ಮಂಗಳೂರು ತಾಲೂಕಿನ ಜಿಲ್ಲಾ ಪಂಚಾಯತ್ 10 ಸ್ಥಾನಗಳಿಗೆ ಒಟ್ಟು 60 ನಾಮಪತ್ರ ಸಲ್ಲಿಕೆಯಾಗಿದೆ. ಬಂಟ್ವಾಳ ಜಿ.ಪಂ ನ 9 ಸ್ಥಾನಗಳಿಗೆ 58 ನಾಮಪತ್ರ ಸಲ್ಲಿಕೆ, ಪುತ್ತೂರು ಜಿಲ್ಲಾ ಪಂಚಾಯತ್ ನ ಒಟ್ಟು 6 ಸ್ಥಾನಗಳಿಗೆ 41 ನಾಮಪತ್ರ ಸಲ್ಲಿಕೆಯಾಗಿದೆ. ಸುಳ್ಯದ 4 ಜಿ.ಪಂ ಕ್ಷೇತ್ರಗಳಿಗೆ 26 ನಾಮಪತ್ರ, ಬೆಳ್ತಂಗಡಿಯ 6 ಜಿ.ಪಂ ಕ್ಷೇತ್ರಗಳಿಗೆ 30 ನಾಮಪತ್ರಗಳು ಸಲ್ಲಿಕೆಯಾಗಿವೆ. ಮಂಗಳೂರು ತಾಲೂಕು ಪಂಚಾಯಿತಿಯ 37 ಸ್ಥಾನಗಳಿಗೆ 173 ನಾಮಪತ್ರ, ಬಂಟ್ವಾಳ ತಾಲೂಕು ಪಂಚಾಯಿತಿಯ 33 ಸ್ಥಾನಗಳಿಗೆ 129 ನಾಮಪತ್ರ, ಪುತ್ತೂರು ತಾ.ಪಂ.ನ 22 ಸ್ಥಾನಗಳಿಗೆ 106 ನಾಮಪತ್ರ, ಸುಳ್ಯ ತಾ.ಪಂ. ನ 13 ಸ್ಥಾನಗಳಿಗೆ 53 ನಾಮಪತ್ರ, ಬೆಳ್ತಂಗಡಿ ತಾ ಪಂ.ನ 24 ಸ್ಥಾನಗಳಿಗೆ 112 ನಾಮಪತ್ರ ಸಲ್ಲಿಕೆಯಾಗಿವೆ.