಿ ಕೊಳ್ಳು ವಂತೆ ಸಭೆ ಯಲ್ಲಿ ಉಪ ಸ್ಥಿತ ರಿದ್ದ ಅಧಿಕಾ ರಿಗ ಳಿಗೆ ಸೂಚಿ ಸಿದರು. ಹಲವು ಇಲಾಖೆಗಳಿಗೆ ಕಟ್ಟಡಕ್ಕೆ ಜಮೀನಿಲ್ಲ ಎಂಬ ಬೇಡಿಕೆಯು ಸಭೆಯಲ್ಲಿ ಮಂಡನೆಯಾಯಿತು. ಮೆಸ್ಕಾಂ ಮತ್ತು ಲೋಕೋಪಯೋಗಿ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ವಿಳಂಬಿಸಬಹುದಾದ ಯೋಜನೆಗಳ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು. ಪ್ರವಾಸೋದ್ಯಮ ಇಲಾಖೆಯಿಂದ ಕೈಗೆತ್ತಿಕೊಂಡ ಕಾಮಗಾರಿ ವಿಳಂಬಕ್ಕೆ ಕಾರಣ ಹಾಗೂ ಪರ್ಯಾಯಗಳ ಬಗ್ಗೆ ಚರ್ಚಿಸಲಾಯಿತಲ್ಲದೆ, ಹೋಮ್ ಗಾರ್ಡ್ ಸಿಬ್ಬಂದಿಗೆ ಐದಾರು ತಿಂಗಳಿಂದ ಸಂಬಳ ನೀಡದಿರುವ ಬಗ್ಗೆ ಹೋಮ್ ಗಾರ್ಡ್ ಕಮಾಂಡೆಂಟ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ನಗರದಲ್ಲಿ ಘನತ್ಯಾಜ್ಯ ವಿಲೇವಾರಿಯ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ, ಜಿಲ್ಲಾ ಆಸ್ಪತ್ರೆಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ವಿಸ್ತೃತ ವರದಿ ಸಲ್ಲಿಸಿದರು. ಗಣಿ ಮತ್ತು ವಿಜ್ಞಾನ ಇಲಾಖೆಯವರು ಜಿಲ್ಲಾಧಿಕಾರಿ ಕ್ರಮಕೈಗೊಳ್ಳಲು ಕಾಯದೇ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮೂಡಬಿದರೆ ಬೈಪಾಸ್ ರಸ್ತೆ ಕಾಮಗಾರಿ ಅಭಿವೃದ್ಧಿಯ ಬಗ್ಗೆ ತಕ್ಷಣವೇ ವರದಿ ಸಲ್ಲಿಸಲು ಸೂಚಿಸಿದರು. ಸಭೆಯಲ್ಲಿ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೆ ಹಾಜರಾಗದ ಇಲಾಖೆಯ ಅಭಿವೃದ್ಧಿಯಲ್ಲಿ ಕೊರತೆಯಾದರೆ ಅದಕ್ಕೇ ಆಯಾ ಇಲಾಖೆಗಳ ಅಧಿಕಾರಿಗಳೇ ಸಂಪೂರ್ಣ ಹೊಣೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಡಿಸಿಪಿ ಮುತ್ತೂರಾಯ, ಸಿಇಒ ಪಿ.ಶಿವಶಂಕರ್ ಉಪಸ್ಥಿತರಿದ್ದರು.

Monday, December 13, 2010

ಕುದುರೆಮುಖ ರಾಷ್ಟ್ರೀಯ ಪುನರ್ವಸತಿ ಯೋಜನೆ: 78 ಕುಟುಂಬಗಳ ಅರ್ಜಿ ಪರಿಶೀಲನೆಯಲ್ಲಿ

ಮಂಗಳೂರು, ಡಿಸೆಂಬರ್ 13: ದಕ್ಷಿಣ ಕನ್ನಡ, ಉಡುಪಿ, ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 600.32 ಚ.ಕಿ.ಮೀ ವ್ಯಾಪ್ತಿಯಲ್ಲಿ ಪಸರಿಸಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ 220 ಕುಟುಂಬಗಳು ವಾಸಿಸುತ್ತಿದ್ದು, ಇವರಲ್ಲಿ 13 ಕುಟುಂಬಗಳು ಪುನರ್ ವಸತಿ ಯೋಜನೆಯಡಿ ಉದ್ಯಾನವನ ವ್ಯಾಪ್ತಿಯಿಂದ ಹೊರಬಂದಿದು, ಇನ್ನು 78 ಕುಟುಂಬಗಳು ಉದ್ಯಾನವನದಿಂದ ಹೊರಬರಲು ಆಸಕ್ತಿ ಹೊಂದಿ ಅರ್ಜಿಗಳನ್ನು ಸಲ್ಲಿಸಿದೆ ಎಂದು ಕುದುರೆಮುಖ ವನ್ಯಜೀವಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಡಾಲ್ಕರ್ ತಿಳಿಸಿದರು.

ವನ್ಯಜೀವಿ ವಲಯ ಸ್ವಾಧೀನ ಪಡಿಸಿ ಕೊಳ್ಳು ವುದು ಮತ್ತು ಪುನರ್ ವಸತಿ ಯೋಜ ನೆಯಡಿ ಪರ್ಯಾಯ ವ್ಯವಸ್ಥೆ ಕಲ್ಪಿ ಸುವ ಸಂಬಂಧ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುನರ್ ವಸತಿ ಯೋಜನೆಯಡಿ ಅರಣ್ಯದೊಳಗಿರುವ ಕುಟುಂಬಗಳಿಗೆ ಯೋಗ್ಯ ಮೌಲ್ಯ ನೀಡುವ ಬಗ್ಗೆ ಸವಿವರ ಚರ್ಚೆ ನಡೆಯಿತು. ಈಗಾಗಲೇ ಹೊರಬಂದ 13 ಕುಟುಂಬಗಳಿಗೆ 96.61 ಲಕ್ಷ ಪರಿಹಾರವನ್ನು ನೀಡಲಾಗಿದೆ. ಹಾಗೂ ಇವರಿಂದ 13.79 ಎಕರೆ ಖಾಸಗಿ ಭೂಮಿಯನ್ನು ಉದ್ಯಾನವನಕ್ಕೆ ನೋಂದಣಿ ಮಾಡಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
2010-11ನೇ ಸಾಲಿನಲ್ಲಿ ಪುನರ್ ವಸತಿ ಯೋಜನೆಗೆ ಸರ್ಕಾರ ರೂ. 250 ಲಕ್ಷ ಅನುದಾನ ಹಂಚಿಕೆ ಮಾಡಿದ್ದು, ಮೊದಲ ಕಂತಿನಲ್ಲಿ ರೂ. 62.50 ಲಕ್ಷ ಅನುದಾನ ಬಿಡುಗಡೆಯಾಗಿದೆ. ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿದಂತೆ 91 ಕುಟುಂಬಗಳು ಅರ್ಜಿ ಸಲ್ಲಿಸಿದ್ದು, 09-10ನೇ ಸಾಲಿನಲ್ಲಿ 12 ಕುಟುಂಬಗಳ ಹಾಗೂ 10-11ನೇ ಸಾಲಿನಲ್ಲಿ 9 ಕುಟುಂಬಗಳು ಮೌಲ್ಯಮಾಪನ ಪೂರ್ಣಗೊಂಡಿರುತ್ತದೆ. 12+1 ಕುಟುಂಬ ಉದ್ಯಾನದಿಂದ ಹೊರಬಂದಿದೆ. ಉಳಿದ 70 ಪ್ರಕರಣಗಳ ಮೌಲ್ಯಮಾಪನ ಸಲುವಾಗಿ ಅರ್ಜಿಗಳನ್ನು ತಹಸೀಲ್ದಾರ್ ಬೆಳ್ತಂಗಡಿ ಇವರಿಗೆ ಕಳುಹಿಸಿ ಕೊಡಲಾಗಿದ್ದು, ತೋಟಗಾರಿಕೆ, ಕಂದಾಯ, ಅರಣ್ಯ ಹಾಗೂ ಲೋಕೋಪಯೋಗಿ ಇಲಾಖಾ ಮೌಲ್ಯಮಾಪನ ಜಾರಿಯಲ್ಲಿದೆ.ಸ್ಥಳೀಯ ಜನರ ಹಿತಾಸಕ್ತಿ ಗಮನದಲ್ಲಿರಿಸಿ ಅವರ ಪರಿಸ್ಥಿತಿಗಳನ್ನು ಸರ್ಕಾರಕ್ಕೆ ತಲುಪಿಸಿ ಅವರಿಗೆ ಅತ್ಯುತ್ತಮ ಪ್ಯಾಕೇಜ್ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸಮಿತಿಯ ಸದಸ್ಯರಿಗೆ ಸೂಚಿಸಿದರು. ಮೌಲ್ಯಮಾಪನವನ್ನು ಶೀಘ್ರವಾಗಿ ನಡೆಸಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ದಿನನಿಗದಿಪಡಿಸಿ ಸಮನ್ವಯದಿಂದ ಮೌಲ್ಯಮಾಪನ ನಡೆಸಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಅರಣ್ಯದಿಂದ ಮಾನವರನ್ನು ಹೊರತರುವ ಉದ್ದೇಶದಿಂದ ರೂಪಿಸಲ್ಪಟ್ಟ ಯೋಜನೆಯಲ್ಲಿ ಪುನರ್ ವಸತಿ ಕಲ್ಪಿಸುವ ಬಗ್ಗೆಯೂ ಅಧಿಕಾರಿಗಳು ಕಾಳಜಿ ವಹಿಸಬೇಕಿದೆ ಎಂದರು. ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್, ಜಿಲ್ಲಾ ಸರ್ಜನ್ ಡಾ. ಸರೋಜ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವರಾಮೇಗೌಡ ಸೇರಿದಂತೆ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ರಂಗಮಂದಿರ ಸಭೆ

ಮಂಗಳೂರು, ಡಿಸೆಂಬರ್ 13: ನಗರದ ಬೋಂದೆಲ್ ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ರಂಗಮಂದಿರ ನಿರ್ಮಾಣಕ್ಕೆ ಜಾಗ ಸಮೀಕ್ಷೆ ಮಾಡಿಸಿ ಲೋಕೋಪಯೋಗಿ ಇಲಾಖೆಯಿಂದ ಕನ್ನಡ ಸಂಸ್ಕೃತಿ ಇಲಾಖೆಗೆ ವರ್ಗಾಯಿಸಲು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸೂಚಿಸಿದರು.

ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಂಗಮಂದಿರ ನಿರ್ಮಾಣ ಸಂಬಂಧ ನಡೆಸಿದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಯೋಜನೆಯನ್ನು ರೂಪಿಸುವಾಗ ವಾಸ್ತವ ಸ್ಥಿತಿಯನ್ನು ಗಮನದಲ್ಲಿರಿಸಿ ರೂಪಿಸಬೇಕು. ಅವಾಸ್ತವಿಕ ಯೋಜನೆಗಳಿಂದ ಅನುಷ್ಠಾನ ಕಾಮಗಾರಿ ವಿಳಂಬವಾಗುವುದಕ್ಕೆ ನಮ್ಮ ಜಿಲ್ಲೆಯ ರಂಗಮಂದಿರ ಸಾಕ್ಷಿ. ಅತೀ ಕಡಿಮೆ ಜಾಗದಲ್ಲಿ ಅತ್ಯುತ್ತಮ ರಂಗಮಂದಿರ ನಿರ್ಮಾಣ ಸಾಧ್ಯ ಎಂಬುದಕ್ಕೆ ಗದಗ, ಗುಲ್ಬರ್ಗಾ ಸಾಕ್ಷಿ. ಮುಖ್ಯಮಂತ್ರಿಗಳು ಶಿಲಾನ್ಯಾಸ ಮಾಡಿದ ಜಾಗ ಬೊಂದೆಲ್ ನಲ್ಲಿ ಭವ್ಯ ರಂಗಮಂದಿರ ನಿರ್ಮಾಣ ಕಾಮಗಾರಿ ಆರಂಭಿಸಲು ಪ್ರಥಮ ಹಂತದಲ್ಲಿ ಜಾಗವನ್ನು ಲೋಕೋಪಯೋಗಿ ಇಲಾಖೆಯಿಂದ ಕನ್ನಡ ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿ ಕೊಳ್ಳಿ ಎಂದು ತಹಸೀಲ್ದಾರ್ ಮಂಜುನಾಥ್ ಅವರಿಗೆ ಸೂಚಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಮಾರ್ಗದರ್ಶನ ನೀಡಿದರು. ಜಮೀನು ನಕ್ಷೆಯ ಬಳಿಕ ತಕ್ಷಣವೇ ಡಿಸೈನ್ ಸ್ಕೆಚ್ ತಯಾರಿಸಲು ಸಿದ್ಥತೆ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಸಂಬಂಧ ಪಟ್ಟ ಇಲಾಖೆಯ ಎಲ್ಲ ಅಧಿಕಾರಿಗಳನ್ನೊಳಗೊಂಡಂತೆ ಸಮಿತಿಯ ಹಿರಿಯ ಸದಸ್ಯರಾದ ಏರ್ಯ ಲಕ್ಷ್ಮೀನಾರಾಯಣ, ನಾ ದಾಮೋದರ ಶೆಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಅಬ್ದುಲ್ ರಹಿಮಾನ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಮುಂತಾದವರು ಉಪಸ್ಥಿತರಿದ್ದರು.

Saturday, December 11, 2010

'ಪರವಾನಿಗೆ ಇಲ್ಲದೆ ವ್ಯವಹಾರಕ್ಕೆ ಅವಕಾಶವಿಲ್ಲ'

ಮಂಗಳೂರು,ಡಿಸೆಂಬರ್ 11: ಕಾನೂನುಪ್ರಕಾರ ವ್ಯಾಪಾರಕ್ಕೆ ಪರವಾನಿಗೆ ನೀಡುವುದರಿಂದ ಪಾಲಿಕೆಗೆ ಆದಾಯ ದೊರೆಯುತ್ತದೆ. ಆದರೆ ಪರವಾನಿಗೆ ಪಡೆಯದೆ ವ್ಯವಹಾರ ನಡೆಸಲು ಅವಕಾಶ ನೀಡಿ ಅಕ್ರಮಕ್ಕೆ ದಾರಿ ಮಾಡಿದರೆ ಮುಖ್ಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಕುಂಭಕರ್ಣನ ನಿದ್ದೆಬಿಟ್ಟು ಎದ್ದೇಳಿ, ಹೇಗೂ ವ್ಯವಸ್ಥೆ ನಡೆದುಕೊಂಡು ಹೋಗುತ್ತದೆ ಎಂಬ ಉದಾಸೀನ ಮನೋಭಾವವನ್ನು ಬಿಟ್ಟು, ಕಾನೂನು ಪ್ರಕಾರ ವ್ಯವಹಾರ ನಡೆಸಲು ಅನುಮತಿ ಕೇಳಿದವರಿಗೆ ಅನುಮತಿ ನೀಡಿ; ಅಲ್ಲದವರಿಗೆ ಅನುಮತಿ ನೀಡಬೇಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಜನವರಿ 15 ರೊಳಗೆ ಈ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯಾಗಬೇಕು. ಅಕ್ರಮ ವ್ಯಾಪಾರಕ್ಕೆ ಅವಕಾಶವಿರಬಾರದು. ನಗರದೆಲ್ಲೆಡೆ ಕಂಡುಬರುವ ಹೋರ್ಡಿಂಗ್ಸ್, ಭಿತ್ತಿಪತ್ರಗಳಲ್ಲಿ ಅನುಮತಿ ಕೊಟ್ಟ ದಿನಾಂಕ, ಅಂತಿಮ ದಿನಾಂಕ ನಮೂದಾಗಿರಬೇಕು ಎಂದರು.ಮೂಡಬಿದ್ರೆಯ ಕಿರಿಯ ಆರೋಗ್ಯಾಧಿಕಾರಿ ಸಾಜಿತ್ ಅವರು ಅನಧಿಕೃತ ಗೈರುಹಾಜರಿಯನ್ನು ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಅವರ ವಿರುದ್ದ ತಕ್ಷಣವೇ ವರದಿ ಕಳುಹಿಸಲು ಸೂಚಿಸಿದರಲ್ಲದೆ, ಕಠಿಣ ಕ್ರಮಕೈಗೊಳ್ಳುವುದಾಗಿಯೂ ನುಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ನಗರ ಯೋಜನ ಕೋಶದ ಯೋಜನಾ ನಿರ್ದೇಶಕ ಶ್ರೀಧರ್, ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ, ಪುತ್ತೂರು ವಿಭಾಗದ ಡಾ. ಹರೀಶ್ ಕುಮಾರ್, ತಹಸೀಲ್ದಾರರಾದ ಮಂಜುನಾಥ್, ಪ್ರಮೀಳಾ ಸೇರಿದಂತೆ ಎಲ್ಲ ತಹಸೀಲ್ದಾರರು, ಮುಖ್ಯ ಅಧಿಕಾರಿಗಳು, ಮನಾಪ ಅಧಿಕಾರಿಗಳು, ಇಂಜಿನಿಯರ್ ಗಳು ಉಪಸ್ಥಿತರಿದ್ದರು.

ಜಿಲ್ಲಾ ನಗರಯೋಜನೆ ಕೋಶದ ಕಾರ್ಯವೈಖರಿ ಬಗ್ಗೆ ಜಿಲ್ಲಾಧಿಕಾರಿ ಅತೃಪ್ತಿ

ಮಂಗಳೂರು,ಡಿಸೆಂಬರ್ 11: ಜಿಲ್ಲಾ ನಗರಯೋಜನೆ ಕೋಶದ ಕಾರ್ಯವೈಖರಿ ಯಿಂದಾಗಿ ಜಿಲ್ಲಾಧಿಕಾರಿಗಳು ಲೋಕ್ ಅದಾಲತ್ ನಲ್ಲಿ ನಿಲ್ಲುವಂತಾಗಿದೆ. ಇದೇ ಮಾದರಿ ಕಾರ್ಯವೈಖರಿ ಮುಂದುವರಿದರೆ ಅಧಿಕಾರಿಗಳು ಇದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಬೇಕಾದೀತು. ಕರ್ತವ್ಯ ನಿರ್ವಹಿಸದಿದ್ದರೆ ಅಂತಹವರಿಗೆ ಸರ್ಕಾರದ ಸಂಬಳವನ್ನು ಪಡೆಯಲು ಹಕ್ಕಿಲ್ಲ. ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ ನೀತಿ ಅನುಸರಿಸಿದರೆ ಸಂಬಳ ನಿಲ್ಲಿಸಲು ತಾನು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ ಜಿಲ್ಲಾಧಿಕಾರಿಗಳು ಸಭೆಗಳಿಂದ ಕೆಲಸವಾಗದಿದ್ದರೆ ಪರ್ಯಾಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಜಿಲ್ಲೆಯಲ್ಲಿ ಎಲ್ಲೂ ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ ಎಂದು ಹೇಳಿದ ಜಿಲ್ಲಾಧಿಕಾರಿಗಳು, ಸಭೆಯಲ್ಲಿ ನೀಡಿದ ಮಾಹಿತಿ ತಾನು ಸ್ಥಳ ಭೇಟಿಯ ಸಂದರ್ಭದಲ್ಲಿ ಸುಳ್ಳು ಎಂದು ಸಾಬೀತಾದರೆ ಕಠಿಣ ಕ್ರಮಕೈಗೊಳ್ಳುವುದಾಗಿ ನುಡಿದರು. ಮೂರು ವಾರದೊಳಗೆ ಮೂಡಬಿದ್ರೆ ಮತ್ತು ಬಂಟ್ವಾಳದವರು ತಮ್ಮ ಕಸವಿಲೇವಾರಿಗೆ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಮೂರು ವಾರದ ಬಳಿಕ ಅಲ್ಲಿನ ಕಸ ಪಾಲಿಕೆ ವ್ಯಾಪ್ತಿಗೆ ತಂದು ಸುರಿಯಲು ಅವಕಾಶ ಮಾಡಿಕೊಡುವುದಿಲ್ಲ. ಪಾಲಿಕೆ ವ್ಯಾಪ್ತಿಯ ಡಮಪಿಂಗ್ ಯಾರ್ಡ್ ಗೆ ಎಲ್ಲ ಕಡೆಯಿಂದ ಕಸ ಬರುತ್ತಿ ರುವುದರಿಂದ ಡಂಪಿಂಗ್ ಯಾರ್ಡ್ ಅವ್ಯವಸ್ಥೆಯ ಆಗರವಾಗಿದೆ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲ ತಾಲೂಕು,ಪಟ್ಟಣ ಪಂಚಾಯಿತಿಗಳು ಘನತ್ಯಾಜ್ಯ ವಿಲೇವಾರಿಗೆ ಅವರವರ ವ್ಯಾಪ್ತಿಯಲ್ಲೇ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದ ಜಿಲ್ಲಾಧಿಕಾರಿಗಳು, ಡಿಸೆಂಬರ್ 31ರೊಳಗೆ ಸುಳ್ಯದಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಘಟಕ ಆರಂಭವಾಗಬೇಕೆಂದರು. ಮುಲ್ಕಿಯಲ್ಲಿ ಈ ಸಂಬಂಧ ಸ್ಥಳಕ್ಕೆ ನೀಡಿರುವ ನ್ಯಾಯಾಲಯ ತಡೆಯಾಜ್ನೆ ಯನ್ನು 15 ದಿನಗಳೊಳಗೆ ತೆರವು ಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದರು. ಮೂಡಬಿದ್ರೆ,ಬೆಳ್ತಂಗಡಿ ಮತ್ತು ಮುಲ್ಕಿ ವ್ಯಾಪ್ತಿಗೆ ಮನಾಪದ ಪರಿಸರ ಇಂಜಿನಿಯರ್ ಮಂಜು ಅವರು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಕ್ರಿಯಾಯೋಜನೆ ಹಾಗೂ ತ್ಯಾಜ್ಯ ನಿರ್ವಹಣೆ ಘಟಕ ಆರಂಭವಾಗು ವವರೆಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದರು. ಬಂಟ್ವಾಳ, ಪುತ್ತೂರು, ಸುಳ್ಯ ಉಳ್ಳಾಲಕ್ಕೆ ಇಂಜಿನಿಯರ್ ಮಧು ಅವರಿಗೆ ಹೊಣೆಯನ್ನು ವಹಿಸಲಾಗಿದೆ.

