
ಸುಸೂತ್ರವಾಗಿ ಮತ ಎಣಿಕೆ ನಡೆಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು, ಜಿಲ್ಲಾ ಪಂಚಾಯತ್ನ ಮತ ಎಣಿಕೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ 33 ಮೇಲ್ವಿಚಾರಕರ ನೇತೃತ್ವದಲ್ಲಿ 4 ಕೊಠಡಿಗಳಲ್ಲಿ 10 ಸ್ಥಾನಗಳ ಮತ ಎಣಿಕೆ ನಡೆಯಲಿದೆ. ಬಂಟ್ವಾಳದಲ್ಲಿ 30 ಮೇಲ್ವಿಚಾರಕರ ಉಸ್ತುವಾರಿಯಲ್ಲಿ 7 ಕೊಠಡಿಗಳಲ್ಲಿ 27 ಮೇಜುಗಳು 9 ಸ್ಥಾನಗಳ ಮತ ಎಣಿಕೆಗೆ ಸಜ್ಜುಗೊಂಡಿದೆ. ಬೆಳ್ತಂಗಡಿಯ ಒಟ್ಟು 6 ಸ್ಥಾನಗಳಿಗೆ 3 ಕೊಠಡಿಗಳಲ್ಲಿ 18 ಮೇಜುಗಳಲ್ಲಿ 20 ಮೇಲ್ವಿಚಾರಕರು ಮತ ಎಣಿಕೆ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಪುತ್ತೂರು ಮತ ಎಣಿಕೆ ಕೇಂದ್ರದಲ್ಲಿ 20 ಮೇಲ್ವಿಚಾರಕರು 18 ಮೇಜುಗಳಲ್ಲಿ 3 ಕೊಠಡಿಗಳಲ್ಲಿ 6 ಸ್ಥಾನಗಳ ಮತ ಎಣಿಕೆ ನಡೆಸಲಿದ್ದಾರೆ. ಸುಳ್ಯ ದಲ್ಲಿ 4 ಜಿಲ್ಲಾ ಪಂಚಾಯತ್ ಸ್ಥಾನಗಳಿಗೆ ಒಂದು ಕೊಠಡಿಯಲ್ಲಿ 12 ಮೇಜುಗಳನ್ನು ಇರಿಸಲಾಗಿದ್ದು 13 ಮೇಲ್ವಿಚಾರಕರು ಮತ ಎಣಿಕೆ ನೇತೃತ್ವ ವಹಿಸುವರು,
ಇದೇ ಮಾದರಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ನ 37 ಸ್ಥಾನಗಳಿಗೆ 6 ಕೊಠಡಿಗಳಲ್ಲಿ 41 ಮೇಲ್ವಿಚಾರಕರ ನೇತೃತ್ವದಲ್ಲಿ 37 ಮೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ. ಬಂಟ್ವಾಳದ 33 ಸ್ಥಾನಗಳಿಗೆ 5 ಕೊಠಡಿಗಳಲ್ಲಿ 33 ಮೇಜುಗಳಲ್ಲಿ 36 ಮೇಲ್ವಿಚಾರಕರು ಮತ ಎಣಿಕೆ ನಡೆಸುವರು., ಬೆಳ್ತಂಗಡಿಯ 24 ಸ್ಥಾನಗಳಿಗೆ 4 ಕೊಠಡಿಗಳಲ್ಲಿ 26 ಮೇಲ್ವಿಚಾರಕರು, ಪುತ್ತೂರಿನ 22 ಸ್ಥಾನಗಳಿಗೆ 4 ಕೊಠಡಿಗಳಲ್ಲಿ, 22 ಮೇಜುಗಳಂತೆ 24 ಮೇಲ್ವಿಚಾರಕರು ಸುಳ್ಯದ 13 ಸ್ಥಾನಗಳಿಗೆ 2 ಕೊಠಡಿಗಳಲ್ಲಿ 13 ಮೇಜುಗಳಲ್ಲಿ 14 ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ತಹಶೀಲ್ದಾರರು ಆಯಾಯ ಮತ ಎಣಿಕೆ ಕೇಂದ್ರದಲ್ಲಿ ತಾಲೂಕು ದಂಡಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವರು.

ಮತ ಎಣಿಕೆ ಫಲಿತಾಂಶ ಸಾರ್ವಜನಿಕರಿಗೆ ದೊರೆಯುವಂತೆ ಮಾಡಲು ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಪ್ರತೀ ಚುನಾವಣಾ ಕ್ಷೇತ್ರದ ಫಲಿತಾಂಶವನ್ನು ಬಿತ್ತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತ ಎಣಿಕೆ ಕೇಂದ್ರ ಪ್ರವೇಶ:ಮತ ಎಣಿಕೆ ಕೇಂದ್ರದ ಪ್ರಥಮ ಗೇಟಿನಲ್ಲಿ ಅಧಿಕೃತ ಅನುಮತಿ ಪತ್ರ ಹೊಂದಿದವರನ್ನು ಮಾತ್ರ ಒಳ ಪ್ರವೇಶಕ್ಕೆ ಅನುಮತಿಸಲಾಗುವುದು. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್,ಬೀಡಿ ಸಿಗರೇಟು ಬೆಂಕಿ ಪೊಟ್ಟಣವನ್ನು ನಿಷೇಧಿಸಲಾಗಿದೆ. ಅನುಮತಿ ಪತ್ರ ಹೊಂದಿರುವ ಮಾಧ್ಯಮ ಪ್ರತಿನಿದಿಗಳಿಗೆ ಮಾಧ್ಯಮ ಕೊಠಡಿಯಲ್ಲಿ ಮಾತ್ರ ಮೊಬೈಲ್ನ್ನು ಉಪಯೋಗಿಸಲು ಅನುಮತಿ ಇದೆ. ಮತ ಎಣಿಕೆ ಪ್ರಾರಂಭಕ್ಕೆ ಮುನ್ನ ಮಾಧ್ಯಮ ಪ್ರತಿನಿಧಿಗಳು ಭಾವಚಿತ್ರ ಮತ್ತು ವಿಡಿಯೋ ರೆಕಾರ್ಡ್ ಗೆ ಅನುಮತಿ ನೀಡಲಾಗಿದೆ.
ಜಿಲ್ಲೆಯ ಎಲ್ಲಾ ಜಿಲ್ಲಾ/ತಾಲೂಕು ಚುನಾವಣಾ ಕ್ಷೇತ್ರಗಳ ಮತ ಎಣಿಕೆ ಫಲಿತಾಂಶ ಮಾದ್ಯಮ ಕೊಠಡಿಯಲ್ಲಿ ಆನ್ ಲೈನ್ ಮೂಲಕ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇಂಟರ್ ನೆಟ್ ಮೂಲಕ ಗೂಗಲ್ ಸ್ಪ್ರೆಡ್ ಶೀಟಿನಲ್ಲಿ ಫೀಡ್ ಮಾಡಿ 5 ಮತ ಎಣಿಕೆ ಕೇಂದ್ರಗಳಲ್ಲೂ ಪ್ರಕಟಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ 5 ತಾಲೂಕುಗಳ ಜಿಲ್ಲಾ/ತಾಲೂಕು ಪಂಚಾಯತ್ ಚುನಾವಣಾ ಕ್ಷೇತ್ರಗಳ ಪ್ರತೀ ಸುತ್ತಿನ ಮತ ಎಣಿಕೆಯ ಫಲಿತಾಂಶವನ್ನು ಇದರಿಂದ ತಿಳಿಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.