Sunday, June 12, 2011

ಬಾಲಕಾರ್ಮಿಕ ಪದ್ಧತಿ ತಡೆಗೆ 11 ಇಲಾಖಾಧಿಕಾರಿಗಳಿಗೆ ಅಧಿಕಾರ

ಮಂಗಳೂರು,ಜೂನ್.12:ಮಕ್ಕಳ ಹಕ್ಕುಗಳನ್ನು ರಕ್ಷಿಸಲು, ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಲು 11 ಇಲಾಖೆಯ ಅಧಿಕಾರಿಗಳಿಗೆ ಅಧಿಕಾರವಿದ್ದು ಬಾಲಕಾರ್ಮಿಕ ಪದ್ಥತಿಯಂತಹ ಅನಿಷ್ಠ ಪದ್ಥತಿಯ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಅವರು ಹೇಳಿದರು.

ಅವ ರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ನೇತ್ರಾ ವತಿ ಸಭಾಂ ಗಣ ದಲ್ಲಿ ಏರ್ಪ ಡಿಸ ಲಾದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾ ಚರಣೆ ಮತ್ತು ಕಾನೂನು ಅರಿವು ಕಾರ್ಯ ಕ್ರಮ ದಲ್ಲಿ ಸಂಪ ನ್ಮೂಲ ವ್ಯಕ್ತಿ ಗಳಾಗಿ ಮಾತನಾಡುತ್ತಿದ್ದರು. ಆರೋಗ್ಯ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪೊಲೀಸ್, ಕಾರ್ಮಿಕ ಇಲಾಖೆ, ಶಿಕ್ಷಣ, ಪಂಚಾಯತ್ ರಾಜ್, ನಗರಾಭಿವೃದ್ದಿ, ರೇಷ್ಮೆ, ಕೈಗಾರಿಕೆ, ಬಿಸಿಎಂ,ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಗಳು ಸಕ್ರಿಯ ಪಾತ್ರವಹಿಸಲಿವೆ ಎಂದರು.
ಸಾರ್ವಜನಿಕರು 1098 ಟೋಲ್ ಫ್ರೀ ನಂಬರ್ ನ್ನು ಬಳಸಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಬಹುದು ಎಂದ ಕಾರ್ಮಿಕ ಆಯುಕ್ತರು, ಮಕ್ಕಳ ಹಕ್ಕು ಉಲ್ಲಂಘನೆ ಮಾನವ ಹಕ್ಕು ಉಲ್ಲಂಘನೆಯಾಗಿದ್ದು, ಈ ಪದ್ಧತಿ ನಿವಾರಣೆಗೆಂದೇ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ನೇತೃತ್ವದಲ್ಲಿ ಹೈಪವರ್ ಕಮಿಟಿ ಇದೆ. ಆರು ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಸಮನ್ವಯ ಸಮಿತಿ ಸಭೆ ನಡೆಯುತ್ತದೆ. ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಗೆ ಸಂಬಂಧಿಸಿದ ಸಭೆ ನಡೆಯುತ್ತದೆ. ಮಕ್ಕಳ ಹಕ್ಕು ಸಂರಕ್ಷಣೆಗೆ ಜಿಲ್ಲಾ ಮಟ್ಟದಲ್ಲಿ ಎಕ್ಸಿಕ್ಯೂಟಿವ್ ಕಮಿಟಿಯ ಇನ್ನೊಂದು ಸಮಿತಿಯೂ ಇದೆ ಎಂದು ವಿವರಿಸಿದರು.
ಮಕ್ಕಳಿಗೆ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಭಾಗವಹಿಸುವಿಕೆ ಹಕ್ಕು,ಸಾಮಾಜಿಕ ಭದ್ರತೆ ಹಕ್ಕುಗಳಿದ್ದು, ಎಲ್ಲ ಕಾಯಿದೆಗಳಲ್ಲು ಮಕ್ಕಳ ಹಕ್ಕು ಒಳಗೊಂಡಿದೆ. ಪೋಷಕರು ಕುಟುಂಬ ನಿರ್ವಹಣೇಗೆ ಮಕ್ಕಳನ್ನು ಬಳಸದಿರುವ ಬಗ್ಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ. 