ನಮ್ಮ ಮನೆ, ವಾಜಪೇಯಿ ವಸತಿ ಯೋಜನೆ ಗುರಿ- ಸಾಧನೆ: ಜಿಲ್ಲಾಧಿಕಾರಿ ಅಸಮಾಧಾನ

ಮಂಗಳೂರು,ಡಿಸೆಂಬರ್ 11: ನಮ್ಮ ಮನೆ ಹಾಗೂ ವಾಜಪೇಯಿ ವಸತಿ ಯೋಜನೆಯ ಗುರಿ-ಸಾಧನೆ ಹಾಗೂ ಫಲಾನುಭವಿಗಳ ಆಯ್ಕೆ ಬಗ್ಗೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಿಗದಿತ ಗುರಿ ಸಾಧನೆ ತೋರದಿದ್ದರೆ ಚೀಫ್ ಆಫೀಸರ್ ಗಳನ್ನು ವೈಫಲ್ಯಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಫಲಾನುಭವಿಗಳಿಗೆ ಸಮಗ್ರ ಮಾಹಿತಿ ನೀಡಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿ ಬ್ಯಾಂಕಿನಿಂದ ತಿರಸ್ಕೃತಗೊಂಡರೆ ಅಧಿಕಾರಿಗಳೇ ಅದಕ್ಕೆ ಹೊಣೆ ಹೊರಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಸಾಧನೆ ದಾಖಲಿಸಲು ಸಮಯಮಿತಿಯನ್ನು ಜಿಲ್ಲಾಧಿಕಾರಿಗಳು ನಿಗದಿಪಡಿಸಿದರು. ಬೇಡಿಕೆ ಇಲ್ಲದಿದ್ದಲ್ಲಿ ಅದನ್ನು ಲಿಖಿತ ರೂಪದಲ್ಲಿ ದಾಖಲಿಸಿ ಯೋಜನೆಯ ಅಗತ್ಯ ಜಿಲ್ಲೆಗಿಲ್ಲವೆಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕಾದ ಹೊಣೆಯೂ ಅಧಿಕಾರಿಗಳದ್ದೇ ಎಂದರು.
ಎಸ್ ಎಫ್ ಸಿ ಮತ್ತು ಕಾರ್ಪೋರೇಷನ್ ಫಂಡ್ ನಲ್ಲಿ ಕೇವಲ ಶೇಕಡ 10 ಅಭಿವೃದ್ಧಿ ದಾಖಲಾತಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಡಿಸೆಂಬರ್ ಅಂತ್ಯದ ವೇಳೆಗೆ ಶೇಕಡ 70 ಸಾಧನೆ ದಾಖಲಿಸಬೇಕೆಂದರು. ಈ ಸ್ಕೀಮ್ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದರೆ ಶೋಕಾಸ್ ನೋಟೀಸ್ ಜಾರಿ ಮಾಡಲು ಸೂಚಿಸಿದರಲ್ಲದೆ ಬಂಟ್ವಾಳ ಮುಖ್ಯ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದರು. ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ನಗರ ಅಭಿವೃದ್ಧಿ ಯೋಜನೆಯಡಿ ಆರಂಭವಾದ ಕಾಮಗಾರಿಗಳೆಲ್ಲವು ಜನವರಿ ತಿಂಗಳ ಅಂತ್ಯದೊಳಗೆ ಮುಗಿಯಬೇಕೆಂದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಕಾಮಗಾರಿ ವಿಳಂಬಕ್ಕೆ ಯಾವುದೇ ಸಬೂಬು ನೀಡಬಾರದೆಂದರು.

ಅನರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆ: ಪರಿಶೀಲಿಸಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು,ಡಿಸೆಂಬರ್ 11: ಸಂಧ್ಯಾ ಸುರಕ್ಷೆ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಅನರ್ಹ ಫಲಾನುಭವಿಗಳು ಹಾಗೂ ಮರಣಾನಂತರವೂ ಕೆಲವರ ಹೆಸರಿನಲ್ಲಿ ಮಾಸಾಶನ ಪಡೆಯುತ್ತಿರುವ ದೂರುಗಳಿರುವುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಡಿ.10ರಂದು ನಡೆದ ಟೆಲಿಕಾನ್ಫರೆನ್ಸಿನಲ್ಲಿ ಪ್ರಸ್ತಾಪಿಸಿದ್ದು, ಜಿಲ್ಲೆಯ ಕಂದಾಯ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಸೂಚಿಸಿದರು.

ಅವರು ಡಿ.10 ರಂದು ನಡೆಸಿದ ಕಂದಾಯ ಅಧಿಕಾರಿಗಳ, ನಗರಸಭೆ ಮತ್ತು ಪಟ್ಟಣ ಪಂಚಾ ಯತ್ ಗಳ ಅಧಿಕಾರಿಗಳ ಸುದೀರ್ಘ ಸಭೆಯಲ್ಲಿ ಮೇಲಿನಂತೆ ಸೂಚನೆ ನೀಡಿದರು. ಸಾಮಾಜಿಕ ಭದ್ರತಾ ಯೋಜನೆ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡು ಜಿಲ್ಲಾ ಖಜಾನೆಗೆ ಮಾಹಿತಿ ಒದಗಿಸಬೇಕೆಂದು ಹೇಳಿದ ಜಿಲ್ಲಾಧಿಕಾರಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ವಿತರಣೆ ಮಾಡಬೇಕಾದ ಸೌಲಭ್ಯಗಳನ್ನು ಸಮಯಮಿತಿಯೊಳಗೆ ಪೂರೈಸಬೇಕೆಂದು ಸೂಚಿಸಿದರು.
ಪ್ರಾಕೃತಿಕ ವಿಕೋಪ ಪರಿಹಾರ ವಿತರಣೆಯಲ್ಲಿ ವಿಳಂಬಸಲ್ಲದೆಂದ ಜಿಲ್ಲಾಧಿಕಾರಿಗಳು, ಈ ಸಂಬಂಧ ತಹಸೀಲ್ದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಹೇಳಿದರು. ಅನಧಿಕೃತ ಧಾರ್ಮಿಕ ನಿರ್ಮಾಣ ತೆರವು ಕಾರ್ಯಾಚರಣೆಯನ್ನು ಜನವರಿ 5ರವರೆಗೆ ಮುಂದೂಡಲು ಅಧಿಕಾರಿಗಳಿಗೆ ಹೇಳಿದರು.
ಮರಳು ಸಾಗಾಣಿಕೆ ಲಾರಿಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕಾಗಿದ್ದು, ಜಿಪಿಎಸ್ ಸ್ವಿಚ್ ಆಫ್ ಆಗಿದ್ದಲ್ಲಿ ಅಂತಹ ವಾಹನಗಳ ವಿರುದ್ಧ ಮೂರು ದಿನಗಳೊಳಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದರು. ಆಶ್ರಯ ವಸತಿ ಯೋಜನೆಯಡಿ ಎಲ್ಲಾ ಐದು ತಾಲೂಕುಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ನಿವೇಶನರಹಿತರಿಗೆ ನಿವೇಶನ ನೀಡುವ ಪ್ರಕ್ರಿಯೆ ಜನವರಿ 15ರೊಳಗೆ ಮುಗಿಯಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸಮಯಮಿತಿ ನಿಗದಿಪಡಿಸಿದರು.
ಎಲ್ಲ ತಾಲೂಕುಗಳಲ್ಲಿ ಮಿನಿವಿಧಾನಸೌಧ ನಿರ್ಮಾಣ ಬಗ್ಗೆ, ತಾಲೂಕು ಕಚೇರಿಗಳಲ್ಲಿ ಇಂಡೆಕ್ಸಿಂಗ್, ಕ್ಯಾಟಲಾಗಿಂಗ್ ಮತ್ತು ಸ್ಕಾನಿಂಗ್ ಮಾಡುವ ಕಾರ್ಯದಲ್ಲಾಗುತ್ತಿರುವ ಪ್ರಗತಿ ಬಗ್ಗೆ, ಒಟಿಸಿಎಸ್ ಮತ್ತು ನೆಮ್ಮದಿ ಕೇಂದ್ರಗಳಲ್ಲಿ ಈಗ ನೀಡುವ ಸರ್ಟಿಫಿಕೆಟ್ ಗಳೊಂದಿಗೆ ಜನನ/ಮರಣ ಮತ್ತು ಭೂಹಿಡುವಳಿದಾರರಿಗೆ ಮತ್ತು ವಾಸ್ತವ್ಯ ಸರ್ಟಿಫಿಕೆಟ್ ಗಳನ್ನು ನೀಡುವುದನ್ನು ಆರಂಭಿಸಬೇಕೆಂದರು. ನೆಮ್ಮದಿ ಮತ್ತು ಭೂಮಿ ಸಂಬಂಧ ಇರುವ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದಾಗಿ ನುಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9000 ಪಡಿತರ ಚೀಟಿ ನೀಡಬೇಕಾಗಿದ್ದು, ಇದರಲ್ಲಿ 3000 ಬಿಪಿಎಲ್ ಕಾಡ್ರ್ ನೀಡಬೇಕಾಗಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. 18ರಿಂದ 20,000 ಕಾಡ್ರ್ ಗಳಲ್ಲಿ ತಿದ್ದುಪಡಿಯಾಗಬೇಕಿದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು. ಆಕಾರಬಂದ್ ಮತ್ತು ಆರ್ ಟಿಸಿಗಳನ್ನು ನೀಡುವ, ನಿವೇಶನ ಸಮೀಕ್ಷೆ ಮಾಡುವ ಕಡತಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿಯವರ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಸೋಮವಾರದೊಳಗೆ ನೀಲಿ ನಕ್ಷೆ (ಆಕ್ಷನ್ ಪ್ಲಾನ್) ತಯಾರಿಸಿ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಈ ದಾಖಲೆಗಳ ಶೀಘ್ರ ವಿಲೇವಾರಿಗೆ ಆಂದೋಲನ ಮಾದರಿ ಕಾರ್ಯಕ್ರಮ ರೂಪಿಸಿ ಜನರಿಗೆ ನೆರವಾಗಬೇಕೆಂದರು.
ಆರ್ ಟಿ ಸಿಗೆ 15 ರಿಂದ 10 ರೂ.ಇಳಿಕೆ:
ಆರ್ ಟಿ ಸಿ ಪ್ರತಿಗೆ ದರವನ್ನು 15 ರಿಂದ 10ರೂ.ಗಳಿಗೆ ಇಳಿಸಿದ್ದು ಜನರಿಗೆ ಇದರಿಂದ ಉಪಕಾರವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರನ್ನೊಳಗೊಂಡಂತೆ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಹಿಂದು ಸಮಾಜೋತ್ಸವ: ಮದ್ಯದಂಗಡಿ ಮುಚ್ಚಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ

