Sunday, January 30, 2011

ತಂತ್ರಜ್ಞಾನದ ನೆರವಿನಿಂದ ಭತ್ತದ ಕೃಷಿಯತ್ತ ಮುಖ ಮಾಡಿದ ಆರಿಗರು

ಮಂಗಳೂರು, ಜನವರಿ.30:ಕಾರ್ಮಿಕರ ಕೊರತೆಯಿಂದ ಬೇಸತ್ತು ಭತ್ತದ ಕೃಷಿಯಿಂದ ವಿಮುಖರಾದ ರೈತರಿಗೆ ಖುಷಿ ಕೊಡುವ ಸುದ್ದಿಯಿದು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಡಾ ಗ್ರಾಮಪಂಚಾಯಿತಿಯ ಒಳಬೈಲಿನ ಅಜಿತ್ ಕುಮಾರ್ ಆರಿಗರ ಮನೆಯಿರುವುದು ಇತಿಹಾಸ ಪ್ರಸಿದ್ದ ಜಮಲಾಬಾದ್ ಕೋಟೆಯ ಬುಡದಲ್ಲಿ.
ಕೃಷಿಯೇ ಇವರ ಕು ಟುಂಬ ದ ಮೂಲ ಆಧಾರ; ಆದರೆ ಇತ್ತೀ ಚೆಗೆ ಕೃಷಿ ಕಾರ್ಮಿ ಕರ ಕೊರತೆ ಯಿಂದಾ ಗಿ ಭತ್ತದ ಕೃಷಿ ಯನ್ನೇ ನಿಲ್ಲಿ ಸಿದ ಆರಿಗ ಅವರು ಬೆಳ್ತಂ ಗಡಿಯ ಜಿಲ್ಲಾ ಕೃಷಿ ತರ ಬೇತಿ ಕೇಂದ್ರದ ಪ್ರೋತ್ಸಾಹ ದಿಂದಾಗಿ ಇದೀಗ ಮತ್ತೆ ಭತ್ತದ ಕೃಷಿ ಮಾಡಿ ಯಶಸ್ಸು ಸಾಧಿಸಿ ದ್ದಾರೆ. ಶೇಕಡ 80 ರಷ್ಟು ಯಾಂತ್ರೀಕೃತ ಕೃಷಿಯ ಪ್ರಯೋ ಜನ ಪಡೆದಿ ರುವ ಇವರು 2.5 ಎಕರೆ ವ್ಯಾಪ್ತಿ ಯಲ್ಲಿ ಬೀಜೋತ್ಪಾ ದನಾ ಕೇಂದ್ರ ದಿಂದ ನೀಡಿದ ಜಯ ಮತ್ತು ರಾಶಿ ಭತ್ತ ಬೆಳೆ ದಿದ್ದಾರೆ.ಇದ ರಿಂದ 50 ದಿನ ಗಳ ಕಾಲ 25 ಜನರು ಮಾಡ ಬೇಕಾದ ಕೃಷಿ ಕೆಲಸ ಒಂದು ದಿನ ದಲ್ಲಾ ಗಿದೆ. ಕೃಷಿ ತರ ಬೇತಿ ಕೇಂದ್ರ ನೀಡಿದ ನಾಟಿ ಯಂತ್ರ ದಿಂದ 6 ಲೀಟರ್ ಡಿಸಿಲ್ ಬಳಸಿ 2 ಜನ ಕಾರ್ಮಿ ಕರ ನೆರವಿ ನಿಂದ ತನ್ನ ಹೊಲ ದಲ್ಲಿ ಭತ್ತದ ಕೃಷಿ ಮಾಡಿ ದ್ದಾರೆ. ಜಿಲ್ಲಾ ಕೃಷಿ ತರ ಬೇತಿ ಕೇಂದ್ರ ರೈತ ರಿಗೆ ನೆರವು ನೀಡು ತ್ತಿದ್ದು ನಬಾರ್ಡ್ ಸಹ ಇಲ್ಲಿನ ರೈತ ರಿಗೆ ಉಚಿತ ಮಾಹಿತಿ, ತರ ಬೇತಿ ಯೋಜನೆ ಯು ಹಮ್ಮಿಕೊಳ್ಳಲು ಮುಂದೆ ಬಂದಿದೆ ಎಂದು ಆರಿಗರು ಹೇಳುತ್ತಾರೆ. ವೈಜ್ಞಾನಿಕತೆಯ ನೆರವು ಹಾಗೂ ಉತ್ತಮ ತರಬೇತಿಯೊಂದಿಗೆ ಭತ್ತದ ಕೃಷಿಯಲ್ಲಿ ಯಶಸ್ವಿಯಾಗಬಹುದು. ಕೃಷಿ ಕಾರ್ಮಿಕರ ಕೊರತೆಯಿಂದ ಭತ್ತದ ಗದ್ದೆ ನಾಶವಾಗಿ ಅಡಿಕೆ ಕೃಷಿಯತ್ತ ಒಲವು ಮೂಡಿತು, ಈಗ ರಬ್ಬರ ಕೃಷಿಯ ಸರದಿ. ಜಮಲಾಬಾದ್ ಕೋಟೆಯ ಮೇಲೆ ನಿಂತು ನೋಡಿದರೆ ರಬ್ಬರ್ ಕೃಷಿಯ ವ್ಯಾಪಕತೆ ಅರಿವು ಕಾಣುತ್ತದೆ. ಬೆಳ್ತಂ ಗಡಿ ಜಿಲ್ಲಾ ಕೃಷಿ ತರ ಬೇತಿ ಕೇಂದ್ರದ ಉಪ ನಿರ್ದೇ ಶಕ ರಾದ ಜಿ.ಟಿ ಪುತ್ತ ಅವರ ಮಾರ್ಗ ದರ್ಶನ ದಿಂದ ಭತ್ತದ ಕೃಷಿ ಯತ್ತ ಬೆಳ್ತಂ ಗಡಿ, ಬಂಟ್ವಾ ಳದ ರೈತರು ಮುಖ ಮಾಡಿ ದ್ದಾರೆ. ಒಟ್ಟು ಹನ್ನೆ ರಡು ಎಕರೆ ಪ್ರದೇಶದಲ್ಲಿ ನೇಂದ್ರ ಬಾಳೆ, ತೆಂಗು, ರಬ್ಬರ್, ಕಂಗಿನ ಗಿಡಗಳಿವೆ. ತರಕಾರಿಯಲ್ಲಿ ಹೆಚ್ಚಿನ ಲಾಭವಿದೆ ಎನ್ನುವ ಆರಿಗರು ಹಸುಗಳನ್ನು ಹೈನುಗಾರಿಕೆಗಿಂತ ಮುಖ್ಯವಾಗಿ ಗೊಬ್ಬರಕ್ಕೆ ಬಳಸಬಹುದಾಗಿದೆ. ಎರಡು ಹಸುಗಳು ದಿನಕ್ಕೆ 12 ಲೀಟರ್ ಹಾಲು ನೀಡುತ್ತಿದೆ. ತರಕಾರಿ ಬೆಳೆದರೆ ನೇರವಾಗಿ ಅದಕ್ಕೆ ಮಾರುಕಟ್ಟೆಯನ್ನು ರೈತರು ಹುಡುಕಿಕೊಂಡರೆ ಉತ್ತಮ ಆದಾಯ ಎಂದರು. ತೊಂಡೆಕಾಯಿ, ಬದನೆ, ಕುಂಬಳ, ಸೌತೆ, ಅಲಸಂಡೆಯ ಜೊತೆಗೆ ಭತ್ತ ಇಲ್ಲದ ಸಂದರ್ಭದಲ್ಲಿ ಉದ್ದು, ಎಳ್ಳು, ಸೆಣಬು ಬಿತ್ತನೆಯಿಂದ ಲಾಭವಿದೆ ಎನ್ನುತ್ತಾರೆ ಅರಿಗರು. ಇಂತಹ ಕೃಷಿಯಿಂದ ವೈಭವೋಪೇತ ಜೀವನ ಸಾಧ್ಯವಿಲ್ಲದಿದ್ದರೂ, ನೆಮ್ಮದಿಯ ಜೀವನಕ್ಕೆ ಮೋಸವಿಲ್ಲ ಎಂಬುದು ಅರಿಗರ ವಾದ.