Saturday, July 30, 2011

ಶೇಕಡ 98ರಷ್ಟು ಆಸ್ತಿ ತೆರಿಗೆ ಸಂಗ್ರಹ ಮನಾಪ ಸಾಧನೆ: ವಿಜಯಪ್ರಕಾಶ್

ಮಂಗಳೂರು,ಜುಲೈ.30:ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿ ಬಳಿಕ ತೆರಿಗೆ ವಸೂಲಿಯಲ್ಲಿ ಶೇ.98 ಪ್ರಗತಿ ಸಾಧಿಸಿರುವ ರಾಜ್ಯದ ಏಕೈಕ ಪಾಲಿಕೆ ಎಂಬ ಹೆಗ್ಗಳಿಕೆಗೆ ಮಂಗಳೂರು ಮಹಾನಗರಪಾಲಿಕೆ ಪಾತ್ರವಾಗಿದೆ ಎಂದು ಪಾಲಿಕೆ ಆಯುಕ್ತರಾದ ಡಾ.ಕೆ.ಎನ್.ವಿಜಯಪ್ರಕಾಶ್ ಹೇಳಿದರು.ಅವ ರಿಂದು ಕುಡ್ಸೆಂಪ್ ಕಚೇರಿ ಯಲ್ಲಿ ಕರೆದ ಪತ್ರಿಕಾ ಗೋಷ್ಠಿ ಯಲ್ಲಿ ತಮ್ಮ ಅವಧಿ ಯಲ್ಲಿ ಪಾಲಿಕೆ ಯಲ್ಲಾದ ಅಭಿ ವೃದ್ಧಿಯ ಬಗ್ಗೆ ತೃಪ್ತಿ ವ್ಯಕ್ತ ಪಡಿಸಿ ದರಲ್ಲದೆ, ಸಾಧನೆಗೆ ಪೂರಕ ನೆರವು ನೀಡಿದ ಪ್ರತಿ ಯೊಬ್ಬ ರಿಗೂ ಧನ್ಯ ವಾದ ಗಳನ್ನು ತಿಳಿ ಸಿದರು.
ಮಂಗಳೂರು ಮಹಾನಗರಪಾಲಿಕೆ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದೆ. ಇನ್ನೂ ಕ್ರಮಿಸಬೇಕಾದ ಹಾದಿ ಬಹಳವಿದೆ. ಆದರೆ ತಮ್ಮ ವ್ಯಾಪ್ತಿಯಲ್ಲಿ ಕ್ರಮಿಸಿರುವ ಹಾದಿಯ ಬಗ್ಗೆ ಸಮಾಧಾನವಿದೆ ಎಂದರು. ಪಾಲಿಕೆಯ ವಾರ್ಷಿಕ ಆದಾಯ ರೂ. 9.65 ಕೋಟಿ ಇತ್ತು. ಎಸ್ಎಎಸ್ ಜಾರಿಗೊಂಡ ಬಳಿಕ ಅದು ರೂ. 38.85 ಕೋಟಿಗಳಿಗೆ ಏರಿಕೆಯಾಗಿದೆ. ಎಂದರು.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪಾಲಿಕೆಗೆ ಐದು ಪ್ರಶಸ್ತಿಗಳು ಬಂದಿವೆ. ಇದು ಜನತೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಿದ ಆಯುಕ್ತರು, ಘನತ್ಯಾಜ್ಯ ನಿರ್ವಹಣೆಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉರ್ವದಲ್ಲಿ ತ್ಯಾಜ್ಯ ಬಳಸಿ ಬಯೋ ಗ್ಯಾಸ್ ಪ್ಲಾಂಟ್ ಆರಂಭಿಸಲಾಗುತ್ತಿದೆ. ಮುಂಬೈಯ ಬಾಬಾ ಅಣು ಸಂಶೋಧನಾ ಸಂಸ್ಥೆ ಈ ಯೋಜನೆಯಲ್ಲಿ ಪಾಲಿಕೆ ಜೊತೆ ಕೈ ಜೋಡಿಸಿದೆ. ಶಕ್ತಿನಗರದಲ್ಲಿ ಎರಹುಳು ಗೊಬ್ಬರ ತಯಾರಿಕಾ ಘಟಕ ನಿರ್ಮಾಣಗೊಳ್ಳುತ್ತಿದೆ. ನಗರವನ್ನು ಹಸುರೀಕರಣಗೊಳಿಸುವುದಕ್ಕಾಗಿ ಕಳೆದ ಸಾಲಿನಲ್ಲಿ 18 ಸಾವಿರ ಗಿಡಗಳನ್ನು ನೆಡಲಾಗಿದೆ. ಈ ಸಲವೂ ಅರಣ್ಯ ಇಲಾಖೆಯ ಸಹಯೋಗ ದೊಂದಿಗೆ 22 ಸಾವಿರ ಗಿಡಗಳನ್ನು ನೆಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಟಿಡಿಆರ್ ಜಾರಿಗೊಳಿಸಿ ರಸ್ತೆಗಳನ್ನು ವಿಸ್ತರಿಸಿದ ಮತ್ತು ಅಭಿವೃದ್ಧಿ ಪಡಿಸಿದ ಕೀರ್ತಿ ಮಂಗಳೂರು ಮಹಾನಗರ ಪಾಲಿಕೆಗೆ ಇದೆ. ಟಿಡಿಆರ್ ನಿಂದಾಗಿ ಸುಮಾರು ರೂ.60 ಕೋಟಿ ಮೌಲ್ಯದ 12 ಎಕರೆ ಜಮೀನನ್ನು ನಗರದ ಜನತೆಯಿಂದ ಪಡೆಯಲಾಗಿದೆ ಎಂದು ಅವರು ವಿವರಿಸಿದರು.
