Thursday, December 2, 2010

ಅನಾವಶ್ಯಕ ರಸ್ತೆ ಉಬ್ಬು ತೆರವುಗೊಳಿಸಿ-ಸುಬೋಧ್ ಯಾದವ್

ಮಂಗಳೂರು, ಡಿಸೆಂಬರ್ 02:ಅವೈಜ್ಞಾನಿಕವಾಗಿ ಅನಾವಶ್ಯಕವಾಗಿ ಜಿಲ್ಲೆಯ ಗ್ರಾಮಾಂತರ ಪ್ರದೇಶ ಹಾಗೂ ನಗರ ಪಟ್ಟಣ ಪ್ರದೇಶಗಳಲಿ ನಿರ್ಮಿಸಿರುವ ರಸ್ತೆ ಉಬ್ಬು ಗಳನ್ನು ಕೂಡಲೇ ತೆರವು ಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದ.ಕ.ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸೂಚನೆ ನೀಡಿದ್ದಾರೆ.ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆ ಯಲ್ಲಿ ವೈಜ್ಞಾ ನಿಕವಾಗಿ ನಿರ್ಮಿ ಸಿರುವ ರಸ್ತೆ ಉಬ್ಬು ಗಳಿಗೆ ಸೂಕ್ತ ಬಣ್ಣ ಬಳಿಯ ಬೇಕು ಎಂದು ತಿಳಿಸಿದ ಜಿಲ್ಲಾಧಿ ಕಾರಿ ಗಳು,ಎಲ್ಲಾ ಇಲಾಖೆ ಗಳು ತಮ್ಮ ತಮ್ಮ ವ್ಯಾಪ್ತಿಯ ರಸ್ತೆ ಗಳಲ್ಲಿ ಕಡ್ಡಾಯ ವಾಗಿ ಸಂಚಾರ ಚಿಹ್ನೆಗಳನ್ನು ಪ್ರದರ್ಶಿ ಸಬೇ ಕೆಂದು ಸೂಚನೆ ನೀಡಿ ದರು. ಸರ್ಕಾರಿ,ಖಾಸಗಿ,ಅನುದಾನಿತ ಶಾಲೆಗಳು ತಮ್ಮ ಶಾಲೆಯ ವಾಹನಗಳನ್ನು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಶಾಲಾ ಮುಂಭಾಗದಲ್ಲಿ ನಿಲ್ಲಿಸದೆ, ಶಾಲಾ ಆವರಣದಲ್ಲಿಯೇ ನಿಲ್ಲಿಸಬೇಕು ಎಂದರು.ನಗರ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜನ ದಟ್ಟಣೆ ಇರುವ ಸಂಚಾರ ದಟ್ಟಣೆ ಇರುವ ಕಡೆಗಳಲ್ಲಿ ಸಂಚಾರಕ್ಕೆ ಧಕ್ಕೆಯಾಗಿರುವ ರಸ್ತೆ ಗುಂಡಿಗಳನ್ನು ಆದ್ಯತೆ ಮೇಲೆ ಕೂಡಲೇ ಮುಚ್ಚುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ನಗರ ಹಾಗೂ ಜಿಲೆಯಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಮೇಲಾಟ ತಪ್ಪಿಸಲು ವಾಹನಗಳಿಗೆ ಜಿಪಿಎಸ್ ವೇಗ ನಿಯಂತ್ರಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಖಾಸಗಿ ಬಸ್ಸು ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಖಾಸಗಿ ಬಸ್ಸು, ಲಾರಿ, ಅಟೋರಿಕ್ಷಾ, ಟ್ಯಾಕ್ಷಿ, ಸಂಘಗಳ ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.