Tuesday, September 21, 2010

ಕೊಟ್ಟ ಮಾತಿಗೆ ಬದ್ಧರಾಗಿ: ಜಿಲ್ಲಾಧಿಕಾರಿ

ಮಂಗಳೂರು,ಸೆ.21:ಸಾಮಾಜಿಕ ಸೌಹಾರ್ದತೆ ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಪ್ರತಿಯೊಬ್ಬ ಪ್ರಜೆಯೂ ಹೊಣೆಯರಿತು ವರ್ತಿಸಬೇಕು ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಹೇಳಿದರು. ಅವರು ಸೆ.20ರಂದು ಸಂಜೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾದ ಶಾಂತಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಶಾಂತಿ ಸಮಿತಿ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಮಾತಿಗೆ ಬದ್ಧರಾಗಿ ಎಂಬ ಸಂದೇಶವನ್ನು ಜಿಲ್ಲಾಧಿಕಾರಿಗಳು ನೀಡಿದರು.ಸಭೆಯನ್ನು ಉದ್ದೇಶಿಸಿ ಮಾತ ನಾಡಿದ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಸಂಭ್ರಮಾ ಚರಣೆಯ ಮೆರವಣಿಗೆ, ಪ್ರತಿಭಟನಾ ಮೆರವಣಿ ಗೆಗಳಿಗೆ ಅವ ಕಾಶವಿಲ್ಲ. ಸೆ.23 ರ ಸಂಜೆಯಿಂದ 26 ಮುಂಜಾನೆಯವರೆಗೆ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯ ಲ್ಲಿರುತ್ತದೆ. ಅಹಿತಕರ ಘಟನೆ ತಡೆಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದ್ದು, ಮೊಬೈಲ್ ನಲ್ಲಿ ಸುರಕ್ಷಾ ಸಂದೇಶ ಗಳನ್ನು ಪೊಲೀಸ್ ಇಲಾಖೆ ಬಿತ್ತರಿಸಲಿದೆ ಎಂದರು. ಶಾಲಾ ಮಕ್ಕಳಿಗೆ ಪರೀಕ್ಷಾ ಸಮಯ ಇದಾಗಿದ್ದು,ಪೊಲೀಸ್ ಇಲಾಖೆ ಎಲ್ಲರ ಸುರಕ್ಷೆ ಯನ್ನು ಗಮನ ದಲ್ಲಿರಿಸಿ ಕ್ರಮ ಕೈ ಗೊಂಡಿದೆ ಎಂದರು.ಪೊಲೀಸ್ ಇಲಾಖೆ, ಜಿಲ್ಲಾಡ ಳಿತದ ಮೇಲೆ ಜನರಿ ಟ್ಟಿರುವ ವಿಶ್ವಾಸ ವನ್ನು ಉಳಿಸಿ ಕೊಳ್ಳು ವುದಾಗಿ ಜಿಲ್ಲಾ ಎಸ್ ಪಿ ಡಾ. ಸುಬ್ರಮ ಣ್ಯೇಶ್ವರ ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾದ ಕೃಷ್ಣ ಜೆ ಪಾಲೆಮಾರ್ ಅವರು, ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡಲು ಕಠಿಣ ನಿರ್ಧಾರ ತೆಗೆದುಕೊಳ್ಳುವ ಎಲ್ಲ ಅಧಿಕಾರ ವನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಕಾನೂನು ಪಾಲನೆಗೆ ಪ್ರತಿಯೊ ಬ್ಬರು ಬದ್ಧರಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು. ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಅಪರ ಜಿಲ್ಲಾ ಧಿಕಾರಿ ಪ್ರಭಾಕರ ಶರ್ಮಾ, ಶಾಸಕ ರಾದ ಯೋಗೀಶ್ ಭಟ್, ಯು ಟಿ ಖಾದರ್, ಅಧಿಕಾರಿಗಳು ಸಂಘ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡರು.