Wednesday, June 15, 2011

ಅಧಿಕಾರಿಗಳಿಗೆ ಮಾಹಿತಿ ಹಕ್ಕು ತರಬೇತಿ

ಮಂಗಳೂರು,ಜೂ.15: ಜನರಿಂದ ಜನರಿಗಾಗಿ ರೂಪಿಸಲ್ಪಟ್ಟ ಮಾಹಿತಿ ಹಕ್ಕು ಕಾಯಿದೆಯನ್ನು ಹೆಚ್ಚು ಬಳಸಿಕೊಂಡದ್ದು ಸರ್ಕಾರೇತರ ಸಂಘಸಂಸ್ಥೆಗಳೋ, ಪತ್ರಕರ್ತರೋ ಅಲ್ಲ; ಈ ಕಾಯಿದೆಯ ಪ್ರಯೋಜನವನ್ನು ಪಡೆದುಕೊಂಡವರು ಸರ್ಕಾರಿ ಅಧಿಕಾರಿಗಳು ಎಂದು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ನ ಅಸೋಸಿಯೇಟ್ ಪ್ರೊ. ಡಾ ಸಾಯಿರಾಂ ಭಟ್ ಹೇಳಿದರು.

ಅವರು ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಮೈಸೂ ರಿನ ಆಡಳಿತ ತರ ಬೇತಿ ಸಂಸ್ಥೆ ಆಯೋ ಜಿಸಿದ್ದ 'ಮಾಹಿತಿ ಹಕ್ಕು -2005 ಕಾಯಿದೆ ಯ ಪರಿಣಾ ಮಕಾರಿ ಅನುಷ್ಠಾ ನದ ಮುಖಾಂ ತರ ಪಾರ ದರ್ಶ ಕತೆ ಮತ್ತು ಜವಾ ಬ್ದಾರಿ ವೃದ್ಧಿ' ಕುರಿತ ಕಾರ್ಯಾ ಗಾರ ದಲ್ಲಿ ಅಧಿ ಕಾರಿ ಗಳನ್ನು ಉದ್ದೇ ಶಿಸಿ ಮಾತ ನಾಡು ತಿದ್ದರು.
ಸರ್ಕಾರಿ ವ್ಯವಸ್ಥೆಯಲ್ಲಿ ಮಾಹಿತಿ ಪಡೆದುಕೊಳ್ಳುವ ಕ್ಲಿಷ್ಟ ಪ್ರಕ್ರಿಯೆಗೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಮಾಹಿತಿ ಹಕ್ಕು ಸಂಚಲನವನ್ನೇ ಮೂಡಿಸಿತು. ಈ ಸಂಬಂಧ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಜನರು ಪಡೆದುಕೊಂಡ ಅನುಕೂಲದ ಬಗ್ಗೆ ಸಮೀಕ್ಷೆ ನಡೆಸಿದಾಗ ಈ ಹಕ್ಕನ್ನು ಹೆಚ್ಚಾಗಿ ಬಳಸಿಕೊಂಡದ್ದು, ಸರ್ಕಾರಿ ಅಧಿಕಾರಿಗಳು ಮತ್ತು ನಿವೃತ್ತ ಸರ್ಕಾರಿ ಅಧಿಕಾರಿಗಳು ಎಂದು ಡಾ ಸಾಯಿರಾಂ ಭಟ್ ಹೇಳಿದರು.ಸಾರ್ವಜನಿಕ ಪ್ರಾಧಿಕಾರ, ದಾಖಲೆಗಳ ನಿರ್ವಹಣೆ, ಸೆಕ್ಷನ್ 4(1) (ಬಿ), ಅರ್ಧ ಮಾಹಿತಿ ನೀಡುವಿಕೆ, ಮೂರನೇ ಪಾರ್ಟಿ ಮಾಹಿತಿ ನೀಡುವುದು, ನೀಡಲಾಗದ ಮಾಹಿತಿಗಳ ಬಗ್ಗೆ ಸವಿವರ ಮಾಹಿತಿ ನೀಡಿದರು.