ಮಂಗಳೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ವಿವರಗಳನ್ನು ನೀಡಿದರು.ಡಿಸೆಂಬರ್ 8 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಹೆಲಿಕಾಪ್ಟರ್ ಮೂಲಕ ಮಣಿಪಾಲಕ್ಕೆ ತೆರಳಿ,ಡಿಸೆಂಬರ್ 9 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.ಅಲ್ಲಿಂದ ರಸ್ತೆ ಮೂಲಕ ವಿಶ್ವ ಕೊಂಕಣಿ ಸಾಂಸ್ಕೃತಿಕ ಸಮ್ಮೇಳ ನಡೆಯುವ ನೆಹರು ಮೈದಾನಿಗೆ ಆಗಮಿಸಲಿದ್ದಾರೆ.ಭದ್ರತೆಯ ದೃಷ್ಟಿಯಿಂದ ರಾಷ್ಟ್ರಪತಿಗಳು ಮತ್ತು ಇತರ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಕರ್ನಾಟಕದ ರಾಜ್ಯಪಾಲರಾದ ಹನ್ಸರಾಜ್ ಭಾರಾಧ್ವಜ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಉತ್ತರಖಂಡ್ ರಾಜ್ಯಪಾಲ ಮಾರ್ಗರೇಟ್ ಆಳ್ವ, ಕೇಂದ್ರ ಮತ್ತು ರಾಜ್ಯದ ಅನೇಕ ಮಂತ್ರಿಗಳು ಮಂಗಳೂರಿನಲ್ಲಿ ನಡೆಯುವ ಸಮಾರಂಭಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಗಣ್ಯರು ಸಾಗಿ ಬರುವ ಹಾದಿಯ ಇಕ್ಕೆಲಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 6.30 ರ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.ಕಾರ್ಯಕ್ರಮ ಮುಗಿದ ಬಳಿಕ ಸಂಜೆ 6 ಗಂಟೆಗೆ ರಾಷ್ಟ್ರಪತಿಯವರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಹೊರಗಿನಿಂದ ಸಮ್ಮೇಳಕ್ಕೆ ಬರುವ ವಾಹಗಳನ್ನು ನಿಲ್ಲಿಸಲು ನೆಹರು ಮೈದಾನಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಬಿಗಿ ಭದ್ರತೆ:

ಗೌರವ್ವನಿತ ರಾಷ್ಟ್ರ ಪತಿಗಳು ಮತ್ತು ಇತರ ಅನೇಕ ಗಣ್ಯರು ನಗರದ ನೆಹರು ಮೈದಾನಿನಲ್ಲಿ ನಡೆಯುವ ಸಮಾ ರಂಭದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತಾ ಎರ್ಪಾಡುಗಳನ್ನು ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಮಾಡಿದೆ. ಕಾರ್ಯಕ್ರಮ ನಡೆಯುವ ನೆಹರು ಮೈದಾನಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇಂಟಲಿಜೆನ್ಸ್ ಎಸ್ಪಿ ಎನ್.ಶಿವಪ್ರಸಾದ್,ಜಿಲ್ಲಾಧಿಕಾರಿ ಸುಭೋದ್ ಯಾದವ್,ಪೋಲಿಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಸ್ಥಳ ಮತ್ತು ವ್ಯವಸ್ತೆಗಳನ್ನು ಪರಿಶೀಲಿಸಿದರು.