ರುದ್ರಭೂಮಿ ಅಭಿವೃದ್ಧಿ
ರೂ. 45 ಲಕ್ಷ ವೆಚ್ಚದಲ್ಲಿ ನಂದಿಗುಡ್ಡೆ, ರೂ.35 ಲಕ್ಷ ವೆಚ್ಚದಲ್ಲಿ ಶಕ್ತಿನಗರ ಹಾಗೂ ರೂ. 20 ಲಕ್ಷದಲ್ಲಿ ಸುರತ್ಕಲ್ ಹಿಂದು ರುದ್ರಭೂಮಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸ್ಮಶಾನಗಳಿಗೂ ತಮ್ಮ ಅವಧಿಯಲ್ಲಿ ಆದ್ಯತೆ ನೀಡಿದೆ. ನಗರದ ಮೂರು ಕಡೆಗಳಲ್ಲಿ ಸಮಗ್ರ ಸೇವಾಕೇಂದ್ರ `ಮಂಗಳೂರು ವನ್' ತೆರೆಯಲಾಗಿದೆ. ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಸಹಾಯಕ್ಕಾಗಿ `ಆಶಾ ಚಾವಡಿ'ಯನ್ನು ಸ್ಥಾಪಿಸಲಾಗಿದೆ. ಕುಂದು ಕೊರತೆಗಳ ದಾಖಲಾತಿಗಾಗಿ ಮತ್ತು ಸಾರ್ವಜನಿಕರ ಮಾಹಿತಿಗಾಗಿ `ನಗರ ಮಿತ್ರ' ಕೌಂಟರ್ನ್ನು ತೆರೆದು ಪಾಲಿಕೆಯನ್ನು ಸಾರ್ವಜನಿಕರಿಗೆ ಮುಕ್ತ ಕಚೇರಿ ಯನ್ನಾಗಿ ಮಾಡಲಾಗಿದೆ ಎಂದು ನುಡಿದರು. ಮಹಾನಗರಪಾಲಿಕೆಯ ಆಡಳಿತ ಮಂಡಳಿ, ಜನತೆಯ ಸಹಕಾರವನ್ನು ಸ್ಮರಿಸಿದ ಅವರು, ಆಗಸ್ಟ್ ಒಂದರಂದು ಪೂರ್ವಾಹ್ನ ದ.ಕ.ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವುದಾಗಿ ತಿಳಿಸಿದರು.
ಪಾಕ್ರ್ ಗಳ ಅಭಿವೃದ್ಧಿಗೆ ಕ್ರಮ: ಮನಪಾ ಪಾರ್ಕ್ ಗಳ ಅಭಿವೃದ್ಧಿಗೆ ಕೈಗೊಂಡಿರುವ ಶ್ರಮಗಳನ್ನು ವಿವರಿಸಿದ ಅವರು, ಗಾಂಧಿನಗರದಲ್ಲಿ ವಿಶೇಷ ಮಕ್ಕಳಿಗಾಗಿ ಪಾರ್ಕನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ. ಹ್ಯಾಟ್ ಹಿಲ್ ನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಉದ್ಯಾನವನವನ್ನು ರೂಪಿಸಲಾಗಿದೆ. ಶೀಘ್ರ ಇದರ ಉದ್ಘಾಟನೆ ನೆರವೇರಲಿದೆ ಎಂದರು.