Thursday, September 30, 2010

ಪಾಲಿಕೆ ವ್ಯಾಪ್ತಿಯಲ್ಲಿ ಹೆಲ್ಮೆಟ್ ಕಡ್ಡಾಯ

ಮಂಗಳೂರು,ಸೆ.30:ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಹಾನಗರಪಾಲಿಕೆಯಲ್ಲಿ ದ್ವಿಚಕ್ರ ವಾಹನ ಚಾಲಕರು ಬ್ಯೂರೋ ಆಪ್ ಇಂಡಿಯನ್ ಸ್ಟಾಂಡರ್ಡ್ಸ್, ಸ್ಟಾಂಡರ್ಡ್ ನಂ.ಐಎಸ್ 4151:1993 ಮಾಪನ ಹೊಂದಿರುವ ಹೆಲ್ಮೆಟ್ ಧರಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿರುತ್ತದೆ.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹೆಲ್ಮೆಟ್ ಕಡ್ಡಾಯ ಗೊಳಿಸಲು ಕ್ರಮ ಕೈಗೊಳ್ಳ ಬೇಕೆಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಭಾಸ್ಕರ ರಾವ್ ಅವರು ಸೂಚಿಸಿದ್ದಾರೆ. ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯಿಂದ ಉಂಟಾಗುತ್ತಿರುವ ಅಪಘಾತಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ದ್ಚಿಚಕ್ರ ವಾಹನ ಚಾಲಕರು ಗಂಭೀರ ಸ್ವರೂಪದ ಗಾಯಾಳುಗಳಾಗುವುದಲ್ಲದೆ, ಶಾಶ್ವತ ಅಂಗವಿಕಲತೆಗೆ ಈಡಾಗುತ್ತಿದ್ದಾರೆ. ಅಪಘಾತ ಪ್ರಕರಣಗಳಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರು ಮತ್ತು ಇತರ ರಸ್ತೆ ಬಳಕೆದಾರರ ಹಿತದೃಷ್ಟಿಯಿಂದ ಹಾಗೂ ದ್ಚಿಚಕ್ರ ವಾಹನ ಚಾಲಕರ ಸುರಕ್ಷತೆಯ ಸಲುವಾಗಿ ಎಲ್ಲ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದ್ದಾರೆ.

Wednesday, September 29, 2010

ಕೋಮು ಸಾಮರಸ್ಯಕ್ಕೆ ನಾಂದಿ ಹಾಡಿ; ಸಚಿವ ಕೃಷ್ಣ ಜೆ.ಪಾಲೇಮಾರ್

ಮಂಗಳೂರು, ಸೆ.29: ನಾಳೆ ಅಯೋದ್ಯೆ ವಿವಾದ ಕುರಿತ ನ್ಯಾಯಾಲಯದ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ ಕೋಮು ಸಾಮರಸ್ಯವನ್ನು ಕಾಪಾಡಿ ಎಲ್ಲರಿಗೂ ಮಾದರಿ ಯಾಗಬೇಕೆಂದು ಮತ್ತು ವದಂತಿಗಳಿಗೆ ಕಿವಿ ಕೊಡಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ. ತೀರ್ಪು ಕಾನೂನು ಪ್ರಕಾರವೇ ಇತ್ಯರ್ಥ ಗೊಳ್ಳಲಿದ್ದು, ಈ ಸಂದರ್ಭದಲ್ಲಿ ಜನತೆ ಗೊಂದಲಕ್ಕೊಳಗಾಗಿ ಕಾನೂನು ಕೈಗೆತ್ತಿ ಕೊಳ್ಳದೆ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಸ್ವಚ್ಛತೆ ಬಗ್ಗೆ ನಿಸ್ವಾರ್ಥಿಗಳಾಗಿ: ಜಿ ಮಂಜುಳಾ

ಮಂಗಳೂರು,ಸೆ.29 :ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಸಕಾಲಕ್ಕೆ ಆಗಲೇಬೇಕು; ಜನರು ತಾವೆಲ್ಲ ತಿಳಿದುಕೊಂಡಿದ್ದೇವೆ ಅರಿತಿರುತ್ತೇವೆ ಎಂಬ ಭ್ರಮೆಯಲ್ಲಿ ರುತ್ತೇವೆ; ಮಾಹಿತಿಯೇ ಶಕ್ತಿ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ತಾಲೂಕು ಪಂಚಾಯತ್ ಸದಸ್ಯರಾದ ಜಯರಾಂ ಪೂಜಾರಿ ಅವರು ಹೇಳಿದರು.

ಅವರಿಂದು ಪುತ್ತೂರು ತಾಲೂಕಿನ ಪುರುಷರ ಕಟ್ಟೆ ರೈತ ಸೇವಾ ಕೇಂದ್ರ ದಲ್ಲಿ ವಾರ್ತಾ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಪುತ್ತೂರು, ಗ್ರಾಮ ಪಂಚಾಯತ್ ನರಿ ಮೊಗರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಯುಕ್ತಾ ಶ್ರಯದಲ್ಲಿ ಏರ್ಪಡಿಸಲಾದ ಸ್ವಚ್ಛ ಪರಿಸರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.ಪರಿಸರ ಜಾಗೃತಿ ಇಂದಿನ ಅಗತ್ಯವಾಗಿದ್ದು, ಶೌಚಾಲಯಕ್ಕೆ ಮಾತ್ರ ಸ್ವಚ್ಛತೆ ಸೀಮಿತವಾಗಿರದೆ ಸಮಗ್ರ ಮಾಹಿತಿಯ ಮೂಲಕ ಪರಿಸರ ಜಾಗೃತಿ ಮೂಡಿಸಬೇಕಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ನ ಸಂಪೂರ್ಣ ಸ್ವಚ್ಛತಾ ಆಂದೋಲನ ಜಿಲ್ಲಾ ನೆರವು ಘಟಕದ ಮಂಜುಳಾ ಅವರು ಸ್ವಚ್ಛತೆಯ ಬಗ್ಗೆ ಸ್ವಾರ್ಥಿಗಳಾಗದೆ ನಾವು ನಮ್ಮ ಮನೆ, ಪರಿಸರದ ಬಗ್ಗೆ ಇನ್ನಷ್ಟು ಹೆಚ್ಚಿನ ಚಿಂತನೆಯನ್ನು ಮಾಡಿದರೆ ಮಾತ್ರ ನಮ್ಮ ಮುಂದಿನ ಜನಾಂಗ ಜೀವಿಸಲು ಯೋಗ್ಯವಾದ ಪರಿಸರ ಉಳಿಸಲು ಸಾಧ್ಯ ಎಂದರು. ನಿರ್ಮಲ ಗ್ರಾಮ ಪಂಚಾಯತ್ ಪುರಸ್ಕಾರವನ್ನು ನರಿಮೊಗರು ಪಂಚಾಯಿತಿ ಪಡೆದುಕೊಂಡಿದ್ದರೂ ನಿರೀಕ್ಷಿತ ಸ್ವಚ್ಛತೆ ಅನುಷ್ಠಾನ ಸಾಧ್ಯವಾಗಿಲ್ಲ ಎಂದ ಅವರು, ಪರಿಸರ, ಜಲ ಮೂಲಗಳನ್ನು ಅಶುದ್ಧ ಗೊಳಿಸುವ ಹಕ್ಕು ನಮಗಿಲ್ಲ ಎಂದರು. ವೈಯಕ್ತಿಕ ಸ್ವಚ್ಛತೆ, ಸಮು ದಾಯ ಸ್ವಚ್ಛತೆ, ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಸಮಗ್ರ ಮಾಹಿತಿ ನೀಡಿದ ಅವರು, ಹಸಿಕಸ ಮತ್ತು ಒಣಕಸ ಪ್ರತ್ಯೇಕಿಸುವ ಬಗ್ಗೆ ಹಾಗೂ ಪ್ಲಾಸ್ಟಿಕ್ ಸೌಧ ನಿರ್ಮಿಸುವ ಬಗ್ಗೆ, ಶಾಲೆ ಹಾಗೂ ಅಂಗನ ವಾಡಿಗಳಲ್ಲಿ ಎನ್ ಆರ್ ಇ ಜಿ ಎ ಯೋಜನೆಯಡಿ ಕಾಂಪೋಸ್ಟ್ ಗುಂಡಿ ನಿರ್ಮಾಣದ ಬಗ್ಗೆ ಮಾರ್ಗ ದರ್ಶನ ನೀಡಿದರು.ಅಧ್ಯಕ್ಷತೆ ವಹಿಸಿದ್ದ ನರಿಮೊಗರು ಗ್ರಾಮಪಂಚಾಯಿತಿ ಅಧ್ಯಕ್ಷರಾದ ನಳಿನಿ ಅವರು, ಸ್ವಚ್ಛ ಪರಿಸರಕ್ಕೆ ಪೂರಕವಾಗಿ ಪಂಚಾಯಿತಿ ಕೈಗೊಳ್ಳುವ ಎಲ್ಲ ಕ್ರಮಗಳನ್ನು ಬೆಂಬಲಿಸುವುದಾಗಿ ಹೇಳಿದರಲ್ಲದೆ, ನವೆಂಬರ್ ಒಳಗೆ ನರಿಮೊಗರು ಪಂಚಾಯಿತಿಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡುವ ಭರವಸೆಯನ್ನು ನೀಡಿದರು.ನವೀನ್ ರೈ ಅವರು ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾಹಿತಿಯನ್ನು ಪಾಲಿಸಿ, ಸುತ್ತಮುತ್ತಲ ವರ್ತಕರು ಪ್ಲಾಸ್ಟಿಕ್ ಮುಕ್ತ ಗ್ರಾಮಪಂಚಾಯಿತಿ ನಿರ್ಮಾಣಕ್ಕೆ ಸರ್ವ ಬೆಂಬಲ ನೀಡುವುದಾಗಿ ಹೇಳಿದರು. ರೈತ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಬಾಬು ಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣಪ್ಪ ಸಾಲಿ ಯಾನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಮೇಲ್ವಿಚಾ ರಕರಾದ ಪ್ರೇಮಾ ನಂದ ಎಲ್. ಬಿ. ವೇದಿಕೆ ಯಲ್ಲಿದ್ದರು. ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಭಾಶ್ಚಂದ್ರ ಮಲ್ಲಣ್ಣವರ್ ವಂದಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೇಖ ಕಾರ್ಯಕ್ರಮ ನಿರೂಪಿಸಿದರು. ಗಣೇಶಪುರ ಗಿರೀಶ್ ನಾವಡ ತಂಡ ದಿಂದ ಸಾವಯವ ಅಜ್ಜ ಎಂಬ ಬೀದಿ ನಾಟಕ ಮತ್ತು ಮಹಮ್ಮದ್ ಮಾರಿಪಳ್ಳ ಅವರಿಂದ ಜಾನಪದ ಸಂಗೀತ ಏರ್ಪಡಿ ಸಲಾಯಿತು.

ದ.ಕ.ದಲ್ಲಿ ನಿಷೇದಾಜ್ಞೆ, ಶಾಲಾ ಕಾಲೇಜುಗಳಿಗೆ ರಜೆ

ಮಂಗಳೂರು,ಸೆ.29: ನಾಳೆ ಅಯೋಧ್ಯಾ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಂದೋಬಸ್ತಿಗಾಗಿ 1,500 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು,ನಿಷೇದಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು. ಇಂದು ಅವರ ಕಚೇರಿಯಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಮಿಷನರ್,ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಗೃಹ ರಕ್ಷಕ ದಳ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮತ್ತು ನಾಗರಿಕ ಪೊಲೀಸರನ್ನು ಬಂದೋಬಸ್ತಿಗಾಗಿ ನಿಯುಕ್ತಿಗೊಳಿಸಲಾಗಿದೆ. ಮಂಗಳೂರಿನ ಪರಿಸ್ಥಿತಿಯನ್ನು ಅರಿತು ಹೆಚ್ಚು ಕೆಎಸ್ಆರ್ ಪಿ ತುಕಡಿಗಳನ್ನು ಸರಕಾರ ಒದಗಿಸಿದೆ. 15 ಪ್ರಹಾರ ದಳಗಳನ್ನು ಕೂಡ ಒದಗಿಸಲಾಗಿದೆ ಎಂದು ತಿಳಿಸಿದರು.

ದೈನಂದಿನ ಪೊಲೀಸ್ ವಾಹನಗಳ ಹೊರತಾಗಿ ಹೆಚ್ಚುವರಿ 20 ಗಸ್ತು ವಾಹನಗಳು ಕರ್ತವ್ಯ ನಿರ್ವಹಿಸಲಿದ್ದು, ನಗರ ವ್ಯಾಪ್ತಿಯಲ್ಲಿ 100 ವಾಹನಗಳು ಬಂದೋ ಬಸ್ತ್ ಕಾರ್ಯದಲ್ಲಿ ನೆರ ವಾಗಲಿವೆ. ಈಗಾಗಲೇ ಪೊಲೀಸ್ ಅಧಿಕಾರಿಗಳ ಸಭೆಯನ್ನು ನಡೆಸಿದ್ದು, ಅವರ ಸಲಹೆಗಳನ್ನು ಆಧರಿಸಿ ಬಂದೋಬಸ್ತಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಪೊಲೀಸ್ ಠಾಣಾ ಹಂತ ಹಾಗೂ ಜಿಲ್ಲಾ ಮಟ್ಟಗಳಲ್ಲಿ ನಡೆದ ಶಾಂತಿ ಸಭೆಗಳ ಸಲಹೆಗಳನ್ನು ಪರಿಗಣಿಸಲಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ವಿವರಿಸಿದರು.
ವಿವಿಧ ಧರ್ಮಗಳ ಹಾಗೂ ರಾಜಕೀಯ ನಾಯಕರು ಎರಡು ದಿನಗಳ ಕಾಲ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ನಗರದಲ್ಲಿದ್ದು ಪೊಲೀಸರೊಂದಿಗೆ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ನುಡಿದರು.ಮಂಗಳೂರಿನಲ್ಲಿ ಶಾಂತಿ ಕಾಪಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಒಂದಾಗಿ ಶಾಂತಿಗೆ ಕರೆ ನೀಡಿರುವುದು ಪೊಲೀಸರ ಕೆಲಸವನ್ನು ಹಗುರವಾಗಿಸಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು. ಈ ಸಂದರ್ಭದಲ್ಲಿ ಯಾವುದೇ ಗಾಳಿ ಸುದ್ದಿಗೆ ಕಿವಿಗೊಡದೆ ಶಾಂತಿ ಕಾಪಾಡಲು ನಾಗರಿಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.ಡಿಸಿಪಿಗಳಾದ ಮುತ್ತುರಾಯ,ಮತ್ತು ಆರ್.ರಮೇಶ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Monday, September 27, 2010

ಕರಾವಳಿಯಲ್ಲಿ ದಸರಾ ಜಾಥಾ

ಮಂಗಳೂರು,ಸೆಪ್ಟೆಂಬರ್27:ನಾಡ ಹಬ್ಬ ದಸರಾ 400 ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಹಿನ್ನೆಲೆಯಲ್ಲಿ ಕರಾವಳೀ ನಗರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ವಾರ್ತಾ ಇಲಾಖೆಯ ಆಶ್ರಯದಲ್ಲಿ ದಸರಾ ಜಾಥಾವನ್ನು ಆಯೋಜಿ ಸ ಲಾಗಿತ್ತು.ನಗರದ ಜಿಲ್ಲಾ ವಾರ್ತಾ ಇಲಾಖೆ ಕಚೇರಿಯ ಆವರ ಣದಲ್ಲಿ ನಡೆದ ಸರಳ ಸಮಾ ರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಮಂಗಳಾ ನಾಯ್ಕ್ ಅವರು ಜಾಥಾಕ್ಕೆ ಚಾಲನೆ ನೀಡಿದರು.ನಂತರ ಜಾನಪದ ಸಮೂಹ ನೃತ್ಯ ಮತ್ತು ಚೆಂಡೆ ವಾದನ ಗಳೊಂ ದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.

Thursday, September 23, 2010

ಅಯೋಧ್ಯೆ ತೀರ್ಪು -ಶಾಂತಿ ಕಾಪಾಡುವ ಹಿನ್ನಲೆ:ಜಿಲ್ಲಾಡಳಿತ ಹೊರಡಿಸಿದ ಆದೇಶ ರದ್ದು

ಮಂಗಳೂರು,ಸೆ.23:ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.24ರಂದು ಮಾನ್ಯ ಅಲಹಾಬಾದ್ ಉಚ್ಛ ನ್ಯಾಯಾಲಯ ತೀರ್ಪು ನೀಡುವುದನ್ನು ಸುಪ್ರೀಂ ಕೋರ್ಟ್ ತಡೆಹಿಡಿದ ಕಾರಣ ಶಾಂತಿ ಸುವ್ಯವಸ್ಥೆ ಸಂಬಂಧಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಜಾರಿಗೆ ತಂದಿದ್ದ ಎಲ್ಲ ಆದೇಶ/ಅಧಿಸೂಚನೆಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದ್ದಾರೆ.
ಸೆಕ್ಷನ್ 144, ಶಾಲಾ-ಕಾಲೇಜುಗಳಿಗೆ ರಜೆ, ಮದ್ಯದಂಗಡಿ, ಪಟಾಕಿಯಂಗಡಿ ಬಂದ್, ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ ಸೇರಿದಂತೆ ಎಲ್ಲ ಆದೇಶ ಅಧಿಸೂಚನೆಗಳು ರದ್ದಾಗಿವೆ.

ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ಮಂಗಳೂರು,ಸೆ.23:ಶಿವ ಮೊಗ್ಗದ 'ಛಾಯಾ ಚೇತನ' ಹವ್ಯಾಸಿ ಚಿತ್ರ ಗ್ರಾಹ ಕರ ಬಳಗ ಪ್ರಥಮ ಬಾರಿಗೆ ಏರ್ಪ ಡಿಸಿದ್ದ ರಾಜ್ಯ ಮಟ್ಟದ ಛಾಯಾ ಚಿತ್ರ ಸ್ಪರ್ಧೆಯಲ್ಲಿ ವಿಜಯ ಕರ್ನಾಟಕ ಮಂಗಳೂರು ಆವೃತಿಯ ಛಾಯಾ ಗ್ರಾಹಕ ಸುಧಾಕರ ಎರ್ಮಾಳ್ ಅವರಿಗೆ ದ್ವಿತೀಯ ಸ್ಥಾನ ಲಭಿಸಿದೆ. ಸ್ಪರ್ಧೆಯ ಗ್ರಾಮೀಣ ಜೀವನ ವಿಭಾಗ ದಲ್ಲಿ ಸುಧಾಕರ ಎರ್ಮಾಳ್ ಅವರ ಉಳುವ ಯೋಗಿ ಛಾಯಾ ಚಿತ್ರ ದ್ವಿ ತೀಯ ಬಹು ಮಾನಕ್ಕೆ ಆಯ್ಕೆ ಯಾಗಿದೆ.

ಶಾಂತಿ -ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಸಜ್ಜು

ಮಂಗಳೂರು,ಸೆ.23:ಅಯೋಧ್ಯೆಯ ವಿವಾದಿತ ಕಟ್ಟಡ ಜಾಗದ ಕುರಿತ ನ್ಯಾಯಾಲಯದ ತೀರ್ಪನ್ನು ಪ್ರತಿಯೊಬ್ಬ ಪ್ರಜೆಯೂ ಗೌರವಿಸಬೇಕು ಹಾಗೂ ಸಾಮಾಜಿಕ ಜೀವನ ಏರುಪೇರುಗೊಳ್ಳದಂತೆ ಪ್ರಜಾಪ್ರಭುತ್ವಕ್ಕೆ ಬದ್ದರಾಗಿರಬೇಕು ಎಂಬ ಸಂದೇಶಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಜಿಲ್ಲಾಡಳಿತ ಮತ್ತೆ ಮತ್ತೆ ಸಾರಿ ಹೇಳುತ್ತಿದೆ.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಸ್ಟೇಷನ್ ವ್ಯಾಪ್ತಿ ಯಿಂದ ಹಿಡಿದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವ ದಲ್ಲಿ ಜಿಲ್ಲಾ ಮಟ್ಟದ ವರೆಗೆ ಹಲವು ಸುತ್ತಿನ ಶಾಂತಿ ಸಭೆಗಳು ನಡೆದಿದ್ದು, ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆ ಗಳ ಮುಖಂಡರು ವಿನಂತಿ ಗಳನ್ನು ಪ್ರಕಟಿಸಿ ದ್ದಾರೆ. ಎಲ್ಲರೂ ಶಾಂತಿ ಯನ್ನು ಪ್ರತಿ ಪಾದಿಸು ತ್ತಿದ್ದು, ಶಾಂತಿ ಹಾಗೂ ಸು ವ್ಯವಸ್ಥೆಗೆ ಧಕ್ಕೆ ಬಾರ ದಂತೆ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್, ಪೊಲೀಸ್ ಅಧೀಕ್ಷಕರು ಸೂಕ್ತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 24 ಮತ್ತು 25 ರಂದು ಅಂಗನವಾಡಿ ಮಕ್ಕಳಿಂದ ಹಿಡಿದು ವೈದ್ಯಕೀಯ,ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆಯನ್ನು ಸಾರಿದೆ. 23ರ ಸಂಜೆಯಿಂದ 26 ಬೆಳಗ್ಗೆವರೆಗೆ 144 ನೇ ಸೆಕ್ಷನ್ ಅನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. 24ರ ಬೆಳಗ್ಗೆ 6 ಗಂಟೆಯಿಂದ 26 ಸಂಜೆ ಮಧ್ಯರಾತ್ರಿವರೆಗೆ ಜಿಲ್ಲೆಯಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಪಟಾಕಿ ಅಂಗಡಿಗಳನ್ನು ಮುಚ್ಚಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಕೇರಳ ರಾಜ್ಯ ಸಂಪರ್ಕಿಸುವ ಜಿಲ್ಲೆಯ ಗಡಿ ಭಾಗಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ಮತ್ತು ಕಟ್ಟೆಚ್ಚರ ಘೋಷಿಸಲಾಗಿದೆ.ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ, ಅನುದಾನಿತ ಕಾಲೇಜುಗಳು,ವೈದ್ಯಕೀಯ, ತಾಂತ್ರಿಕ ಕಾಲೇಜುಗಳು, ಕೇಂದ್ರೀಯ ವಿದ್ಯಾಲಯಗಳು, ಎಲ್ಲಾ ಶಿಕ್ಷಣ ಸಂಸ್ಥೆಗಳು,ಅಂಗನವಾಡಿ ಕೇಂದ್ರ ಗಳಿಗೆ ಜಿಲ್ಲಾಧಿ ಕಾರಿಗಳು ಹಾಗೂ ಜಿಲ್ಲಾ ದಂಡಾ ಧಿಕಾ ರಿಗಳು ಆಗಿರುವ ಪೊನ್ನು ರಾಜ್ ಅವರು ರಜೆ ಘೋಷಿಸಿ ಆದೇಶ ಹೊರಡಿ ಸಿದ್ದಾರೆ.23 ರಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಬಂದೋ ಬಸ್ತ್ ಸಂಬಂಧ ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ, ಶಾಂತಿ, ಸು ವ್ಯವಸ್ಥೆಗೆ ಸಂಬಂಧಿ ಸಿದಂತೆ ಕಮಿಷ ನರೇಟ್ ವ್ಯಾಪ್ತಿಯಲ್ಲಿ 1500 ಪೊಲೀಸರನ್ನು ನಿಯೋಜಿ ಸಲಾಗಿದ್ದು, 100 ಹೆಚ್ಚುವರಿ ಗಸ್ತು ವಾಹನ,ಕೆ ಎಸ್ ಆರ್ ಪಿ 5 ತುಕಡಿ, ಹೋಮ್ ಗಾರ್ಡ್ಸ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪ್ರಹಾರ ದಳವನ್ನು ನಿಯೋಜಿ ಸಲಾಗಿದೆ. ಸಾರ್ವ ಜನಿಕರಲ್ಲಿ ಸುರಕ್ಷಾ ಭಾವನೆ ಮೂಡಿಸಲು ಪೊಲೀಸ್ ಇಲಾಖೆ ಎಸ್ ಎಂ ಎಸ್ ಮೂಲಕ ಸಕರಾ ತ್ಮಕ ಸಂದೇಶ ಹಾಗೂ ರೂಟ್ ಮಾರ್ಚ್ ಗಳನ್ನು ಈಗಾಗಲೇ ಆರಂಭಿಸಿದೆ. ಸ್ಥಳೀಯ ಮುಖಂಡ ರೆಲ್ಲರೂ ಸ್ಥಳದಲ್ಲಿದ್ದು ಶಾಂತಿ ಕಾಪಾಡಲು ಸಹಕರಿಸುವ ಭರವಸೆ ಯನ್ನು ಜಿಲ್ಲಾ ಡಳಿತಕ್ಕೆ ನೀಡಿದ್ದಾರೆ ಎಂದೂ ಕಮಿಷನರ್ ತಿಳಿಸಿದರು. ಯಾವುದೇ ಗಾಳಿ ಸುದ್ದಿ ಮತ್ತು ವದಂತಿ ಗಳಿಗೆ ಕಿವಿ ಕೊಡ ಬಾರದೆಂದು ಸಾರ್ವ ಜನಿಕರಲ್ಲಿ ಮನವಿ ಮಾಡಿರುವ ಅವರು ಅ ಸುರಕ್ಷತಾ ಸಂದರ್ಭ ಹಾಗೂ ಮಾಹಿತಿ ನೀಡಲು 100 ಅಥವಾ 2220800 ದೂರ ವಾಣಿ ಸಂಖ್ಯೆ ಯನ್ನು ಅಥವಾ ಕಮಿಷನರ್ ಮೊಬೈಲ್ 9480805952,ಉಪ ಪೊಲೀಸ್ ಆಯುಕ್ತರು 5962, ಡಿಸಿಪಿ-2 5963 ಸಂಪರ್ಕಿಸ ಬಹುದೆಂದು ಹೇಳಿದ್ದಾರೆ.

Tuesday, September 21, 2010

ಜಿಲ್ಲಾ ರಂಗಮಂದಿರ ಕಾಮಗಾರಿ ಆರಂಭಿಸಲು ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು,ಸೆ.21: ದಕ್ಷಿಣ ಕನ್ನಡ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಬೋಂದೆಲ್ ನಲ್ಲಿ 8 ರಿಂದ 9 ಎಕರೆ ಜಮೀನು ಲಭ್ಯವಿದ್ದು, 90x100 ಮೀಟರ್ ಕಟ್ಟಡ ನಿರ್ಮಾಣಕ್ಕೆ, ವಾಹನ ಪಾರ್ಕಿಂಗ್, ಹೂತೋಟ ಸೇರಿದಂತೆ ಸುಸ್ಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಸೂಚನೆ ನೀಡಿದರು.
ಬೋಂದೆಲ್ ನಲ್ಲಿ ವಿಮಾನ ನಿಲ್ದಾಣಕ್ಕೆ ರಸ್ತೆಗೆ ಹೊಂದಿ ಕೊಂಡಂತೆ ರಂಗಮಂದಿರ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಕೆಲವು ವಸತಿ ಗೃಹಗಳನ್ನು ಸ್ಥಳಾಂತರ ಮಾಡಲು ಇಲಾಖೆಯ ಅಧೀಕ್ಷಕ ಇಂಜಿನಿಯರ್ ಬಾಲಕೃಷ್ಣ ಅವರು ಸಮ್ಮತಿಸಿದರು. ಇದೇ ಜಾಗದಲ್ಲಿ ಎನ್ ಸಿಸಿ ಯವರಿಗೂ ನೀಡಲು ಉದ್ದೇಶಿಸಿರುವ ಎರಡು ಎಕರೆ ಜಮೀನನ್ನು ಪಕ್ಕದಲ್ಲೇ ನೀಡಲು ನಿರ್ಧರಿಸಲಾಯಿತು. ಕಳೆದ 25 ವರ್ಷದಿಂದ ರಂಗಮಂದಿರ ನಿರ್ಮಾಣದ ನಿರೀಕ್ಷೆಯಲ್ಲಿದ್ದೇವೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಡಾ. ವಾಮನ ನಂದಾವರ ಹಾಗೂ ಡಾ. ನಾ.ದಾಮೋದರ ಶೆಟ್ಟಿ ಹೇಳಿದರು. ಆದಷ್ಟು ಶೀಘ್ರದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ ಆರಂಭವಾಗ ಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಶಾಸಕರಾದ ಎನ್. ಯೋಗೀಶ್ ಭಟ್, ಯು ಟಿ ಖಾದರ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ಡಾ. ಹರೀಶ್ ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ . ನಾಗೇಶ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಳಾ ವೆಂ. ನಾಯಕ್ ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಮತ್ತಿತರರು ಪಾಲ್ಗೊಂಡಿದ್ದರು.

