
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರೈಲ್ವೇ ಸಮ ನ್ವಯ ಸಮಿತಿ ಸಭೆಯಲ್ಲಿ ಪಾಲಕ್ಕಾಡ್ ವಿಭಾಗದಲ್ಲಿ ಕೈ ಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಿವರ ನೀಡುತ್ತಿದ್ದರು.
ಮಂಗಳೂರು ರೈಲ್ವೇ ನಿಲ್ದಾಣದಲ್ಲಿ 4ನೇ ಪ್ಲಾಟ್ಟ್ ಫಾರ್ಮ್ ನಿರ್ಮಾಣಕ್ಕೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು, ಮಂಗಳೂರು ರೈಲ್ವೇ ನಿಲ್ದಾಣದ ಅಭಿವೃದ್ಧಿಗೆ 10 ಕೋಟಿ ರೂ.ಗಳ ಕೆಲಸ ವಿವಿಧ ಹಂತದಲ್ಲಿದೆ. ಎರಡೂವರೆ ಕೋಟಿ ರೂ.ಗಳನ್ನು ಕಳೆದ ಎರಡು ವರ್ಷಗಳಿಂದ ಸ್ಟೇಷನ್ ಸುವ್ಯವಸ್ಥೆಗೆ ಬಳಕೆ ಮಾಡಲಾಗಿದೆ. ಐದು ಕೋಟಿ ರೂ.ಗಳ ಪೈಪ್ ಲೈನ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ಒಂದೂವರೆ ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಯಶವಂತಪುರ ರೈಲನ್ನು ಕಾರವಾರದವರೆಗೆ ವಿಸ್ತ ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ನೇತ್ರಾವತಿ ಸೇತುವೆಯಲ್ಲಿ ಡಬಲ್ ಲೈನಿಂಗ್ ಮಾಡಲು 50 ಕೋಟಿ ರೂ. ತಗುಲಲಿದೆ ಎಂದ ಅವರು, ರೈಲ್ವೇ ಲೈನ್ ಅನ್ನು ಪಣಂಬೂರುವರೆಗೆ ವಿಸ್ತರಿಸಲು 150 ಕೋಟಿ ರೂ. ಯೋಜನೆಯಿದೆ ಎಂದರು. ಈ ವಲಯದಲ್ಲಿ ಸೇತುವೆ ನಿರ್ಮಾಣಕ್ಕಿಂತ ಮುಂಚೆ ಜಿಯೋಟೆಕ್ನಿಕಲ್ ಇನ್ವೆಸ್ಟಿಗೇಷನ್ ನ ಅಗತ್ಯವನ್ನು ಒತ್ತಿ ಹೇಳಿದ ಅವರು, ಪರಿಣತ ಇಂಜಿನಿಯರ್ ಗಳಿಂದ ಸಮಗ್ರ ಸಮೀಕ್ಷೆಗೆ ರೈಲ್ವೇ ಆದ್ಯತೆ ನೀಡಿದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದರು. ಮುಂದಿನ ಡಿಸೆಂಬರ್ ವೇಳೆಗೆ ನೇತ್ರಾವತಿ ಸೇತುವೆ ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆಯನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ದಕ್ಷಿಣ ವಲಯದಲ್ಲಿ 27 ಜೆಟಿಬಿಎಸ್ ಗಳನ್ನು ತೆರೆಯಲಾಗಿದ್ದು, ಸಾಮಾನ್ಯ ಪ್ರಯಾಣಿಕರಿಗೆ ಇದರಿಂದ ಬಹಳಷ್ಟು ಅನುಕೂಲವಾಗಿದೆ ಎಂದರು.
ಕಾರ್ಪೋ ರೇಷನ್ ವಲಯದಲ್ಲಿ ಸ್ಥಳೀಯಾಡ ಳಿತ ದಿಂದ ಪೂರಕ ನೆರವು ದೊರೆ ತರೆ ಸೂಕ್ತ ವಾಗಿ ಯೋಜನೆ ಅನು ಷ್ಠಾನಕ್ಕೆ ತರಲು ರೈಲ್ವೆ ಇಲಾಖೆ ಸ್ಪಂದಿ ಸಲಿದೆ ಎಂದರು. ಪಡೀಲ್ ಬಜಾಲ್,ಮಹಾ ಕಾಳಿ ಪಡ್ಪು ಲೆವೆಲ್ ಕ್ರಾ ಸಿಂಗ್, ಮೈಸೂರು ವಿಭಾಗದಡಿ ಬರುವ ಪುತ್ತೂರು, ಸುಬ್ರಹ್ಮಣ್ಯದಲ್ಲಿ ರೈಲ್ವೇ ಸ್ಟೇಷನ್ ಅಭಿವೃದ್ಧಿಪಡಿಸುವ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎನ್. ಎಸ್. ಚನ್ನಪ್ಪಗೌಡ, ಪಾಲಿಕೆ ಆಯುಕ್ತರಾದ ಡಾ. ಕೆ. ಎನ್. ವಿಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಸೀನಿಯರ್ ಡಿಸಿಎಂ ದಾಮೋದರನ್, ಡೆಪ್ಯುಟಿ ಇಂಜಿನಿಯರ್ ವೆಸ್ಟ್ ನಲ್ಲೆಮುತ್ತುಮಾಣಿಕ್ಯಂ, ಮೈಸೂರು ವಲಯದಿಂದ ಡಿಆರ್ ಇ ರಂಗನಾಥ ಉಪಸ್ಥಿತರಿದ್ದರು.