Friday, June 3, 2011

ಸಮನ್ವಯದಿಂದ ಕರ್ತವ್ಯ ನಿರ್ವಹಿಸಿದರೆ ಅಭಿವೃದ್ಧಿಗೆ ವೇಗ: ಜಿಲ್ಲಾಧಿಕಾರಿ

ಮಂಗಳೂರು,ಜೂನ್.03:ಸರ್ಕಾರಿ ಜಾಗಗಳಲ್ಲಿರುವ ಶಾಲೆಗಳ ಆರ್ ಟಿಸಿಯನ್ನು ಶಾಲೆಗಳ ಹೆಸರಿಗೆ ಮಾಡಿಸುವಂತೆ ಎಲ್ಲ ತಹಸೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಇಂದು ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ಆಯೋ ಜಿಸಿದ್ದ ಸಮ ನ್ವಯ ಸಮಿತಿ ಸಭೆಯ ಅಧ್ಯ ಕ್ಷತೆ ವಹಿಸಿದ್ದ ಜಿಲ್ಲಾಧಿ ಕಾರಿಗಳು, ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಅಧಿಕಾರಿಗಳು ಸಮನ್ವಯ ಸಾಧಿಸಿ ಕೆಲಸ ಮಾಡಬೇಕೆಂದರು. ಜಿಲ್ಲೆಯ ಒಟ್ಟು 1060 ಸರ್ಕಾರಿ ಶಾಲೆಗಳಲ್ಲಿ 984 ಶಾಲೆಗಳ ಹೆಸರಿನಲ್ಲಿ ಆರ್ ಟಿ ಸಿ ಇದ್ದು, 76 ಶಾಲೆಗಳು ಬಾಕಿ ಉಳಿದಿವೆ. ಮಂಗಳೂರು ತಾಲೂಕಿನಲ್ಲಿ 26, ಪಟ್ಟಣದಲ್ಲಿ 8, ಪುತ್ತೂರಿನಲ್ಲಿ 3, ಬೆಳ್ತಂಗಡಿಯಲ್ಲಿ 9, ಸುಳ್ಯದಲ್ಲಿ 10 ಶಾಲೆಗಳು ಬಾಕಿ ಇದ್ದು, ವಿದ್ಯಾಂಗ ಇಲಾಖೆ ಪೂರಕ ಮಾಹಿತಿಗಳನ್ನು ಸಹಾಯಕ ಆಯುಕ್ತರಿಗೆ ಒದಗಿಸಿ ತಹಸೀಲ್ದಾರರು ಈ ವ್ಯವಸ್ಥೆಯನ್ನು ಸಮರ್ಪಕವಾಗಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎನ್ ಎಸ್ ಚನ್ನಪ್ಪ ಗೌಡ ಹೇಳಿದರು.ಜಿಲ್ಲೆ ಯಲ್ಲಿ ಲೋಕೋ ಪಯೋಗಿ ಇಲಾಖೆ ನಡೆಸು ತ್ತಿರುವ ಸರ್ಕಿಟ್ ಹೌಸ್ ನ ಕಾಮ ಗಾರಿ ಗಳ ಬಗ್ಗೆ ಮಾಹಿತಿ ಪಡೆದು ಕೊಂಡ ಅವರು ಮೆಸ್ಕಾಂ ಮತ್ತು ಲೋಕೋಪ ಯೋಗಿ ಇಲಾಖೆ ಪರಸ್ಪರ ಸಮನ್ವ ಯತೆಯಿಂದ ಕೆಲಸ ಮಾಡ ಬೇಕೆಂದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಅಗಲೀಕರಣದ ಜೊತೆಗೆ ಚರಂಡಿ ವ್ಯವಸ್ಥೆಗೂ ಒತ್ತು ನೀಡಬೇಕೆಂದರು. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಮೆಸ್ಕಾಂ, ಸಣ್ಣ ನೀರಾವರಿ ಮತ್ತು ಮೆಸ್ಕಾಂ ಜೊತೆ ಜೊತೆಯಾಗಿ ಕೆಲಸ ಮಾಡುವುದರಿಂದ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದರು. ಜಿಲ್ಲೆಯ ಪಡಿತರ ವ್ಯವಸ್ಥೆ ಮತ್ತು ಆರೋಗ್ಯ ವ್ಯವಸ್ಥೆ ಮತ್ತು ಪಶುಸಂಗೋಪನೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪಿಲಿಕುಳದವರು ರಸ್ತೆ, ಪೊಲೀಸ್ ಔಟ್ ಪೋಸ್ಟ್, ಪಚ್ಚೆನಾಡಿ ತ್ಯಾಜ್ಯ ವಿಲೇ ಘಟಕಕ್ಕೆ ನೀರು ಹಾಗೂ ಬಸ್ಸಿನ ಬೇಡಿಕೆಯನ್ನು ಸಭೆಯ ಮುಂದಿಟ್ಟರು.