ನದಿಮುಖೀ ಯೋಜನೆಗೆ ಚಾಲನೆ ನೀಡಲು ಸಭೆ

ಮಂಗಳೂರು, ಸೆ.21: ಮಂಗಳೂರು ನಗರದಲ್ಲಿ ನದೀಮುಖಿ ಯೋಜನೆಯನ್ನು ಗುಜರಾತ್ ಟೌನ್ ಪ್ಲಾನಿಂಗ್ ಸ್ಕೀಮ್ ಮಾದರಿಯಲ್ಲಿ ಜಾರಿಗೆ ತರುವ ಸಂಬಂಧ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ತಾಂತ್ರಿಕ ಸಮಿತಿ ಸಭೆ ನಡೆಸಲಾಯಿತು.
ಶಾಸಕರು ಮತ್ತು ಕೆ ಎಸ್ ಐ ಐ ಡಿ ಸಿಯ ಅಧ್ಯಕ್ಷರಾದ ಎನ್. ಯೋಗೀಶ್ ಭಟ್, ಕೆ ಎಸ್ ಐ ಐ ಡಿ ಸಿ ವ್ಯವಸ್ಥಾಪಕ ನಿರ್ದೇಶ ಕರಾದ ವಂದಿತಾ ಶರ್ಮಾ ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಡಿಸೈನ್ ಪ್ಲಾನಿಂಗ್ ಕೌನ್ಸಿಲ್ ಅಹ್ಮದಾಬಾದ್, ಇನ್ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಫೌಂಡೇಷನ್ ಮಂಗಳೂರು ಇವರು ಯೋಜನೆಯ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಮಾಹಿತಿ ನೀಡಿದರು. ಸಾರ್ವಜನಿಕ ಮತ್ತುಇ ಖಾಸಾಗಿ ಸಹಭಾಗಿತ್ವದ ಯೋಜನೆಯಡಿ ಮಂಗಳೂರಿನಲ್ಲೂ ನಗರ ಯೋಜನೆ ರೂಪಿಸುವುದು ಶಾಸಕರ ಬಹಳ ವರ್ಷಗಳ ಕನಸಾಗಿದ್ದು, ಈ ಸಂಬಂಧ ಇಂದು ಮಂಗಳೂರಿನಲ್ಲಿ ಜರುಗಿದ ಸಭೆ ಎರಡನೆಯದು. ಈ ಸಂಬಂಧ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಜರುಗಿದ ಪ್ರಥಮ ಸಭೆಯ ಬಗ್ಗೆ ಶಾಸಕರಾದ ಎನ್ ಯೋಗೀಶ್ ಭಟ್ ಅವರು ಮಾಹಿತಿ ನೀಡಿದರು.
ಈ ಯೋಜನೆ ದೇಶದ ಪ್ರಮುಖ ನದಿ ಮುಖೀ ಯೋಜನೆ ಗಳಲ್ಲೊಂ ದಾಗು ವಂತೆ ರೂಪಿಸಲು ತಾಂತ್ರಿಕತೆ ಸೇರಿ ದಂತೆ ಎಲ್ಲ ಪರಿ ಶ್ರಮ ಗಳನ್ನು ಪರಿಣತ ರಿಂದ ಪಡೆದು ಯೋಜನೆ ಅನುಷ್ಠಾ ನಕ್ಕೆ ತರಲಾ ಗುವುದು ಎಂದು ಶಾಸಕರು ತಿಳಿಸಿದರು. ಮಂಗಳೂ ರಿನ ಉಳ್ಳಾಲ-ಕೂಳೂರು-ಮರವೂರು-ಗುರುಪುರ-ಕಣ್ಣೂರು, ಮತ್ತೆ ಉಳ್ಳಾಲ ದವರೆಗೆ ಕೆ ಎಸ್ ಐ ಐ ಡಿ ಸಿ ನೇತೃತ್ವ ದಲ್ಲಿ ಸಮಗ್ರ ಸಮೀಕ್ಷೆ ನಡೆಸಲು ಸಭೆಯಲ್ಲಿ ನಿರ್ಧರಿ ಸಲಾಯಿತು. 30 ಕಿ.ಮೀ ವರ್ತುಲ ರಸ್ತೆಗೆ ಗುರುಪುರ ದವರೆಗೆ ನೆಕ್ಲೆಸ್ ಮಾದರಿಯಲ್ಲಿ ಯೋಜನೆ ಜಾರಿಗೆ ಬರಲಿದ್ದು ಮೂರು ರಾಷ್ಟ್ರೀಯ ಹೆದ್ದಾರಿ ಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯ ವಾಗಲಿದೆ. ಈ ಬಗ್ಗೆ ಸಮಗ್ರ ಮಾಹಿತಿ ಹಾಗೂ ಇಲಾಖಾ ಸಮನ್ವಯತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಯೋಜನೆಯ ಜಾರಿಗೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ಒಂದು ವಿಶೇಷ ಉದ್ದೇಶಿತ ಕೋಶವನ್ನು (ಸೆಲ್) ತೆರೆಯಲಾಗಿದ್ದು, ಮಂಗಳಾ ಕಾರ್ನಿಷ್ ಯೋಜನೆ ಅನುಷ್ಠಾನ ಸಮಿತಿಗೆ ಜಿಲ್ಲಾಧಿಕಾರಿಗಳು ಅನುಷ್ಠಾನಾಧಿಕಾರಿಗಳಾಗಿರುತ್ತಾರೆ. ಸಮಿತಿ ಸಂಬಂಧಪಟ್ಟ ಇಲಾಖಾ ಪ್ರಮುಖರನ್ನೊಳಗೊಂಡಿರುತ್ತದೆ.ಮೂಡಾ, ಕರಾವಳಿ ಅಭಿವೃದ್ಧಿ ಪ್ರಾಧಿ ಕಾರ ಮತ್ತು ಮಹಾ ನಗರ ಪಾಲಿಕೆ ಯನ್ನೊಳ ಗೊಂಡು ನಗರಾ ಭಿವೃದ್ಧಿ ಯೋಜನೆ ಯಡಿ ನಿನ್ನೆ ಮೂಡಾ ದಲ್ಲಿ ವಿಶೇಷ ಸಭೆ ಈ ಸಂಬಂಧ ನಡೆಸ ಲಾಗಿದೆ ಯೋಜನೆ ಯನ್ನು ಸಮರ್ಪ ಕವಾಗಿ ಅನು ಷ್ಠಾನಕ್ಕೆ ತರುವ ಬಗ್ಗೆ ವಿವಿಧ ಇಲಾಖೆ ಗಳಿಗೆ ನಿರ್ದಿಷ್ಟ ಹೊಣೆ ವಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಮೂಡಾ ಅಧ್ಯಕ್ಷ ಮಾಧವ ಭಂಡಾರಿ, ಪಾಲಿಕೆ ಕಮಿಷನರ್ ಡಾ. ಕೆ. ಎನ್. ವಿಜಯಪ್ರಕಾಶ್, ಲೋಕೋಪಯೋಗಿ ಇಂಜಿನಿಯರ್ ಬಾಲಕೃಷ್ಣ, ಮೂಡಾ ಕಮಿಷನರ್ ಮಧುಕರ್ ಗಡ್ಕರ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೇರಳಕ್ಕೆ ಅಕ್ರಮ ಮರಳು ಸಾಗಾಣಿಕೆ ತಡೆಗೆ ಕಠಿಣ ಕ್ರಮ: ಕೃಷ್ಣ ಪಾಲೆಮಾರ್

ಮಂಗಳೂರು, ಸೆ.21:ದಕ್ಷಿಣ ಕನ್ನಡ ಜಿಲ್ಲೆಯಿಂದ ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಾಣಿಕೆ ತಡೆಯಲು ಹಾಗೂ ಈ ಎಲ್ಲ ಬೆಳವಣಿಗೆಗಳಿಂದ ಸ್ಥಳೀಯ ಜನಸಾಮಾನ್ಯರಿಗಾಗುತ್ತಿರುವ ಕಷ್ಟ ನಷ್ಟವನ್ನು ತಡೆಯಲು ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಿದ ಸುದೀರ್ಘ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿತು.
ಅಕ್ರಮ ಮರಳು ಸಾಗಾ ಣಿಕೆಯ ಬಗ್ಗೆ ಸಮಗ್ರ ಮಾಹಿತಿ ಜಿಲ್ಲಾಡ ಳಿತಕ್ಕೆ ಲಭ್ಯವಿದ್ದು, ಅಕ್ರಮ ತಡೆಗೆ ಕಠಿಣ ಹಾಗೂ ಸ್ಥಿರ ನಿರ್ಧಾ ರವನ್ನು ಜಿಲ್ಲಾ ಡಳಿತ ತೆಗೆದು ಕೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೇಮಾರ್ ತಿಳಿಸಿ ದರು.ಈ ಸಂಬಂಧ ಎಲ್ಲರ ಜೊತೆಗೆ ಸುದೀರ್ಘ ಚರ್ಚೆಯ ಬಳಿಕ ನಡೆದ ಅಧಿ ಕಾರಿಗಳ ಸಭೆಯನ್ನು ದ್ದೇಶಿಸಿ ಮಾತ ನಾಡಿದ ಸಚಿವರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಜನಪರ ನಿರ್ಧಾರ ಗಳನ್ನು ಅನು ಷ್ಠಾನಕ್ಕೆ ತರಲಾ ಗದಿದ್ದರೇ ಸರ್ಕಾರದ ಮಟ್ಟದಲ್ಲೇ ಸೂಕ್ತ ನಿರ್ಣಯ ಜಾರಿಗೆ ತಂದು ಅನು ಷ್ಠಾನಕ್ಕೆ ತರಲು ನಿರ್ಧರಿಸಿ ರುವು ದಾಗಿಯೂ ಹೇಳಿದರು. ಗಣಿ ಮತ್ತು ಅದಿರು ಇಲಾಖೆ,ಪೊಲೀಸ್, ಸಾರಿಗೆ, ಅರಣ್ಯ ಹಾಗೂ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಗಳು ಸಂಯುಕ್ತವಾಗಿ ಸೂಕ್ರ ಕ್ರಮ ಕೈಗೊಳ್ಳುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಯಿತು. ತಲಪಾಡಿ, ಉಕ್ಕುಡ, ಸಂಪಾಜೆ, ಸಾರಡ್ಕ, ಜಾಲ್ಸೂರು ಸೇರಿದಂತೆ ಅಕ್ರಮ ಮರಳು ಸಾಗಾಣಿಕೆಯಾಗುವ ಕಡೆ ಪೊಲೀಸ್ ಇಲಾಖೆ ನೆರವಿನೊಂದಿಗೆ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಪಹರೆಯನ್ನು ಹಾಕಲಾಗುವುದು. ದಂಡ ವಿಧಿಸದೆ ಮರಳು ಸಾಗಾಣಿಕೆ ವಾಹನಗಳನ್ನು ಮುಟ್ಟುಗೋಲು ಹಾಕುವ ಬಗ್ಗೆಯೂ ಸಭೆ ನಿರ್ಧರಿಸಿತು.ಸುವ್ಯವಸ್ಥೆಗೆ ಪೂರಕವಾಗಿ ಹಾಗೂ ಜನ ಸಾಮಾನ್ಯರಿಗೆ ನೆರವಾಗಲು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ರೂಪಿಸಲಾಗಿರುವ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಗೆ ಸಮಗ್ರ ಮಾಹಿತಿಯನ್ನು ನೀಡಿದರು. ಜಂಟಿ ಕಾರ್ಯಪಡೆ ಗಳ ರಚನೆ ಸೇರಿದಂತೆ ಜಿಲ್ಲೆಯ ಪರಿಸರ ಹಾಗೂ ಮರಳನ್ನು ರಕ್ಷಿಸಲು ಅಗತ್ಯ ಕ್ರಮಕೈಗೊಳ್ಳುವ ನಿರ್ಧಾರಕ್ಕೆ ಬರಲಾಯಿತು. ಶಾಸಕರಾದ ಎನ್.ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಪೊಲೀಸ್ ಅಧೀಕ್ಷಕರಾದ ಡಾ. ಎ. ಸುಬ್ರಮಣ್ಯೇಶ್ವರ ರಾವ್,ಗಣಿ ಉಪನಿರ್ದೇಶಕ ಡಾ. ರವೀಂದ್ರ, ಡಿಸಿಎಫ್ ವಿಜಯಕುಮಾರ್ ಶೆಟ್ಟಿ, ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ, ಹರೀಶ್ ಕುಮಾರ್, ಆರ್ ಟಿ ಒ ಸೇವಾ ನಾಯಕ್, ಬಂಟ್ವಾಳ, ಪುತ್ತೂರು ಸಬ್ ಇನ್ಸ್ ಪೆಕ್ಟರ್, ಬಂಟ್ವಾಳ ತಹಸೀಲ್ದಾರ್ ರವಿಚಂದ್ರ ನಾಯಕ್, ಮಂಗಳೂರು ತಹಸೀಲ್ದಾರ್ ಮಂಜುನಾಥ್, ಎಸಿಪಿಗಳಾದ ಮುತ್ತುರಾಯ,ಬಿ.ಜಿ.ಭಂಡಾರಿ, ಅವರು ಸಭೆಯಲ್ಲಿ ಪಾಲ್ಗೊಂಡರು.

ಕೊಟ್ಟ ಮಾತಿಗೆ ಬದ್ಧರಾಗಿ: ಜಿಲ್ಲಾಧಿಕಾರಿ

ಮಂಗಳೂರು,ಸೆ.21:ಸಾಮಾಜಿಕ ಸೌಹಾರ್ದತೆ ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಪ್ರತಿಯೊಬ್ಬ ಪ್ರಜೆಯೂ ಹೊಣೆಯರಿತು ವರ್ತಿಸಬೇಕು ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಹೇಳಿದರು. ಅವರು ಸೆ.20ರಂದು ಸಂಜೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾದ ಶಾಂತಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಶಾಂತಿ ಸಮಿತಿ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಮಾತಿಗೆ ಬದ್ಧರಾಗಿ ಎಂಬ ಸಂದೇಶವನ್ನು ಜಿಲ್ಲಾಧಿಕಾರಿಗಳು ನೀಡಿದರು.ಸಭೆಯನ್ನು ಉದ್ದೇಶಿಸಿ ಮಾತ ನಾಡಿದ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಸಂಭ್ರಮಾ ಚರಣೆಯ ಮೆರವಣಿಗೆ, ಪ್ರತಿಭಟನಾ ಮೆರವಣಿ ಗೆಗಳಿಗೆ ಅವ ಕಾಶವಿಲ್ಲ. ಸೆ.23 ರ ಸಂಜೆಯಿಂದ 26 ಮುಂಜಾನೆಯವರೆಗೆ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯ ಲ್ಲಿರುತ್ತದೆ. ಅಹಿತಕರ ಘಟನೆ ತಡೆಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದ್ದು, ಮೊಬೈಲ್ ನಲ್ಲಿ ಸುರಕ್ಷಾ ಸಂದೇಶ ಗಳನ್ನು ಪೊಲೀಸ್ ಇಲಾಖೆ ಬಿತ್ತರಿಸಲಿದೆ ಎಂದರು. ಶಾಲಾ ಮಕ್ಕಳಿಗೆ ಪರೀಕ್ಷಾ ಸಮಯ ಇದಾಗಿದ್ದು,ಪೊಲೀಸ್ ಇಲಾಖೆ ಎಲ್ಲರ ಸುರಕ್ಷೆ ಯನ್ನು ಗಮನ ದಲ್ಲಿರಿಸಿ ಕ್ರಮ ಕೈ ಗೊಂಡಿದೆ ಎಂದರು.ಪೊಲೀಸ್ ಇಲಾಖೆ, ಜಿಲ್ಲಾಡ ಳಿತದ ಮೇಲೆ ಜನರಿ ಟ್ಟಿರುವ ವಿಶ್ವಾಸ ವನ್ನು ಉಳಿಸಿ ಕೊಳ್ಳು ವುದಾಗಿ ಜಿಲ್ಲಾ ಎಸ್ ಪಿ ಡಾ. ಸುಬ್ರಮ ಣ್ಯೇಶ್ವರ ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾದ ಕೃಷ್ಣ ಜೆ ಪಾಲೆಮಾರ್ ಅವರು, ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡಲು ಕಠಿಣ ನಿರ್ಧಾರ ತೆಗೆದುಕೊಳ್ಳುವ ಎಲ್ಲ ಅಧಿಕಾರ ವನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಕಾನೂನು ಪಾಲನೆಗೆ ಪ್ರತಿಯೊ ಬ್ಬರು ಬದ್ಧರಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು. ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಅಪರ ಜಿಲ್ಲಾ ಧಿಕಾರಿ ಪ್ರಭಾಕರ ಶರ್ಮಾ, ಶಾಸಕ ರಾದ ಯೋಗೀಶ್ ಭಟ್, ಯು ಟಿ ಖಾದರ್, ಅಧಿಕಾರಿಗಳು ಸಂಘ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡರು.

