Wednesday, April 6, 2011

ಕೃಷಿಗೆ ಆದ್ಯತೆ ನೀಡಿ: ಸಿಇಒ ಪಿ.ಶಿವಶಂಕರ್

ಮಂಗಳೂರು,ಮಾರ್ಚ್.06: ಜಿಲ್ಲೆಯಲ್ಲಿ ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಜಿಲ್ಲಾ ಸಾಲ ಯೋಜನೆ 2011-12 ರಲ್ಲಿ ಹೆಚ್ಚಿನ ಅನುದಾನವನ್ನು ನಿಗಧಿಪಡಿಸುವ ಮೂಲಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಪಿ.ಶಿವಶಂಕರ್ ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರದ ಮುಖ್ಯಸ್ಥರಿಗೆ ಕರೆ ನೀಡಿದ್ದಾರೆ.

ಅವರು ಇಂದು ಜಿಲ್ಲಾ ಪಂಚಾ ಯತ್ ನ ನೇತ್ರಾವತಿ ಸಭಾಂಗ ಣದಲ್ಲಿ 2011-12 ನೇ ಸಾಲಿನ ಜಿಲ್ಲಾ ಬ್ಯಾಂಕಿಂಗ್ ಸಾಲಯೋಜನೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. 2010-11 ನೇ ಸಾಲಿನಲ್ಲಿ ಜಿಲ್ಲಾ ಆದ್ಯತಾ ವಲಯ ಸಾಲ ಯೋಜನೆಯನ್ವಯ ಮೂರನೇ ತ್ರೈಮಾಸಿಕದಲ್ಲಿ ವಾಷರ್ಿಕವಾಗಿ 2276 ಕೋಟಿ ರೂ.ನಿಗಧಿಯಾಗಿದ್ದು,1653 ಕೋಟಿ ರೂ.ಗಳ ಸಾಲ ಬಿಡುಗಡೆಯಾಗಿತ್ತು. ಇದರಲ್ಲಿ ಕೃಷಿ ವಲಯಕ್ಕೆ 843 ಕೋಟಿ ,ಸಣ್ಣ ಕೈಗಾರಿಕೆಗೆ ರೂ.333 ಕೋಟಿ ಇತರೆ ಆದ್ಯತಾ ವಲಯಕ್ಕೆ 475 ಕೋಟಿ ರೂ. ಸಾಲ ನೀಡಲಾಗಿತ್ತು. ಈ ವರ್ಷ 2011-12 ನೇ ಸಾಲಿನಲ್ಲಿ 4078 ಕೋಟಿ ರೂ.ಗಳನ್ನು ಹೆಚ್ಚಿನ ಸಾಲ ಯೋಜನೆ ಬಿಡುಗಡೆಯಾಗಿದೆ. ಈ ಬಾರಿ ಆದ್ಯತಾ ವಲಯಕ್ಕೆ ಯೋಜನೆಯ ಶೇ.77 ಅಂದರೆ 3141 ಕೋಟಿ,ಯೋಜನಾವಾರು ಶೇ. 28 ಅಂದರೆ 1443 ಕೋಟಿ ರೂ.ಕೃಷಿ ವಲಯಕ್ಕೆ ಸಣ್ಣ ಕೈಗಾರಿಕಾಭಿವೃದ್ಧಿಗೆ 431 ಕೋಟಿ ನಿಗಧಿಯಾಗಿದೆ. ಇನ್ನಿತರ ಆದ್ಯತಾ ವಲಯ ಕ್ಷೇತ್ರಗಳಿಗೆ 1267 ಕೋಟಿ ರೂ.ಮೀಸಲಿಡಲಾಗಿದೆ.
ಆದ್ಯೇತರ ವಲಯಕ್ಕೆ 937 ಕೋಟಿ ರೂ.ಮೀಸಲಿರಿಸಲಾಗಿದೆ.
ಸಭೆಯಲ್ಲಿ ಲೀಡ್ ಬ್ಯಾಂಕ್ ಉಪ ಮಹಾ ಪ್ರಬಂಧಕ ಜೆ.ಎಸ್.ಶೆಣೈ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವರಾಮೇ ಗೌಡ,ಯೋಜನಾ ನಿರ್ದೇಶಕಿ ಸೀತಮ್ಮ ಮುಂತಾದವರು ಹಾಜರಿದ್ದರು.