Tuesday, September 21, 2010

ನದಿಮುಖೀ ಯೋಜನೆಗೆ ಚಾಲನೆ ನೀಡಲು ಸಭೆ

ಮಂಗಳೂರು, ಸೆ.21: ಮಂಗಳೂರು ನಗರದಲ್ಲಿ ನದೀಮುಖಿ ಯೋಜನೆಯನ್ನು ಗುಜರಾತ್ ಟೌನ್ ಪ್ಲಾನಿಂಗ್ ಸ್ಕೀಮ್ ಮಾದರಿಯಲ್ಲಿ ಜಾರಿಗೆ ತರುವ ಸಂಬಂಧ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ತಾಂತ್ರಿಕ ಸಮಿತಿ ಸಭೆ ನಡೆಸಲಾಯಿತು.
ಶಾಸಕರು ಮತ್ತು ಕೆ ಎಸ್ ಐ ಐ ಡಿ ಸಿಯ ಅಧ್ಯಕ್ಷರಾದ ಎನ್. ಯೋಗೀಶ್ ಭಟ್, ಕೆ ಎಸ್ ಐ ಐ ಡಿ ಸಿ ವ್ಯವಸ್ಥಾಪಕ ನಿರ್ದೇಶ ಕರಾದ ವಂದಿತಾ ಶರ್ಮಾ ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಡಿಸೈನ್ ಪ್ಲಾನಿಂಗ್ ಕೌನ್ಸಿಲ್ ಅಹ್ಮದಾಬಾದ್, ಇನ್ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಫೌಂಡೇಷನ್ ಮಂಗಳೂರು ಇವರು ಯೋಜನೆಯ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಮಾಹಿತಿ ನೀಡಿದರು. ಸಾರ್ವಜನಿಕ ಮತ್ತುಇ ಖಾಸಾಗಿ ಸಹಭಾಗಿತ್ವದ ಯೋಜನೆಯಡಿ ಮಂಗಳೂರಿನಲ್ಲೂ ನಗರ ಯೋಜನೆ ರೂಪಿಸುವುದು ಶಾಸಕರ ಬಹಳ ವರ್ಷಗಳ ಕನಸಾಗಿದ್ದು, ಈ ಸಂಬಂಧ ಇಂದು ಮಂಗಳೂರಿನಲ್ಲಿ ಜರುಗಿದ ಸಭೆ ಎರಡನೆಯದು. ಈ ಸಂಬಂಧ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಜರುಗಿದ ಪ್ರಥಮ ಸಭೆಯ ಬಗ್ಗೆ ಶಾಸಕರಾದ ಎನ್ ಯೋಗೀಶ್ ಭಟ್ ಅವರು ಮಾಹಿತಿ ನೀಡಿದರು.
ಈ ಯೋಜನೆ ದೇಶದ ಪ್ರಮುಖ ನದಿ ಮುಖೀ ಯೋಜನೆ ಗಳಲ್ಲೊಂ ದಾಗು ವಂತೆ ರೂಪಿಸಲು ತಾಂತ್ರಿಕತೆ ಸೇರಿ ದಂತೆ ಎಲ್ಲ ಪರಿ ಶ್ರಮ ಗಳನ್ನು ಪರಿಣತ ರಿಂದ ಪಡೆದು ಯೋಜನೆ ಅನುಷ್ಠಾ ನಕ್ಕೆ ತರಲಾ ಗುವುದು ಎಂದು ಶಾಸಕರು ತಿಳಿಸಿದರು. ಮಂಗಳೂ ರಿನ ಉಳ್ಳಾಲ-ಕೂಳೂರು-ಮರವೂರು-ಗುರುಪುರ-ಕಣ್ಣೂರು, ಮತ್ತೆ ಉಳ್ಳಾಲ ದವರೆಗೆ ಕೆ ಎಸ್ ಐ ಐ ಡಿ ಸಿ ನೇತೃತ್ವ ದಲ್ಲಿ ಸಮಗ್ರ ಸಮೀಕ್ಷೆ ನಡೆಸಲು ಸಭೆಯಲ್ಲಿ ನಿರ್ಧರಿ ಸಲಾಯಿತು. 30 ಕಿ.ಮೀ ವರ್ತುಲ ರಸ್ತೆಗೆ ಗುರುಪುರ ದವರೆಗೆ ನೆಕ್ಲೆಸ್ ಮಾದರಿಯಲ್ಲಿ ಯೋಜನೆ ಜಾರಿಗೆ ಬರಲಿದ್ದು ಮೂರು ರಾಷ್ಟ್ರೀಯ ಹೆದ್ದಾರಿ ಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯ ವಾಗಲಿದೆ. ಈ ಬಗ್ಗೆ ಸಮಗ್ರ ಮಾಹಿತಿ ಹಾಗೂ ಇಲಾಖಾ ಸಮನ್ವಯತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಯೋಜನೆಯ ಜಾರಿಗೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ಒಂದು ವಿಶೇಷ ಉದ್ದೇಶಿತ ಕೋಶವನ್ನು (ಸೆಲ್) ತೆರೆಯಲಾಗಿದ್ದು, ಮಂಗಳಾ ಕಾರ್ನಿಷ್ ಯೋಜನೆ ಅನುಷ್ಠಾನ ಸಮಿತಿಗೆ ಜಿಲ್ಲಾಧಿಕಾರಿಗಳು ಅನುಷ್ಠಾನಾಧಿಕಾರಿಗಳಾಗಿರುತ್ತಾರೆ. ಸಮಿತಿ ಸಂಬಂಧಪಟ್ಟ ಇಲಾಖಾ ಪ್ರಮುಖರನ್ನೊಳಗೊಂಡಿರುತ್ತದೆ.ಮೂಡಾ, ಕರಾವಳಿ ಅಭಿವೃದ್ಧಿ ಪ್ರಾಧಿ ಕಾರ ಮತ್ತು ಮಹಾ ನಗರ ಪಾಲಿಕೆ ಯನ್ನೊಳ ಗೊಂಡು ನಗರಾ ಭಿವೃದ್ಧಿ ಯೋಜನೆ ಯಡಿ ನಿನ್ನೆ ಮೂಡಾ ದಲ್ಲಿ ವಿಶೇಷ ಸಭೆ ಈ ಸಂಬಂಧ ನಡೆಸ ಲಾಗಿದೆ ಯೋಜನೆ ಯನ್ನು ಸಮರ್ಪ ಕವಾಗಿ ಅನು ಷ್ಠಾನಕ್ಕೆ ತರುವ ಬಗ್ಗೆ ವಿವಿಧ ಇಲಾಖೆ ಗಳಿಗೆ ನಿರ್ದಿಷ್ಟ ಹೊಣೆ ವಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಮೂಡಾ ಅಧ್ಯಕ್ಷ ಮಾಧವ ಭಂಡಾರಿ, ಪಾಲಿಕೆ ಕಮಿಷನರ್ ಡಾ. ಕೆ. ಎನ್. ವಿಜಯಪ್ರಕಾಶ್, ಲೋಕೋಪಯೋಗಿ ಇಂಜಿನಿಯರ್ ಬಾಲಕೃಷ್ಣ, ಮೂಡಾ ಕಮಿಷನರ್ ಮಧುಕರ್ ಗಡ್ಕರ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.