Friday, July 15, 2011

ಸುವರ್ಣ ವಸ್ತ್ರನೀತಿಯಡಿ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ

ಮಂಗಳೂರು,ಜುಲೈ.15:ಕೈಮಗ್ಗ ಮತ್ತು ಜವಳಿ ಇಲಾಖೆ ಸುವರ್ಣ ವಸ್ತ್ರ ನೀತಿಯಡಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಪ್ರವೈಟ್ ಪಬ್ಲಿಕ್ ಪಾರ್ಟಿಸಿಪೇಷನ್ ಮಾದರಿಯಲ್ಲಿ ಹೊಲಿಗೆ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಆರಂಭಿಸಿದ್ದು ಆಸಕ್ತ ನಿರುದ್ಯೋಗಿಗಳಿಗೆ ನೆರವಾಗಲಿದೆ.
ಮಂಗ ಳೂರು ನಗರದ ಮಿಫ್ಟ್ ಕಾಲೇ ಜಿನ ಸಹ ಕಾರ ದೊಂದಿಗೆ, ಗುರು ಪುರ ದಲ್ಲಿ ದಾಮೋ ದರ ಗಾರ್ಮೆಂಟ್ಸ್ ಇಂಡ ಸ್ಟ್ರೀಸ್ ಕೇಂದ್ರದ ಜೊತೆ, ಬಂಟ್ವಾಳ ತಾ ಲೂಕಿನ ಬಿ ಸಿ ರೋಡಿನ ಗ್ಲೋರಿಯಾ ಕಾಲೇಜು ಸಹ ಕಾರ ದೊಂದಿಗೆ, ಸುಳ್ಯದ ಸುಬ್ರ ಹ್ಮಣ್ಯ ಕಮ್ಯುನಿಟಿ ಪಾಲಿ ಟೆಕ್ನಿಕ್ ಜೊತೆ ಹಾಗೂ ಬೆಳ್ತಂ ಗಡಿ ಲಾಯಿಲಾ ದಲ್ಲಿ ಎಸ್ ಕೆ ಆರ್ ಡಿಪಿ ಸಿರಿ ಜೊತೆ ಘಟಕಗಳು ಕಾರ್ಯೋನ್ಮುಖವಾಗಿದ್ದು ಇಲ್ಲಿ ತರಬೇತಿ ಪಡೆದವರಿಗೆ ಉದ್ಯೋಗ ನೀಡುವಲ್ಲಿ ಆದ್ಯತೆ ನೀಡಲಾಗುವುದು.ಸರ್ಕಾರ ಇಲ್ಲಿಗೆ 30 ಲಕ್ಷ ರೂಪಾಯಿ ವೆಚ್ಚ ಮಾಡಿ ಅತ್ಯಾ ಧುನಿಕ ಹೊಲಿಗೆ ಯಂತ್ರ ಗಳನ್ನು ಒದ ಗಿಸಿದೆ. ಸಬ್ಸಿಡಿ ಯಲ್ಲಿ ವಿದ್ಯುತ್ ಮತ್ತು ಜನ ರೇಟರ್ ಸೌಲಭ್ಯ ಸರ್ಕಾ ರದ್ದು. ಇಲಾಖೆ ಇಲ್ಲಿ ವ್ಯವಸ್ಥೆ ಗಳ ಸಮರ್ಪಕ ಅನುಷ್ಠಾ ನದ ಕುರಿತು ಮೇಲ್ವಿ ಚಾರಣೆ ನಡೆಸು ತ್ತದೆ. ಶೆ. 100 ರಷ್ಟು ಉದ್ಯೋ ಗದ ಭರ ವಸೆ ನೀಡು ತ್ತದೆ. ಜವಳಿ ಕ್ಷೇತ್ರ ದಲ್ಲಿ ವಿಫುಲ ಅವ ಕಾಶ ಗಳನ್ನು ತರ ಬೇತಿ ಪಡೆದ ಉದ್ಯೋ ಗಾಕಾಂಕ್ಷಿಗಳಿಗೆ ತೆರೆದಿಟ್ಟಿದೆ.
ತರಬೇತಿ ಪಡೆದವರಿಗೆ ಜವಳಿ ಇಲಾಖೆಯಿಂದ ಪ್ರಮಾಣ ಪತ್ರ, ಉದ್ಯೋಗ ದೊರಕಿಸಿಕೊಡಲಾಗುತ್ತದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಯೋಗೀಶ್ ತಿಳಿಸಿದರು. ಪ್ರಸಕ್ತ 120 ಮಂದಿ ಕೇಂದ್ರ ಗಳಲ್ಲಿ ಹೊಲಿಗೆ ತರ ಬೇತಿ ಪಡೆ ಯುತ್ತಿ ದ್ದಾರೆ. ಇವರಿಗೆ ಪ್ರತೀ ತಿಂಗಳು 2,000 ರೂ. ಶಿಷ್ಯ ವೇತನ ನೀಡ ಲಾಗು ತ್ತದೆ. ಸಂಸ್ಥೆ ಯ ಮೇಲ್ವಿ ಚಾರ ಕರಿಗೆ ಒಬ್ಬ ಅಭ್ಯ ರ್ಥಿಗೆ ರೂ. 1,500 ರಂತೆ ನಿರ್ವ ಹಣಾ ವೆಚ್ಚ ವನ್ನು ನೀಡ ಲಾಗು ತ್ತದೆ. ಹೊಲಿಗೆ ತರ ಬೇತಿ ಪಡೆ ದವರಿಗೆ ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಯೋಜನೆ ಯಡಿ ಸ್ವ ಸಹಾಯ ಗುಂಪು ಗಳಿಗೆ 10 ಸಾವಿರ ರೂ ಹೊಲಿಗೆ ಯಂತ್ರ ಖರೀದಿಗೆ ನೆರವು ಪಡೆ ಯುವ ಅವ ಕಾಶ ಕಲ್ಪಿ ಸಲಾಗಿದೆ. ಕೇಂದ್ರದಲ್ಲಿ ಅತ್ಯುತ್ತಮ ಗುಣಮಟ್ಟದ ಹೊಲಿಗೆ ಯಂತ್ರಗಳಿದ್ದು, ಅತ್ಯಾಧುನಿಕ ಕಟ್ಟಿಂಗ್ ಯಂತ್ರದ ಕಾರ್ಯಕ್ಷಮತೆಯನ್ನು ತರಬೇತಿ ಪಡೆಯುವವರು ತೋರಿಸಿಕೊಟ್ಟರು. ತರಬೇತಿ ಕೇಂದ್ರಗಳಲ್ಲಿ ಅರ್ಜಿಗಳು ಲಭ್ಯವಿದ್ದು ಆಸಕ್ತರು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.