Tuesday, April 5, 2011

ಡಾ. ಬಾಬು ಜಗಜೀವನ ರಾಂ ಅವರು 104ನೇ ಜನ್ಮ ದಿನಾಚರಣೆ

ಮಂಗಳೂರು,ಏಪ್ರಿಲ್.05:ಸಾಮಾಜಿಕ ಸಮಾನತೆ ಪ್ರತಿಪಾದಿಸಿ, ದೀನದಲಿತರ ಏಳಿಗೆಗೆ ಶ್ರಮಿಸಿ, ಮಾರ್ಗದರ್ಶನ ನೀಡಿದ ಹಿರಿಯ ಧೀಮಂತ ನಾಯಕ ಡಾ. ಬಾಬು ಜಗಜೀವನ ರಾಂ ಅವರು ಸದಾ ಸ್ಮರಣಾರ್ಹರು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅವರು ಹೇಳಿದರು.

ಅವರಿಂದು ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂಗ ಣದಲ್ಲಿ ಜಿಲ್ಲಾಡ ಳಿತ, ಜಿಲ್ಲಾ ಪಂಚಾ ಯತ್, ಮಂಗ ಳೂರು ಮಹಾ ನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ವಾಗಿ ಆಯೋ ಜಿಸಿದ್ದ ಡಾ ಬಾಬು ಜಗ ಜೀವನ ರಾಂ ಅವರ 104ನೇ ಜನ್ಮ ದಿನಾ ಚರಣೆ ಕಾರ್ಯ ಕ್ರಮ ಉದ್ಘಾ ಟಿಸಿ ಮಾತ ನಾಡು ತ್ತಿದ್ದರು. ಭಾರತ ದ ಸಂವಿ ಧಾನ ವನ್ನು ಗೌರವಿಸಿ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಸಮಾನತೆ, ಸೌಲಭ್ಯಗಳಿಂದ ದುರ್ಬಲ ವರ್ಗಗಳನ್ನು ಸಬಲೀಕರಣ ಗೊಳಿಸಲು ಅವರು ರೂಪಿಸಿದ ಯೋಜನೆಗಳು ಇಂದಿಗೂ ಮಾದರಿಯಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶಾಸಕ ಯು.ಟಿ.ಖಾದರ್ ಅವರು ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರ ಹಾಗೂ ಕೃಷಿ ಪ್ರಧಾನ ದೇಶ ಭಾರತದಲ್ಲಿ ಕೃಷಿಗೋಸ್ಕರ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ, ದುಡಿಯುವ ವರ್ಗಕ್ಕೆ ಪ್ರಾಧಾನ್ಯತೆ ನೀಡಿದ ಹಿರಿಯ ಮುತ್ಸದ್ದಿ ಹಾಗೂ ಉತ್ತಮ ಆಡಳಿತಗಾರ ಡಾ ಬಾಬು ಜಗಜೀವನ ರಾಂ ಎಂದು ಸ್ಮರಿಸಿದರು.ಸಮಾ ರಂಭ ದಲ್ಲಿ ಮುಖ್ಯ ಭಾಷಣ ಕಾರ ರಾದ ಜಿಲ್ಲಾ ಅಂಗ ವಿಕ ಲರ ಕಲ್ಯಾಣ ಅಧಿ ಕಾರಿ ಬಿ.ಪಿ.ಪುಟ್ಟ ಸ್ವಾಮಿ ಅವರು, ಡಾ ಬಾಬು ಜಗ ಜೀವ ನರಾಂ ಅವರ ಜೀವನ, ಆದರ್ಶ ಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದ ಉತ್ತಮ ನಾಯಕ ಎಂದರು. ಕನಿಷ್ಠ ವೇತನ ಕಾಯಿದೆ, ಕಾರ್ಮಿಕ ಸಂಘಗಳ ಕಾಯಿದೆ, ಕಾರ್ಮಿಕರಿಗಾಗಿ ವಿಮೆ ಯೋಜನೆ ರೂಪಿಸಿದ ಡಾ ಬಾಬು ಜಗಜೀವನರಾಂ ಅವರು ಕೃಷಿಗಾಗಿ ನೀಡಿದ ಕೊಡುಗೆಯೂ ಸ್ಮರಣೀಯವೇ ಎಂದರು. ಉಳುವವನೇ ಭೂಮಿಯ ಒಡೆಯ, ಸಾರ್ವಜನಿಕ ವಿತರಣಾ ಪದ್ಧತಿ ಆರಂಬಿಸಿದ ಇವರು ಕೃಷಿ ವಿಜ್ಞಾನಿಗಳು ಮಾಡುವುದಕ್ಕಿಂತಲೂ ಮಿಗಿಲಾದ ಕೃಷಿಪರ ಕಾಯಿದೆಗಳನ್ನು ಜಾರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ರಕ್ಷಣಾ ಮಂತ್ರಿಯಾಗಿಯೂ ಇವರ ಸೇವೆ ಗಮನೀಯ. ಕಾರ್ಮಿಕ ಹಾಗೂ ಕೃಷಿಕರು ಸಬಲರಾದರೆ ದೇಶ ಪ್ರಭಲವಾಗುತ್ತದೆಂಬುದನ್ನು ಪ್ರಬಲವಾಗಿಯೇ ಪ್ರತಿಪಾದಿಸಿದ ಇವರು, ತಮ್ಮ ಕಾರ್ಯಕ್ಷೇತ್ರದಲ್ಲಿ ದುಡಿಯುವ ವರ್ಗಕ್ಕೆ ಪೂರಕವಾದ, ಸಾಮಾಜಿಕ ಸಮಾನತೆಗೆ ಪೂರಕವಾದ ಕಾಯಿದೆಗಳನ್ನು ರೂಪಿಸಿದವರು ಎಂದರು. ಸಮಾ ರಂಭ ದಲ್ಲಿ ಪಾಲಿಕೆ ಆಯುಕ್ತ ಡಾ ಕೆ. ಎನ್ ವಿಜಯ ಪ್ರಕಾಶ್, ಮುಖ್ಯ ಲೆಕ್ಕಾ ಧಿಕಾರಿ ರಾಮ ದಾಸ್, ಎ ಸಿ ಪ್ರಬು ಲಿಂಗ ಕವಳಿ ಕಟ್ಟಿ, ಜಿಲ್ಲಾ ಪಂಚಾ ಯತ್ ಸದಸ್ಯ ರು ಉಪ ಸ್ಥಿತ ರಿದ್ದರು. ಜಿಲ್ಲಾ ಸಮಾಜ ಕಲ್ಯಾ ಣಾಧಿ ಕಾರಿ ಅರುಣ್ ಫು ರ್ಟಡೊ ಸ್ವಾಗ ತಿಸಿ ದರು. ಸಿಪಿಒ ತಾಕತ್ ರಾವ್ ವಂದಿಸಿದರು. ಕೆನರಾ ಹೈಸ್ಕೂಲ್ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.