Wednesday, September 15, 2010

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಅಭಿವೃದ್ಧಿಗೆ 1.50 ಕೋಟಿ: ಪ್ರೊ.ಶಿವಶಂಕರಮೂರ್ತಿ

ಮಂಗಳೂರು ಸೆಪ್ಟೆಂಬರ್ 15: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಡಿ ಬರುವ ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ವಿಶ್ವ ವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ದ ನೆರವಿನಡಿ ಉತ್ತಮ ಕಟ್ಟಡ ಹಾಗೂ ಮೂಲಭೂತ ಸೌಕರ್ಯಕ್ಕೆ ಯೋಜನೆ ರೂಪಿಸಿದ್ದು, 1.50 ಕೋಟಿ ರೂ.ಗಳಲ್ಲಿ ಮುಂದಿನ ವರ್ಷ ಈ ವೇಳೆಗೆ ಕಾಲೇಜಿಗೆ ಉತ್ತಮ ಗ್ರಂಥಾಲಯ, ಮಹಿಳೆಯರ ಹಾಸ್ಟೆಲ್ ಲಭ್ಯವಾಗಲಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಟಿ ಸಿ ಶಿವಶಂಕರಮೂರ್ತಿ ಹೇಳಿದರು.ಅವ ರಿಂದು ಎನ್ ಐ ಟಿಕೆಯಲ್ಲಿ ಸೃಜನಿಕ ಕಾರ್ಯಕ್ರಮದ ಬಳಿಕ ಪತ್ರಕರ್ತ ರೊಂದಿಗೆ ವಿಶ್ವ ವಿದ್ಯಾನಿಲಯ ರೂಪಿಸಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸುತ್ತಿದ್ದರು. ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಆಗಸ್ಟ್ 28ರಂದು ನಡೆದ ಸಭೆಯಲ್ಲಿ ಈ ಕುರಿತು ಒಪ್ಪಿಗೆ ನೀಡಿದ್ದು ಕಾಲೇಜಿನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳ ಲಾಗುವುದು ಎಂದರು.
ಕೊಡಗಿನ ಕುಶಾಲ ನಗರದಿಂದ 12 ಕಿ.ಮೀ ದೂರದಲ್ಲಿರುವ ಚಿಕ್ಕಾಳ್ವದಲ್ಲಿರುವ ಸ್ನಾತಕೋತ್ತರ ಪದವಿಕೇಂದ್ರವನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, ಸರಕಾರ 70.4 ಎಕರೆ ಭೂಮಿಯನ್ನು ನೀಡಿದೆ ಹಾಗೂ ಅದರ ಪಕ್ಕದಲ್ಲೇ ಇರುವ 30 ಎಕರೆ ಜಮೀನನ್ನು ನೀಡಲು ಒಪ್ಪಿದೆ ಎಂದ ಕುಲಪತಿಗಳು, ಪ್ರಸ್ತುತ ಇಲ್ಲಿ ಮೈಕ್ರೊ ಬಯಾಲಜಿ ಮತ್ತು ಬಯೋಕೆಮಿಸ್ಟ್ರಿ ಕೇಂದ್ರಗಳಿದ್ದು, ಮೂಲಭೂತ ಸೌಕರ್ಯಗಳ ನಿಮರ್ಾಣದ ಬಳಿಕ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗಗಳನ್ನು ಆರಂಭಿಸಲಾಗುವುದು ಎಂದರು. ವಿಶ್ವವಿದ್ಯಾನಿಲಯ ಇದಕ್ಕಾಗಿ 8 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದು 2 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 27ರಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರು ನೂತನ ಪಿಜಿ ಕೇಂದ್ರದ ಶಿಲಾನ್ಯಾಸವನ್ನು ಮಾಡಲಿರುವರು ಎಂದರು.
ವಿದ್ಯಾರ್ಥಿಗಳ ಹಿತರಕ್ಷಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ವಿಶ್ವ ವಿದ್ಯಾಲಯ ಬದ್ಧ ಎಂಬುದನ್ನು ಅವರು ಈ ಸಂದರ್ಭದಲ್ಲ ಪುನರುಚ್ಛರಿಸಿದರು.

ಕುತೂಹಲ ಆವಿಷ್ಕಾರಕ್ಕೆ ನಾಂದಿ: ಪ್ರೊ ಶಿವಶಂಕರಮೂರ್ತಿ

ಮಂಗಳೂರು,ಸೆಪ್ಟೆಂಬರ್15:ನಮ್ಮ ಶಿಕ್ಷಣ, ಶೈಕ್ಷಣಿಕ ವ್ಯವಸ್ಥೆ, ಸಂಶೋಧನೆಗಳು ಸದುದ್ದೇಶದ ಗುರಿಯೊಂದಿಗೆ ಸಾಧನೆಯತ್ತ ಕ್ರಮಿಸುವಂತಾಗಲಿ; ಇದರಿಂದ ದೇಶ ಅಭಿವೃದ್ಧಿ ಹೊಂದಲಿ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ ಟಿ.ಸಿ ಶಿವಶಂಕರಮೂರ್ತಿ ಹೇಳಿದರು.
ಸುರತ್ಕಲ್ ನ ಎನ್ ಐ ಟಿ ಕೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ರಾಷ್ಟ್ರೀಯ ತಾಂತ್ರಿಕ ಮಹಾ ವಿದ್ಯಾಲಯ, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಯುಕ್ತ ಸಹ ಯೋಗದಲ್ಲಿ ಪ್ರೌಢಶಾಲಾ ಮಕ್ಕಳು ಮತ್ತು ಪ್ರಾಧ್ಯಾ ಪಕರಿಗಾಗಿ ಏರ್ಪಡಿಸಿದ 'ಸೃಜನಿಕ' ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರಿಂದು ಮಾತನಾ ಡುತ್ತಿದ್ದರು.

ನಮ್ಮ ಶೈಕ್ಷಣಿಕ ಪರಿಸರ ವಿದ್ಯಾರ್ಥಿ ಗಳಲ್ಲಿ ವಿಜ್ಞಾನದ ಬಗ್ಗೆ, ಸಂಶೋ ಧನೆ ಬಗ್ಗೆ ಕುತೂಹಲ ಮೂಡಿಸು ವಂತಿ ರಬೇಕು; ಇಂದು ಮೂಲ ವಿಜ್ಞಾನದ ಬಗ್ಗೆ ವಿದ್ಯಾ ರ್ಥಿಗಳ ಆಸಕ್ತಿ ಕುಂದಿದ್ದು, ಶೇಕಡ 19ರಷ್ಟು ವಿದ್ಯಾರ್ಥಿ ಗಳು ಮಾತ್ರ ಮೂಲ ವಿಜ್ಞಾನ ವನ್ನು ಆಯ್ಕೆ ಮಾಡು ತ್ತಿರುವ ಬಗ್ಗೆ ಕುಲ ಪತಿಗಳು ಬೇಸರ ವ್ಯಕ್ತ ಪಡಿಸಿದರು. ನಾವಿಂದು ವೈಜ್ಞಾನಿಕ ಕ್ಷೇತ್ರದಲ್ಲಿ ಹಲವು ಸಾಧನೆ ಗಳನ್ನು ಮಾಡಿದ್ದೇ ವಾದರೂ ಕ್ರಮಿಸ ಬೇಕಾದ ಹಾದಿ ಬಹಳವಿದೆ; ಸವಾ ಲುಗಳು ಸಾಕ ಷ್ಟಿವೆ ಎಂದ ಕುಲ ಪತಿಗಳು, ವಿಜ್ಞಾನಿಗಳು, ಜ್ಞಾನಿಗಳು ಹಾಗೂ ತರಬೇತಿ ಹೊಂದಿದ ಕೌಶಲ್ಯ ಪಡೆದ ಮಾನವ ಸಂಪ ನ್ಮೂಲದ ಅಗತ್ಯ ವನ್ನು ಪ್ರತಿ ಪಾದಿ ಸಿದರು.ದೇಶ ಸ್ವಾತಂತ್ರ್ಯ ಪಡೆದು ಹಲವು ವರ್ಷ ಗಳಾದರೂ ಅನಕ್ಷರತೆ, ಜನ ಸಂಖ್ಯಾ ಸ್ಫೋಟ, ಪೌಷ್ಠಿ ಕಾಂಶ ಕೊರತೆ ನಮ್ಮ ಮುಂದಿನ ಪ್ರಮುಖ ಸವಾಲು ಗಳು, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಗಳಿಂದ ಭಾರತ ಸ್ವಾವ ಲಂಬಿ ಯಾಗಿದೆ. ಬಾಹ್ಯಾಕಾಶ, ಪರಮಾಣು ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರ ಗಳಲ್ಲೂ ದೇಶ ಇಂದು ದಾಖಲಿ ಸಿರುವ ಆರ್ಥಿಕ ಬೆಳವಣಿಗೆ ನಮ್ಮ ವಿಜ್ಞಾನಿಗಳು ಎಲ್ಲ ಕ್ಷೇತ್ರಕ್ಕೂ ನೀಡಿದ ಕೊಡುಗೆಯ ಫಲ ಎಂದರು. ಸೃಜನಿಕೆ ಕಾರ್ಯಾ ಗಾರ ಮಕ್ಕಳಲ್ಲಿ, ಶಿಕ್ಷಕರಲ್ಲಿ ವೈಜ್ಞಾನಿಕ ದೃಷ್ಟಿಯನ್ನು ಕಲಿಯುವಿಕೆ ಯಲ್ಲಿ ಅಳವಡಿಸಲು ನೆರ ವಾಗಲಿ ಎಂದು ಅವರು ಹೇಳಿದರು.ಕಾರ್ಯಾ ಗಾರದ ಅಧ್ಯಕ್ಷತೆ ವಹಿಸಿದ ಎನ್ ಐ ಟಿಕೆ ನಿರ್ದೇಶ ಕರಾದ ಡಾ. ಸಂದೀಪ್ ಸಂಚೇತಿ ಅವರು, ನೋಡಿ ಕಲಿ ಮಾಡಿ ತಿಳಿ ಮೂಲಕ, ಸಂವಾದದ ಮೂಲಕ, ವಿಭಿನ್ನವಾಗಿ ಯೋಚಿಸುವ ಮೂಲಕ ಪ್ರಶ್ನಿಸುವ ಮೂಲಕ ಹಲವು ವಿನೂತ ಗಳನ್ನು ಕಲಿಯುವ ಮತ್ತು ಸಂಶೋಧಿಸಲು ಅನುಕೂಲ ವಾಗಲಿದೆ ಎಂದರು. ಶಾಲೆಗಳಲ್ಲಿ ಕಲಿಯುವಿಕೆ ರೀತಿಯಲ್ಲಿ ಬದಲಾವಣೆ ಇಂದಿನ ತುರ್ತು ಅಗತ್ಯ ಎಂದರು. ವಿಜ್ಞಾನ ಮತ್ತು ಇಂಜಿನಿಯರಿಂಗ್ ಪರಸ್ಪರ ಪೂರಕ ವಿಷಯ ಗಳಾಗಿದ್ದು, ಎರಡು ವಿಷಯವನ್ನು ಪ್ರತ್ಯೇಕಿ ಸುವುದು ಸಲ್ಲ ಎಂದರು. ಉದ್ಘಾಟನಾ ವೇದಿಕೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಡಾ. ವಿಜಯಕುಮಾರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವಿಜ್ಞಾನ ಪರಿವೀಕ್ಷಣಾಧಿಕಾರಿ ಸುಬ್ರಹ್ಮಣ್ಯೇಶ್ವರ ಶರ್ಮಾ ಅವರು ಉಪಸ್ಥಿತರಿದ್ದರು. ಡಾ. ಕೆ. ವಿ. ರಾವ್ ಸ್ವಾಗತ ಮತ್ತು ಪ್ರಾಸ್ತಾವನೆ ಗೈದರು.ಕಾರ್ಯಾ ಗಾರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ 180 ವಿದ್ಯಾರ್ಥಿಗಳು ಪಾಲ್ಗೊಳ್ಳ ಬೇಕಿದ್ದು, ಅಪರಾಹ್ನ ದವರೆಗೆ 140 ವಿದ್ಯಾರ್ಥಿಗಳು ಆಗಮಿಸಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಮನೋಭಾವ ಮತ್ತು ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಎರಡು ದಿನಗಳಲ್ಲಿ ಹಮ್ಮಿಕೊಂಡಿರುವ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎನ್ ಎ ಮಧ್ಯಸ್ಥ ಅವರು ಡಾರ್ವಿನ್ ನ ಸಿದ್ದಾಂತದ ಬಗ್ಗೆ ವಿವರಿಸಿದರು. ಶ್ರೀ ಸರ್ವದೆ, ಡಾ. ನರೇಂದ್ರ ನಾಯಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. 16 ರಂದು ನಡೆಯುವ ಕಾರ್ಯಾಗಾರದಲ್ಲಿ ಡಾ. ಕೆ. ಬಿ. ರಮೇಶ್, ಡಾ. ಜಯಂತ್, ಡಾ. ಸತ್ಯನಾರಾಯಣ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.

Monday, September 13, 2010

ನಿಗದಿತ ಗುರಿ ಸಾಧನೆಗೆ ಶ್ರಮವಹಿಸಿ: ಜಿ.ಪಂ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ

ಮಂಗಳೂರು,ಸೆಪ್ಟೆಂಬರ್ 13:ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣ ಬಿಡುಗಡೆಯಾಗಿದ್ದು, ಹಣ ಹಿಂದಿರುಗಿ ಹೋಗದಂತೆ ಮುತುವರ್ಜಿ ವಹಿಸಿ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸಾಧನೆಗಳನ್ನು ದಾಖಲಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರು ಹೇಳಿದರು.

