Saturday, April 2, 2011

ಮರಳು ಗಣಿಗಾರಿಕೆಗೆ ನೂತನ ನಿಯಮದಂತೆ ಟೆಂಡರ್ ಪ್ರಕ್ರ್ರಿಯೆಗೆ ಚಾಲನೆ-ಸುಭೋದ್ ಯಾದವ್

ಮಂಗಳೂರು,ಎಪ್ರಿಲ್.02:ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳಾದಿಯಾಗಿ ರಾಜ್ಯದಾದ್ಯಂತ ಮರಳು ಗಣಿಗಾರಿಕೆಗೆ ಏಕರೂಪ ಕಾನೂನು ತರುವ ನಿಟ್ಟಿನಲ್ಲಿ ಸರ್ಕಾರ ಕರ್ನಾಟಕ ಮರಳು ನೀತಿ 2011 ನ್ನು ಜಾರಿಗೆ ತಂದಿದ್ದು,ಇದರನ್ವಯ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಟೆಂಡರ್ ಆಹ್ವಾನಿಸುವ ಪ್ರಕ್ರಿಯೆಗೆ ಇಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಾಲನೆ ನೀಡಲಾಯಿತು.
ಜಿಲ್ಲೆಯಲ್ಲಿ ಒಟ್ಟು 117 ಬ್ಲಾಕ್ ಗಳನ್ನು ಗುರುತಿಸಿದ್ದು ಪ್ರತಿ ಬ್ಲಾಕ್ 10 ಎಕರೆ ವಿಸ್ತೀರ್ಣ ಉಳ್ಳ ದಾಗಿದ್ದು, ಇದರಿಂದ 20.68 ಘನ ಟನ್ ಗಳಷ್ಟು ಮರಳು ಲಭ್ಯ ವಿರು ವುದರಿಂದ ಇದನ್ನು ನಿಯಮಾ ನುಸಾರ ಟೆಂಡರ್ ಕರೆದು ವಿಲೇ ವಾರಿ ಮಾಡಲು ಹಾಗೂ ಈ ಸಂದರ್ಭ ದಲ್ಲಿ ಪಾರಂಪರಿಕ ಮರಳು ಗಣಿ ಗಾರಿಕೆ ಯಲ್ಲಿ ತೊಡಗಿ ರುವವರಿಗೆ ತೊಂದರೆ ಆಗದಂತೆ ಎಚ್ಚರವಹಿಸಿ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 80 ರಷ್ಟು ಮರಳು ಗಣಿಗಾರಿಕೆ ಯನ್ನು ನದಿ ನೀರಿನಲ್ಲಿ ಮುಳುಗಿ ತೆಗೆಯ ಲಾಗು ತ್ತಿದ್ದು, ನೂತನ ಕರ್ನಾಟಕ ಮರಳು ನೀತಿ 2011 ಇಲ್ಲಿಯ ಮರಳು ಗಣಿ ಗಾರಿಕೆ ನಂಬಿರುವ 25 ಸಾವಿರ ಜನರಿಗೆ ತೊಂದರೆ ಯಾಗಲಿದೆ ಎಂದು ಮರಳು ತೆಗೆಯುವವರ ಹಾಗೂ ಸಾಗಾಟಗಾರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಅವಗಾಹನೆಗೆ ತಂದರು.ಈ ಬಗ್ಗೆ ಶೀಘ್ರವೇ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ,31-3-11 ರಿಂದ ಮರಳು ಗಣಿಗಾರಿಕೆ ಸ್ಥಬ್ದವಾಗಿರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹಾಗೂ ಮರಳು ಗಣಿಗಾರಿಕೆ ನಡೆಸುತ್ತಿರುವ 25 ಸಾವಿರ ಕುಟುಂಬಗಳಿಗೆ ತೊಂದರೆಯನ್ನು ತಪ್ಪಿಸಲು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್,ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರಾದ ಡಾ. ರವೀಂದ್ರ,ಮಂಗಳೂರು ಉಪ ವಿಭಾಗಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮತ್ತು ಪುತ್ತೂರು ಉಪವಿಭಾಗಾಧಿಕಾರಿ ಡಾ.ಹರೀಶ್ ಕುಮಾರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.