ಮಂಗಳೂರು,ಡಿಸೆಂಬರ್ 11: ಶ್ರೀ ಹನುಮಾನ್ ಶಕ್ತಿ ಯಜ್ಞ ಮತ್ತು ವಿರಾಟ್ ಹಿಂದೂ ಸಮಾಜೋತ್ಸವ ಡಿ.12 ರಿಂದ 13ರವರೆಗೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯದಲ್ಲಿ ನಡೆಯಲಿದ್ದು, ಈ ಸಂದರ್ಭಗಳಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆಯನ್ನು ಗಮನದಲ್ಲಿರಿಸಿ ಈ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಮದ್ಯದಗಂಗಡಿ ಮುಚ್ಚಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾಧಿಕಾರಿಗಳಾದ ಸುಬೋಧ್ ಯಾದವ್ ಅವರು ಆದೇಶಿಸಿ ಅಧಿಸೂಚನೆ ಹೊರಡಿಸಿದ್ದಾರೆ.ಡಿಸೆಂಬರ್ 12ರಂದು ಬೆ.6ರಿಂದ 12ಗಂಟೆವರೆಗೆ ಬಂಟ್ವಾಳ ಪಟ್ಟಣ ವ್ಯಾಪ್ತಿಯಲ್ಲಿ, ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ, ಡಿ.13ರಂದು ಬೆ. 6ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಪುತ್ತೂರು ಪಟ್ಟಣ ವ್ಯಾಪ್ತಿಯಲ್ಲಿ, ಸುಳ್ಯ ಪಟ್ಟಣ ವ್ಯಾಪ್ತಿಯಲ್ಲಿ ಮದ್ಯದಂಗಡಿ ಮುಚ್ಚಲು ಆದೇಶಿಸಲಾಗಿದೆ. ಈ ದಿನಗಳಂದು ಹೊಟೆಲುಗಳಲ್ಲಾಗಲೀ, ನಾನ್ ಪ್ರೊಪ್ರೈಟರ್ ಗಳಲ್ಲಿ, ಸ್ಟಾರ್ ಹೊಟೆಲ್ ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ದ.ಕ ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ನಿರ್ದೇಶನ ನೀಡಿದೆ ಹಾಗೂ ನಿಷೇದಾಜ್ಞೆ ಇರುವ ಸಮಯದಲ್ಲಿ ಆ ವ್ಯಾಪ್ತಿಗೊಳಪಟ್ಟ ವೈನ್ ಶಾಪ್, ಬಾರ್ ಗಳ ಮುಂದಿನ ಮತ್ತು ಹಿಂದಿನ ಬಾಗಿಲುಗಳಿಗೆ ಅಬಕಾರಿ ಇಲಾಖೆಯ ಮೊಹರುಗಳನ್ನು ಕಡ್ಡಾಯವಾಗಿ ಮಾಡುವಂತೆ ವ್ಯವಸ್ಥೆ ಗೊಳಿಸಲು ತಿಳಿಸಿದೆ.

Friday, December 10, 2010

ಜಿ.ಪಂ., ತಾ.ಪಂ. ಚುನಾವಣೆ ಡಿ.13ರಿಂದ ನಾಮಪತ್ರ ಸಲ್ಲಿಕೆ, 31ರಂದು ಮತದಾನ

ಮಂಗಳೂರು,ಡಿಸೆಂಬರ್ 10: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ 35 ಜಿ.ಪಂ.ಕ್ಷೇತ್ರಗಳು ಹಾಗೂ 129 ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಡಿ.13ರ ಪೂರ್ವಾಹ್ನ 11ಗಂಟೆಯಿಂದ ನಾಮಪತ್ರ ಸ್ವೀಕರಿಸಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸುಬೋಧ್ ಯಾದವ್ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.ಡಿ.20 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿ.21ರಂದು ನಾಮಪತ್ರ ಪರಿಶೀಲನೆ, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿ.31ರಂದು ಪೂರ್ವಾಹ್ನ 7ರಿಂದ ಸಂಜೆ 5ರ ತನಕ ಚುನಾವಣೆ ನಡೆಯಲಿದೆ. ಜ.4ರಂದು ಪೂರ್ವಾಹ್ನ 8 ಗಂಟೆಯಿಂದ ಮತ ಎಣಿಕೆ ನಡೆಯುವುದಾಗಿ ಅವರು ವಿವರಿಸಿದರು.
ಜಿ.ಪಂ. ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸಹಾಯಕ ಕಮಿಷನರ್ ಕಚೇರಿ ಮಂಗಳೂರು, ತಾಲೂಕು ಕಚೇರಿ ಬಂಟ್ವಾಳ, ತಾಲೂಕು ಕಚೇರಿ ಬೆಳ್ತಂಗಡಿ, ಸಹಾಯಕ ಕಮಿಷನರ್ ಕಚೇರಿ ಪುತ್ತೂರು ಮತ್ತು ತಾಲೂಕು ಕಚೇರಿ ಸುಳ್ಯ ಇಲ್ಲಿ ಪೂರ್ವಾಹ್ನ 11ರಿಂದ ಅಪರಾಹ್ನ 3 ಗಂಟೆಯ ಮಧ್ಯೆ ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ನುಡಿದರು.ಮಂಗಳೂರು ತಾ.ಪಂ.ಗೆ ನಾಮಪತ್ರಗಳನ್ನು ಅಕ್ಷರ ದಾಸೋಹ ಸಹಾಯಕ ನಿರ್ಧೇಶಕರ ಕಚೇರಿ ಮಂಗಳೂರು, ಸಹಾಯಕ ಕಾರ್ಯದರ್ಶಿ ಅವರ ಕಚೇರಿ ದ.ಕ.ಜಿ.ಪಂ., ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶ ಇಲ್ಲಿ ಸ್ವೀಕರಿಸಲಾಗುವುದು. ಬಂಟ್ವಾಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯವರ ಕಚೇರಿ ಮತ್ತು ತಾಲೂಕು ಪಂಚಾಯತ್ ಸಭಾಂಗಣ ಬಂಟ್ವಾಳ ಇಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯ ತಾ.ಪಂ. ನಾಮಪತ್ರ ಸ್ವೀಕರಿಸಲಾಗುವುದು. ಬೆಳ್ತಂಗಡಿ ತಾಲೂಕಿನ ತಾ.ಪಂ.ನ ನಾಮಪತ್ರಗಳನ್ನು ತಾಲೂಕು ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಪುತ್ತೂರು ಸಹಾಯಕ ಕಮಿಷನರ್ ಕಚೇರಿಯಲ್ಲಿ ಆ ತಾಲೂಕಿನ ತಾ.ಪಂ.ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಸುಳ್ಯ ತಾ.ಪಂ. ನಾಮಪತ್ರಗಳನ್ನು ಅದೇ ತಾಲೂಕಿನ ತಾಲೂಕು ಕಚೇರಿಯಲ್ಲಿ ಸ್ವೀಕರಿಸಲಾಗುವುದು ಎಂದು ಸುಬೋಧ್ ಯಾದವ್ ತಿಳಿಸಿದರು.ಡಿ.31ರಂದು ನಡೆಯುವ ಚುನಾವಣೆಯಲ್ಲಿ 9,34,143 ಮಂದಿ ನಾಗರಿಕರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಈ ಪೈಕಿ 4,65,138 ಪುರುಷರಾದರೆ, 4,69,005 ಮಹಿಳೆಯರು. ಜಿಲ್ಲೆಯಲ್ಲಿ 1027 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಆ ಪೈಕಿ 233 ಸೂಕ್ಷ್ಮ ಹಾಗೂ 174 ಅತೀ ಸೂಕ್ಷ್ಮ ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿ.ಪಂ. ಚುನಾವಣಾ ಅಧಿಕಾರಿಗಳು:
ಜಿ.ಪಂ. ಚುನಾವಣಾ ಅಧಿಕಾರಿಗಳಾಗಿ ಮಂಗಳೂರಿಗೆ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು, ಬಂಟ್ವಾಳಕ್ಕೆ ಮಂಗಳೂರು ಸಹಾಯಕ ಕಮೀಷನರ್, ಬೆಳ್ತಂಗಡಿಗೆ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ, ಪುತ್ತೂರಿಗೆ ಪುತ್ತೂರು ಸಹಾಯಕ ಕಮಿಷನರ್, ಸುಳ್ಯಕ್ಕೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಚುನಾವಣಾ ಅಧಿಕಾರಿಗಳಾಗಿರುತ್ತಾರೆ.
ತಾ.ಪಂ. ಚುನಾವಣಾ ಅಧಿಕಾರಿಗಳು:
ಮಂಗಳೂರು ತಾಲೂಕಿಗೆ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಮಂಗಳೂರು ತಾ.ಪಂ., ಜಿ.ಪಂ. ಸಹಾಯಕ ಕಾರ್ಯದರ್ಶಿ, ಧಾರ್ಮಿಕ ದತ್ತಿ ತಹಶೀಲ್ದಾರರು, ಬಂಟ್ವಾಳಕ್ಕೆ ಬಂಟ್ವಾಳ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ ಬಂಟ್ವಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ ಚುನಾವಣಾ ಅಧಿಕಾರಿಗಳಾಗಿರುತ್ತಾರೆ.
ಬೆಳ್ತಂಗಡಿ ತಾಲೂಕು ವ್ಯಾಪ್ತಿಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ ಕೃಷಿ ತರಬೇತಿ ಕೇಂದ್ರದ ಉಪನಿರ್ದೇಶಕರು, ಪುತ್ತೂರು ತಾಲೂಕಿಗೆ ಪುತ್ತೂರಿನ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು, ಪುತ್ತೂರು ಎಪಿಎಂಸಿ ಕಾರ್ಯದರ್ಶಿ ಹಾಗೂ ಸುಳ್ಯಕ್ಕೆ ಸುಳ್ಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚುನಾವಣಾ ಅಧಿಕಾರಿಯಾಗಿರುತ್ತಾರೆ ಎಂದು ಸುಬೋಧ್ ಯಾದವ್ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಎಸ್.ಎ. ಪ್ರಭಾಕರ ಶರ್ಮಾ ಉಪಸ್ಥಿತರಿದ್ದರು.