1986ರಲ್ಲಿ ಮಕ್ಕಳ ಹಕ್ಕು ಕಾಯಿದೆ ಜಾರಿಗೆ ಬಂತಾದರೂ 1988ರಿಂದ ಕಾನೂನಿನ ಕಠಿಣ ಅನುಷ್ಠಾನ ಶಿವಕಾಶಿ ಪಟಾಕಿ ಕಾರ್ಖಾನೆಯಿಂದಾಗಿ ಆರಂಭಗೊಂಡಿತು ಎಂದು ತಮ್ಮ ಸಂಪನ್ಮೂಲ ಭಾಷಣದಲ್ಲಿ ವಿವರಿಸಿದ ಆಯುಕ್ತರು ಮೈಸೂರಿನಲ್ಲಿ ಗ್ರಾಮಪಂಚಾಯಿತಿ ಸದಸ್ಯರೊಬ್ಬರು ಸ್ವಯಂಪ್ರೇರಿತವಾಗಿ ಕೈಗೊಂಡ ಕ್ರಮಗಳಿಂದ ಬಾಲಕಾರ್ಮಿಕ ಮುಕ್ತ ಗ್ರಾಮ ಸೃಷ್ಟಿಸಿದ ಉದಾಹರಣೆಯನ್ನು ಸಭೆಗೆ ನೀಡಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್,ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಂಘ-ಸಂಸ್ಥೆಗಳು ಮಾತ್ರ ಪ್ರಯತ್ನಿಸದೆ ಪ್ರತಿಯೊಬ್ಬ ನಾಗರಿಕನೂ ಹೊಣೆ ಹೊರಬೇಕು. ಆರ್ಥಿಕ ಚಟುವಟಿಕೆಗಳಿಗೆ ಮಾತ್ರವಲ್ಲದೆ ಮಾನವ ಕಳ್ಳ ಸಾಗಣೆಯ ಉದ್ದೇಶದಿಂದಲೂ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಪ್ರಕರಣಗಳನ್ನು ತಡೆಯಲು ಜನಜಾಗೃತಿಯಿಂದ ಮಾತ್ರ ಸಾಧ್ಯ ಎಂದರು.ಮುಖ್ಯ ಅತಿಥಿ ಯಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ ಯ ಉಪ ನಿರ್ದೇ ಶಕಿ ಎ. ಶಕುಂ ತಲ ಮಾತ ನಾಡಿ, ಅನ ಧಿಕೃ ತವಾಗಿ ಮನೆ, ಹೊಟೇಲ್, ವಾಣಿಜ್ಯ ಸಂಸ್ಥೆ, ಗ್ಯಾ ರೇಜ್, ಕಾರ್ಖಾನೆ ಮೊದ ಲಾದ ಕಡೆ ಗಳಲ್ಲಿ ಮಕ್ಕ ಳನ್ನು ಕೆಲಸ ಕ್ಕಿಟ್ಟು ಕೊಳ್ಳು ವುದು ಅಪ ರಾಧ. ಬಾಲ ಕಾರ್ಮಿ ಕರ ಪದ್ಧತಿ ನಿರ್ಮೂ ಲನೆಗೆ ಬಾಲ ನ್ಯಾಯ ಕಾಯ್ದೆ, ಪಂಚಾ ಯತ್ ಮಟ್ಟದಲ್ಲಿ ಕಾವಲು ಸಮಿತಿ, ದತ್ತು ಸ್ವೀಕಾರ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ. ಕಾರ್ಮಿಕ ಇಲಾಖೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ ಎಂದರು. ಇನ್ನೋರ್ವ ಅತಿಥಿ, ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ವಿ. ಪಾಟೀಲ್ ಬಾಲಕಾರ್ಮಿಕ ಪದ್ಧತಿಯನ್ನು ಅಳಿಸಿಹಾಕಲು ಸರಕಾರ ರೂಪಿಸಿದ ಶಾಸನಗಳು, ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳ ಆದೇಶಗಳು ಹಾಗೂ ಪ್ರಾಧಿಕಾರಗಳ ಕುರಿತು ಮಾಹಿತಿ ನೀಡಿ ಇದು ಅಂತಾರಾಷ್ಟ್ರೀಯ ಸಮಸ್ಯೆಯಾಗಿದ್ದು ಎಲ್ಲ ಇಲಾಖೆಗಳು ಪರಸ್ಪರ ಕೈ ಜೋಡಿಸಿ ಸಮಸ್ಯೆಯನ್ನು ಹೋಗಲಾಡಿಸಬೇಕಾಗಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಎಸ್. ಪಿ. ಚೆಂಗಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಜ್ಞಾ ಟ್ವಿನ್ ಹೌಸ್ ಕೌನ್ಸಿಲಿಂಗ್ ಸೆಂಟರ್ ನ 25 ವಿದ್ಯಾರ್ಥಿಗಳಿಗೆ ಬೆಡ್ ಶೀಟ್ ಗಳನ್ನು ವಿತರಿಸಲಾಯಿತು. ಮತ್ತು ಬಾಲಕಾರ್ಮಿರಾಗಿದ್ದು ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಪುನರ್ವಸತಿ ಪಡೆದಿರುವ ಜೆಪ್ಪು ಕಾಸಿಯಾ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ಕಾವ್ಯಾ ಮತ್ತು ಭವ್ಯಾ ಅನಿಸಿಕೆ ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎಚ್. ಆರ್. ದೇಶಪಾಂಡೆ ವಹಿಸಿದ್ದರು.ಜಿ.ಪಂ. ಮುಖ್ಯಿ ಯೋಜನಾಧಿಕಾರಿ ಮೊಹಮ್ಮದ್ ನಜೀರ್, ವೆನ್ಲಾಕ್ ಆಸ್ಪತ್ರೆಯ ಡಿ ಎಂ ಒ ಡಾ. ಸಂಗಮೇಶ್ವರ್, ಡಾ.ರಾಮಕೃಷ್ಣ, ಲಾವಣ್ಯ ಶೆಟ್ಟಿ, ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಸ್ವಾಗತಿಸಿ, ಗೋಪಾಲ ಗೌಡ ವಂದಿಸಿದರು.