Friday, December 3, 2010

ಅಂಗವಿಕಲರ ಮೀಸಲು ಹುದ್ದೆ ಭರ್ತಿಗೆ ಆದ್ಯತೆ: ಸಚಿವ ಪಾಲೇಮಾರ್

ಮಂಗಳೂರು, ಡಿಸೆಂಬರ್ 03: ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗಾಗಿ ಮೀಸಲಿಟ್ಟಿರುವ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಿ ಭಿನ್ನ ಸಾಮಥ್ರ್ಯದವರಿಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ವಿಶೇಷ ಒತ್ತು ನೀಡಿದೆ ಎಂದು ಬಂದರು,ಮೀನುಗಾರಿಕೆ,ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಹೇಳಿದ್ದಾರೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಗಾಂಧಿನಗರ ಶುಕ್ರವಾರ ನಗರದ ಪುರಭವನದಲ್ಲಿ ನಡೆದ `ವಿಶ್ವ ಅಂಗವಿಕಲರ ದಿನಾಚರಣೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಿನ್ನ ಸಾಮ ರ್ಥ್ಯದ ಮಕ್ಕಳ ನ್ನು ನಿರಂತ ರವಾಗಿ ಪ್ರೋತ್ಸಾ ಹಿಸುವ ಕೆಲಸ ಆಗ ಬೇಕು. ಜಿಲ್ಲೆಯ 203 ಗ್ರಾಮ ಪಂಚಾ ಯತ್ ಳಲ್ಲಿ ಈ ಗಾಗಲೇ 50 ಗ್ರಾ.ಪಂ.ಗಳಲ್ಲಿ ಎಸ್ಸೆ ಸ್ಸೆಲ್ಸಿ ಪೂರೈಸಿ ದವರಿಗೆ ಉದ್ಯೋ ಗವ ಕಾಶ ಕಲ್ಪಿಸ ಲಾಗಿದೆ. ಎಸ್ಸೆ ಸ್ಸೆಲ್ಸಿ ಶಿಕ್ಷಣ ಪೂರೈಸಿ ರಬೇ ಕೆಂಬ ನಿಯಮ ವಿರುವು ದರಿಂದ ಹೆಚ್ಚಿನ ವರಿಗೆ ಅವ ಕಾಶ ಕಲ್ಪಿಸಲು ಸಾಧ್ಯ ವಾಗಿಲ್ಲ. ಮುಂದೆ ಎಲ್ಲ ರಿಗೂ ಅವ ಕಾಶ ಕಲ್ಪಿ ಸುವತ್ತ ಗಮನ ಹರಿಸ ಲಾಗು ವುದು ಎಂದರು.ಅಂಗ ವಿಕ ಲರ ಕಲ್ಯಾಣ ಕ್ಕಾಗಿ ಮುಖ್ಯ ಮಂತ್ರಿ ಗಳು ಹೆಚ್ಚು ಮುತು ವರ್ಜಿ ವಹಿ ಸುತ್ತಿದ್ದು 2010-11 ನೇ ಸಾಲಿನ ಬಜೆಟ್ನಲ್ಲಿ 20 ಕೋಟಿ ಹಣ ಮೀಸಲಿಟ್ಟಿದ್ದರು. ಇದೀಗ ಮತ್ತೆ 10 ಕೋಟಿಯನ್ನು ನೀಡುವುದಾಗಿ ಘೋಷಿಸಿದ್ದಾರೆ. ಆರ್ಥಿಕ ಇಲಾಖೆಯಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಅಂಗವಿಕಲರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಘೋಷಿಸಿದ ಹಣವನ್ನು ನೀಡಲಾಗುವುದು ಎಂಬ ಭರವಸೆಯನ್ನು ನೀಡಿದರು. ವಿಶೇಷ ಮಕ್ಕಳಲ್ಲಿ ದೈಹಿಕ ಕೊರತೆಯಿರಬಹುದು ಆದರೆ ವಿಶೇಷ ಪ್ರತಿಭೆಯಿದೆ ಅದನ್ನು ಪ್ರೋತ್ಸಾಹಿಸುವ ಕೆಲಸ ನಡೆಯಬೇಕು ಎಂದು ಸಚಿವರು ನುಡಿದರು.
ಮುಖ್ಯ ಅತಿಥಿ ಯಾಗಿದ್ದ ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ.ನಾಗ ರಾಜ ಶೆಟ್ಟಿ ಮಾತ ನಾಡಿ, ವಿಶೇಷ ಶಾಲೆಯ ಶಿಕ್ಷ ಕರ ಸೇವೆ ಶ್ಲಾಘ ನೀಯ. ಅವರ ಸಮಸ್ಯೆ ಯತ್ತಲೂ ಗಮನ ಹರಿಸ ಬೇಕು. ಹೆಚ್ಚಿನ ಶಾಲೆ ಗಳಲ್ಲಿ ಇಂದು ಬಿಸಿ ಯೂಟದ ವ್ಯವಸ್ಥೆ ಇದೆ. ಬಿಸಿ ಯೂಟ ದೊರೆ ಯದೆ ಇದ್ದ ಶಾಲೆಯ ಬಗ್ಗೆ ಗಮ ನಕ್ಕೆ ತಂದರೆ ಸೂಕ್ತ ವ್ಯವಸ್ಥೆ ಮಾಡ ಲಾಗು ವುದು ಎಂದರು.ಶಾಸಕ ಎನ್.ಯೋಗೀಶ್ ಭಟ್ ಮುಖ್ಯ ಅತಿಥಿ ಯಾಗಿ ದ್ದರು. ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖಾ ಉಪ ನಿರ್ದೇ ಶಕಿ ಎ.ಶಕುಂ ತಳಾ, ದ.ಕ. ಮತ್ತು ಉಡುಪಿ ಜಿಲ್ಲಾ ಅಂಗ ವಿಕ ಲರ ಸಂ ಘದ ಅಧ್ಯಕ್ಷ ಡಾ.ಮುರಳೀ ಧರ ನಾಯಕ್, ಜಿಲ್ಲಾ ಅಂಗ ವಿಕ ಲರ ಫೆಡ ರೇಶನ್ ಅಧ್ಯಕ್ಷ ದಿನೇಶ್ ಶೆಟ್ಟಿ, ಲಯನ್ಸ್ ಜಿಲ್ಲಾ ಉಪ ರಾಜ್ಯ ಪಾಲ ಪಿ.ಕಿಶೋರ್ ರಾವ್, ಗಾಂಧಿ ನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಕಲ್ಬಾವಿ, ಕಾರ್ಯದರ್ಶಿ ಹರೀಶ್ ಕುಂಬ್ಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಂಗವಿಕಲರ ಕಲ್ಯಾಣಾಧಿಕಾರಿ ಪುಟ್ಟಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಾನಿಧ್ಯ ವಿಶೇಷ ಸಂಸ್ಥೆಯ ಗೌರವ ಕಾರ್ಯದರ್ಶಿ ವಸಂತ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.