Saturday, June 18, 2011

ಭತ್ತದ ಕೃಷಿ ಪ್ರೋತ್ಸಾಹಿಸಲು ಭೂಚೇತನ ಕಾರ್ಯಕ್ರಮ

ಮಂಗಳೂರು,ಜೂನ್.18:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿಕರನ್ನು ಪ್ರೋತ್ಸಾಹಿಸಲು ಕೃಷಿ ಇಲಾಖೆ ಭೂಚೇತನ ಕಾರ್ಯಕ್ರಮವನ್ನು ಪರಿಚಯಿಸಿದ್ದು ಹೈದರಾಬಾದಿನ ಇಕ್ರಿಸ್ಯಾಟ್ ಸಂಸ್ಥೆಯ ಸಹ ಯೋಗದೊಂದಿಗೆ ಕೃಷಿ ಪೂರಕ ಚಟುವಟಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್ ತಿಳಿಸಿದರು.

ಇಕ್ರಿಸ್ಯಾಟ್ (ಇಂಟರ್ ನ್ಯಾಷ ನಲ್ ಕ್ರಾಪ್ ರೀ ಸರ್ಚ್ ಇನ್ಸ್ಟ ಟ್ಯೂಟ್ ಫಾರ್ ಸೆಮಿ ಅರಿಡ್ ಟ್ರಾ ಪಿಕ್ಸ್) ಸಂಸ್ಥೆ ಜಿಲ್ಲೆ ಯಲ್ಲಿ 5,200 ಹೆಕ್ಟೇರ್ ಪ್ರದೇಶ ವ್ಯಾಪ್ತಿ ಯಲ್ಲಿ ಭತ್ತದ ಬೆಳೆಗೆ ಸತು ವಿನ ಸ ಲ್ಫೇಟ್, ಬೋ ರ್ಯಾಕ್ಸ್, ಸುಣ್ಣ, ಜಿಪ್ಸಾನ್ ಇತ್ಯಾದಿ ಗಳನ್ನು ಒದ ಗಿಸಿ ಇಳು ವರಿ ಹೆಚ್ಚಿ ಸಲು ರೈತ ರಿಗೆ ನೆರ ವಾಗ ಲಿದೆ. ಈ ಸಂಬಂಧ ಪ್ರತೀ 500 ಹೆಕ್ಟೇರ್ ಪ್ರದೇಶಕ್ಕೆ ರೈತ ಅನುವುಗಾರರನ್ನು ಕೃಷಿ ವಿಜ್ಞಾನ ಕೇಂದ್ರ ಕಂಕನಾಡಿಯಲ್ಲಿ ತರಬೇತಿ ನೀಡಿ ರೈತರನ್ನು ಆರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭೂಚೇತನ ವ್ಯಾಪ್ತಿಯಡಿ ಇತರ ರೈತರು ಬಿತ್ತನೆ ಬೀಜವನ್ನು ಪ್ರತೀ ಕೆ ಜಿಗೆ 9 ರೂ. ಸಹಾಯಧನದಲ್ಲಿ ರೈತರು ರೈತ ಸಂಪರ್ಕಕೇಂದ್ರಗಳಿಂದ ಪಡೆದು ಉತ್ತಮ ಭತ್ತವನ್ನು ಬೆಳೆಯಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಲಹೆ ಮಾಡಿದ್ದಾರೆ.
ಈ ಸಂಬಂಧ ಹೆಚ್ಚಿನ ಮಾಹಿತಿಗೆ ಇಲಾಖೆಯ ಸಹಾಯಕ ನಿರ್ದೇಶಕರು ಅಥವಾ ರೈತ ಸಂಪಕ್ ಕೇಂದ್ರಗಳನ್ನು ಸಂಪರ್ಕಿಸಬಹುದು.