Thursday, December 9, 2010

ಭಾರತ ವೈವಿಧ್ಯಮಯ ಸಂಸ್ಕೃತಿಯ ತವರು: ರಾಷ್ಟ್ರಪತಿ

ಮಂಗಳೂರು,ಡಿ.09:ಜಾತ್ಯಾತೀತ ರಾಷ್ಟ್ರ ಭಾರತ ವೈವಿಧ್ಯಮಯ ಸಂಸ್ಕೃತಿಯ ತವರೂರು. ನಮ್ಮಲ್ಲಿ ಹಲವು ಭಾಷೆ,ಜಾತಿ,ಸಂಸ್ಕೃತಿಗಳಿದ್ದು,ದೇಶದ ಅಭಿವೃದ್ಧಿಗೆ ಪ್ರತಿಯೊಂದು ಸಂಸ್ಕೃತಿ, ಭಾಷೆಯ ಕೊಡುಗೆ ಅನನ್ಯ ಎಂದು ಭಾರತದ ಸನ್ಮಾನ್ಯ ರಾಷ್ಟ್ರಪತಿ ಶ್ರೀಮತಿ ಪ್ರತಿಭಾಸಿಂಗ್ ದೇವಿ ಪಾಟೀಲ್ ಅವರು ಹೇಳಿದರು.ಅವ ರಿಂದು ನಗ ರದ ನೆಹರು ಮೈದಾನಿ ನಲ್ಲಿ ವಿಶ್ವ ಕೊಂಕಣಿ ಏಕತಾ ದಿವಸ ಸಮಾ ವೇಶ ದಲ್ಲಿ ಪಾ ಲ್ಗೊಂಡು ಮಾತ ನಾಡು ತ್ತಿದ್ದರು. 1567 ರಲ್ಲಿ ಕೊಂಕಣಿ ಭಾಷೆಯ ಡಿಕ್ಷ ನರಿ ಪ್ರಕಟ ಗೊಂಡಿದ್ದು ಪ್ರಾಚೀನ ಭಾಷೆ ಗಳಲ್ಲಿ ಒಂದಾ ಗಿದೆ. ಜಾತಿ, ಧರ್ಮ ವನ್ನು ಮೀರಿ ಕೊಂಕಣಿ ಭಾಷೆ ಬೆಳೆ ದಿದ್ದು, ಸಂವಿ ಧಾನದ 8ನೇ ಪರಿಚ್ಛೇ ದದಲ್ಲೂ ಭಾಷೆಗೆ ಸ್ಥಾನ ದೊರೆ ತಿದೆ ಎಂದರು. ಶಿಕ್ಷಣ ಸಂಸ್ಥೆ ಗಳನ್ನು ಬಹ ಳಷ್ಟು ವರ್ಷ ಗಳ ಹಿಂದೆ ಯೇ ಕೊಂಕ ಣಿಗರು ಸಮಾ ಜಕ್ಕೆ ನೀಡಿದ್ದು, ದೇಶ ವನ್ನು ಅಭಿ ವೃದ್ಧಿ ಪಥ ದಲ್ಲಿ ಕೊಂಡೊ ಯ್ಯಲು ಕೊಂಕಣಿ ಭಾಷಿ ಗರು ನೀಡಿದ ಕೊಡುಗೆ ಅತ್ಯ ಮೂಲ್ಯ ವಾದುದು ಎಂದರು.ವೈವಿಧ್ಯ ತೆಯಲ್ಲಿ ಏಕತೆ, ಶಾಂತಿ ಸಹ ಬಾಳ್ವೆ ಭಾರತ ದೇಶದ ಪ್ರಮುಖ ಲಕ್ಷಣ ವಾಗಿದ್ದು, ಕೊಂಕಣಿ ಭಾಷೆ ಹಾಗೂ ಜನರೂ ಇದರಲ್ಲಿ ಗುರುತಿ ಸಿಕೊಂ ಡಿದ್ದಾರೆ ಎಂದರು.ರಾಜ್ಯ ಸರ್ಕಾ ರದ ಪ್ರತಿ ನಿಧಿ ಯಾಗಿ ಆಗಮಿ ಸಿದ್ದ ಉನ್ನತ ಶಿಕ್ಷಣ ಸಚಿವ ರಾದ ಡಾ ವಿ. ಎಸ್. ಆಚಾರ್ಯ ಅವರು, ಕೊಂಕಣಿ ಸಮ್ಮೇ ಳನಕ್ಕೆ ಶುಭ ಹಾರೈ ಸಿದರು. ಉತ್ತರ ಕಾಂಡ ರಾಜ್ಯ ಪಾಲ ರಾದ ಶ್ರೀಮತಿ ಮಾರ್ಗ ರೆಟ್ ಆಳ್ವ ಕೊಂಕಣಿ ಎಂದು ಗುರುತಿ ಸಿಕೊ ಳ್ಳಲು ತಮಗೆ ಹೆಮ್ಮೆ ಎಂದರು. ರಾಜ್ಯ ಪಾಲ ರಾದ ಹಂಸ ರಾಜ್ ಭಾರ ದ್ವಾಜ ಅವರು ಸಭೆ ಯನ್ನು ದ್ದೇಶಿಸಿ ಮಾತ ನಾಡಿದರು. ಶ್ರೀಮತಿ ಪ್ರಫುಲ್ಲತಾ ಭಾರ ದ್ವಾಜ, ಶ್ರೀ ದೇವಿ ಸಿಂಗ್ ಶೆಖಾ ವತ್, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಡೋಲ್ಪಿ ಡಿ ಸೋಜಾ ಅವರು ವೇದಿಕೆಯಲ್ಲಿದ್ದರು. ರೊನಾಲ್ಡ್ ಕುಲಾಸೋ ಸ್ವಾಗತಿಸಿದರು.

Wednesday, December 8, 2010

ಗೌರವಾನ್ವಿತ ರಾಷ್ಟ್ರಪತಿಗಳು ಮಂಗಳೂರಿಗೆ


ಮಂಗ ಳೂರು, ಡಿ. 08: ಭಾರ ತದ ಗೌರವಾ ನ್ವಿತ ರಾಷ್ಟ್ರ ಪತಿ ಶ್ರೀ ಮತಿ ಪ್ರತಿಭಾ ಸಿಂಗ್ ದೇವಿ ಪಾಟೀಲ್ ಅವರು ವಿವಿಧ ಕಾರ್ಯ ಕ್ರಮ ಗಳ ನಿಮಿತ್ತ ಮಂಗ ಳೂರಿಗೆ ಆಗ ಮಿಸಿದ ಸಂದ ರ್ಭದಲ್ಲಿ ಜಿಲ್ಲಾ ಡಳಿತ ಆತ್ಮೀ ಯ ಸ್ವಾಗ ತವನ್ನು ಕೋರಿತು.ಇಂದು ಸಂಜೆ ವಾಯು ಪಡೆಯ ವಿಶೇಷ ವಿಮಾ ನದಲ್ಲಿ ಮಂಗ ಳೂರು ವಿಮಾನ ನಿಲ್ದಾ ಣಕ್ಕೆ ಆಗ ಮಿಸಿದ ರಾಷ್ಟ್ರ ಪತಿ ಗಳನ್ನು ಕರ್ನಾ ಟಕ ರಾಜ್ಯ ಪಾಲ ರಾದ ಎಚ್. ಆರ್. ಭಾರ ದ್ವಾಜ, ಶ್ರೀ ಮತಿ ಭಾರ ದ್ವಾಜ,ರಾಜ್ಯ ಸರ್ಕಾ ರದ ಪ್ರತಿ ನಿಧಿ ಯಾಗಿ ಉನ್ನತ ಶಿಕ್ಷಣ ಸಚಿವ ರಾದ ಡಾ. ವಿ. ಎಸ್. ಆಚಾರ್ಯ,ದಕ್ಷಿಣ ಕನ್ನಡ ಉಸ್ತು ವರಿ ಸಚಿವ ರುಗ ಳಾದ ಜೆ.ಕೃಷ್ಣ ಪಾಲೆ ಮಾರ್,ಉತ್ತರ ಕಾಂಡ ರಾಜ್ಯ ಪಾಲ ರಾದ ಮಾರ್ಗ ರೆಟ್ ಆಳ್ವ, ಮೇಯರ್ ರಜನಿ ದುಗ್ಗಣ್ಣ, ಜಿಲ್ಲಾ ಪಂಚಾ ಯತಿ ಅಧ್ಯಕ್ಷ ಸಂತೋ ಷ್ ಕುಮಾರ್ ಭಂಡಾ ರಿ,ಪ್ರಾದೇ ಶಿಕ ಆಯುಕ್ತ ರಾದ ಎಂ.ವಿ. ಜಯಂತಿ, ಜಿಲ್ಲಾಧಿ ಕಾರಿ ಸುಬೋಧ್ ಯಾದವ್, ಪೊಲೀಸ್ ಕಮಿಷ ನರ್ ಸೀಮಂತ್ ಕುಮಾರ್ ಸಿಂಗ್, ಮನಾಪ ಆಯುಕ್ತ ರಾದ ಡಾ.ವಿಜಯ ಪ್ರಕಾಶ್, ಡಿಸಿಪಿ ಆರ್. ರಮೇಶ್, ವಿಮಾನ ನಿಲ್ದಾಣ ನಿರ್ದೇಶಕ ಎಂ.ಆರ್. ವಾಸು ದೇವ ರಾವ್ ಉಪಸ್ಥಿ ತರಿದ್ದರು.

