Wednesday, December 1, 2010

'ಜಾಗೃತ ಯುವ ಸಮಾಜದಿಂದ ಏಡ್ಸ್ ಹರಡುವಿಕೆ ತಡೆ ಸಾಧ್ಯ'

ಮಂಗಳೂರು,ಡಿ.01:ಏಡ್ಸ್ ರೋಗ ನಿಯಂತ್ರಣ ಯುವಶಕ್ತಿಯಿಂದ ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ರಂಗಪ್ಪ ಹೇಳಿದರು.ಅವರಿಂದು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಹೆಚ್ ಐ ವಿ/ಏಡ್ಸ್ ಜಾಗೃತಿ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಏಡ್ಸ್ ಬಗ್ಗೆ ಹಿಂದಿದ್ದ ಭೀತಿ ಇಂದಿಲ್ಲ, ಎಲ್ಲ ರಲ್ಲೂ ಸಾಕಷ್ಟು ಅರಿ ವಿದ್ದು, ಏಡ್ಸ್ ತಡೆ ಗಟ್ಟು ವಿಕೆ ಯ ಬಗ್ಗೆ ಯೂ ಮಾಹಿತಿ ಇದೆ.ರೋಗದ ಬಗ್ಗೆ ಪ್ರಥಮ ವರದಿ ಬಂದ ಬಳಿಕ 1988 ರ ವಿಶ್ವ ಆರೋಗ್ಯ ಸಂಸ್ಥೆ ಡಿಸೆಂಬರ್ ಒಂದರಿಂದ ವಿಶ್ವ ಆರೋಗ್ಯ ದಿನ ಎಂದು ಘೋಷಿಸಿದೆ.ಪ್ರಪಂಚದಲ್ಲಿ 3.4 ಮಿಲಿಯನ್ ಜನರಿಗೆ ಏಡ್ಸ್ ಇದ್ದು, 31.3 ದಶಲಕ್ಷ ಪುರುಷರು, 15.7 ದಶಲಕ್ಷ ಮಹಿಳೆಯರು, 2.1ದಶಲಕ್ಷ ಮಕ್ಕಳಿದ್ದಾರೆ. ಭಾರತದಲ್ಲಿ 2.3 ದಶಲಕ್ಷ 1.31 ದಶಲಕ್ಷ ಮಕ್ಕಳಿದ್ದಾರೆ. ಭಾರತದಲ್ಲಿ 2.3 ದಶಲಕ್ಷ ಸೋಂಕು ಪೀಡಿತರಿದ್ದು, 1.31ದಶಲಕ್ಷ ಪುರುಷರು. .9 ಮಹಿಳೆಯರು ಮತ್ತು 2,609 ಮಕ್ಕಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2002ರಿಂದ 7,901 ಮಂದಿ ಎಚ್ ಐ ವಿ ಪೀಡಿತರಿದ್ದು, 490 ಜನ ಮರಣ ಹೊಂದಿದ್ದಾರೆಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾಹಿತಿ ನೀಡಿದರು.
ರೋಶನಿ ಪ್ರಾಂಶುಪಾಲರಾದ ಡಾ. ಜೆಸಿಂತಾ ಡಿ ಸೋಜಾ ಅವರು 'ಜೀವನ ಜೋಪಾನ'ಎಂಬ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿ, ಎಚ್ ಐ ವಿ ಪೀಡಿತರನ್ನು ಗುರುತಿಸಿದ ಬಳಿಕ ಅವರೊಂದಿಗೆ ವರ್ತಿಸುವ ರೀತಿಯಲ್ಲಿ ಬದಲಾವಣೆಯಾಗಬೇಕು; ಕೌನ್ಸಿಲರ್ ಗಳಿಗೆ ಈ ಬಗ್ಗೆ ತರಬೇತಿ ನೀಡುವಾಗ ಹೆಚ್ಚಿನ ಕಾಳಜಿ ವಹಿಸುವ ಬಗ್ಗೆ ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳ ಹೊಣೆಯೂ ಅಧಿಕವಿದೆ ಎಂದು ಪ್ರಾಂಶುಪಾಲರು ಹೇಳಿದರು. ಡಾ. ರತಿದೇವಿ ಅವರು ಇದೇ ವೇಳೆ ಸಂವೇದನಾ ಸಂಸ್ಥೆಗೆ 10,000ರೂ.ಗಳ ದೇಣಿಗೆಯನ್ನು ನೀಡಿದರು.ರೋಶನಿಯ ಹಿರಿಯ ಪ್ರಾಧ್ಯಾಪಕ ಡಾ. ಅಶೋಕ್ ಅವರು ಉಪಸ್ಥಿತರಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಕಿಶೋರ್ ಕುಮಾರ್ ಅವರು ಪ್ರಾಸ್ತಾವಿಕ ನುಡಿಗಳಲ್ಲಿ ಸಪ್ತಾಹ ಪೂರ್ತಿ ಯುವಕ ಸಂಘಗಳ ಜೊತೆ, 32 ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಜೊತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು.ಪ್ರೊಫೆಸರ್ ವಿನೀತಾ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಆಶಾ ವಂದಿಸಿದರು.