ಅವರಿಂದು ಜಿ.ಪಂ. ಸಭಾಂಗ ಣದಲ್ಲಿ ಆಗಸ್ಟ್ ತಿಂಗಳ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾ ಡುತ್ತಿದ್ದರು. ವಿವಿಧ ಇಲಾಖೆಗಳ ಅಧಿಕಾರಿ ಗಳು ನಿಗದಿ ಪಡಿಸಿದ ಗುರಿ ಸಾಧನೆಗೆ ಶ್ರಮ ವಹಿಸಿ ಕರ್ತವ್ಯ ನಿರ್ವಹಿಸ ಬೇಕಿದ್ದು, ಅದರಲ್ಲೂ ಪ್ರಮುಖ ವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡ ನಿಗಮ ಶೂನ್ಯ ಸಾಧನೆ ದಾಖಲಿಸಿ ರುವುದಕ್ಕೆ ಅಸಮಾ ಧಾನ ವ್ಯಕ್ತ ಪಡಿಸಿದ ಅಧ್ಯಕ್ಷರು ಮುಂದೆ ಹೀಗಾ ದಂತೆ ಎಚ್ಚರಿಕೆ ವಹಿಸ ಬೇಕೆಂದು ಸೂಚನೆ ನೀಡಿದರು. ಈ ಬಗ್ಗೆ ಕಳೆದ ತ್ರೈಮಾಸಿಕ ಕೆಡಿಪಿ ಯಲ್ಲೂ ಚರ್ಚೆ ಯಾಗಿತ್ತು ಎಂಬುದನ್ನು ಸಭೆಗೆ ನೆನಪಿಸಿದ ಅಧ್ಯಕ್ಷರು ಈ ಬಗ್ಗೆ ತೆಗೆದು ಕೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿ ಯಿಂದ ವಿವರಣೆ ಕೇಳಿದರು.ಕಳೆದ ಎರಡು ವರ್ಷಗಳಿಂದ ಗಂಗಾ ಕಲ್ಯಾಣ ಯೋಜನೆ ಯಡಿ ಪರಿ ಶಿಷ್ಟ ಜಾತಿ ಮತ್ತು ವರ್ಗದ ವರಿಗೆ ವೈಯಕ್ತಿಕ ಮತ್ತು ಸಾಮೂಹಿಕ ಫಲಾನು ಭವಿಗಳಿಗೆ ಕೃಷಿಗೆ ನೀರಾವರಿ ಒದಗಿಸಲು ಬೋರ್ ವೆಲ್ ಕೊರೆಸ ಬೇಕಾಗಿದ್ದು, ವಿವಿಧ ಕಾರಣಗಳಿಂದ ಬಾಕಿ ಉಳಿದಿತ್ತು, ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳು ಕಳೆದ ಸಭೆಯಲ್ಲಿ ಸೂಕ್ತ ಕ್ರಮದ ಎಚ್ಚರಿಕೆಯನ್ನೂ ನೀಡಿದರು. ಪ್ರಸಕ್ತ ಸಾಲಿನಲ್ಲಿ ಸುಮಾರು 300 ಬೋರ್ ವೆಲ್ ಕೊರೆಯಲು ರಾಜ್ಯ ಮಟ್ಟದಲ್ಲಿ ಕರ್ನಾಟಕ ಏಜೆನ್ಸಿಗೆ ಟೆಂಡರ್ ನೀಡಲಾಗಿದ್ದು, ಈ ಸಾಲಿನಲ್ಲಿ ಗುರಿ ಸಾಧಿಸಲಾಗುವುದು ಎಂದು ಕೆಡಿಪಿ ಸಭೆಗೆ ಅಧಿಕಾರಿ ಮಾಹಿತಿ ನೀಡಿದರು.
ಕಳೆದ ಸಾಲುಗಳಲ್ಲಿ ಬೋರ್ ವೆಲ್ ಕೊರೆಸಿ ನೀರು ದೊರಕದಿದ್ದರೆ ಗುತ್ತಿಗೆದಾರರಿಗೆ ಬಿಲ್ ಪಾವತಿಸುವುದಿಲ್ಲ ಎಂಬ ಷರತ್ತಿನಿಂದಾಗಿ ಯಾವುದೇ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಲು ಮುಂದೆ ಬರುತ್ತಿರಲಿಲ್ಲ. ಈ ಬಗ್ಗೆ ಮರುಪರಿಶೀಲನೆ ನಡೆಸಿ ಪ್ರಸಕ್ತ ಸಾಲಿನಲ್ಲಿ ರಾಜ್ಯ ಮಟ್ಟದಲ್ಲೇ ನಿಧರ್ಾರ ಕೈಗೊಳ್ಳಲಾಗಿದೆ. ಹಾಗಾಗಿ ಫಲಾನುಭವಿಗಳಿಗೆ ಸುಮಾರು 300 ಬೋರ್ ವೆಲ್ ಸಿಗುವುದು ಖಚಿತವಾಗಿದೆ.ಡಾ ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಕಾಮಗಾರಿ ಕುಂಠಿತ ಗೊಂಡಿದ್ದು, ವಿದ್ಯುದ್ಧೀಕರಣಕ್ಕೆ ಬಾಕಿ ಇರುವ ಬಗ್ಗೆ ತಾಲೂಕು ಮಟ್ಟದಲ್ಲಿ ಅನುಷ್ಠಾನಾಧಿಕಾರಿಗಳನ್ನು ನೇಮಿಸುವ ಬಗ್ಗೆ ನಿಗಮದ ವ್ಯವಸ್ಥಾಪಕ ನಿದರ್ೇಶಕರನ್ನು ಕೋರಲಾಗಿದ್ದು, ಅವರು ಈ ಸಂಬಂಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ ಕಳೆದ ವರ್ಷಗಳಿಂದ ಪ್ರಗತಿ ಕುಂಠಿತವಾಗಿದ್ದು, 09-10ನೇ ಸಾಲಿನಲ್ಲಿ 12 ಬಾವಿಗಳು ಬಾಕಿ ಇದೆ. ಪರಿಶಿಷ್ಟ ವರ್ಗದಲ್ಲಿ 08-09ನೇ ಸಾಲಿನಲ್ಲಿ 6 ಮತ್ತು 09-10ನೇ ಸಾಲಿನಲ್ಲಿ ನಿರ್ಮಿಸಿದ ಒಟ್ಟು 22 ಬಾವಿಗಳು ಮತ್ತು ಒಟ್ಟು 40 ಬಾವಿಗಳ ವಿದ್ಯುತ್ ಸಂಪರ್ಕ ಕಾಮಗಾರಿ ಪ್ರಗತಿ ಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಣ್ಣ ನೀರಾವರಿ ಇಲಾಖೆ ಜಿಲ್ಲೆಯ ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಯಡಿ ಹಲಗೆ ಹಾಕಲು 60,000 ರೂ.ಗಳನ್ನು ನಿಗದಿ ಪಡಿಸಿರುವುದು ಅವೈಜ್ಞಾನಿಕವಾಗಿದ್ದು ಈ ನಿರ್ಧಾರದ ಮರು ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು. ಮೂಲಭೂತ ಸೌಕರ್ಯಕ್ಕೆ, ಅಭಿವೃದ್ಧಿ ಕಾಮಗಾರಿಗೆ ಬಂದ ಹಣ ದುರುಪಯೋಗ ವಾಗಬಾರದು. ಈ ಬಗ್ಗೆ ಇಂಜಿನಿಯರ್ ಗಳಿಂದ ಮತ್ತೊಮ್ಮೆ ಅಂದಾಜುಪಟ್ಟಿ ಸಿದ್ಧಪಡಿಸಿ ಎಂದು ಭಂಡಾರಿಯವರು ಹೇಳಿದರು.
ರಾಜೀವ್ ಗಾಂಧಿ ವಸತಿ ಯೋಜನೆಯಡಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನೇರವಾಗಿ ರಾಜೀವ್ ಗಾಂಧಿ ವಸತಿ ಯೋಜನೆ ವೆಬ್ ಸೈಟ್ ಮೂಲಕವೇ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಫಲಾನುಭವಿಗಳ ಆಯ್ಕೆಯನ್ನು ಸಂಪೂರ್ಣ ಪಾರದರ್ಶಕ ಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್ ಅವರು ಸಭೆಗೆ ಮಾಹಿತಿ ನೀಡಿದರು. ಇನ್ನು ಭವಿಷ್ಯದಲ್ಲಿ ಈ ಯೋಜನೆಯಡಿ ಗ್ರಾಮ ಪಂಚಾಯತ್ ನಿಂದ ಫಲಾನುಭವಿಗಳಿಗೆ ಹಣ ಬಿಡುಗಡೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಕನ್ನಡ ಬಳಕೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ವೃತ್ತಿ ತೆರಿಗೆ ಇಲಾಖೆ ಕಡಿಮೆ ಸಾಧನೆಯನ್ನು ದಾಖಲಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಿಇಒ ಅವರು ಸೂಚಿಸಿದರು.
ತೋಟಗಾರಿಕಾ ಇಲಾಖೆಯಲ್ಲಿ 150 ಮಂಜೂರಾದ ಹುದ್ದೆಗಳಲ್ಲಿ 60 ಹುದ್ದೆ ತುಂಬಲಾಗಿದ್ದು, 90 ಹುದ್ದೆಗಳು ಖಾಲಿ ಇದೆ. ಮಂಗಳೂರಿನಲ್ಲಿ ತೋಟಗಾರಿಕ ಉಪ ನಿರ್ದೇಶಕರ ಕಚೇರಿಯಲ್ಲಿ ಕೇವಲ ಒಬ್ಬ ತೋಟಗಾರಿಕಾ ಸಹಾಯಕ ನಿರ್ದೇಶಕ ರಿದ್ದಾರೆ ಎಂದು ಪ್ರಭಾರ ಅಧಿಕಾರ ದಲ್ಲಿರುವ ಸದಾಶಿವ ರಾವ್ ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸುಫಲ 2,600 ಟನ್ ಕೊರತೆ ಯಿದ್ದು, ಕಾಂಪ್ಲೆಕ್ಸ್ ಗೊಬ್ಬರ ಪರ್ಯಾಯ ವಾಗಿ ಬಳಸ ಬಹುದೆಂದು ಜಂಟಿ ಕೃಷಿ ನಿರ್ದೇಶ ಕರು ಹೇಳಿದರು. ಇಫ್ಕೊ ಕಂಪೆನಿ ಮತ್ತು ಐ ಪಿ ಎಲ್ ಸಂಸ್ಥೆಯ ಸಂಯುಕ್ತ ಗೊಬ್ಬರ ಗಳು ಸ್ಥಳೀಯ ಮಣ್ಣಿಗೆ ಉತ್ತಮ ಗೊಬ್ಬರ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು. ಕಳೆದ ಮುಂಗಾರಿ ನಲ್ಲಿ 32,583 ಹೆಕ್ಟೇರ್ ಸಾಧನೆ ಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 32,437 ಹೆಕ್ಟೇರ್ ಬಿತ್ತನೆ ಯಾಗಿದೆ. ಕಳೆದ ಸಾಲಿಗಿಂತ ಸುಮಾರು 100 ಹೆಕ್ಟೇರ್ ಕೃಷಿ ಬಿತ್ತನೆ ಕಡಿಮೆ ಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ. ಶಿವರಾಮೇಗೌಡ ಅವರು ಇಂದಿರಾ ಆವಾಸ್ ಯೋಜನೆ, ಗ್ರಾಮೀಣ ಆಶ್ರಯ, ಅಂಬೇಡ್ಕರ್ ಯೋಜನೆ ಅಭಿವೃದ್ಧಿಗಳ ಬಗ್ಗೆ ಎಲ್ಲ ತಾಲೂಕು ಇ ಒಗಳಿಂದ ಮಾಹಿತಿ ಪಡೆದು ನಿಗದಿತ ಗುರಿಸಾಧನೆಗೆ ಸಮಯಮಿತಿ ನಿಗದಿ ಪಡಿಸಿದರು.
ಜಿಲ್ಲೆಯಲ್ಲಿ ಎಲ್ಲ ಕೊರಗ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಶಾಲೆಯಿಂದ ಹೊರಗುಳಿದವರ ಸಂಖ್ಯೆ ಅಲ್ಪಪ್ರಮಾಣದ್ದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಾಮೇಗೌಡ ಅವರು ಸಭೆಗೆ ಮಾಹಿತಿ ನೀಡಿದರು. ಆರೋಗ್ಯ, ಮೀನುಗಾರಿಕೆ, ಜಲಾನಯನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಪರಿಶೀಲನೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಜಗನ್ನಾಥ್ ಸಾಲ್ಯಾನ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗ್ಡೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಸದಾನಂದ ಮಲ್ಲಿ, ಮುಖ್ಯ ಲೆಕ್ಕಾಧಿಕಾರಿ ರಾಮದಾಸ್, ಉಪಸ್ಥಿತರಿದ್ದರು. ಸಿಇಒ ಸ್ವಾಗತಿಸಿದರು. ಮುಖ್ಯ ಯೋಜನಾಧಿಕಾರಿ ಟಿ.ಜೆ. ತಾಕತ್ ರಾವ್ ವಂದಿಸಿದರು.

Thursday, September 9, 2010

'ಕುಡಿಯುವ ನೀರು ಪೂರೈಕೆಗೆ ಜಿಲ್ಲಾಪಂಚಾಯತ್ ನಲ್ಲಿ ಹಣದ ಕೊರತೆ ಇಲ್ಲ'

ಮಂಗಳೂರು,ಸೆ.09:ಜಿಲ್ಲಾ ಪಂಚಾಯತ್ ನಲ್ಲಿ ಕ್ರಿಯಾಯೋಜನೆಯಡಿ ಸೇರ್ಪಡೆಗೊಂಡ ಕುಡಿಯುವ ನೀರು ಯೋಜನೆಗೆ ಅನುದಾನದ ಕೊರತೆ ಇಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಹೇಳಿದರು.

ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ಸಭಾಂಗಣ ದಲ್ಲಿ ಏರ್ಪಡಿಸಲಾದ 24ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕ್ರಿಯಾ ಯೋಜನೆ ಯಡಿ ರೂಪಿಸಿದ ಯೋಜನೆಗಳ ಅನುಷ್ಠಾನಕ್ಕೆ ಹಿಂದಿನ ಸಾಲುಗಳಲ್ಲಿ ದೊರೆತ ಅನುದಾನ ಕ್ಕಿಂತ ಹೆಚ್ಚೇ ಅನು ದಾನ ದೊರೆತಿದ್ದು ಅನು ದಾನದ ಕೊರತೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.ಗ್ರಾಮೀಣ ಪ್ರದೇಶ ಗಳಿಗೆ ಕುಡಿಯುವ ನೀರು ಯೋಜನೆಯಡಿ ಸಮಗ್ರ ಸಮೀಕ್ಷೆಯ ಬಳಿಕ ನೀರು ಪೂರೈಕೆಗೆ ಪ್ರಸಕ್ತ ಸಾಲಿನಲ್ಲಿ 40 ಕೋಟಿ ಹಣ ಸ್ಯಾಂಕ್ಷನ್ ಆಗಿದ್ದು, ಈಗಾಗಲೇ 17.80 ಕೋಟಿ ರೂ. ಬಿಡುಗಡೆಯಾಗಿದೆ ಎಂದರು. ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.2005-06ನೇ ಸಾಲಿನಲ್ಲಿ 2 ಕೋಟಿ, 06-07ನೇ ಸಾಲಿನಲ್ಲಿ 6 ಕೋಟಿ, 07-08ನೇ ಸಾಲಿನಲ್ಲಿ 15 ಕೋಟಿ ಹಣ ಬಿಡುಗಡೆಯಾಗಿದ್ದು,ಈ ಸಾಲಿನಲ್ಲಿ 3 ಕೋಟಿ ರೂ. ಹಿಂದಕ್ಕೆ ಹೋಗಿದೆ. ಹಾಗಾಗಿ 09-10ನೇ ಸಾಲಿನಲ್ಲಿ 7 ಕೋಟಿ ರೂ. ಬಿಡುಗಡೆಯಾಗಿ ಸದುಪಯೋಗವಾಗಿದೆ ಎಂದರು.10-11ನೇ ಸಾಲಿಗೆ ಕ್ರಿಯಾಯೋಜನೆಗೆ ಅನುಗುಣವಾಗಿ ಹಣದ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಜಿಲ್ಲೆಯಲ್ಲಿ ದುರಸ್ತಿ ಅಗತ್ಯ ವಿರುವ ಅಂಗನ ವಾಡಿ ಕೇಂದ್ರ ಗಳನ್ನು ರಿಪೇರಿ ಮಾಡಲು ಜಿಲ್ಲಾ ಪಂಚಾ ಯಿತಿ ನಿರ್ಣಯ ತೆಗೆದು ಕೊಂಡಿದ್ದು, ನೂತನ ಕಟ್ಟಡ ನಿರ್ಮಿಸಲು ಬಂದ ಹಣವನ್ನು ನವೀ ಕರಣಕ್ಕೆ ಬಳಸಿ ಎಂದು ಜಿಲ್ಲಾ ಪಂಚಾ ಯತ್ ಅಧ್ಯಕ್ಷರು ಹೇಳಿದರು. ಮಂಗಳೂರು ತಾಲೂಕಿನ ಐಕಳ ಗ್ರಾಮ ಪಂಚಾಯಿತಿ ಏಳಿಂಜೆ ಗ್ರಾಮ ಶಾಂಭವಿ ನದಿಯ ದಂಡೆಯಲ್ಲಿ ಮರಳುಗಾರಿಕೆಯಿಂದ ಜಿಲ್ಲಾ ಪಂಚಾಯತ್ ರಸ್ತೆ ಮತ್ತು ಲೋಕೋ ಪಯೋಗಿ ಇಲಾಖೆ ರಸ್ತೆ ಹಾದು ಹೋಗುತ್ತಿದ್ದು, ಎರಡು ರಸ್ತೆಗಳ ಸೇತುವೆ ಇದ್ದು, ಮರಳು ಗಾರಿಕೆಯಿಂದ ಸೇತುವೆಯ ಪಕ್ಕದ ದಡಗಳಿಗೆ ಕೊರೆತ ಭೀತಿ ಇದೆ; ರಸ್ತೆಗಳು ಹಾಳಾಗುತ್ತಿವೆ ಎಂಬುದರ ಕುರಿತು ಚರ್ಚೆಯಾದ ಬಳಿಕ ಜಿಲ್ಲಾ ಪಂಚಾ ಯತ್ ಈ ಪ್ರದೇಶದಲ್ಲಿ ಮರಳು ಗಾರಿಕೆ ನಿಷೇಧಿಸಲು ಕ್ರಮ ಕೈಗೊಂಡರೆ ನಿಷೇಧ ಅನುಷ್ಠಾನಕ್ಕೆ ತರಲಾಗುವುದು ಎಂದು ಗಣಿ ಅಧಿಕಾರಿ ಡಾ. ರವೀಂದ್ರ ಸಭೆಯಲ್ಲಿ ಉತ್ತರ ನೀಡಿದರು.ಜಿಲ್ಲೆಯಾದ್ಯಂತ ಅಕ್ರಮ ಮರಳು, ಗಣಿಗಾರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.ಆಶ್ರಯ ಮನೆಗಳಿಗೆ ಒದಗಿಸುವ ಮರಳಿಗೆ ವಿನಾಯಿತಿ ಹಾಗೂ ಮರಳು ಸಾಗಾಟದಿಂದ ರಸ್ತೆ ನಿರ್ವಹಣೆಗೆ ಕ್ರಮ ಕೈಗೊಳ್ಳಲು ಪಂಚಾಯಿತಿಗೆ ಅಧಿಕಾರ ನೀಡುವ ಬಗ್ಗೆ ನಿರ್ಣಯ ಅಂಗೀಕರಿಸಲು ಸಭೆ ನಿರ್ಧರಿಸಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಉಪಾಧ್ಯಕ್ಷ ಜಗನ್ನಾಥ್ ಸಾಲ್ಯಾನ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಜಶ್ರೀ ಹೆಗಡೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸದಾನಂದ ಮಲ್ಲಿ ಉಪಸ್ಥಿತರಿದ್ದರು.

