Tuesday, September 7, 2010

ಉತ್ತಮ ವಾತಾವರಣ ಉತ್ತಮ ಕೆಲಸಕ್ಕೆ ಪ್ರೇರಕ:ಸಚಿವ ಕೃಷ್ಣ ಪಾಲೆಮಾರ್

ಮಂಗಳೂರು,ಸೆ.07: ಮೂಲಭೂತಸೌಕರ್ಯಗಳನ್ನೊಳಗೊಂಡ ಉತ್ತಮ ವ್ಯವಸ್ಥೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಪ್ರೇರಣೆಯನ್ನು ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಹೇಳಿದರು.

ಅವ ರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ನೂತನ ಸಭಾಂಗಣ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾ ಡುತ್ತಿದ್ದರು. ನೂತನ ಸಭಾಂಗಣ ಜಿಲ್ಲೆಗೆ ಮಾದರಿ ಯಾಗಿದ್ದು, ಈ ಕಾಮಗಾರಿ ಅಭಿವೃದ್ಧಿ ರಾಜ ಕಾರಣ ಹಾಗೂ ಅಧಿಕಾರಿಗಳ ಕರ್ತವ್ಯ ಬದ್ಧತೆಗೆ ಸಾಕ್ಷಿ ಯಾಗಿದೆ ಎಂದರು.ವಿಕೇಂ ದ್ರೀಕೃತ ವ್ಯವಸ್ಥೆ ಯಲ್ಲಿ ಪ್ರಮುಖ ಪಾತ್ರ ವಹಿಸಿ,ಜಿಲ್ಲೆಯ ಅಭಿವೃದ್ಧಿ ಗಾಗಿರುವ ಜಿಲ್ಲಾ ಪಂಚಾ ಯತ್ ವ್ಯವಸ್ಥೆ ಯಲ್ಲಿ ಜನ ಕಲ್ಯಾಣ ಕಾರ್ಯ ಕ್ರಮಗಳು ನಿರಂತರ ವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಪ್ರತಿಯೊಂದು ಕಾಮಗಾರಿಯಲ್ಲೂ ಗುಣಮಟ್ಟ ಕಾಯ್ದುಕೊಳ್ಳಿ ಎಂದು ಸಲಹೆ ಮಾಡಿದ ಸಚಿವರು, ಕರ್ತವ್ಯದಲ್ಲಿ ಪ್ರೀತಿ ಹಾಗೂ ಬದ್ಧತೆಯನ್ನು ಮೆರೆಯಿರಿ ಎಂದರು. ಗ್ರಾಮೀಣ ಕುಡಿಯುವ ನೀರಿಗೆ 54.8 ಕೋಟಿ, ಗ್ರಾಮ ಸಡಕ್ ಗೆ 53.57 ಕೋಟಿ, ಲೋಕೋಪಯೋಗಿ ರಸ್ತೆಗೆ 23.58 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಗೆ ಇನ್ನಷ್ಟು ಅನುದಾನ ಹೆಚ್ಚಳದ ಭರವಸೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು. ಸಭಾಂಗ ಣದ ನಾಮ ಫಲಕ ಅನಾವರಣ ಮಾಡಿ ಮಾತ ನಾಡಿದ ಶಾಸಕರಾದ ಯೋಗೀಶ್ ಭಟ್ ಅವರು, ಇ ಗವ ರ್ನೆನ್ಸ್ ಗೆ ನಮ್ಮ ಜಿಲ್ಲೆ ಮಾದರಿ ಯಾಗ ಬೇಕು; ನಿಗದಿತ ಸಮಯ ದೊಳಗೆ ಕಾಮ ಗಾರಿಗಳು ಮುಗಿಯು ವುದರಿಂದ ಜಿಲ್ಲೆ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯ ಎಂದರು. ಬಂಟ್ವಾಳ ಶಾಸಕರಾದ ಬಿ. ರಮಾ ನಾಥ ರೈ ಅವರು ಮಾತನಾಡಿ, ಜಿಲ್ಲಾ ಪಂಚಾ ಯತ್ ತನ್ನ ಹಿರಿಮೆ-ಗರಿಮೆಯನ್ನು ಉಳಿಸ ಕೊಳ್ಳ ಬೇಕೆಂದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಅಭಿವೃದ್ಧಿ ಯತ್ತ ಮುಖ ಮಾಡಿ ಸಾಧನೆಗಳ ಮೈಲಿ ಗಲ್ಲನ್ನು ದಾಟುತ್ತಿದ್ದು ಪ್ರಪಂಚದ ಭೂಪಟದಲ್ಲಿ ಭಾರತದ ಜೊತೆಗೆ ಕರ್ನಾಟಕ ರಾಜ್ಯವೂ ಪ್ರಕಾಶಿಸು ತ್ತಿರುವುದು ಸುಳ್ಳಲ್ಲ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ಅವರು, ಜಿಲ್ಲಾ ಪಂಚಾಯತ್ ನ ನೂತನ ಸಭಾಂಗಣ ಕರ್ತವ್ಯ ಪರತೆಗೆ ಸಾಕ್ಷಿಯಾಗಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಮಹಾಪೌರರಾದ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್, ದ.ಕ ಜಿ.ಪಂ.ನ ಉಪಾಧ್ಯಕ್ಷ ಹೆಚ್. ಜಗನ್ನಾಥ್ ಸಾಲಿಯಾನ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಸದಾನಂದ ಮಲ್ಲಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶ್ರೀ ಹೆಗ್ಡೆ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಕೆ. ರಾಮಚಂದ್ರ ಕುಂಪಲ ಅವರು ಸಮಾರಂಭದಲ್ಲಿ ಪಾಲ್ಗೊಂಡರು. ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪಿ. ಶಿವಶಂಕರ್ ಅವರು, 2008ರಲ್ಲಿ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದು,
ಇದಕ್ಕೆಂದೇ ಮಮತಾ ಗಟ್ಟಿಯ ವರು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿದ್ದ ಸಂದರ್ಭದಲ್ಲಿ 29.6.2006 ರಂದು 33 ಲಕ್ಷ ರೂ. ಮೀಸ ಲಿರಿಸ ಲಾಗಿತ್ತು.210 ಲಕ್ಷ ರೂ. ವೆಚ್ಚದಲ್ಲಿ ಇಂದು ಕಟ್ಟಡ ನಿರ್ಮಾಣ ಪೂರ್ಣ ಗೊಂಡಿದ್ದು, ಇನ್ನು ಕಟ್ಟಡದ ಅಭಿವೃದ್ಧಿಗೆ 70 ಲಕ್ಷ ರೂ. ಮೀಸ ಲಿರಿಸಿದೆ. 15 ಲಕ್ಷ ರೂ.ಗಳಲ್ಲಿ ಮಿನಿ ಮೀಟಿಂಗ್ ಹಾಲ್ ನಿರ್ಮಾಣ ಗೊಂಡಿದೆ. ಇಂದು ಉದ್ಘಾಟ ನೆಗೊಂಡ ಸಭಾಂಗಣ ದಲ್ಲಿ 96 ಜನರು ಕುಳಿತು ಕೊಳ್ಳಲು ಅವಕಾಶವಿದ್ದು, ಪತ್ರಕರ್ತರಿಗೆ 30 ಸೀಟುಗಳನ್ನು ಮೀಸಲಿ ರಿಸಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿ 180 ಜನರು ಕುಳಿತು ಕೊಳ್ಳುವ ವ್ಯವಸ್ಥೆ ಇದೆ. ಸಭಾಂಗಣಕ್ಕೆ ಜಿಲ್ಲೆಯ ಜೀವನದಿ ನೇತ್ರಾವತಿಯ ಹೆಸರನ್ನಿರಿ ಸಲಾಗಿದ್ದು,ಪೇಪರ್ ಲೆಸ್ ಕಚೇರಿಗೆ ಮುನ್ನುಡಿ ಬರೆಯ ಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಾಸ್ತಾವಿಕ ಭಾಷಣದಲ್ಲಿ ಮಾಹಿತಿ ನೀಡಿದರು.