Tuesday, December 7, 2010

ರಾಷ್ಟ್ರಪತಿ ಭೇಟಿ ಹಿನ್ನೆಲೆ,ಸಂಚಾರದಲ್ಲಿ ಬದಲಾವಣೆ,ಬಿಗಿ ಭದ್ರತೆ

ಮಂಗಳೂರು,ಡಿಸೆಂಬರ್ 07: ಗೌರವ್ವನಿತ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಡಿಸೆಂಬರ್ 9 ರಂದು ಮಂಗಳೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ಸಂಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು,ನಗರದ ಜನತೆ ಸಹಕರಿಸಬೇಕೆಂದು ಮಂಗಳೂರು ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.ಮಂಗಳೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ವಿವರಗಳನ್ನು ನೀಡಿದರು.ಡಿಸೆಂಬರ್ 8 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಹೆಲಿಕಾಪ್ಟರ್ ಮೂಲಕ ಮಣಿಪಾಲಕ್ಕೆ ತೆರಳಿ,ಡಿಸೆಂಬರ್ 9 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.ಅಲ್ಲಿಂದ ರಸ್ತೆ ಮೂಲಕ ವಿಶ್ವ ಕೊಂಕಣಿ ಸಾಂಸ್ಕೃತಿಕ ಸಮ್ಮೇಳ ನಡೆಯುವ ನೆಹರು ಮೈದಾನಿಗೆ ಆಗಮಿಸಲಿದ್ದಾರೆ.ಭದ್ರತೆಯ ದೃಷ್ಟಿಯಿಂದ ರಾಷ್ಟ್ರಪತಿಗಳು ಮತ್ತು ಇತರ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಕರ್ನಾಟಕದ ರಾಜ್ಯಪಾಲರಾದ ಹನ್ಸರಾಜ್ ಭಾರಾಧ್ವಜ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಉತ್ತರಖಂಡ್ ರಾಜ್ಯಪಾಲ ಮಾರ್ಗರೇಟ್ ಆಳ್ವ, ಕೇಂದ್ರ ಮತ್ತು ರಾಜ್ಯದ ಅನೇಕ ಮಂತ್ರಿಗಳು ಮಂಗಳೂರಿನಲ್ಲಿ ನಡೆಯುವ ಸಮಾರಂಭಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಗಣ್ಯರು ಸಾಗಿ ಬರುವ ಹಾದಿಯ ಇಕ್ಕೆಲಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 6.30 ರ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.ಕಾರ್ಯಕ್ರಮ ಮುಗಿದ ಬಳಿಕ ಸಂಜೆ 6 ಗಂಟೆಗೆ ರಾಷ್ಟ್ರಪತಿಯವರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಹೊರಗಿನಿಂದ ಸಮ್ಮೇಳಕ್ಕೆ ಬರುವ ವಾಹಗಳನ್ನು ನಿಲ್ಲಿಸಲು ನೆಹರು ಮೈದಾನಿನಲ್ಲಿ ವ್ಯವಸ್ಥೆ ಮಾಡಲಾಗಿದೆ.
ನಗರದಲ್ಲಿ ಬಿಗಿ ಭದ್ರತೆ:
ಗೌರವ್ವನಿತ ರಾಷ್ಟ್ರ ಪತಿಗಳು ಮತ್ತು ಇತರ ಅನೇಕ ಗಣ್ಯರು ನಗರದ ನೆಹರು ಮೈದಾನಿನಲ್ಲಿ ನಡೆಯುವ ಸಮಾ ರಂಭದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತಾ ಎರ್ಪಾಡುಗಳನ್ನು ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಮಾಡಿದೆ. ಕಾರ್ಯಕ್ರಮ ನಡೆಯುವ ನೆಹರು ಮೈದಾನಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇಂಟಲಿಜೆನ್ಸ್ ಎಸ್ಪಿ ಎನ್.ಶಿವಪ್ರಸಾದ್,ಜಿಲ್ಲಾಧಿಕಾರಿ ಸುಭೋದ್ ಯಾದವ್,ಪೋಲಿಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಸ್ಥಳ ಮತ್ತು ವ್ಯವಸ್ತೆಗಳನ್ನು ಪರಿಶೀಲಿಸಿದರು.

Monday, December 6, 2010

ರಾಜ್ಯಕ್ಕೆ ಶೀಘ್ರದಲ್ಲೇ ನೂತನ ಅರಣ್ಯ ನೀತಿ: ಸಚಿವ ವಿಜಯ ಶಂಕರ್

ಮಂಗಳೂರು, ಡಿ.06: ರಾಜ್ಯದಲ್ಲಿ ಶೀಘ್ರದಲ್ಲೇ ನೂತನ ಅರಣ್ಯ ನೀತಿಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಅರಣ್ಯ ಮತ್ತು ಸಣ್ಣ ಕೈಗಾರಿಕಾ ಸಚಿವ ವಿಜಯ ಶಂಕರ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು. ಉದ್ದೇಶಿತ ಅರಣ್ಯ ನೀತಿಯಲ್ಲಿ ಅರಣ್ಯ ಭೂಮಿಯಲ್ಲಿ ವಾಸಿಸುವ ಜನರಿಗೆ ಸಂಬಂಧಿಸಿ ದಂತೆ ಹಾಗೂ ಪರಿಸರಸ್ನೇಹಿ ಕಾಡು ಬೆಳೆಸುವ ಬಗ್ಗೆ, ಪರಿಸರ ಮಾಲಿನ್ಯ ತಡೆ ಯುವ ಕ್ರಮಗಳಿಗೆ ಸಂಬಂಧಿಸಿ ದಂತೆ ನೀತಿ ರೂಪಿಸ ಲಾಗುವುದು.
ಅರಣ್ಯ ಭೂಮಿ ಯನ್ನು ಬೇರೆ ಉದ್ದೇಶಕ್ಕೆ ಬಳಸಿ ಕೊಂಡರೆ ಪರ್ಯಾಯವಾಗಿ ಅಷ್ಟೇ ಭೂಮಿ ಯನ್ನು ಇಲಾಖೆಗೆ ಒದಗಿಸಬೇಕು. ಪರಿಸರ ಸಮತೋ ಲನಕ್ಕೆ ಶೇ. 33 ಕಾಡು ಅಗತ್ಯ ಇದೆ. ಪ್ರಸಕ್ತ ರಾಜ್ಯದಲ್ಲಿ ಶೇ. 23 ಭೂ ಪ್ರದೇಶದಲ್ಲಿ ಕಾಡು ಇದೆ. ಈ ಹಿನ್ನೆಲೆ ಯಲ್ಲಿ ಪರಿಸರ ರಕ್ಷಣೆಗೆ ಸಂಬಂಧಿಸಿ ದಂತೆ ಕೆಲವು ನೀತಿ ರೂಪಿಸಬೇಕಾಗಿದೆ. ಈ ಬಗ್ಗೆ ಕರಡು ನೀತಿ ರಚಿಸಿ ಸಾರ್ವಜನಿಕರ ಆಕ್ಷೇಪಣೆಯನ್ನು ಸ್ವೀಕರಿಸ ಲಾಗುವುದು ಎಂದು ಸಚಿವರು ತಿಳಿಸಿದರು.
ಅಕ್ರಮ ಗಣಿಗಾರಿಕೆಗೆ ತಡೆ:
ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಅಕ್ರಮ ಗಣಿ ಗಾರಿಕೆಗೂ ಅವಕಾಶ ನೀಡಲಾಗುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಲಾಗುವುದು. ಅರಣ್ಯ ರಕ್ಷಣೆಗೆ ಪೂರಕವಾಗಿ ಅರಣ್ಯ ರಕ್ಷಕರ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. 800 ಅರಣ್ಯ ರಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಪ್ರದೇಶದಲ್ಲಿ ವಾಸಿಸುವ ಸ್ಥಳೀಯರನ್ನು ಅರಣ್ಯ ಇಲಾಖೆಯ ಕೆಲಸದಲ್ಲಿ ನೇಮಿಸಿಕೊಳ್ಳುವ ಚಿಂತನೆ ಸರಕಾರದ ಮುಂದಿದೆ ಎಂದು ಸಚಿವ ವಿಜಯಶಂಕರ್ ತಿಳಿಸಿದರು.
`ಹಸಿರು ಹೊನ್ನು' ಯೋಜನೆ:
ರಾಜ್ಯದಲ್ಲಿ ಬಯೋ ಡೀಸೆಲ್ ಮೊದಲಾದ ಜೈವಿಕ ಇಂಧನ ಉತ್ಪತ್ತಿಗೆ ಪೂರಕವಾದ ಮರಗಳು, ಆಯುರ್ವೇದ ಗಿಡ ಮೂಲಿಕೆಗಳನ್ನು ಬೆಳೆಯುವ `ಹಸಿರು ಹೊನ್ನು' ಯೋಜನೆ ಆರಂಭಿಸಲಾಗಿದೆ. ದೇವವನ ಮಾದರಿಯ ವನಗಳನ್ನು ಬೆಳೆಸಲು ಸರಕಾರ ಪ್ರೋತ್ಸಾಹ ನೀಡುತ್ತಿದೆ. ದೇವವನ ಪ್ರದೇಶಗಳಲ್ಲಿ ನರ್ಸರಿಯನ್ನು ನಿರ್ಮಿಸಿ ಜನರಿಗೆ ಗಿಡಗಳನ್ನು ಬೆಳೆಸಲು ಪೂರಕ ವಾತಾವರಣ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ವಿಜಯ ಶಂಕರ್ ತಿಳಿಸಿದರು. ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಮರಗಳನ್ನು ಕಟಾವು ನಡೆಸುವ ಸಂದರ್ಭದಲ್ಲಿ ಪರ್ಯಾಯವಾಗಿ ಸಾಲುಮರ ಹಾಗೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ. ಹಸಿರು ಹೊನ್ನು ಯೋಜನೆಗೆ ಸಂಬಂಧಿಸಿದಂತೆ ಆಯ್ದ ಜಿಲ್ಲೆಗಳ ಜನ ಪ್ರತಿನಿಧಿಗಳನ್ನು ತಜ್ಞರೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಅಳಿವಿನಂಚಿನಲ್ಲಿರುವ ಸಸ್ಯ, ವನ್ಯಜೀವಿಗಳ ಬಗ್ಗೆ ಪಟ್ಟಿ ತಯಾರಿಸಿ ಸಂರಕ್ಷಣೆಗೆ ಕ್ರಿಯಾ ಯೋಜನೆ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಕೈಗಾರಿಕೆಗೆ 400 ಎಕರೆ ಭೂಮಿ ಸ್ವಾಧೀನ:
ಚೇಳೂರು, ಬಾಳೆಪುಣಿ, ಇರಾ ಪ್ರದೇಶಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಪ್ರದೇಶ ನಿರ್ಮಿಸಲು ಈಗಾಗಲೇ 400 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 176.13 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಾಕಿ ಉಳಿದಿದೆ. ನಂದಿಕೂರು ಪ್ರದೇಶದಲ್ಲಿ 110 ಎಕರೆ ಜಮೀನು ವಶಪಡಿಸಿ ಕೊಳ್ಳಲಾಗಿದೆ. ಈ ಪ್ರದೇಶದ ಜನರ ಬೇಡಿಕೆಯಂತೆ ಶೇ. 50ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶಾಸಕರು, ಅಧಿಕಾರಿಗಳ ನ್ನೊಳಗೊಂಡ ಸಮಿತಿ ರಚಿಸಲಾಗುವುದು. ಕೇಂದ್ರ ಸರಕಾರದ ಪರಿಸರ ನೀತಿ ಮರು ಪರಿಶೀಲನೆಗೆ ಮನವಿ ಕೇಂದ್ರ ಸರಕಾರ ಕರಾವಳಿಯ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಸಣ್ಣ ಕೈಗಾರಿಕೆಗಳಿಗೆ ಅವಕಾಶ ನಿರಾಕರಿಸುತ್ತಿದೆ. ಈ ನೀತಿಯನ್ನು ಮರು ಪರಿಶೀಲಿಸಬೇಕು. ಪರಿಸರ ಸ್ನೇಹಿ ಸಣ್ಣ ಕೈಗಾರಿಕೆಗಳಿಗೆ ಕರಾವಳಿ ಜಿಲ್ಲೆಯಲ್ಲಿ ಅವಕಾಶ ಕಲ್ಪಿಸಲು ಕೇಂದ್ರ ಸರಕಾರದ ಪರಿಸರ ನೀತಿ ಮರು ಪರಿಶೀಲನೆಗೆ ರಾಜ್ಯ ಸರಕಾರದಿಂದ ಮನವಿ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯೋಗೀಶ್ ಭಟ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಹಿರಿಯ ಅರಣ್ಯಧಿಕಾರಿಗಳು ಅವರು ಉಪಸ್ಥಿತರಿದ್ದರು.