ಲೇಡಿಗೋಷನ್ ಆಸತ್ರೆಯ ಹಿಂದಿರುವ ಕಸವನ್ನು ಪ್ರತಿದಿನ ವಿಲೇ ಮಾಡುವಂತೆ ಆಸ್ಪತ್ರೆಯ ಸರ್ಜನ್ ನಗರಪಾಲಿಕೆಯನ್ನು ವಿನಂತಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು, ಬೋರ್ ವೆಲ್, ಟ್ಯೂಬ್ ವೆಲ್ ನಲ್ಲಿ ಮಕ್ಕಳ ಬೀಳದ ಹಾಗೆ ಕೊಳವೆ ಬಾವಿ ತೆಗೆಸಿರುವ ಏಜೆನ್ಸಿಗಳು ಜವಾಬ್ದಾರಿ ವಹಿಸುವಂತೆ ಸರ್ವೋಚ್ಛ ನ್ಯಾಯಾಲಯ 11.2.2010ರಂದು ಆದೇಶವೊಂದನ್ನು ಜಿಲ್ಲಾಡಳಿತಕ್ಕೆ ನೀಡಿತ್ತು. ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಯಾವುದೇ ಉತ್ತರ ಅಧಿಕಾರಿಗಳಿಂದ ಬರಲಿಲ್ಲ ಎಂಬ ಅಂಶವನ್ನು ಸಭೆಯ ಗಮನಕ್ಕೆ ತಂದರು. ಇನ್ನು ಜಿಲ್ಲಾ ಪಂಚಾಯತ್ ಮತ್ತು ಮಹಾನಗರಪಾಲಿಕೆ ಜಿಲ್ಲಾಧಿಕಾರಿಗಳು ಕೋರುವ ಮಾಹಿತಿಯನ್ನು ತಕ್ಷಣವೇ ಒದಗಿಸಲು ಮಾಹಿತಿ ಅಧಿಕಾರಿಯನ್ನೊಬ್ಬರನ್ನು ನೇಮಿಸುವುದರಿಂದ ಮಾಹಿತಿ ಸಂಗ್ರಹಕ್ಕೆ ಅನುಕೂಲವಾಗಲಿದ್ದು, ತಕ್ಷಣವೇ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದರು. ಘನತ್ಯಾಜ್ಯ ವಿಲೇ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳೂ ಸೂಕ್ತ ಕ್ರಮವನ್ನು ನಿಗದಿತ ಅವಧಿಯೊಳಗೆ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.
ಸಭೆಯಲ್ಲಿ ಡಿಸಿಪಿ ಮುತ್ತೂರಾಯ ಮತ್ತು ಅಡಿಷನಲ್ ಎಸ್ ಪಿ ಪ್ರಭಾಕರ್,ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್ ಉಪಸ್ಥಿತರಿದ್ದರು.