Wednesday, April 6, 2011

ಸಿ.ಎಂ.ಪ್ರಗತಿ ಪರಿಶೀಲನೆ: ಪೂರ್ವಭಾವಿ ಸಭೆ

ಮಂಗಳೂರು,ಏಪ್ರಿಲ್.06:ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಏಪ್ರಿಲ್ 8 ರಂದು ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಲಿದ್ದು, ಈ ಸಂಬಂಧ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಯಿತು.

ಮಹಾ ನಗರ ಪಾಲಿಕೆ, ಜಿಲ್ಲಾ ಪಂಚಾ ಯತ್ ಒಳ ಗೊಂ ಡಂತೆ ಎಲ್ಲ ಇಲಾಖೆ ಗಳ ಅಧಿಕಾ ರಿಗಳು ತಮ್ಮ ಇಲಾಖೆ ಯ ವಿಶೇಷ ಸಾಧನೆ ಮತ್ತು ಅಭಿ ವೃದ್ಧಿ ಕಾರ್ಯ ಕ್ರಮ ಗಳ ಮಾಹಿತಿ ಯನ್ನು ಜಿಲ್ಲಾಧಿ ಕಾರಿ ಗಳಿಗೆ ನೀಡಿದರು. ಸಭೆ ಯಲ್ಲಿ ಮಹಾ ನಗರ ಪಾಲಿಕೆ ಆಯುಕ್ತ ರಾದ ಡಾ ಕೆ ಎನ್ ವಿಜಯ ಪ್ರಕಾಶ್, ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಪಿ. ಶಿವ ಶಂಕರ್, ಮಂಗ ಳೂರು ವಿಮಾನ ನಿಲ್ದಾಣದ ನಿರ್ದೇ ಶಕ ರಾದ ಎಂ ಆರ್ ವಾಸುದೇವ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಭಾಕರ್, ಡಿಸಿಪಿ ಮುತ್ತುರಾಯ್ ಅವರನ್ನೊಳಗೊಂಡಂತೆ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.