ಸಾರ್ವಜನಿಕ ಪ್ರಾಧಿಕಾರದ ಕರ್ತವ್ಯಗಳ ಕುರಿತಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಈ ಕಾಯ್ದೆ ಕೇಂದ್ರ ಕಾನೂನಿಗೆ ಒಳಪಟ್ಟಿದ್ದರೂ ಇದನ್ನು ಅನುಷ್ಠಾನಗೊಳಿಸುವ ಸಂದರ್ಭ ಸಂಬಂಧಪಟ್ಟ ರಾಜ್ಯಗಳ ಸರಕಾರಗಳು ಕೆಲವೊಂದು ನಿಯಮಗಳನ್ನು ತರಬಹುದಾಗಿದೆ. ಸರಕಾರದ ಪಾಲುದಾರಿಕೆ ಹೊಂದಿರುವ ಎಲ್ಲಾ ಸಾರ್ವಜನಿಕ ವಲಯದ ಸಂಸ್ಥೆಗಳು ಈ ಕಾನೂನಿನ ವ್ಯಾಪ್ತಿಗೊಳಪಡುತ್ತವೆ. ಒಂದು ವರ್ಷದಲ್ಲಿ 25 ಲಕ್ಷಕ್ಕಿಂತ ಹೆಚ್ಚಿನ ಸರಕಾರಿ ಹಣಕಾಸು ನೆರವನ್ನು ಪಡೆಯುವ ಸರಕಾರೇತರ ಸಂಸ್ಥೆಗಳೂ ಸಹ ಈ ಕಾನೂನಿನ ವ್ಯಾಪ್ತಿಗೊಳಪಡುತ್ತವೆ ಎಂದು ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ನ ಪ್ರಕರಣವೊಂದನ್ನು ಉದಾಹರಿಸಿದರು.ಮಾಹಿತಿ ಹಕ್ಕು ಕಾಯ್ದೆ ಯಡಿ ಮಾಹಿತಿ ಪಡೆ ಯಲು 30 ದಿನ ಗಳ ಕಾಲ ನಿಗದಿ ಪಡಿಸ ಲಾಗಿದ್ದು, ಈ ತೃ ತೀಯ ವ್ಯಕ್ತಿ ಯ ಮೂಲಕ ಮಾಹಿತಿ ಪಡೆ ಯಲು 40 ದಿನ ಗಳ ಕಾಲಾ ವಕಾ ಶವನ್ನು ನಿಗದಿ ಪಡಿ ಸಲಾ ಗಿದೆ ಎಂ ದರು. ಜೂನ್ 15 ರಂದು ನಿವೃತ್ತ ರಾಜ್ಯ ಸರ್ಕಾರಿ ಕಾರ್ಯ ದರ್ಶಿ ರಾಬಿನ್ಸ್ ಡಿ ಸೋಜಾ ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ಮಾಹಿತಿ ನೀಡುವ ಹಾಗೂ ಪಡೆಯುವ ಕಷ್ಟದ ಬಗ್ಗೆ ಹಾಗೂ ಮಾಹಿತಿ ಹಕ್ಕು ಕಾಯಿದೆಯಿಂದ ಬದಲಾದ ವ್ಯವಸ್ಥೆ ಬಗ್ಗೆ ಹಲವು ಉದಾಹರಣೆಗಳೊಂದಿಗೆ ತರಬೇತಿ ತರಗತಿಯನ್ನು ಆರಂಭಿಸಿದರು. ಆರ್ ಟಿ ಯ ಕಾಯಿದೆಯಡಿ ಅರ್ಜಿಗಳನ್ನು ಸ್ವೀಕರಿಸಿ, ವಿಲೇ ಮಾಡುವ ರೀತಿಯನ್ನು ಈ ಸಂಬಂಧ ಎಲ್ಲರಿಗೂ ತರಬೇತಿ ನೀಡುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಭಾರ ಸಿಇಒ ಶಿವರಾಮೇಗೌಡ ನೆರವೇರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಸಂಯೋಜಕ ಕೆ.ಎಂ. ಪ್ರಸಾದ್, ಮಂಗಳೂರು ಉಪವಿಭಾಗಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಮಾರೋಪ ಸಮಾರಂಭದಲ್ಲಿ ಪಿಲಿಕುಳ ನಿಸರ್ಗಧಾಮದ ಆಡಳಿತಾಧಿಕಾರಿ ಹಾಗೂ ಡಿಟಿಐ ನ ಪ್ರಾಂಶುಪಾಲರಾದ ಜೆ.ಆರ್.ಲೋಬೋ ಉಪಸ್ಥಿತರಿದ್ದರು