ಭತ್ತದ ಕೃಷಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 34,000 ಹೆಕ್ಟೇರ್ ಗುರಿಯನ್ನು ಪ್ರಸಕ್ತ ಸಾಲಿನಲ್ಲಿ ಹೊಂದಲಾಗಿದ್ದು, ಕಳೆದ ಸಾಲಿಗಿಂತ 1,000 ಹೆಕ್ಟೇರ್ ವ್ಯಾಪ್ತಿ ಪ್ರದೇಶ ಕಡಿಮೆಯಾಗಿದೆ. ಇದುವರೆಗೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 248 ಹೆಕ್ಟೇರ್ ಗುರಿ ಸಾಧನೆಯಾಗಿದೆ. ತಾಲೂಕುವಾರು ಮಂಗಳೂರಿನಲ್ಲಿ 12,100 ಗುರಿ ಇದ್ದು 80 ಹೆ. ಸಾಧನೆಯಾಗಿದೆ. ಬಂಟ್ವಾಳದಲ್ಲಿ 9,500 ಗುರಿ ಇದ್ದು, 65 ಹೆ. ಸಾಧನೆ ಆಗಿದೆ. ಬೆಳ್ತಂಗಡಿಯಲ್ಲಿ 8,500 ಹೆ. ಗುರಿ ನಿಗದಿಯಾಗಿದ್ದು, 77 ಹೆ. ಸಾಧನೆಯಾಗಿದೆ. ಪುತ್ತೂರಿನಲ್ಲಿ 3,400 ಹೆ. ಗುರಿ ನಿಗದಿಯಾಗಿದ್ದು, 26 ಹೆ. ಸಾಧನೆಯಾಗಿದೆ. ಸುಳ್ಯದಲ್ಲಿ 500 ಹೆ. ಗುರಿ ನಿಗದಿಯಾಗಿದ್ದು, ಸಾಧನೆ ದಾಖಲಾಗಿಲ್ಲ.
ಪೂರ್ವ ಮುಂಗಾರು ಮಳೆ ಸಮರ್ಪಕವಾಗಿಲ್ಲದಿರುವುದರಿಂದ ಭತ್ತದ ಸಸಿಮಡಿ ತಡವಾಗಿರುವ ಕಾರಣ ಸಾಧನೆಯಲ್ಲಿ ಹಿನ್ನಡೆ ದಾಖಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ವಿವರಿಸಿದರು. ಮಳೆ ಜೂನ್ ಆರಂಭದಿಂದಲೇ ಉತ್ತಮವಾಗಿದ್ದರೂ ಮೊದಲು ಮಳೆಯಾಗದ ಕಾರಣ ಸಸಿಮಡಿಯಲ್ಲಿ ವ್ಯತ್ಯಾಸವಾಗಿದೆ.
ಬಿತ್ತನೆ ಬೀಜ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ರಸಗೊಬ್ಬರ ದಾಸ್ತಾನು ಸಾಕಷ್ಟಿದೆ. ಬಿತ್ತನೆ ಬೀಜ 425 ಕ್ವಿಂಟಾಲ್ ಎಂ ಒ 4 ಭದ್ರ, 100 ಕ್ವಿಂಟಾಲ್ ಜ್ಯೋತಿ ದಾಸ್ತಾನಿದೆ. ಈವರೆಗೆ 350 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಯಾಗಿದೆ. 175 ಕ್ವಿಂಟಾಲ್ ದಾಸ್ತಾನಿದೆ ಎಂಬ ಮಾಹಿತಿ ನೀಡಿದ್ದಾರೆ. ಇನ್ನು ಸುವರ್ಣಭೂಮಿ ಯೋಜನೆಯಡಿ ಗುರುತಿಸಿರುವ ಸಣ್ಣ ಹಾಗೂ ಅತಿ ಸಣ್ಣ ರೈತರ ಕೃಷಿ ವಿಸ್ತೀರ್ಣ ಚಟುವಟಿಕೆಗಳಿಗೆ ಕೃಷಿ ವಿಸ್ತೀರ್ಣಕ್ಕೆ ಅನುಗುಣವಾಗಿ ಶೇ. 50 ಅನುದಾನವನ್ನು ಅವರ ಖಾತೆಗೆ ಜಮೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಈವರೆಗೆ 709 ಜನರ ಅರ್ಜಿಯನ್ನು ಪುರಸ್ಕರಿಸಲಾಗಿದೆ. ಗುರುತಿಸಲ್ಪಡದ ರೈತರ ಬಗ್ಗೆ ಹೆಚ್ಚಿನ ಮಾಹಿತಿಗೆ ಹಾಗೂ ಪುನರ್ ಪರಿಶೀಲನೆಗೆ ಕಂದಾಯ ಇಲಾಖೆಯನ್ನು ಕೋರಲಾಗಿದೆ.