Thursday, July 21, 2011

ರಾಜ್ಯಮಟ್ಟದ ಭಾವೈಕ್ಯತಾ ಮಂಡಳಿ

ಮಂಗಳೂರು,ಜುಲೈ.21:ಕೋಮು ಸೌಹಾರ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಭಾವೈಕ್ಯತಾ ಮಂಡಳಿ ಎಂಬ ನ್ಯಾಯ ಸಭೆಯನ್ನು ಸ್ಥಾಪಿಸಲು ನಿರ್ಧರಿಸಿರುವ ಸರ್ಕಾರವು ಈ ಹಿನ್ನಲೆಯಲ್ಲಿ ಮತೀಯ ಸಾಮರಸ್ಯ ಕಾಪಾಡಲು ವಿವಿಧ ಮತಗಳ ನಡುವಿನ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಕರ್ನಾಟಕ ಸರ್ಕಾರವು ರಾಜ್ಯ ಭಾವೈಕ್ಯತಾ ಮಂಡಳಿ ಎಂಬ ನ್ಯಾಯ ಸಭೆಯನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಮಂಡಳಿಯಲ್ಲಿ ಸಮಾಜದ ವಿವಿಧ ಸುಮಾರು 54 ಗಣ್ಯ ಸದಸ್ಯರಿರುತ್ತಾರೆ.ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ನ್ಯಾಯ ಮಂಡಳಿ ಕಾರ್ಯ ನಿರ್ವಹಿಸಲಿದೆ. ದಕ್ಷಿಣಕನ್ನಡ ಜಿಲ್ಲೆಯಿಂದಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆಯವರು,ಉಡುಪಿ ಶ್ರೀ ಪೇಜಾವರ ಸ್ವಾಮಿಗಳು,ಸುಳ್ಯದ ಶ್ರೀಮತಿ ವಹಿದಾ ಇಸ್ಮಾಯಿಲ್ ಸದಸ್ಯರಾಗಿರುತ್ತಾರೆ.
ಈ ಮಂಡಳಿಯ ಕಾರ್ಯನಿರ್ವಹಣೆ ಇಂತಿದೆ:ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರುವುದು,ಅವಧಿಯ ಮಧ್ಯೆ ಆವಶ್ಯಕತೆ ಸಂದರ್ಭದಲ್ಲಿ ಭಾನುವಾರಗಳಂದು ಸಭೆ ನಡೆಸಬಹುದು. ಸದಸ್ಯರ ಸಂಖ್ಯಾಬಲ 1/3 ರಷ್ಟು.ಸಾರ್ವಜನಿಕರ ವ್ಯವಸ್ಥೆ ಮತ್ತು ಕಾನೂನು,ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಾಮರ್ಶಿಸಿ ಸಮಿತಿಯ ಸದಸ್ಯರ ಅಭಿಪ್ರಾಯ ಸಂಗ್ರಹಿಸುವುದು. ಭಾವೈಕ್ಯತಾ ಮಂಡಳಿಯು ಕಾನೂನು ಸುವ್ಯವಸ್ಥೆ ಕೋಮಗಲಭೆಗಳು ಮತ್ತು ಆಡಳಿತಕ್ಕೆ ಸಂಬಂಧಪಟ್ಟಂತೆ ಕ್ಲಿಷ್ಟಕರವಾದ ನಿರ್ಬಂದವುಳ್ಳ ವಿಷಯಗಳನ್ನು ಸಮಾಜದಲ್ಲಿ ಐಕ್ಯತೆ ಮತ್ತು ಏಕೀಭಾವಕ್ಕೆ ಸಲಹೆ ಮಾಡುವುದು.ಆಡಳಿತಾತ್ಮಕ ಕ್ರಮ ಕೈಗೊಳ್ಳುವಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಪರಸ್ಪರ ಚರ್ಚಿಸುವುದು. ರಾಜ್ಯ ಭಾವೈಕ್ಯ ಮಂಡಳಿಯು ಸಮಾಜದಲ್ಲಿನ ಜನರ ಪರಸ್ಪರ ಸೌಹಾರ್ದತೆ ಮತ್ತು ಒಗ್ಗಟ್ಟು ವೃದ್ಧಿಪಡಿಸಲು ಸೂಕ್ತವಾದ ರೀತಿನೀತಿಗಳನ್ನು ಸಾರ್ವಜನಿಕ ಅಬಿಪ್ರಾಯಗಳ ಬೆಂಬಲದಿಂದ ರೂಪಿಸಿ ಅಳವಡಿಸಿಕೊಳ್ಳುವುದು ಮುಂತಾದ ಕಾರ್ಯಗಳನ್ನು ಮಂಡಳಿಯು ನಿರ್ವಹಿಸುವುದು. ನಮ್ಮ ಸಮಾಜವು ಬಹುಮತಗಳ,ಬಹುಭಾಷೆಗಳ,ಬಹು ಕುಲದಿಂದ ಕೂಡಿದ ಸಮಾಜ.ಇದರಿಂದ ಮತೀಯ ಗಲಭೆ ಕಲಹಗಳುಂಟಾಗದಂತೆ ಸರ್ಕಾರವು ರಾಜ್ಯ ಮಟ್ಟದ ಭಾವೈಕ್ಯತಾ ಮಂಡಳಿಯನ್ನು ಸ್ಥಾಪಿಸಲು ನಿರ್ದರಿಸಿ ಆದೇಶ ಹೊರಡಿಸಿದೆಯೆಂದು ಪೊಲೀಸ್ ಅಧೀಕ್ಷಕರಾದ ಲಾಬೂರಾಮ್ ತಿಳಿಸಿದ್ದಾರೆ.