Tuesday, September 7, 2010

ಉತ್ತಮ ವಾತಾವರಣ ಉತ್ತಮ ಕೆಲಸಕ್ಕೆ ಪ್ರೇರಕ:ಸಚಿವ ಕೃಷ್ಣ ಪಾಲೆಮಾರ್

ಮಂಗಳೂರು,ಸೆ.07: ಮೂಲಭೂತಸೌಕರ್ಯಗಳನ್ನೊಳಗೊಂಡ ಉತ್ತಮ ವ್ಯವಸ್ಥೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಪ್ರೇರಣೆಯನ್ನು ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಹೇಳಿದರು.

ಅವ ರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ನೂತನ ಸಭಾಂಗಣ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾ ಡುತ್ತಿದ್ದರು. ನೂತನ ಸಭಾಂಗಣ ಜಿಲ್ಲೆಗೆ ಮಾದರಿ ಯಾಗಿದ್ದು, ಈ ಕಾಮಗಾರಿ ಅಭಿವೃದ್ಧಿ ರಾಜ ಕಾರಣ ಹಾಗೂ ಅಧಿಕಾರಿಗಳ ಕರ್ತವ್ಯ ಬದ್ಧತೆಗೆ ಸಾಕ್ಷಿ ಯಾಗಿದೆ ಎಂದರು.ವಿಕೇಂ ದ್ರೀಕೃತ ವ್ಯವಸ್ಥೆ ಯಲ್ಲಿ ಪ್ರಮುಖ ಪಾತ್ರ ವಹಿಸಿ,ಜಿಲ್ಲೆಯ ಅಭಿವೃದ್ಧಿ ಗಾಗಿರುವ ಜಿಲ್ಲಾ ಪಂಚಾ ಯತ್ ವ್ಯವಸ್ಥೆ ಯಲ್ಲಿ ಜನ ಕಲ್ಯಾಣ ಕಾರ್ಯ ಕ್ರಮಗಳು ನಿರಂತರ ವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಪ್ರತಿಯೊಂದು ಕಾಮಗಾರಿಯಲ್ಲೂ ಗುಣಮಟ್ಟ ಕಾಯ್ದುಕೊಳ್ಳಿ ಎಂದು ಸಲಹೆ ಮಾಡಿದ ಸಚಿವರು, ಕರ್ತವ್ಯದಲ್ಲಿ ಪ್ರೀತಿ ಹಾಗೂ ಬದ್ಧತೆಯನ್ನು ಮೆರೆಯಿರಿ ಎಂದರು. ಗ್ರಾಮೀಣ ಕುಡಿಯುವ ನೀರಿಗೆ 54.8 ಕೋಟಿ, ಗ್ರಾಮ ಸಡಕ್ ಗೆ 53.57 ಕೋಟಿ, ಲೋಕೋಪಯೋಗಿ ರಸ್ತೆಗೆ 23.58 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಗೆ ಇನ್ನಷ್ಟು ಅನುದಾನ ಹೆಚ್ಚಳದ ಭರವಸೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು. ಸಭಾಂಗ ಣದ ನಾಮ ಫಲಕ ಅನಾವರಣ ಮಾಡಿ ಮಾತ ನಾಡಿದ ಶಾಸಕರಾದ ಯೋಗೀಶ್ ಭಟ್ ಅವರು, ಇ ಗವ ರ್ನೆನ್ಸ್ ಗೆ ನಮ್ಮ ಜಿಲ್ಲೆ ಮಾದರಿ ಯಾಗ ಬೇಕು; ನಿಗದಿತ ಸಮಯ ದೊಳಗೆ ಕಾಮ ಗಾರಿಗಳು ಮುಗಿಯು ವುದರಿಂದ ಜಿಲ್ಲೆ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯ ಎಂದರು. ಬಂಟ್ವಾಳ ಶಾಸಕರಾದ ಬಿ. ರಮಾ ನಾಥ ರೈ ಅವರು ಮಾತನಾಡಿ, ಜಿಲ್ಲಾ ಪಂಚಾ ಯತ್ ತನ್ನ ಹಿರಿಮೆ-ಗರಿಮೆಯನ್ನು ಉಳಿಸ ಕೊಳ್ಳ ಬೇಕೆಂದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಅಭಿವೃದ್ಧಿ ಯತ್ತ ಮುಖ ಮಾಡಿ ಸಾಧನೆಗಳ ಮೈಲಿ ಗಲ್ಲನ್ನು ದಾಟುತ್ತಿದ್ದು ಪ್ರಪಂಚದ ಭೂಪಟದಲ್ಲಿ ಭಾರತದ ಜೊತೆಗೆ ಕರ್ನಾಟಕ ರಾಜ್ಯವೂ ಪ್ರಕಾಶಿಸು ತ್ತಿರುವುದು ಸುಳ್ಳಲ್ಲ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ಅವರು, ಜಿಲ್ಲಾ ಪಂಚಾಯತ್ ನ ನೂತನ ಸಭಾಂಗಣ ಕರ್ತವ್ಯ ಪರತೆಗೆ ಸಾಕ್ಷಿಯಾಗಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಮಹಾಪೌರರಾದ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್, ದ.ಕ ಜಿ.ಪಂ.ನ ಉಪಾಧ್ಯಕ್ಷ ಹೆಚ್. ಜಗನ್ನಾಥ್ ಸಾಲಿಯಾನ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಸದಾನಂದ ಮಲ್ಲಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶ್ರೀ ಹೆಗ್ಡೆ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಕೆ. ರಾಮಚಂದ್ರ ಕುಂಪಲ ಅವರು ಸಮಾರಂಭದಲ್ಲಿ ಪಾಲ್ಗೊಂಡರು. ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪಿ. ಶಿವಶಂಕರ್ ಅವರು, 2008ರಲ್ಲಿ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದು,
ಇದಕ್ಕೆಂದೇ ಮಮತಾ ಗಟ್ಟಿಯ ವರು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿದ್ದ ಸಂದರ್ಭದಲ್ಲಿ 29.6.2006 ರಂದು 33 ಲಕ್ಷ ರೂ. ಮೀಸ ಲಿರಿಸ ಲಾಗಿತ್ತು.210 ಲಕ್ಷ ರೂ. ವೆಚ್ಚದಲ್ಲಿ ಇಂದು ಕಟ್ಟಡ ನಿರ್ಮಾಣ ಪೂರ್ಣ ಗೊಂಡಿದ್ದು, ಇನ್ನು ಕಟ್ಟಡದ ಅಭಿವೃದ್ಧಿಗೆ 70 ಲಕ್ಷ ರೂ. ಮೀಸ ಲಿರಿಸಿದೆ. 15 ಲಕ್ಷ ರೂ.ಗಳಲ್ಲಿ ಮಿನಿ ಮೀಟಿಂಗ್ ಹಾಲ್ ನಿರ್ಮಾಣ ಗೊಂಡಿದೆ. ಇಂದು ಉದ್ಘಾಟ ನೆಗೊಂಡ ಸಭಾಂಗಣ ದಲ್ಲಿ 96 ಜನರು ಕುಳಿತು ಕೊಳ್ಳಲು ಅವಕಾಶವಿದ್ದು, ಪತ್ರಕರ್ತರಿಗೆ 30 ಸೀಟುಗಳನ್ನು ಮೀಸಲಿ ರಿಸಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿ 180 ಜನರು ಕುಳಿತು ಕೊಳ್ಳುವ ವ್ಯವಸ್ಥೆ ಇದೆ. ಸಭಾಂಗಣಕ್ಕೆ ಜಿಲ್ಲೆಯ ಜೀವನದಿ ನೇತ್ರಾವತಿಯ ಹೆಸರನ್ನಿರಿ ಸಲಾಗಿದ್ದು,ಪೇಪರ್ ಲೆಸ್ ಕಚೇರಿಗೆ ಮುನ್ನುಡಿ ಬರೆಯ ಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಾಸ್ತಾವಿಕ ಭಾಷಣದಲ್ಲಿ ಮಾಹಿತಿ ನೀಡಿದರು.

Monday, September 6, 2010

ಕ್ವೀನ್ಸ್ ಬ್ಯಾಟನ್ ಗೆ ಔಪಚಾರಿಕ ಬೀಳ್ಕೊಡುಗೆ

ಮಂಗಳೂರು,ಸೆ.06: ದೆಹಲಿಯಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾ ಕೂಟದ ಪೂರ್ವಭಾವಿ ಅಭಿಯಾನದ ಅಂಗವಾಗಿ ನಿನ್ನೆ ಜಿಲ್ಲೆಗೆ ಆಗಮಿಸಿದ ಕ್ವೀನ್ಸ್ ಬ್ಯಾಟನ್ ತಂಡಕ್ಕೆ ಅಪರ ಜಿಲ್ಲಾ ಧಿಕಾರಿ ಪ್ರಭಾಕರ ಶರ್ಮಾ ಅವರು ಪುರಭ ವನದಲ್ಲಿ ಔಪ ಚಾರಿಕ ಬೀಳ್ಕೊ ಡುಗೆ ನೀಡಿ ದರು.ತಂಡದ ನೇತೃತ್ವ ವಹಿಸಿದ ವಿ.ಎನ್ ಸಿಂಗ್ ಗೆ ಬ್ಯಾಟನ್ ನ್ನು ಹಸ್ತಾಂ ತರಿಸಿದ ಅಪರ ಜಿಲ್ಲಾಧಿ ಕಾರಿಗಳು ಶುಭ ಹಾರೈ ಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ತಹಸೀ ಲ್ದಾರ್ ಮಂಜುನಾಥ್, ಯುವಜನ ಮತ್ತು ಕ್ರೀಡೆ ಇಲಾಖೆ ಸಹಾಯಕ ನಿರ್ದೇಶಕ ಪಾಂಡುರಂಗ,ಅಥ್ಲೀಟ್ ನವೀನ್ ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸರು ಜಿಲ್ಲೆಯ ಗಡಿ ಮುಲ್ಕಿವರೆಗೆ ತೆರಳಿ ತಂಡವನ್ನು ಬೀಳ್ಕೊಟ್ಟರು.ತಂಡ ಉಡುಪಿ ಜಿಲ್ಲೆಯ ಮೂಲಕ ಕಾರವಾರ ತಲುಪಲಿದೆ.

Sunday, September 5, 2010

ನಗರದಲ್ಲಿ ಕ್ವೀನ್ಸ್ ಬೆಟನ್

ಮಂಗಳೂರು,ಸೆ 05: ದಿಲ್ಲಿಯಲ್ಲಿ ಜರುಗಲಿರುವ ಕಾಮನ್ ವೆಲ್ತ್ ಕ್ರೀಡಾ ಕೂಟದ ಪೂರ್ವಭಾವಿಯಾಗಿ ದೇಶಾದ್ಯಂತ ನಡೆಯುತ್ತಿರುವ ಕ್ರೀಡ ಅಭಿಯಾನದ ಅಂಗವಾಗಿ ವಿಂಗ್ ಕಮಾಂಡರ್ ವಿ.ಎನ್.ಸಿಂಗ್ ನೇತೃತ್ವದಲ್ಲಿ ಮಂಗಳೂರು ನಗರ ಪ್ರವೇಶಿಸಿದ ಕ್ವೀನ್ಸ್ ಬೆಟನ್ ರಿಲೇ ತಂಡಕ್ಕೆ ಅದ್ದೂರಿ ಸ್ವಾಗತ ನೀಡಲಾಯಿತು.
ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ರಜನಿ ದುಗ್ಗಣ್ಣ ಅವರು ಕದ್ರಿ ಪಾರ್ಕ್ ಬಳಿ ರಿಲೇ ತಂಡವನ್ನು ಆತ್ಮೀ ಯವಾಗಿ ಬರ ಮಾಡಿ ಕೊಂಡರು.ಸಂಸದ ನಳಿನ್ ಕುಮಾರ್ ಕಟೀಲ್,ಶಾಸ ಕರಾದ ಎನ್.ಯೋಗಿಶ್ ಭಟ್, ಯು.ಟಿ. ಖಾದರ್, ನಗರ ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್,ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾ ಪಟುಗ ಳಾದ ವಂದನಾ ಶಾನು ಭಾಗ್,ವಂದನಾ ರಾವ್, ಶೋಭಾ ನಾರಾ ಯಣ್,ಮಂಜರಿ ಭಾರ್ಗವಿ,ಪ್ರೊ.ಬಿ.ಎಂ.ಹೆಗ್ಡೆ,ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್,ಪಾಲಿಕೆಯ ಸದಸ್ಯರುಗಳು,ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಈ ಕಾರ್ಯ ಕ್ರಮದಲ್ಲಿ ಉತ್ಸಾಹ ದಿಂದ ಪಾಲ್ಗೊಂಡರು.ನಂತರ ರಿಲೇ ತಂಡ ನಗರದ ಬಿಜೈ, ಕೆಎಸ್ ಆರ್ ಟಿಸಿ ,ಮಹತ್ಮಾ ಗಾಂಧಿ ರಸ್ತೆ, ವಿವಿಎಸ್ ಸರ್ಕಲ್, ಬಂಟ್ಸ್ ಹಾಸ್ಟೆಲ್, ಜ್ಯೋತಿ ವೃತ್ತ, ಹಂಪನಕಟ್ಟೆ ಮೂಲಕ ಪುರ ಭವನಕ್ಕೆ ಆಗಮಿ ಸಿತು.ಪುರ ಭವನ ದಲ್ಲಿ ನಡೆದ ಪೌರ ಸತ್ಕಾರದ ಬಳಿಕ ಸುದ್ದಿ ಗಾರ ರೊಂದಿಗೆ ಮಾತ ನಾಡಿದ ರಿಲೇ ತಂಡದ ಮುಖ್ಯಸ್ಥ ವಿಂಗ್ ಕಮಾಂಡರ್ ವಿ.ಎನ್.ಸಿಂಗ್ ಅವರು ಮಂಗ ಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಯ ಸ್ವಾಗತ ಮತ್ತು ಅಥಿತಿ ಸತ್ಕಾರ ಹಾಗೂ ಅಚ್ಚು ಕಟ್ಟು ತನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ವಾಘಾ ಗಡಿ ಯಿಂದ ವಿಂಗ್ ಕಮಾಂಡರ್ ವಿ.ಎನ್.ಸಿಂಗ್ ನೇತ್ರತ್ವ ದಲ್ಲಿ 98 ಜನರ ಸದಸ್ಯ ರೊಂದಿಗೆ ಇಂ ಗ್ಲೆಂಡಿನ ರಾಣಿಯ ಸಂದೇಶ ವನ್ನು ಒಳ ಗೊಂಡ ಕ್ವೀನ್ಸ್ ಬ್ಯಾಟನ್ ಭಾರತ ದೇಶದ ವಿವಿಧ ರಾಜ್ಯ,ಪ್ರದೇಶ ಗಳನ್ನು ಸಂಚರಿಸಿ 72 ನೇ ದಿನ ವಾದ ಇಂದು ಕರಾವಳಿ ನಗರಿ ಮಂಗ ಳೂರು ತಲುಪಿದೆ.ನಾಳೆ ಸೋಮ ವಾರ 9 ಗಂಟೆಗೆ ಮಂಗಳೂರು ನಗರ ದಿಂದ ಉಡುಪಿ ಮೂಲಕ ಕಾರವಾರ ತಲುಪಲಿದೆ.

