Thursday, September 23, 2010

ಶಾಂತಿ -ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಸಜ್ಜು

ಮಂಗಳೂರು,ಸೆ.23:ಅಯೋಧ್ಯೆಯ ವಿವಾದಿತ ಕಟ್ಟಡ ಜಾಗದ ಕುರಿತ ನ್ಯಾಯಾಲಯದ ತೀರ್ಪನ್ನು ಪ್ರತಿಯೊಬ್ಬ ಪ್ರಜೆಯೂ ಗೌರವಿಸಬೇಕು ಹಾಗೂ ಸಾಮಾಜಿಕ ಜೀವನ ಏರುಪೇರುಗೊಳ್ಳದಂತೆ ಪ್ರಜಾಪ್ರಭುತ್ವಕ್ಕೆ ಬದ್ದರಾಗಿರಬೇಕು ಎಂಬ ಸಂದೇಶಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಜಿಲ್ಲಾಡಳಿತ ಮತ್ತೆ ಮತ್ತೆ ಸಾರಿ ಹೇಳುತ್ತಿದೆ.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಸ್ಟೇಷನ್ ವ್ಯಾಪ್ತಿ ಯಿಂದ ಹಿಡಿದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವ ದಲ್ಲಿ ಜಿಲ್ಲಾ ಮಟ್ಟದ ವರೆಗೆ ಹಲವು ಸುತ್ತಿನ ಶಾಂತಿ ಸಭೆಗಳು ನಡೆದಿದ್ದು, ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆ ಗಳ ಮುಖಂಡರು ವಿನಂತಿ ಗಳನ್ನು ಪ್ರಕಟಿಸಿ ದ್ದಾರೆ. ಎಲ್ಲರೂ ಶಾಂತಿ ಯನ್ನು ಪ್ರತಿ ಪಾದಿಸು ತ್ತಿದ್ದು, ಶಾಂತಿ ಹಾಗೂ ಸು ವ್ಯವಸ್ಥೆಗೆ ಧಕ್ಕೆ ಬಾರ ದಂತೆ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್, ಪೊಲೀಸ್ ಅಧೀಕ್ಷಕರು ಸೂಕ್ತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 24 ಮತ್ತು 25 ರಂದು ಅಂಗನವಾಡಿ ಮಕ್ಕಳಿಂದ ಹಿಡಿದು ವೈದ್ಯಕೀಯ,ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆಯನ್ನು ಸಾರಿದೆ. 23ರ ಸಂಜೆಯಿಂದ 26 ಬೆಳಗ್ಗೆವರೆಗೆ 144 ನೇ ಸೆಕ್ಷನ್ ಅನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. 24ರ ಬೆಳಗ್ಗೆ 6 ಗಂಟೆಯಿಂದ 26 ಸಂಜೆ ಮಧ್ಯರಾತ್ರಿವರೆಗೆ ಜಿಲ್ಲೆಯಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಪಟಾಕಿ ಅಂಗಡಿಗಳನ್ನು ಮುಚ್ಚಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಕೇರಳ ರಾಜ್ಯ ಸಂಪರ್ಕಿಸುವ ಜಿಲ್ಲೆಯ ಗಡಿ ಭಾಗಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ಮತ್ತು ಕಟ್ಟೆಚ್ಚರ ಘೋಷಿಸಲಾಗಿದೆ.ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ, ಅನುದಾನಿತ ಕಾಲೇಜುಗಳು,ವೈದ್ಯಕೀಯ, ತಾಂತ್ರಿಕ ಕಾಲೇಜುಗಳು, ಕೇಂದ್ರೀಯ ವಿದ್ಯಾಲಯಗಳು, ಎಲ್ಲಾ ಶಿಕ್ಷಣ ಸಂಸ್ಥೆಗಳು,ಅಂಗನವಾಡಿ ಕೇಂದ್ರ ಗಳಿಗೆ ಜಿಲ್ಲಾಧಿ ಕಾರಿಗಳು ಹಾಗೂ ಜಿಲ್ಲಾ ದಂಡಾ ಧಿಕಾ ರಿಗಳು ಆಗಿರುವ ಪೊನ್ನು ರಾಜ್ ಅವರು ರಜೆ ಘೋಷಿಸಿ ಆದೇಶ ಹೊರಡಿ ಸಿದ್ದಾರೆ.23 ರಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಬಂದೋ ಬಸ್ತ್ ಸಂಬಂಧ ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ, ಶಾಂತಿ, ಸು ವ್ಯವಸ್ಥೆಗೆ ಸಂಬಂಧಿ ಸಿದಂತೆ ಕಮಿಷ ನರೇಟ್ ವ್ಯಾಪ್ತಿಯಲ್ಲಿ 1500 ಪೊಲೀಸರನ್ನು ನಿಯೋಜಿ ಸಲಾಗಿದ್ದು, 100 ಹೆಚ್ಚುವರಿ ಗಸ್ತು ವಾಹನ,ಕೆ ಎಸ್ ಆರ್ ಪಿ 5 ತುಕಡಿ, ಹೋಮ್ ಗಾರ್ಡ್ಸ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪ್ರಹಾರ ದಳವನ್ನು ನಿಯೋಜಿ ಸಲಾಗಿದೆ. ಸಾರ್ವ ಜನಿಕರಲ್ಲಿ ಸುರಕ್ಷಾ ಭಾವನೆ ಮೂಡಿಸಲು ಪೊಲೀಸ್ ಇಲಾಖೆ ಎಸ್ ಎಂ ಎಸ್ ಮೂಲಕ ಸಕರಾ ತ್ಮಕ ಸಂದೇಶ ಹಾಗೂ ರೂಟ್ ಮಾರ್ಚ್ ಗಳನ್ನು ಈಗಾಗಲೇ ಆರಂಭಿಸಿದೆ. ಸ್ಥಳೀಯ ಮುಖಂಡ ರೆಲ್ಲರೂ ಸ್ಥಳದಲ್ಲಿದ್ದು ಶಾಂತಿ ಕಾಪಾಡಲು ಸಹಕರಿಸುವ ಭರವಸೆ ಯನ್ನು ಜಿಲ್ಲಾ ಡಳಿತಕ್ಕೆ ನೀಡಿದ್ದಾರೆ ಎಂದೂ ಕಮಿಷನರ್ ತಿಳಿಸಿದರು. ಯಾವುದೇ ಗಾಳಿ ಸುದ್ದಿ ಮತ್ತು ವದಂತಿ ಗಳಿಗೆ ಕಿವಿ ಕೊಡ ಬಾರದೆಂದು ಸಾರ್ವ ಜನಿಕರಲ್ಲಿ ಮನವಿ ಮಾಡಿರುವ ಅವರು ಅ ಸುರಕ್ಷತಾ ಸಂದರ್ಭ ಹಾಗೂ ಮಾಹಿತಿ ನೀಡಲು 100 ಅಥವಾ 2220800 ದೂರ ವಾಣಿ ಸಂಖ್ಯೆ ಯನ್ನು ಅಥವಾ ಕಮಿಷನರ್ ಮೊಬೈಲ್ 9480805952,ಉಪ ಪೊಲೀಸ್ ಆಯುಕ್ತರು 5962, ಡಿಸಿಪಿ-2 5963 ಸಂಪರ್ಕಿಸ ಬಹುದೆಂದು ಹೇಳಿದ್ದಾರೆ.