Saturday, July 23, 2011

ಪ್ರಾಕೃತಿಕ ವಿಕೋಪ ಅನುದಾನ ಬಳಕೆ ದಾಖಲೆ ಶೀಘ್ರ ಸಲ್ಲಿಸಿ: ಪಾಲೆಮಾರ್ ಸೂಚನೆ

ಮಂಗಳೂರು,ಜುಲೈ.23:ಕಳೆದ ಸಾಲಿನಲ್ಲಿ ಪ್ರಾಕೃತಿಕ ವಿಕೋಪದಡಿ ಕೈಗೊಂಡಿರುವ ಕಾಮಗಾರಿಗಳ ಬಳಕೆ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸದಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಹಣ ಬಿಡುಗಡೆಗೆ ತೊಡಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ತಿಳಿಸಿದ್ದಾರೆ.
ಅವ ರಿಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ಆಯೋ ಜಿಸಿದ್ದ ಮುಂಗಾರು ಮಳೆ ಮತ್ತು ಪ್ರಾಕೃ ತಿಕ ವಿಕೋಪ ಸಭೆ ಯನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಪ್ರಾಕೃ ತಿಕ ವಿಕೋ ಪದಡಿ ಜಿಲ್ಲೆ ಯಲ್ಲಿ ಕೈ ಗೊಂಡಿದ್ದ ಹಾಗೂ ಕೈ ಗೊಂಡಿ ರುವ ಕಾಮ ಗಾರಿ ಗಳನ್ನು ಪರಿ ಶೀಲಿಸಿದ ಅವರು ಜಿಲ್ಲಾ ಪಂಚಾ ಯತ್ ಇಂಜಿ ನಿಯ ರಿಂಗ್ ಮತ್ತು ಲೋಕೋ ಪಯೋಗಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರಲ್ಲದೆ ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲು ಸಮಯಮಿತಿ ನಿಗದಿಪಡಿಸಿದರು. 06-07 ನೇ ಸಾಲಿನ ಕೆಲಸಗಳ ಬಳಕೆಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಮುಂದಿನ 15 ದಿನಗಳೊಳಗೆ ಅಂದರೆ ಆಗಸ್ಟ್ 8 ರೊಳಗೆ ಸಲ್ಲಿಸಬೇಕೆಂದ ಅವರು, 07-08 ಮತ್ತು 08-09ರ ಸಾಲಿನ ಕಾಮಗಾರಿಗಳ ದಾಖಲೆಯನ್ನು ಕ್ರಮವಾಗಿ ಆಗಸ್ಟ್ 31 ಮತ್ತು ಅಕ್ಟೋಬರ್ ತಿಂಗಳೊಳಗಾಗಿ ನೀಡಬೇಕು. ನಂತರ ಬಂದ ವರದಿಗಳನ್ನು ಸ್ವೀಕರಿಸಲಾಗುವುದಿಲ್ಲ ಹಾಗೂ ಹಣ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಖಡಾ ಖಂಡಿತವಾಗಿ ನುಡಿದರು.
ಕರ್ತವ್ಯಕ್ಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ಸ್ ಗಳನ್ನು ಹೊಣೆ ಮಾಡಲಾಗುವುದು ಎಂದು ಸಚಿವರು ಎಚ್ಚರಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ತಹಸೀಲ್ದಾರರಿಂದ ತಾಲೂಕಿನಲ್ಲಿ ಸಂಭವಿಸಿರುವ ನೆರೆ ಹಾನಿ ವರದಿ ಹಾಗೂ ವಿತರಿಸಲಾದ ಪರಿಹಾರದ ಮಾಹಿತಿಯನ್ನು ಪಡೆದರು. ಮಂಗಳೂರು ತಹಸೀಲ್ದಾರ್ ರವಿಚಂದ್ರ ನಾಯಕ್ ಅವರು ಮಾಹಿತಿ ನೀಡಿ ತಾಲೂಕಿನಲ್ಲಿ 40 ತಂಡಗಳನ್ನು ರಚಿಸಲಾಗಿದ್ದು, ನೇತ್ರಾವತಿ ಮತ್ತು ಗುರುಪುರ ನದೀ ತೀರದಲ್ಲಿ 24 ಗಂಟೆಗಳು ಕಾರ್ಯನಿರತವಾಗಿರುವ ಕಾರ್ಯಪಡೆಗಳಿವೆ ಎಂದರು. ತಾಲೂಕಿನಲ್ಲಿ 4 ಮನೆಗಳು ಸಂಪೂರ್ಣ ಹಾನಿಗೊಂಡಿವೆ. 