Msez ಎರಡನೇ ಹಂತ ಭೂಸ್ವಾಧೀನಕ್ಕೆ ಅವಕಾಶವಿಲ್ಲ

ಮಂಗಳೂರು,ಸೆ.05: ಅತ್ಯಮೂಲ್ಯ ಪರಿಸರ ಹಾಗೂ ಕೃಷಿ ಭೂಮಿಯಿಂದಾವೃತವಾದ ದಕ್ಷಿಣ ಕನ್ನಡದಲ್ಲಿ ವಿಶೇಷ ಆರ್ಥಿಕ ವಲಯಕ್ಕೆ ನೀಡಲು ಉದ್ದೇಶಿಸಲಾದ ಎರಡನೇ ಹಂತದ ಭೂಸ್ವಾಧೀನಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಸ್ಪಷ್ಟ ಪಡಿಸಿದರು. ಕ್ವೀನ್ಸ್ ಬ್ಯಾಟನ್ ರಿಲೇ ತಂಡವನ್ನು ಸ್ವಾಗತಿಸಿದ ಬಳಿಕ ಪತ್ರಕರ್ತ ರೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ ನಮ್ಮ ಪರಿಸರದಲ್ಲಿ ಬಹಳಷ್ಟು ಉದ್ದಿಮೆಗಳು ಸ್ಥಾಪಿತವಾಗಿದ್ದು, ವಿಶೇಷ ಆರ್ಥಿಕ ವಲಯಕ್ಕೆ ೧,೮೦೦ ಎಕರೆ ಭೂಮಿಯನ್ನು ವಶಪಡಿಸಿ ಕೊಳ್ಳಲಾಗಿದೆ. ಇನ್ನು ಮುಂದೆ ಇಂತಹ ಉದ್ದಿಮೆಗಳಿಗೆ ಜಿಲ್ಲೆಯಲ್ಲಿ ಅವಕಾಶ ನೀಡುವುದಿಲ್ಲ. ಇದರಿಂದ ನಮ್ಮ ಜನರಿಗೆ ಹೆಚ್ಚಿನ ಉಪಕಾರವಿಲ್ಲ ಎಂಬುದು ಸ್ಪಷ್ಟವಾಗಿದ್ದು, ಉದ್ದಿಮೆಗಳು ನೀಡುವ ಪರಿಹಾರ, ಉದ್ಯೋಗ ಖಾತ್ರಿ ಗಳಿಂದ ಸ್ಥಳೀಯ ಜನರಿಗೆ ಲಾಭವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗುಂಡ್ಯ ಜಲ ವಿದ್ಯುತ್ ಯೋಜನೆ ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ ಎಂಬುದನ್ನು ಸ್ಪಷ್ಟ ಪಡಿಸಿದ ಅವರು, ಪರಿಸರ ಉಳಿಸಲು ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿರುವುದಾಗಿ ಹೇಳಿದರು. ಈ ಉದ್ದೇಶದಿಂದಲೇ ಗ್ರೀನ್ ಪೊಲೀಸ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು. ಪರಿಸರ ನಾಶದ ದುಷ್ಪರಿಣಾಮಗಳು ನಮ್ಮ ಕಣ್ಣ ಮುಂದಿದ್ದು ಪರಿಸರ ನಾಶ ತಡೆಯಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಯತ್ನಿಸುವುದಾಗಿಯೂ ಹೇಳಿದರು.

ಗುಂಡ್ಯದಲ್ಲಿ ಕ್ವೀನ್ಸ್ ಬ್ಯಾಟನ್ ಗೆ ಆದರದ ಸ್ವಾಗತ

ಮಂಗಳೂರು,ಸೆ.05: ಕ್ರೀಡಾ ಐಕ್ಯತೆಯ ಸಂದೇಶವನ್ನು ಹೊತ್ತ ಕಾಮನ್ ವೆಲ್ತ್ ಕ್ರೀಡಾ ಜ್ಯೋತಿ ಕ್ವೀನ್ಸ್ ಬ್ಯಾಟನ್ ನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲೆಯ ಗಡಿ ಪ್ರದೇಶ ಗುಂಡ್ಯದಲ್ಲಿ ಅತ್ಯಂತ ಸಂಭ್ರಮದ ಸ್ವಾಗತವನ್ನು ನೀಡಿತು.


ವಿಂಗ್ ಕಮಾಂಡರ್ ವಿ ಎನ್ ಸಿಂಗ್ ನೇತೃ ತ್ವದಲ್ಲಿ ಆಗಮಿಸಿದ ತಂಡ ಬ್ಯಾಟನ್ ನ್ನು ಅಪರ ಜಿಲ್ಲಾಧಿ ಕಾರಿ ಪ್ರಭಾಕರ ಶರ್ಮಾ ಅವರಿಗೆ ಹಸ್ತಾಂ ತರಿಸಿದರು. ಸ್ಥಳದಲ್ಲಿ ಉಪಸ್ಥಿ ತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೇ ಮಾರ್ ಅವರು ಬಳಿಕ ಬ್ಯಾಟನ್ ನ್ನು ಸ್ವೀಕ ರಿಸಿದರು. ಬಳಿಕ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎ ಎಸ್ ರಾವ್ ಅವರಿಂದ ಡಾ. ದೀಪ್ತಿ, ಮಾಜಿ ಮೇಯರ್ ಶಂಕರ್ ಭಟ್, ಪುತ್ತೂರು ಎಸಿ ಡಾ. ಹರೀಶ್ ಕುಮಾರ್ ಅವರಿಗೆ ಹಸ್ತಾಂತ ರಿಸಲಾ ಯಿತು. ಅವರಿಂದ ಬ್ಯಾಟನ್ ಸ್ವೀಕರಿಸಿದ ಜಿಲ್ಲಾ ಪಂಚಾ ಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರು ವಿಂಗ್ ಕಮಾಂಡರ್ ಗೆ ನೀಡಿದರು. ಧರ್ಮಸ್ಥಳ ಗ್ರಾಮೋ ದ್ಯೋಗದ ಮಹಿಳೆ ಯರಿಂದ ತಂಡಕ್ಕೆ ಪೂರ್ಣಕುಂಭ ಸ್ವಾಗತ ನೀಡಲಾ ಯಿತಲ್ಲದೆ, ಕಲ್ಲಡ್ಕ ಗೊಂಬೆ, ವಾದ್ಯ, ಚೆಂಡೆಗಳು ಸ್ವಾಗತವನ್ನು ಅವಿಸ್ಮರ ಣೀಯವಾ ಗಿಸಿದವು. ಪುತ್ತೂರಿನ ಶಾಲಾ ಮಕ್ಕಳು, ಸ್ಕೌಟ್ಸ್, ಗೈಡ್ಸ್ ತಂಡಗಳು ಹೆಚ್ಚಿನ ಉತ್ಸಾಹ ದಿಂದ ತಂಡವನ್ನು ಸ್ವಾಗತಿ ಸಿದರು. ಬಳಿಕ ನೆಲ್ಯಾಡಿಯ ಸಂತ ಜರೋಸ ಪಿಯುಸಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಹಮ್ಮಿ ಕೊಳ್ಳಲಾಗಿತ್ತು. ಅಲ್ಲಿಂದ ಮಂಗಳೂರಿಗೆ ಹೊರಟ ತಂಡವನ್ನು ಕ್ರೀಡಾಭಿ ಮಾನಿಗಳು ರಸ್ತೆ ಯುದ್ದಕ್ಕೂ ಕೈಬೀಸಿ ಸ್ವಾಗತಿ ಸುತ್ತಿರುವ ದೃಶ್ಯ ಕಂಡು ಬಂತು.

Saturday, September 4, 2010

ಜಿಲ್ಲೆಯ ಅಭಿವೃದ್ಧಿಗೆ 26.12 ಕೋಟಿ ರೂ. ಬಿಡುಗಡೆ

ಮಂಗಳೂರು,ಸೆ.04: ದಕ್ಷಿಣ ಕನ್ನಡ ಜಿಲ್ಲೆಗೆ ಆಗಸ್ಟ್ 23 ರಂದು ರಾಜ್ಯ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಭೇಟಿ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು 26.12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಚಿಕ್ಕ ಕಾಲು ಸೇತುವೆಗಳ ನಿರ್ಮಾಣಕ್ಕೆ ಐದು ಕೋಟಿ ರೂ., ಕದ್ರಿ ಸರ್ಕಾರಿ ಪಾಲಿಟೆಕ್ನಿಕ್ ಹಳೆ ಹಾಸ್ಟೆಲ್ ದುರಸ್ತಿಗೆ 50 ಲಕ್ಷ ರೂ., ಬಂಟ್ವಾಳ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯನ್ನು 30 ಹಾಸಿಗೆಗಳಿಂದ 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು 2.5 ಕೋಟಿ ರೂ., ಬಂಟ್ವಾಳ ಪುರಸಭೆ ಅಭಿವೃದ್ಧಿಗೆ ವಿಶೇಷ ಅನುದಾನ 10 ಕೋಟಿ ರೂ., ಮಂಗಳೂರಿನ ಕದ್ರಿ ಪಾರ್ಕಿನ ಸಮಗ್ರ ಅಭಿವೃದ್ಧಿಗೆ 5 ಕೋಟಿ ರೂ.ಕದ್ರಿ ಸರ್ಕಿಟ್ ಹೌಸಿಗೆ 2 ಕೋಟಿ, ಮತ್ತು ಜಿಲ್ಲೆಯ 49 ದೇವಸ್ಥಾನ/ದೈವಸ್ತಾನಗಳ ಜೀರ್ಣೋದ್ಧಾರಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ 1.12 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಹಣವನ್ನು ವಿಳಂಬವಿಲ್ಲದೆ ಸಕಾಲದಲ್ಲಿ ಬಿಡುಗಡೆ ಮಾಡಿರುವ ಮುಖ್ಯಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.

