Wednesday, September 29, 2010

ಸ್ವಚ್ಛತೆ ಬಗ್ಗೆ ನಿಸ್ವಾರ್ಥಿಗಳಾಗಿ: ಜಿ ಮಂಜುಳಾ

ಮಂಗಳೂರು,ಸೆ.29 :ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಸಕಾಲಕ್ಕೆ ಆಗಲೇಬೇಕು; ಜನರು ತಾವೆಲ್ಲ ತಿಳಿದುಕೊಂಡಿದ್ದೇವೆ ಅರಿತಿರುತ್ತೇವೆ ಎಂಬ ಭ್ರಮೆಯಲ್ಲಿ ರುತ್ತೇವೆ; ಮಾಹಿತಿಯೇ ಶಕ್ತಿ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ತಾಲೂಕು ಪಂಚಾಯತ್ ಸದಸ್ಯರಾದ ಜಯರಾಂ ಪೂಜಾರಿ ಅವರು ಹೇಳಿದರು.

ಅವರಿಂದು ಪುತ್ತೂರು ತಾಲೂಕಿನ ಪುರುಷರ ಕಟ್ಟೆ ರೈತ ಸೇವಾ ಕೇಂದ್ರ ದಲ್ಲಿ ವಾರ್ತಾ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಪುತ್ತೂರು, ಗ್ರಾಮ ಪಂಚಾಯತ್ ನರಿ ಮೊಗರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಯುಕ್ತಾ ಶ್ರಯದಲ್ಲಿ ಏರ್ಪಡಿಸಲಾದ ಸ್ವಚ್ಛ ಪರಿಸರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.ಪರಿಸರ ಜಾಗೃತಿ ಇಂದಿನ ಅಗತ್ಯವಾಗಿದ್ದು, ಶೌಚಾಲಯಕ್ಕೆ ಮಾತ್ರ ಸ್ವಚ್ಛತೆ ಸೀಮಿತವಾಗಿರದೆ ಸಮಗ್ರ ಮಾಹಿತಿಯ ಮೂಲಕ ಪರಿಸರ ಜಾಗೃತಿ ಮೂಡಿಸಬೇಕಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ನ ಸಂಪೂರ್ಣ ಸ್ವಚ್ಛತಾ ಆಂದೋಲನ ಜಿಲ್ಲಾ ನೆರವು ಘಟಕದ ಮಂಜುಳಾ ಅವರು ಸ್ವಚ್ಛತೆಯ ಬಗ್ಗೆ ಸ್ವಾರ್ಥಿಗಳಾಗದೆ ನಾವು ನಮ್ಮ ಮನೆ, ಪರಿಸರದ ಬಗ್ಗೆ ಇನ್ನಷ್ಟು ಹೆಚ್ಚಿನ ಚಿಂತನೆಯನ್ನು ಮಾಡಿದರೆ ಮಾತ್ರ ನಮ್ಮ ಮುಂದಿನ ಜನಾಂಗ ಜೀವಿಸಲು ಯೋಗ್ಯವಾದ ಪರಿಸರ ಉಳಿಸಲು ಸಾಧ್ಯ ಎಂದರು. ನಿರ್ಮಲ ಗ್ರಾಮ ಪಂಚಾಯತ್ ಪುರಸ್ಕಾರವನ್ನು ನರಿಮೊಗರು ಪಂಚಾಯಿತಿ ಪಡೆದುಕೊಂಡಿದ್ದರೂ ನಿರೀಕ್ಷಿತ ಸ್ವಚ್ಛತೆ ಅನುಷ್ಠಾನ ಸಾಧ್ಯವಾಗಿಲ್ಲ ಎಂದ ಅವರು, ಪರಿಸರ, ಜಲ ಮೂಲಗಳನ್ನು ಅಶುದ್ಧ ಗೊಳಿಸುವ ಹಕ್ಕು ನಮಗಿಲ್ಲ ಎಂದರು. ವೈಯಕ್ತಿಕ ಸ್ವಚ್ಛತೆ, ಸಮು ದಾಯ ಸ್ವಚ್ಛತೆ, ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಸಮಗ್ರ ಮಾಹಿತಿ ನೀಡಿದ ಅವರು, ಹಸಿಕಸ ಮತ್ತು ಒಣಕಸ ಪ್ರತ್ಯೇಕಿಸುವ ಬಗ್ಗೆ ಹಾಗೂ ಪ್ಲಾಸ್ಟಿಕ್ ಸೌಧ ನಿರ್ಮಿಸುವ ಬಗ್ಗೆ, ಶಾಲೆ ಹಾಗೂ ಅಂಗನ ವಾಡಿಗಳಲ್ಲಿ ಎನ್ ಆರ್ ಇ ಜಿ ಎ ಯೋಜನೆಯಡಿ ಕಾಂಪೋಸ್ಟ್ ಗುಂಡಿ ನಿರ್ಮಾಣದ ಬಗ್ಗೆ ಮಾರ್ಗ ದರ್ಶನ ನೀಡಿದರು.ಅಧ್ಯಕ್ಷತೆ ವಹಿಸಿದ್ದ ನರಿಮೊಗರು ಗ್ರಾಮಪಂಚಾಯಿತಿ ಅಧ್ಯಕ್ಷರಾದ ನಳಿನಿ ಅವರು, ಸ್ವಚ್ಛ ಪರಿಸರಕ್ಕೆ ಪೂರಕವಾಗಿ ಪಂಚಾಯಿತಿ ಕೈಗೊಳ್ಳುವ ಎಲ್ಲ ಕ್ರಮಗಳನ್ನು ಬೆಂಬಲಿಸುವುದಾಗಿ ಹೇಳಿದರಲ್ಲದೆ, ನವೆಂಬರ್ ಒಳಗೆ ನರಿಮೊಗರು ಪಂಚಾಯಿತಿಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡುವ ಭರವಸೆಯನ್ನು ನೀಡಿದರು.ನವೀನ್ ರೈ ಅವರು ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾಹಿತಿಯನ್ನು ಪಾಲಿಸಿ, ಸುತ್ತಮುತ್ತಲ ವರ್ತಕರು ಪ್ಲಾಸ್ಟಿಕ್ ಮುಕ್ತ ಗ್ರಾಮಪಂಚಾಯಿತಿ ನಿರ್ಮಾಣಕ್ಕೆ ಸರ್ವ ಬೆಂಬಲ ನೀಡುವುದಾಗಿ ಹೇಳಿದರು. ರೈತ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಬಾಬು ಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣಪ್ಪ ಸಾಲಿ ಯಾನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಮೇಲ್ವಿಚಾ ರಕರಾದ ಪ್ರೇಮಾ ನಂದ ಎಲ್. ಬಿ. ವೇದಿಕೆ ಯಲ್ಲಿದ್ದರು. ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಭಾಶ್ಚಂದ್ರ ಮಲ್ಲಣ್ಣವರ್ ವಂದಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೇಖ ಕಾರ್ಯಕ್ರಮ ನಿರೂಪಿಸಿದರು. ಗಣೇಶಪುರ ಗಿರೀಶ್ ನಾವಡ ತಂಡ ದಿಂದ ಸಾವಯವ ಅಜ್ಜ ಎಂಬ ಬೀದಿ ನಾಟಕ ಮತ್ತು ಮಹಮ್ಮದ್ ಮಾರಿಪಳ್ಳ ಅವರಿಂದ ಜಾನಪದ ಸಂಗೀತ ಏರ್ಪಡಿ ಸಲಾಯಿತು.