Friday, December 3, 2010

ಸಶಕ್ತ ಕಾರ್ಯನಿರ್ವಹಣೆಗೆ ಸಂಪನ್ಮೂಲ ಕ್ರೋಢೀಕರಣ ಅಗತ್ಯ: ಎ ಜೆ ಕೂಡ್ಗಿ

ಮಂಗಳೂರು, ಡಿಸೆಂಬರ್ 03:ಅಧಿಕಾರ ವಿಕೇಂದ್ರೀಕರಣ ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗಳು ಸ್ವತಂತ್ರವಾಗಿ ಸಂಪನ್ಮೂಲ ಕ್ರೋಢೀಕರಿಸಲು ಅವಕಾಶ ಕಲ್ಪಿಸಬೇಕೆಂದು 3ನೇ ರಾಜ್ಯ ಹಣಕಾಸು ಆಯೋಗ ಶಿಫಾರಸ್ಸುಗಳ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷರಾದ ಎ.ಜೆ. ಕೂಡ್ಗಿ ಅವರು ತಿಳಿಸಿದ್ದಾರೆ.
ಅವ ರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ನಲ್ಲಿ ಪ್ರಗತಿ ಪರಿ ಶೀಲನೆ ನಡೆಸಿ ಮಾತ ನಾಡು ತ್ತಾ, 3ನೇ ಹಣ ಕಾಸು ಆಯೋಗ ಸ್ಥಳೀಯ ಸಂಸ್ಥೆ ಗಳ ಸಬಲೀ ಕರಣಕ್ಕೆ ಶಿಫಾ ರಸ್ಸು ಮಾಡಿ ರುವು ದಾಗಿ ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಥೇಚ್ಛವಾಗಿ ಹಣದ ನೆರವು ನೀಡುತ್ತಿದ್ದರೂ ಅದರ ಸದ್ಬಳಕೆ ಆಗುತ್ತಿಲ್ಲ. ಗ್ರಾಮ ಪಂಚಾಯಿತಿಗಳಿಗೆ, ತಾಲೂಕು ಪಂಚಾಯಿತಿಗಳಿಗೆ ಹಾಗೂ ಜಿಲ್ಲಾ ಮಟ್ಟದ ಕಾಮಗಾರಿಗಳನ್ನು ವಿಭಾಗಿಸಿ ಆಯಾ ಪಂಚಾಯಿತಿಗಳಿಗೆ ಅನುಷ್ಠಾನದ ಹೊಣೆ ನೀಡಬೇಕೆಂದರು. ಗ್ರಾಮ ಪಂಚಾಯಿತಿಗಳು ತಮ್ಮ ಆರ್ಥಿಕ ಸಂಪನ್ಮೂಲ ವೃದ್ಧಿಗೆ ಕಟ್ಟಡಗಳ ನಿರ್ಮಾಣಕ್ಕೆ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕೆಂದರು. ದಕ್ಷಿಣ ಕನ್ನಡ ಜಿಲ್ಲೆಯ 125 ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 86 ಸಾವಿರ ಕುಡಿಯುವ ನೀರು ಸಂಪರ್ಕಗಳನ್ನು ಕಲ್ಪಿಸಿದ್ದು, ಇದರಲ್ಲಿ ಶೇ.60ರಷ್ಟು ಸಂಪರ್ಕಗಳಿಗೆ ಮೀಟರ್ ಅಳವಡಿಸಲಾಗಿದ್ದು, ಎಲ್ಲ ನೀರು ಸಂಪರ್ಕಗಳಿಗೆ ಕಡ್ಡಾಯವಾಗಿ ನೀರಿನ ತೆರಿಗೆ ಸಂಗ್ರಹಕ್ಕೆ ಕ್ರಮ ವಹಿಸಬೇಕೆಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಗ್ರಾಮ ಪಂಚಾಯಿತಿಗಳಿಂದ ವಿದ್ಯುತ್ ದೀಪ ಹಾಗೂ ಕುಡಿಯುವ ನೀರು ಸರಬರಾಜಿಗೆ ಬಳಸಿದ ವಿದ್ಯುತ್ ಬಿಲ್ ಮೊತ್ತ 12 ಕೋಟಿ ರೂ. ಮೆಸ್ಕಾಂ ಗೆ ಬಾಕಿ ಇದೆ ಎಂದರು. ಜಿಲ್ಲೆ ಯಲ್ಲಿ ಅಕ್ಟೋ ಬರ್ 2010 ರ ಅಂತ್ಯ ಕ್ಕೆ ರೂ. 9.14 ಕೋಟಿ ಗ್ರಾಮ ಪಂಚಾ ಯಿತಿ ಗಳಿಗೆ ತೆರಿಗೆ ಬಾಕಿ ಇದೆ ಎಂದ ಸಿಇಒ ಅವರು, ನೀರಿನ ಶುಲ್ಕ ಬಾಕಿ 3.24 ಕೋಟಿ ಇದೆ ಎಂದರು. ಗ್ರಾಮ ಪಂಚಾ ಯಿತಿ ಗಳ ಆದಾ ಯದ ಶೇ.25 ರ ಹಣ ದಲ್ಲಿ ಪರಿಶಿಷ್ಟ ಜಾತಿ, ಪಂಗ ಡಗಳ ಕಲ್ಯಾಣ ಕಾರ್ಯ ಕ್ರಮ ಗಳಿಗೆ ಅಕ್ಟೋ ಬರ್ 2010 ರ ಅಂತ್ಯ ದವ ರೆಗೆ ರೂ. 17.99 ಲಕ್ಷ ವೆಚ್ಚ ಮಾಡಲಾಗಿದೆ ಎಂದರು.ಒಟ್ಟು 248 ಪ್ರೌಢಶಾಲಾ ಕಟ್ಟಡಕ್ಕೆ ಆರ್ ಐ ಡಿಎಫ್ ಯೋಜನೆಯಡಿ 1134 ಲಕ್ಷ ಅಂದಾಜು ಸಲ್ಲಿಸಿದ್ದು 2009-10 ರಲ್ಲಿ 245 ಲಕ್ಷ ವೆಚ್ಚ ಮಾಡಲಾಗಿದೆ. 2010-11 ರಲ್ಲಿ 323 ಲಕ್ಷ ಬಿಡುಗಡೆಯಾಗಿದೆ. 460.65 ಲಕ್ಷ ರೂ. ಹಣದ ಅವಶ್ಯಕತೆ ಇದೆ ಎಂದು ಅಧ್ಯಕ್ಷರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಾಮೇಗೌಡರು ತಿಳಿಸಿದರು.ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತ್ ಉಪಾಧ್ಯಕ್ಷರಾದ ಜಗನ್ನಾಥ್ ಸಾಲಿಯಾನ್ ಅವರು ಪಾಲ್ಗೊಂಡಿದ್ದರು.