Sunday, December 5, 2010

ಎಲ್ಲ ಬಸ್ಸುಗಳಿಗೆ ಜಿಪಿಎಸ್ ಕಡ್ಡಾಯ: ದ.ಕ.ಜಿಲ್ಲಾಧಿಕಾರಿ

ಮಂಗಳೂರು, ಡಿಸೆಂಬರ್ 05: ಡಿಸೆಂಬರ್ 31 ರೊಳಗೆ ಜಿಲ್ಲೆಯಲ್ಲಿ ಬಸ್ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿಸಲು ಎಲ್ಲ ಬಸ್ಸುಗಳು ಕಡ್ಡಾಯವಾಗಿ ಜಿಪಿಎಸ್ ಅಳವಡಿಕೆಯಲ್ಲಿ ಪ್ರಗತಿಯನ್ನು ಸಾಧಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಪ್ರಯಾಣಿ ಕರಿಂದ ಬಸ್ ವ್ಯವಸ್ಥೆಯ ಬಗ್ಗೆ ದೂರು ಗಳನ್ನು ಪರಿಶೀಲಿಸಲು, ಬಸ್ಸಿನವರು ರೂಟ್ ತಪ್ಪಿಸುವುದನ್ನು ನಿಯಂತ್ರಿಸಲು, ಜನರನ್ನು ಮಾರ್ಗ ಮಧ್ಯದಲ್ಲಿ ಇಳಿಸಿ ತೊಂದರೆ ಮಾಡುವುದನ್ನು ನಿವಾರಿಸಲು, ರೂಟ್ ಕ್ಯಾನ್ಸ್ ಲ್ ಮಾಡುವುದನ್ನು ಪರಿಶೀಲಿಸಲು ಹಾಗೂ ನಿಗದಿತ ಸಮಯಪಾಲನೆ ಸೇರಿದಂತೆ ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಲು ಜಿಪಿಎಸ್ ವ್ಯವಸ್ಥೆ ಅಳ ವಡಿಸಬೇಕೆಂದ ಜಿಲ್ಲಾಧಿಕಾರಿಗಳು, ಶೀಘ್ರವೇ ಆರ್ ಟಿ ಒ ಮತ್ತು ಪೊಲೀಸ್, ಬಸ್ ಮಾಲಕರು ಈ ಬಗ್ಗೆ ಸಭೆ ನಡೆಸಬೇಕೆಂದು ಹೇಳಿದರು.ಬಸ್ಸಿನ ಚಾಲಕರು ಮತ್ತು ನಿರ್ವಾಹಕರು ಸಮವಸ್ತ್ರ ಧರಿಸಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು, ರಸ್ತೆ ಮಧ್ಯದಲ್ಲಿ ಜನರನ್ನು ಹತ್ತಿಸುವುದು, ಇಳಿಸುವುದು, ನಿಲ್ಲಿಸುವುದು ಕಂಡುಬಂದರೆ ಅಂತವರ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ಡಿವೈಡರ್ ಹಾಕಲು, ರಸ್ತೆಗೆ ಝೀಬ್ರಾ ಕ್ರಾಸ್ ಹಾಕಲು, ಮಾರ್ಗ ಸೂಚಿಗಳನ್ನು ಹಾಕಲು ಸಾಕಷ್ಟು ಸಂಪನ್ಮೂಲವಿದ್ದು, ಪೊಲೀಸರ ಬಳಿ ಯೋಜನೆ ಸಿದ್ಧವಿದೆ. ಟ್ರಾಫಿಕ್ ಪೊಲೀಸ್ ಹಾಗೂ ಆರ್ ಟಿ ಒ ಜನರ ಅಭಿಪ್ರಾಯಗಳಿಗೆ ಸ್ಪಂದಿಸಿ ಈ ಎಲ್ಲ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಗ್ರಾಮಾಂತರ ಆಟೋ ರಿಕ್ಷಾ ಗಳನ್ನು ಪ್ರತ್ಯೇಕವಾಗಿ ಗುರುತಿಸಲು ಬೇರೆ ಬಣ್ಣ ಹಚ್ಚಲು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಅವರು ಅಗತ್ಯಕ್ಕೆ ಪಟ್ಟಣ ಪ್ರವೇಶಿಸಲು ಅನುಮತಿ ನೀಡಲು ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಆಟೋಗಳಿಗೆ ನಗರದಲ್ಲಿ ಹೆಚ್ಚಿನ ಆಟೋ ಸ್ಟಾಂಡ್ ಗಳನ್ನು ನಿರ್ಮಿಸುವ ಬಗ್ಗೆ ಸಂಚಾರಿ ಪೊಲೀಸರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಪಡೀಲಿನಲ್ಲಿ ರೈಲ್ವೇ ಅಂಡರ್ ಬ್ರಿಡ್ಜ್ ನಿರ್ಮಿಸುವ ಬಗ್ಗೆ ಇದಕ್ಕಾಗಿ ತಲಾ ಶೇ.50 ಪಾಲು ಬಂಡವಾಳದೊಂದಿಗೆ ನಿರ್ಮಿಸಲು ಪ್ರಥಮ ಹಂತದಲ್ಲಿ ನಿರ್ಧರಿಸಲಾಗಿದೆ. ರೈಲು ನಿಲ್ದಾಣದಲ್ಲಿ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಪ್ರೀ ಪೇಯ್ಡ್ ಆಟೋ ನಿಲ್ದಾಣ ಸ್ಥಾಪಿಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮೂಡಬಿದ್ರೆಯಲ್ಲಿ ಅಧಿಕಾರಿಗಳೊಂದಿಗೆ ಸಂವಾದ

ಮಂಗಳೂರು,ಡಿಸೆಂಬರ್ 05: ಜೈನ ಕಾಶಿ 'ಮೂಡಬಿದ್ರೆಯ ಅಭಿವೃದ್ದಿಯಲ್ಲಿ ಸಮಸ್ಯೆ ಮತ್ತು ಸವಾಲುಗಳು' ವಿಷಯ ದಲ್ಲಿ ಜಿಲ್ಲಾ ಮಟ್ಟದ ಅಧಿಕಾ ರಿಗಳು ಮತ್ತು ಜನ ಪ್ರತಿ ನಿಧಿ ಗಳೊಂದಿಗೆ ಸಂವಾದ ಕಾರ್ಯ ಕ್ರಮವನ್ನು ಶನಿವಾರ ಆಯೋ ಜಿಸಲಾಗಿತ್ತು.ಮೂಡಬಿದರೆ ಕಾರ್ಯನಿರತ ಪತ್ರಕರ್ತರ ಸಂಘ ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಹಮ್ಮಿಕೊಂಡ ಸಂವಾದ ಕಾರ್ಯ ಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋದ್ ಯಾದವ್, ಸ್ಥಳಿಯ ಶಾಸಕರಾದ ಅಭಯ ಚಂದ್ರ ಜೈನ್,ಮಾಜಿ ಸಚಿವ ಅಮರನಾಥ ಶೆಟ್ಟಿ,ಸಮಾಜದ ಗಣ್ಯರು,ನಾಗರಿಕರು,ಜನಪ್ರತಿನಿಧಿಗಳು,ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Saturday, December 4, 2010