8 ಮನೆ ತೀವ್ರ ಹಾನಿಗೊಳಗಾಗಿದೆ ಹಾಗೂ 48ಮನೆಗಳಿಗೆ ಭಾಗಶ: ಹಾನಿ ಸಂಭವಿಸಿದೆ. ಒಂದು ಜೀವ ಹಾನಿಯಾಗಿದ್ದು ಪರಿಹಾರ ನೀಡಲಾಗಿದೆ ಎಂದರು. ಬಂಟ್ವಾಳದಲ್ಲಿ ಎರಡು ಜೀವಹಾನಿಗೆ ಎರಡು ಲಕ್ಷ ರೂ ಪರಿಹಾರ ನೀಡಲಾಗಿದೆ. ಕೃಷಿ ನಾಶ ಹಾಗೂ ಇತರೆ ನಾಶ ನಷ್ಟಗಳಿಗೆ ಸಂಬಂಧಿಸಿದಂತೆ 1,12,000ರೂ.ಗಳಷ್ಟು ಪರಿಹಾರ ವಿತರಿಸಿದೆ ಎಂದು ಬಂಟ್ವಾಳ ಪ್ರಭಾರ ತಹಸೀಲ್ದಾರ್ ವಿಜಯ್ ಮಾಹಿತಿ ನೀಡಿದರು. ಇಲ್ಲಿ ನೆರೆ ಪರಿಹಾರ ಕಾರ್ಯಾಚರಣೆಗೆ 6 ತಂಡಗಳನ್ನು ರಚಿಸಲಾಗಿದೆ. ಬೆಳ್ತಂಗಡಿ ತಹಸೀಲ್ದಾರ್ ಪ್ರಮೀಳ ಅವರು ಮಾಹಿತಿ ನೀಡಿ ತಾಲೂಕಿನಲ್ಲಿ ಒಂದು ಜೀವ ಹಾನಿ ಮತ್ತು 17 ಮನೆ ಹಾನಿ ವರದಿಯಾಗಿದ್ದು ಪರಿಹಾರ ವಿತರಿಸಲಾಗಿದೆ ಎಂದರು.ಸುಳ್ಯ ತಹ ಸೀಲ್ದಾರ್ ವೈದ್ಯ ನಾಥ್ ಅವರು ನೀಡಿದ ಮಾಹಿತಿ ಯಂತೆ ಸುಳ್ಯ ತಾಲೂಕಿ ನಲ್ಲಿ ಒಂದು ಜೀವ ಹಾನಿ ಯಾಗಿದೆ. ಒಂದು ಮನೆ ಸಂಪೂರ್ಣ ನಾಶ ವಾಗಿದೆ ಸೂಕ್ತ ಪರಿ ಹಾರ ನೀಡ ಲಾಗಿದೆ ಎಂದರು. ಸಾಂಕ್ರಾ ಮಿಕ ರೋಗ ಹರಡ ದಂತೆ ಕೈ ಗೊಂಡಿ ರುವ ಕ್ರಮ ಗಳನ್ನು ವಿವ ರಿಸಿ ದರು.
ಪುತ್ತೂರು ತಹಸೀಲ್ದಾರ್ ದಾಸೇಗೌಡ ಅವರು ಮಾಹಿತಿ ನೀಡಿ ಪುತ್ತೂರಿನಲ್ಲಿ ಒಂದು ಜೀವಹಾನಿ ಹಾಗೂ 6 ಜಾನುವಾರುಗಳು ಮೃತಪಟ್ಟಿದ್ದು ನಿಯಮಾನುಸಾರ ಪರಿಹಾರ ಪಾವತಿಸಲಾಗಿದೆ ಎಂದರು.
ಮೂಡಬಿದ್ರೆಯಲ್ಲಿ ಕೃಷಿ ಬೆಳೆ 3.54 ಎಕರೆಯಷ್ಟು ನಷ್ಟವಾಗಿದ್ದು 22,000 ರೂ. ನಷ್ಟ ಎಂದು ವರದಿಯಾಗಿದ್ದು ಪರಿಹಾರ ಪಾವತಿಗೆ ಬಾಕಿಯಿದೆ ಎಂದರು. ಏಳು ಮನೆಗೆ ಭಾಗಷ ಹಾನಿ ಹಾಗೂ ಒಂದು ಪೂರ್ತಿ ಹಾನಿಯಾಗಿದೆ ಎಂದು ತಹಸೀಲ್ದಾರ್ ಮುರಳೀಧರ್ ತಿಳಿಸಿದರು.
ಮೆಸ್ಕಾಂನ 439 ಕಂಬಗಳು ಹಾಗೂ 38 ಪರಿವರ್ತಕಗಳು ಹಾಳಾಗಿದ್ದು ಎಲ್ಲವುಗಳನ್ನು ಸರಿಪಡಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿ ಮಂಜಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ಮಹಾನಗರಪಾಲಿಕೆಗೆ ಸಂಬಂಧಿಸಿದಂತೆ ಮೇಯರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸೂಕ್ತ ಕ್ರಮಕೈಗೊಳ್ಳಲು ಉಸ್ತುವಾರಿ ಸಚಿವರು ಸೂಚಿಸಿದರು. ಶಾಸಕ ಯು ಟಿ ಖಾದರ್ ಅವರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಆರ್ ಟಿ ಒ, ಕೆ ಎಸ್ ಆರ್ ಟಿಸಿ, ಅಗ್ನಿಶಾಮಕ ದಳ ನಿರ್ವಹಿಸಿರುವ ವಿಕೋಪ ನಿರ್ವಹಣೆ ಬಗ್ಗೆ ವರದಿಯನ್ನು ಸಚಿವರು ಪಡೆದುಕೊಂಡರು. ಜಿಲ್ಲಾಧಿಕಾರಿ ಡಾ ಎನ್ ಎಸ್ ಚೆನ್ನಪ್ಪಗೌಡ ಹಾಗೂ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.