Thursday, September 9, 2010

'ಕುಡಿಯುವ ನೀರು ಪೂರೈಕೆಗೆ ಜಿಲ್ಲಾಪಂಚಾಯತ್ ನಲ್ಲಿ ಹಣದ ಕೊರತೆ ಇಲ್ಲ'

ಮಂಗಳೂರು,ಸೆ.09:ಜಿಲ್ಲಾ ಪಂಚಾಯತ್ ನಲ್ಲಿ ಕ್ರಿಯಾಯೋಜನೆಯಡಿ ಸೇರ್ಪಡೆಗೊಂಡ ಕುಡಿಯುವ ನೀರು ಯೋಜನೆಗೆ ಅನುದಾನದ ಕೊರತೆ ಇಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಹೇಳಿದರು.

ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ಸಭಾಂಗಣ ದಲ್ಲಿ ಏರ್ಪಡಿಸಲಾದ 24ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕ್ರಿಯಾ ಯೋಜನೆ ಯಡಿ ರೂಪಿಸಿದ ಯೋಜನೆಗಳ ಅನುಷ್ಠಾನಕ್ಕೆ ಹಿಂದಿನ ಸಾಲುಗಳಲ್ಲಿ ದೊರೆತ ಅನುದಾನ ಕ್ಕಿಂತ ಹೆಚ್ಚೇ ಅನು ದಾನ ದೊರೆತಿದ್ದು ಅನು ದಾನದ ಕೊರತೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.ಗ್ರಾಮೀಣ ಪ್ರದೇಶ ಗಳಿಗೆ ಕುಡಿಯುವ ನೀರು ಯೋಜನೆಯಡಿ ಸಮಗ್ರ ಸಮೀಕ್ಷೆಯ ಬಳಿಕ ನೀರು ಪೂರೈಕೆಗೆ ಪ್ರಸಕ್ತ ಸಾಲಿನಲ್ಲಿ 40 ಕೋಟಿ ಹಣ ಸ್ಯಾಂಕ್ಷನ್ ಆಗಿದ್ದು, ಈಗಾಗಲೇ 17.80 ಕೋಟಿ ರೂ. ಬಿಡುಗಡೆಯಾಗಿದೆ ಎಂದರು. ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.2005-06ನೇ ಸಾಲಿನಲ್ಲಿ 2 ಕೋಟಿ, 06-07ನೇ ಸಾಲಿನಲ್ಲಿ 6 ಕೋಟಿ, 07-08ನೇ ಸಾಲಿನಲ್ಲಿ 15 ಕೋಟಿ ಹಣ ಬಿಡುಗಡೆಯಾಗಿದ್ದು,ಈ ಸಾಲಿನಲ್ಲಿ 3 ಕೋಟಿ ರೂ. ಹಿಂದಕ್ಕೆ ಹೋಗಿದೆ. ಹಾಗಾಗಿ 09-10ನೇ ಸಾಲಿನಲ್ಲಿ 7 ಕೋಟಿ ರೂ. ಬಿಡುಗಡೆಯಾಗಿ ಸದುಪಯೋಗವಾಗಿದೆ ಎಂದರು.10-11ನೇ ಸಾಲಿಗೆ ಕ್ರಿಯಾಯೋಜನೆಗೆ ಅನುಗುಣವಾಗಿ ಹಣದ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಜಿಲ್ಲೆಯಲ್ಲಿ ದುರಸ್ತಿ ಅಗತ್ಯ ವಿರುವ ಅಂಗನ ವಾಡಿ ಕೇಂದ್ರ ಗಳನ್ನು ರಿಪೇರಿ ಮಾಡಲು ಜಿಲ್ಲಾ ಪಂಚಾ ಯಿತಿ ನಿರ್ಣಯ ತೆಗೆದು ಕೊಂಡಿದ್ದು, ನೂತನ ಕಟ್ಟಡ ನಿರ್ಮಿಸಲು ಬಂದ ಹಣವನ್ನು ನವೀ ಕರಣಕ್ಕೆ ಬಳಸಿ ಎಂದು ಜಿಲ್ಲಾ ಪಂಚಾ ಯತ್ ಅಧ್ಯಕ್ಷರು ಹೇಳಿದರು. ಮಂಗಳೂರು ತಾಲೂಕಿನ ಐಕಳ ಗ್ರಾಮ ಪಂಚಾಯಿತಿ ಏಳಿಂಜೆ ಗ್ರಾಮ ಶಾಂಭವಿ ನದಿಯ ದಂಡೆಯಲ್ಲಿ ಮರಳುಗಾರಿಕೆಯಿಂದ ಜಿಲ್ಲಾ ಪಂಚಾಯತ್ ರಸ್ತೆ ಮತ್ತು ಲೋಕೋ ಪಯೋಗಿ ಇಲಾಖೆ ರಸ್ತೆ ಹಾದು ಹೋಗುತ್ತಿದ್ದು, ಎರಡು ರಸ್ತೆಗಳ ಸೇತುವೆ ಇದ್ದು, ಮರಳು ಗಾರಿಕೆಯಿಂದ ಸೇತುವೆಯ ಪಕ್ಕದ ದಡಗಳಿಗೆ ಕೊರೆತ ಭೀತಿ ಇದೆ; ರಸ್ತೆಗಳು ಹಾಳಾಗುತ್ತಿವೆ ಎಂಬುದರ ಕುರಿತು ಚರ್ಚೆಯಾದ ಬಳಿಕ ಜಿಲ್ಲಾ ಪಂಚಾ ಯತ್ ಈ ಪ್ರದೇಶದಲ್ಲಿ ಮರಳು ಗಾರಿಕೆ ನಿಷೇಧಿಸಲು ಕ್ರಮ ಕೈಗೊಂಡರೆ ನಿಷೇಧ ಅನುಷ್ಠಾನಕ್ಕೆ ತರಲಾಗುವುದು ಎಂದು ಗಣಿ ಅಧಿಕಾರಿ ಡಾ. ರವೀಂದ್ರ ಸಭೆಯಲ್ಲಿ ಉತ್ತರ ನೀಡಿದರು.ಜಿಲ್ಲೆಯಾದ್ಯಂತ ಅಕ್ರಮ ಮರಳು, ಗಣಿಗಾರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.ಆಶ್ರಯ ಮನೆಗಳಿಗೆ ಒದಗಿಸುವ ಮರಳಿಗೆ ವಿನಾಯಿತಿ ಹಾಗೂ ಮರಳು ಸಾಗಾಟದಿಂದ ರಸ್ತೆ ನಿರ್ವಹಣೆಗೆ ಕ್ರಮ ಕೈಗೊಳ್ಳಲು ಪಂಚಾಯಿತಿಗೆ ಅಧಿಕಾರ ನೀಡುವ ಬಗ್ಗೆ ನಿರ್ಣಯ ಅಂಗೀಕರಿಸಲು ಸಭೆ ನಿರ್ಧರಿಸಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಉಪಾಧ್ಯಕ್ಷ ಜಗನ್ನಾಥ್ ಸಾಲ್ಯಾನ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಜಶ್ರೀ ಹೆಗಡೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸದಾನಂದ ಮಲ್ಲಿ ಉಪಸ್ಥಿತರಿದ್ದರು.