Friday, September 3, 2010

ಕ್ವೀನ್ಸ್ ಬ್ಯಾಟನ್ಸ್ ರಿಲೇ ಸ್ವಾಗತಿಸಲು ದ.ಕ ಸಜ್ಜು

ಮಂಗಳೂರು,ಸೆ.03:ಕಾಮನ್ ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇ ತಂಡ ಸೆಪ್ಟೆಂಬರ್ 5ರಂದು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಲಿದ್ದು,ರಿಲೇ ತಂಡವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರು ಸ್ವಾಗತಿಸಲಿರುವರು.
ಅಂತಾ ರಾಷ್ಟ್ರೀಯ ಕ್ರೀಡಾ ಪಟು ಗಳಾದ ಸಂಜೀವ ಪುತ್ತೂರು, ಪುಷ್ಪರಾಜ ಹೆಗಡೆ, ಸ್ಥಳೀಯ ಜನ ಪ್ರತಿನಿಧಿಗಳು,ಕ್ರೀಡಾ ಭಿಮಾನಿಗಳು ಸೇರಿದಂತೆ ಅನೇಕ ಗಣ್ಯರು ಜಿಲ್ಲೆಯ ಗಡಿ ಭಾಗದ ಗುಂಡ್ಯ, ನೆಲ್ಯಾಡಿಯಲ್ಲಿ ಕ್ವೀನ್ಸ್ ಬ್ಯಾಟನ್ ರಿಲೇ ತಂಡವನ್ನು ಪೂರ್ಣ ಕುಂಭ ದೊಂದಿಗೆ ಸಾಂಪ್ರಾದಾ ಯಿಕವಾಗಿ ಸ್ವಾಗತಿಸಲು ಜಿಲ್ಲಾಡಳಿತ ಸಜ್ಜಾಗಿದ್ದು,ಸಾರ್ವ ಜನಿಕರು ಈ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಕ್ರೀಡಾಭಿ ಮಾನವನ್ನು ಮೆರೆಯ ಬೇಕೆಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಮನವಿ ಮಾಡಿದ್ದಾರೆ.ನೆಲ್ಯಾಡಿಯಿಂದ ಮಂಗಳೂರು ನಗರಕ್ಕೆ ಆಗಮಿಸುವ ತಂಡವನ್ನು ನಗರದ ಕದ್ರಿ ಪಾರ್ಕಿನಲ್ಲಿ ಸಂಜೆ 5 ಗಂಟೆಗೆ ನಗರದ ಪ್ರಥಮ ಪ್ರಜೆ ಮೇಯರ್ ರಜನಿ ದುಗ್ಗಣ್ಣ ಅವರು ಬರ ಮಾಡಿ ಕೊಳ್ಳುವರು.ಈ ಸಂದರ್ಭದಲ್ಲಿ ಅಂತಾ ರಾಷ್ಟ್ರೀಯ ಕ್ರೀಡಾ ಪಟುಗಳಾದ ವಂದನಾ ರಾವ್, ವಂದನಾ ಶಾನುಬಾಗ್, ಶೋಭಾ ನಾರಾಯಣ ಸೇರಿದಂತೆ ಹಲವು ಗಣ್ಯರುಮತ್ತು ಕ್ರೀಡಾ ಭಿಮಾನಿಗಳು ಪಾಲ್ಗೊಳ್ಳುವರು.
ನಗರದಲ್ಲಿ ರಿಲೇ ತಂಡ ಕದ್ರಿ ಪಾರ್ಕ್ ನಿಂದ 5.30 ಕ್ಕೆ ಹೊರಟು ಸರ್ಕಿಟ್ ಹೌಸ್, ಬಾವುಟಗುಡ್ಡ, ಬಿಜೈ ಜಂಕ್ಷನ್, ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್, ಮಂಗಳೂರು ಮಹಾ ನಗರಪಾಲಿಕೆ, ಬಳ್ಳಾಲ್ ಭಾಗ್ ವೃತ್ತ, ಬೆಸೆಂಟ್, ಪಿವಿಎಸ್ ಜಂಕ್ಷನ್, ಸೈಂಟ್ ಅಲೋಷಿಯಸ್ ಪ್ರಾಥಮಿಕ ಶಾಲೆ, ಕರಂಗಲ್ಪಾಡಿ, ಬಂಟ್ಸ್ ಹಾಸ್ಟೆಲ್, ಜ್ಯೋತಿ ಸರ್ಕಲ್, ಡಾನ್ ಬಾಸ್ಕೊ ಹಾಲ್, ಹಂಪನಕಟ್ಟಾ ಸಿಗ್ನಲ್, ಯುನಿವರ್ಸಿಟಿ ಕಾಲೇಜು ಮೂಲಕ ಪುರಭವನ ಪ್ರವೇಶಿಸಲಿದೆ. ನಗರದಲ್ಲಿ 6 ಕಿ.ಮೀ ಒಳಗೆ 20 ಕಡೆಗಳಲ್ಲಿ ಬೇಟನ್ ಹಸ್ತಾಂತರ ನಡೆಯಲಿದೆ. ಬೇಟನ್ ಹಿಡಿದು ಓಡುವವರನ್ನು ಈಗಾಗಲೇ ಗುರುತಿಸಲಾಗಿದ್ದು, ಅರ್ಜುನ, ಏಕಲವ್ಯ ಪ್ರಶಸ್ತಿ ವಿಜೇತರು, ಒಲಿಂಪಿಕ್ಸ್, ಕಾಮನ್ ವೆಲ್ತ್, ಏಷಿಯನ್ ಗೇಮ್ಸ್ ಮತ್ತು ಇತರ ಅಂತಾ ರಾಷ್ಟ್ರೀಯ,ರಾಷ್ಟ್ರೀಯ, ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗಿಗಳಾ ದವರು ರಿಲೇಯಲ್ಲಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಕ್ರೀಡಾ ಸ್ಫೂರ್ತಿಯನ್ನು ಸಾರ್ವಜನಿಕರು ತೋರ ಬೇಕಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಭಿಮಾನಿಗಳು ಪಾಲ್ಗೊಂಡು ರಿಲೇಯನ್ನು ಯಶಸ್ವಿಯಾಗಿಸಬೇಕೆಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.ಪುರ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಕಲೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಕಾರ್ಯ ಕ್ರಮಗಳಾದ ಯಕ್ಷಗಾನ, ಶಾಸ್ತ್ರೀಯ ನೃತ್ಯ ರೂಪಕ, ತುಳುನಾಡ ಜಾನಪದ ಕುಣಿತಗಳ ಪ್ರದರ್ಶನವನ್ನು ಆಯೋಜಿಸ ಲಾಗಿದೆ.ಸೆ.6 ರಂದು ತಂಡ ಉಡುಪಿ ಮೂಲಕ ಕಾರವಾರಕ್ಕೆ ತೆರಳಲಿದೆ. ಪತ್ರಿಕಾ ಗೋಷ್ಠಿಯಲ್ಲಿ ನಗರ ಪೋಲಿಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಪಾಲಿಕೆ ಕಮಿಷನರ್ ಡಾ. ಕೆ. ಎನ್. ವಿಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ರೆವೆನ್ಯೂ ಆಫೀಸರ್ ಮೇಘನಾ, ಕ್ರೀಡೆ,ಯುವಜನ ಮತ್ತು ಸೇವಾ ಅಧಿಕಾರಿ ಪಾಂಡುರಂಗ ಉಪಸ್ಥಿತರಿದ್ದರು.
ಭಾರತದಲ್ಲಿ ನೂರು ದಿನ: ಕಾಮನ್ ವೆಲ್ತ್ ಕ್ರೀಡಾ ಜ್ಯೋತಿ ಕ್ವೀನ್ಸ್ ಬ್ಯಾಟನ್ ಇಂಗ್ಲೆಡ್ ರಾಜ ಧಾನಿ ಲಂಡನ್ ನ ಬಕಿಂಗ್ ಹ್ಯಾಮ್ ಪ್ಯಾಲೇಸ್ ನಿಂದ ಅಕ್ಟೋಬರ್ 29,2009 ರಂದು ಪಯಣ ಆರಂಭಿ ಸಿದ್ದು, ಭಾರತದ 28 ರಾಜ್ಯಗಳಲ್ಲಿ ಹಾಗೂ 7 ಕೇಂದ್ರಾ ಡಳಿತ ಪ್ರದೇಶಗಳಲ್ಲಿ ಹಾದು ಹೋಗಲಿದೆ. ಈ ಸಂದರ್ಭದಲ್ಲಿ 200 ಪ್ರಮುಖ ನಗರ ಹಾಗೂ ಸಾವಿರಾರು ಹಳ್ಳಿಗಳನ್ನು ಹಾದು ಹೋಗಲಿದ್ದು, ಜಲ, ವಾಯು ಹಾಗೂ ನೆಲ ಮಾರ್ಗಗಳಲ್ಲಿ ಸಂಚರಿಸಲಿದೆ. ದೇಶದಾದ್ಯಂತ ಸಂಚರಿಸುವ ಕ್ರೀಡಾಜ್ಯೋತಿ 100 ದಿನಗಳ ಓಟವನ್ನು ದೆಹಲಿಯ ಜವಹರ ಲಾಲ್ ನೆಹರು ಸ್ಟೇಡಿಯಂ ಪ್ರವೇಶಿಸುವ ಮುಖಾಂತರ ಕೊನೆ ಗೊಳ್ಳಲಿದೆ. ದೆಹಲಿಯಲ್ಲಿ ಅಕ್ಟೋಬರ್ 3,2010 ರಂದು ರಾಣಿ ಎಲಿಜೆಬೆತ್ -11 ಬ್ಯಾಟನ್ ನೊಳಗಿರುವ ಸಂದೇಶವನ್ನು ಓದುವ ಮುಖಾಂತರ 19ನೇ ಕಾಮನ್ ವೆಲ್ತ್ ಕ್ರೀಡಾಕೂಟ ವಿದ್ಯುಕ್ತವಾಗಿ ಉದ್ಘಾಟನೆ ಗೊಳ್ಳಲಿದೆ. ಬ್ಯಾಟನ್ ನ ಒಳಪದರದಲ್ಲಿ ಅಮೂಲ್ಯವಾದ ಬಂಗಾರದ ಡಬ್ಬವಿದ್ದು, ಅದರೊಳಗೆ ಬಂಗಾರದ ಎಲೆಯಲ್ಲಿ ರಾಣಿಯ ಲಿಖಿತ ಸಂದೇಶವಿದೆ.

Wednesday, September 1, 2010

ಅಕ್ಟೋಬರ್ ನಲ್ಲಿ ರೈತರ ಹಬ್ಬ ಕೃಷಿ ಮಹೋತ್ಸವ

ಮಂಗಳೂರು,ಸೆ.01: ರೈತರಿಗಾಗಿ, ರೈತರಿಂದ, ರೈತರಿಗೋಸ್ಕರ ಆಯೋಜಿಸಿರುವ ಹಬ್ಬ ಕೃಷಿ ಮಹೋತ್ಸವ. ಕೃಷಿಯನ್ನು ಲಾಭದಾಯಕವಾಗಿ ಮಾಡಲು ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ನೀಡಲು ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆಯನ್ನು ಪಡೆಯಲು ಕೃಷಿ ಮಹೋತ್ಸವ ಕಾರ್ಯ ಕ್ರಮವನ್ನು ಕೃಷಿ ಇಲಾಖೆ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯ ಆವರಣದಲ್ಲಿ ಅಕ್ಟೋಬರ್ ನಲ್ಲಿ ಹಮ್ಮಿಕೊಂಡಿದೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ರೈತರಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಅವಶ್ಯವಿರುವ ತಂತ್ರಜ್ಞಾನವನ್ನು ತಲುಪಿಸಲು ಏಕಗವಾಕ್ಷಿ ವಿಸ್ತರಣಾ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ವಿವಿಧ ಅಭಿವೃದ್ಧಿ ಇಲಾಖೆಗಳಾದ ತೋಟಗಾರಿಕೆ, ಪಶುವೈದ್ಯಕೀಯ,ಜಲಾನಯನ,ರೇಷ್ಮೆ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಜಾಗೃತಿ ಕಾರ್ಯಕ್ರಮ ಮೂಡಿಸುವುದು ಕೃಷಿ ಮಹೋತ್ಸವದ ಉದ್ದೇಶವಾಗಿದೆ.
ಬೆಳೆ ವೈವಿದ್ಧೀಕರಣ, ವ್ಯವಸಾಯ ವೆಚ್ಚದಲ್ಲಿ ಕಡಿತ,ಹೆಚ್ಚು ಇಳುವರಿ, ಕೃಷಿಯೊಂದಿಗೆ ಪೂರಕ ಉಪ ಕಸುಬು ಗಳಾದ ಪಶುಸಂಗೋಪನೆ, ಕೋಳಿ,ಆಡು ಸಾಕಾಣಿಕೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆ ಗಳನ್ನು ನಮ್ಮ ರೈತರು ಅಳವಡಿಸಿ ಕೊಳ್ಳುವುದು ಅನಿವಾರ್ಯ ವಾಗಿದೆ. ಕೃಷಿ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವ ಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶ. ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ, ವಿಜ್ಞಾನಿಗಳೊಂದಿಗೆ ರೈತರ ಸಂವಾದವನ್ನು ಮಹೋತ್ಸವ ಕಾರ್ಯಕ್ರಮ ಒಳಗೊಂಡಿದೆ.
ಕೃಷಿ ಮಹೋತ್ಸವ ಸಮಗ್ರ ಕೃಷಿ ಮಾಹಿತಿ ಘಟಕ, ವಸ್ತು ಪ್ರದರ್ಶನದ ಮೂಲಕ ಮಾಹಿತಿ ನೀಡಲು ಉದ್ದೇಶಿಸಲಾಗಿದೆ.ತಾಂತ್ರಿಕ ಮಾಹಿತಿ, ಯೋಜನೆ ಹಾಗೂ ಸವಲತ್ತುಗಳ ಲಭ್ಯತೆ, ಮಣ್ಣು ಮಾದರಿ ಸಂಗ್ರಹ ಹಾಗೂ ಈಗಾಗಲೇ ವಿಶ್ಲೇಷಣೆಯಾಗಿರುವ ಮಾದರಿಗಳ ಮಣ್ಣು ಆರೋಗ್ಯ ಚೀಟಿಗಳ ವಿತರಣೆ, ಬೆಳೆ ವಿಮೆ, ಕೃಷಿ ಪರಿಕರಗಳ ನಿರ್ವಹಣೆ, ಪಶುಗಳಿಗೆ ಲಸಿಕೆ ಕಾರ್ಯಕ್ರಮ ಮತ್ತು ಪಶು ಚಿಕಿತ್ಸಾ ಶಿಬಿರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆ, ಸಾಲ ಸೌಲಭ್ಯ, ಯಂತ್ರೋಪಕರಣ, ಹನಿ ನೀರಾವರಿ ಮತ್ತು ತುಂತುರು ನೀರಾವರಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ಸಾವಯವ ಕೃಷಿ ಮಿಷನ್, ಸಾವಯವ ಗ್ರಾಮ ಯೋಜನೆ,ಕೃಷಿ ಆಧಾರಿತ ಉಪಕಸುಬುಗಳ ಬಗ್ಗೆ ಮಾಹಿತಿ, ಸಂಸ್ಕರಣಾ ಘಟಕಗಳು, ರೈತಕ್ಷೇತ್ರ ಪಾಠಶಾಲೆ, ಭೂಚೇತನ, ಆತ್ಮ ಯೋಜನೆ, ರೈತ ಶಕ್ತಿ ಗುಂಪುಗಳು ಇತ್ಯಾದಿ, ಸಮಗ್ರ ಕೃಷಿ ತಾಂತ್ರಿಕತೆಗಳನ್ನು ಬಿಂಬಿಸುವ ಸಾಕ್ಷ್ಯ ಚಿತ್ರ ಪ್ರದರ್ಶನ, ಜಾನಪದ ಹಾಡುಗಾರರು, ಬೀದಿ ನಾಟಕಗಾರರು, ಯಕ್ಷಗಾನ ಕಲಾವಿದರು, ಒಗಟು,ಲಾವಣಿ, ಗಾದೆ ಹೇಳುವವರ ಮುಖಾಂತರ ಕೃಷಿ ಸಂದೇಶ ಸಾರುವ ಹಾಡು, ಕಿರು ನಾಟಕ ಏರ್ಪಡಿಸಲಾಗುವುದು.ರೈತ ಸಂವಾದ ಕಾರ್ಯ ಕ್ರಮದಡಿ ಕ್ಷೇತ್ರ ಮಟ್ಟದಲ್ಲಿ ತಾಂತ್ರಿ ಕತೆಯನ್ನು ರೈತರು ಅಳವಡಿ ಸುವಾಗ ಎದುರಿಸುವ ಸಮಸ್ಯೆಗಳ ವೈಜ್ಞಾನಿಕ ವಿಶ್ಲೇಷಣೆ, ಪರಿಹಾ ರೋಪಾಯ ಸೂಚಿಸುವ ಮತ್ತು ಅವುಗಳನ್ನು ಅಳವಡಿ ಸುವಂತೆ ಮನವರಿಕೆ ಮಾಡುವುದು. ವಿಜ್ಞಾನಿ, ವಿಷಯ ತಜ್ಞರೊಂದಿಗೆ ರೈತರು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸುವುದು. ಪ್ರಗತಿ ಪರ ರೈತ ರೊಂದಿಗೆ ಅನುಭವ ಹಂಚಲು ಅವಕಾಶ. ವಿಶೇಷ ಪ್ರಯತ್ನ ಗಳಿಂದಾಗಿರುವ ಮಾದರಿ ಹಸಿರು ಹೊಲ, ಹಸಿರು ತೋಟ, ಹಸಿರು ಗದ್ದೆಗಳಿಗೆ ಎಲ್ಲರೊಂದಿಗೆ ಗ್ರಾಮ ನಡಿಗೆ ಮಾಡುವ ಅವಕಾಶವನ್ನು ಈ ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ. ರೈತರಿಗೆ ಸಕಾಲದಲ್ಲಿ ಕೃಷಿ ಪರಿಕರಗಳು/ಸಾಮಗ್ರಿಗಳು,ಸಾಲ ಸೌಲಭ್ಯಗಳನ್ನು ದೊರಕಿಸುವುದು, ಕೃಷಿ ಇಲಾಖೆ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳೂ ರೈತರ ಮನೆ-ಮನಕ್ಕೆ ನೇರವಾಗಿ ತಲುಪುವುದು, ಮಾದರಿ ಪ್ರಯತ್ನಗಳು, ಮಾದರಿ ರೈತರು, ಜ್ಞಾನದ ಹಂಚಿಕೆ, ಆಹಾರ ಬೆಳೆಗಳ ಉತ್ಪಾದಕತೆಯಲ್ಲಿ ಗಮನಾರ್ಹ ಬದಲಾವಣೆ ತರುವುದು, ರೈತ ಸಂಪರ್ಕ ಕೇಂದ್ರಗಳಲ್ಲಿ ಹೊಸ ತಂತ್ರಜ್ಞಾನಕ್ಕೆ ಬೇಕಿರುವ ಬೇಡಿಕೆಗಳನ್ನು ಸಂಗ್ರಹಿಸುವುದು, ಸಾಮಾನ್ಯ ಕೃಷಿ ಅಭಿವೃದ್ಧಿಗೆ ಬೇಕಾದ ಎಲ್ಲ ಕ್ರಮಗಳ ನಿರ್ವಹಣೆಗೆ ನಿರಂತರ ಸಿದ್ಥತೆ ಮಾಡುವುದು ಕೃಷಿ ಮಹೋತ್ಸವದ ಪ್ರತಿಫಲಗಳೆಂದು ಪರಿಗಣಿಸಲ್ಪಟ್ಟಿದೆ.