ಜಿಲ್ಲೆಯ ಎಲ್ಲ ಕಲ್ಲು ಕೋರೆಯ ಕಾರ್ಮಿಕರ ಬಗ್ಗೆ ವರದಿ ನೀಡಲು ಏಳು ದಿನಗಳ ಕಾಲಮಿತಿ

ಮಂಗಳೂರು, ಡಿಸೆಂಬರ್, 04: ಕಾರ್ಮಿಕ ಇಲಾಖೆ, ಕಂದಾಯ ಮತ್ತು ಗಣಿವಿಜ್ಞಾನ ಇಲಾಖೆಯ ಸಹಕಾರದಿಂದ ಜಿಲ್ಲೆಯ ಎಲ್ಲ ಕಲ್ಲುಕೋರೆಯಲ್ಲಿರುವ ಕಾರ್ಮಿಕ ವ್ಯವಸ್ಥೆಯ ಬಗ್ಗೆ ಏಳು ದಿನಗಳೊಳಗೆ ಸಮಗ್ರ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಕಾರ್ಮಿಕ ಇಲಾಖೆ ಅಧಿಕಾರಿ ಅಪ್ಪಯ್ಯ ಶಿಂಧಿಹಟ್ಟಿ ಅವರಿಗೆ ಸೂಚನೆ ನೀಡಿದರು.
ಅಧಿಕಾರಿಗಳು ಮಾನವಹಕ್ಕು ಆಯೋಗದ ನಿರ್ದೇಶನದಂತೆ ಜೀತ ಪದ್ಧತಿ ಹಾಗೂ ಬಾಲಕಾರ್ಮಿಕ ವ್ಯವಸ್ಥೆಯ ನಿರ್ಮೂಲನಕ್ಕೆ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದರೆ ವಿಟ್ಲದಲ್ಲಿ ವರದಿಯಾದ ಜೀತ ಪದ್ಧತಿಗೆ ಅವಕಾಶವಿರುತ್ತಿರಲಿಲ್ಲ. ಕಲ್ಲುಕೋರೆಯ ಕಾರ್ಮಿಕರ ಸ್ಥಿತಿಗತಿ ಪತ್ತೆಹಚ್ಚುವುದು ಅಸಾಧ್ಯವೇನಲ್ಲ ಎಂದ ಜಿಲ್ಲಾಧಿಕಾರಿಗಳು, ಅಪರಾಧಗಳು ನಡೆಯುವಾಗ ಕಣ್ಣುಮುಚ್ಚಿ ಕೂರುವುದು ಮಹಾಪರಾಧ ಎಂದರಲ್ಲದೆ, ಈ ಸಂಬಂಧ ಅಧಿಕಾ ರಿಗ ಳನ್ನು ಹೊಣೆ ಯಾಗಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ಯನ್ನು ನೀಡಿ ದರು.
ತಹ ಸೀಲ್ದಾರು ಗಳಿಗೆ ಕಾರ್ಮಿಕ ಇಲಾಖೆಗೆ ಸಹಕಾರ ನೀಡಲು ಸುತ್ತೋಲೆ ಯನ್ನು ಈಗಾಗಲೇ ಕಳುಹಿಸಲಾಗಿದೆ ಎಂದ ಜಿಲ್ಲಾಧಿಕಾರಿಗಳು,ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾದರೆ ತಮ್ಮನ್ನು ಸಂಪರ್ಕಿಸಿ ಎಂದೂ ಅಧಿಕಾರಿಗಳಿಗೆ ಹೇಳಿದರು. ಕಾರ್ಮಿಕ ಇಲಾಖಾಧಿಕಾರಿಗಳು ಕಾರ್ಮಿಕರ ಪರಿಸ್ಥಿತಿ ಅವಲೋಕಿಸಲು ಸ್ಥಳ ಭೇಟಿ ನಡೆಸಬೇಕೆಂದ ಜಿಲ್ಲಾಧಿಕಾರಿಗಳು ವಿಟ್ಲ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಲೆಕ್ಕಿಗ, ರೆವೆನ್ಯೂ ಇನ್ಸಪೆಕ್ಟರ್ ಅವರ ಮಾಹಿತಿಯನ್ನು ಉಪವಿಭಾಗಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಂದ ತರಿಸಿಕೊಂಡು ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿದರು. ಕಾರ್ಮಿಕ ಇಲಾಖೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ಎರಡು ಭೂಮಿ ಕೇಂದ್ರಗಳ ಆರಂಭ: ಶಾಸಕ ಯೋಗಿಶ್ ಭಟ್

ಮಂಗಳೂರು, ಡಿಸೆಂಬರ್ 04:ಸಾರ್ವಜನಿಕರಿಗೆ ಅನುಕೂಲವಾಗುವ ಸಲುವಾಗಿ ಮಂಗಳೂರು ತಾಲೂಕಿನಲ್ಲಿ ಇನ್ನೂ ಎರಡು ಭೂಮಿ ಕೇಂದ್ರಗಳನ್ನು ಸರ್ಕಾರ ಮಂಜೂರು ಮಾಡಿದೆಯೆಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ಯೋಗೀಶ್ ಹೇಳಿದ್ದಾರೆ. ಅವರು ಇಂದು ನಗರದ ಪುರಭವನದಲ್ಲಿ ಏರ್ಪಡಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಮಂಗಳೂರು ನಗರ ಪಾಲಿಕೆಯ ಪ್ರಮುಖ ರಸ್ತೆಗಳ ಕಾಂಕ್ರಿಟೀಕರಣ ಕಾಮಗಾರಿ ಮುಗಿದ ಬಳಿಕ ಒಳ ರಸ್ತೆಗಳ ಕಾಮಾಗಾರಿ ಕೈ ಗೆತ್ತಿಕೊಳ್ಳ ಲಾಗುವುದು,ಇದಕ್ಕಾಗಿ 42 ಕೋಟಿ ರೂಪಾಯಿಗಳನ್ನು ಮೀಸಲಿ ಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮತ್ಸ್ಯಾಶ್ರಯ ಯೋಜನೆಯಡಿಯಲ್ಲಿ ವಸತಿ ಹೀನ ಮೀನುಗಾರರಿಗೆ ತಲಾ ರೂ.40,000 ದಂತೆ ಇಬ್ಬರು ಮೀನುಗಾರರಿಗೆ ಸಹಾಯಧನದ ಚೆಕ್ ಗಳನ್ನು ಶಾಸಕರು ವಿತರಿಸಿದರು. ಅಂಗವಿಕಲ ,ವಿಧವಾ ಹಾಗೂ ಸಂಧ್ಯಾ ಸುರಕ್ಷತಾ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ಸಹ ಹಂಚಲಾಯಿತು.ಮಹಾನಗರಪಾಲಿಕೆ ಮೇಯರ್ ರಜನಿ ದುಗ್ಗಣ್ಣ,ಉಪ ಮೇಯರ್ ರಾಜೇಂದ್ರ ಕುಮಾರ್,ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಮಂಗಳೂರು ಉಪವಿಭಾಗಧಿಕಾರಿ ಪ್ರಭುಲಿಂಗ ಕವಳಿಕಟ್ಟಿ,ಎಸಿಪಿ ರವೀಂದ್ರ ಗಡದಿ,ನಗರಪಾಲಿಕೆ ಆಯುಕ್ತರಾದ ಡಾ.ವಿಜಯಪ್ರಕಾಶ್,ಮೂಡ ಆಯುಕ್ತ ಮಧುಕರ್ ಗಡ್ಕರ್, ಪಾಲಿಕೆ ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಇಳಿಕೆ: ಸುಭೋದ್ ಯಾದವ್

ಮಂಗಳೂರು, ಡಿಸೆಂಬರ್ 04:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮರ್ಪಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದಿಂದಾಗಿ ಒಂದು ಸಾವಿರ ಶಿಶುಗಳ ಜನನದಲ್ಲಿ ಶಿಶು ಮರಣ ಪ್ರಮಾಣ 10-11 ಕ್ಕೆ ಇಳಿದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಭೋದ್ ಯಾದವ್ ತಿಳಿಸಿದ್ದಾರೆ.ಅವರು ಇಂದು ನಗರದ ವೆನ್ ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯುನಿಸೆಫ್ ವತಿಯಿಂದ ಆಯೋಜಿಸಿದ್ದ ಶಿಶು ಮರಣ ಪ್ರಕರಣ ಪರಿಶೀಲನಾ ಪದ್ಧತಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ವಿದ್ಯಾ ವಂತ ರಿರುವ ಜಿಲ್ಲೆ ಯಾಗಿದ್ದು ಅಭಿವೃದ್ಧಿ ಶೀಲ ರಾಷ್ಟ್ರ ಗಳಲ್ಲಿ ಇರು ವಂತೆ ಶಿಶು ಮರಣ ಪ್ರಮಾಣ 2-3 ಕ್ಕೆ ಬರ ಬೇಕು.ಈ ದಿಸೆಯಲ್ಲಿ ಆರೋಗ್ಯ ಕಾರ್ಯ ಕ್ರಮಗಳ ಅನು ಷ್ಟಾನ ಜಿಲ್ಲೆಯಲ್ಲಿ ಇನ್ನು ಹೆಚ್ಚು ಪರಿಣಾ ಮಕಾರಿಯಾಗುವಂತೆ ಕ್ರಮ ವಹಿಸಬೇಕೆಂದರು.
ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ವರದಿಗಳು ಸಮರ್ಪಕವಾಗಿಲ್ಲ.ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂಕೆಲವೊಮ್ಮೆ ಮನೆಗಳಲ್ಲಿ ಆಗುವ ಶಿಶು ಮರಣ ವರದಿಗೆ ಸೇರಿರುವುದಿಲ್ಲ.ಆದ್ದರಿಂದ ನಿಖರವಾದ ಶಿಶು ಮರಣಗಳ ದಾಖಲೆಯಾಗಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಾನವನ ಅಭಿವೃದ್ಧಿ ಸೂಚ್ಯಂಕದಲ್ಲಿ ಶಿಶು ಮರಣ ಪ್ರಮಾಣ ಅತ್ಯಂತ ಪ್ರಮುಖ.ಎಲ್ಲಾ ರಂಗಗಳಲ್ಲಿ ಅತ್ಯಂತಮುಂದುವರಿದ ದ.ಕ.ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ವರದಿಗಳು ವಿಭಿನ್ನ ರೀತಿಯ ಅಂಕಿ ಅಂಶಗಳಿಂದ ಕೂಡಿದೆ. ಆದ್ದರಿಂದ ಶಿಶು ಮರಣ ಖಾಸಗಿ ಆಸ್ಪತ್ರೆಯಲ್ಲಿ ಆಗಲೀ ಅಥವಾ ಸರಕಾರ ಆಸ್ಪತ್ರೆಯಲ್ಲೇ ಆಗಲಿ ಮನೆಯಲ್ಲೇ ಆಗಲಿ ಅದು ಸರಿಯಾದ ರೀತಿ ದಾಖಲಾತಿ ಆಗುವ ಕಾರ್ಯ ಪ್ರಾಮಾಣಿಕವಾಗಿ ಆಗಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀ ರಂಗಪ್ಪ ಅವರು ಪ್ರಾಸ್ತಾ ವಿಕ ವಾಗಿ ಮಾತ ನಾಡಿ 2005 ಕ್ಕಿಂತ ಮೊದಲು ರಾಷ್ಟ್ರ ಮಟ್ಟ ದಲ್ಲಿ ಶಿಶು ಮರಣ 60,ರಾಜ್ಯ ಮಟ್ಟ ದಲ್ಲಿ ಈ ಪ್ರಮಾಣ 52 ಇದ್ದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದು 14.6 ಆಗಿತ್ತು.ಆದರೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಆರಂಭವಾದ ನಂತರ ರಾಷ್ಟ್ರ ಮಟ್ಟದಲ್ಲಿ ಶಿಶು ಮರಣ ಪ್ರಮಾಣ 53, ರಾಜ್ಯ ಮಟ್ಟದಲ್ಲಿ 45 ಇದ್ದಾಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಪ್ರಮಾಣ 10.5 ಆಗಿತ್ತು ಎಂದು ತಿಳಿಸಿದರು. ಕಸ್ತೂರ್ಬಾ ವೈದ್ಯ ಕಾಲೇಜಿನ ಮಕ್ಕಳ ವಿಭಾಗದ ಪ್ರೊ.ಬಿ.ಎಸ್.ಬಾಳಿಗ,ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕರಾದ ಪ್ರೊ.ಎಸ್.ಶಿವಾನಂದ,ಹೈದರಾಬಾದ್ನ ಯುನಿಸೆಫ್ ಸಂಸ್ಥೆಯ ಡಾ. ಸಂಜೀವ ಉಪನಿರ್ದೇಶಕರಾದ ಡಾ.ಲಕ್ಷ್ಮಿನಾರಾಯಣ ಮುಂತಾದವರು ಉಪಸ್ಥಿತರಿದ್ದರು.