Thursday, July 14, 2011

ಸಮಾಜದ ಒಗ್ಗಟ್ಟಿಗೆ ದಾಸವರೇಣ್ಯರ ಕೀರ್ತನೆಗಳು ಕಡೆಗೀಲಿನಂತೆ;ಡಾ.ಎಚ್.ಎಸ್.ವೆಂಕಟೇಶಮೂರ್ತಿ

ಮಂಗಳೂರು,ಜುಲೈ:14:ಸಮಾಜದಲ್ಲಿ ಸಾಮರಸ್ಯ ಮಾಡಿ ಕೋಮು ದಳ್ಳುರಿಯ ಉಪಶಮನಕ್ಕೆ ದಾಸವರೇಣ್ಯರ ಕೀರ್ತನೆಗಳು ವಚನಕಾರರ ವಚನಗಳು ಹಾಗೂ ಕವಿ ಪುಂಗವರ ಹಾಡುಗಳೇ ಸಮಾಜವೆಂಬ ಬಂಡಿಯ ಕಡೆಗೀಲು ಎಂದು ಹಿರಿಯ ಕನ್ನಡದ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಹೇಳಿದ್ದಾರೆ.
ಅವರು ಪ್ರಥಮ ಬಾರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗ ಳೂರು,ಜಿಲ್ಲಾ ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿ ಷತ್ತು ಮಂಗ ಳೂರು ಇವರ ಜಂಟಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ದಾಸ ಸಾಹಿತ್ಯ ಸಮ್ಮೇಳನದಲ್ಲಿ ಆಶಯ ಭಾಷಣ ಮಾಡಿದರು. ಕನಕದಾಸರು ,ಪುರಂದರ ದಾಸರು ಜೀವನಾ ನುಭವಗಳನ್ನು ತಿಳಿಸುತ್ತಾ ಅಂದಿನ ಸಮಾಜದ ಡೊಂಕುಗಳನ್ನು ತಿದ್ದುವ ಮೂಲಕ ಸುಖೀ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾದರು ಎಂದ ಅವರು, ದಾಸರ ಕೀರ್ತನೆಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು ಇಂದಿನ ಸಮಾಜದಲ್ಲಿನ ಅಶಾಂತಿ,ಅನ್ಯಾಯ,ಅತ್ಯಾಚಾರ,ಬೃಷ್ಠಾಚಾರಗಳಂತಹ ಪಿಡುಗುಗಳ ನಿವಾರಣೆಗೆ ದಿವ್ಯೌಷಧವಾಗಿದೆ ಎಂದರು.ಆಡು ಭಾಷೆ ಮಕ್ಕಳ ಮಾತುಗಳಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಕೀರ್ತನೆಗಳನ್ನು ರಚಿಸಿ ಹಾಡಿ ಜನಮಾನಸದಲ್ಲಿ ಸರ್ವಕಾಲಕ್ಕೂ ನಿಲ್ಲುವಂತೆ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ಕಾಣಿಕೆಯನ್ನು ನೀಡಿದ ಕೀರ್ತಿ ದಾಸವರೇಣ್ಯರಿಗೆ ಸಲ್ಲುತ್ತದೆ ಎಂದರು.ತಂದೆತಾಯಿ ಗುರುಹಿರಿಯರನ್ನು ಗೌರವಿಸುವುದು,ಸಮಾಜದಲ್ಲಿ ಪರಸ್ತ್ರೀಯನ್ನು ಕಾಣುವ ದೃಷ್ಠಿ ಹೀಗೆ ಹತ್ತುಹಲವು ವಿಚಾರಗಳ ಬಗ್ಗೆ ತಿಳಿಹೇಳಿ ಸ್ವಾಸ್ಥ್ಯ ಸಮಾಜದ ನಾಂದಿಗೆ ಕಾರಣೀಭೂತರಾಗಿದ್ದಾರೆ ದಾಸ ಶ್ರೇಷ್ಠರು ಎಂದರು.ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾದ ಡಾ.ನಲ್ಲೂರು ಪ್ರಸಾದ್ ಅವರು ಮಾತ ನಾಡಿ ಪ್ರಾಚೀನ ಸಾಹಿತ್ಯ ಸಮ್ಮೇ ಳನ ಮಾಡುವ ಮೂಲಕ ಪ್ರಾಚೀನ ಸಾಹಿತ್ಯದ ಬಗ್ಗೆ ನಾಡಿನ ಜನರಲ್ಲಿ ಆಸಕ್ತಿ ಮೂಡಿ ಸಲಾಯಿತು. ಇದೀಗ ಪ್ರಥಮ ಬಾರಿಗೆ ದಾಸ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಅರ್ಥಗರ್ಭಿತವಾಗಿ ನಡೆಯುತ್ತಿದೆ.ಆಗಸ್ಟ್ ತಿಂಗಳಲ್ಲಿ ಕೂಡಲ ಸಂಗಮ ದಲ್ಲಿ ವಚನ ಸಾಹಿತ್ಯ ಸಮ್ಮೇ ಳನ ಆಯೋಜಿ ಸಲಾಗು ವುದೆಂದ ಅಧ್ಯಕ್ಷರು,ಡಿಸೆಂಬರ್ ಅಂತ್ಯಕ್ಕೆ ಸಿನೆಮಾ ಮತ್ತು ಸಾಹಿತ್ಯ ಕುರಿತು ಸಮ್ಮೇಳನ ಅಯೋಜಿ ಸುವುದಾಗಿ ತಿಳಿಸಿದರು. ಸಮಾರಂಭವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನ ನಿಕಟಪೂರ್ವ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಅವರು ಉದ್ಘಾಟಿಸಿದರು. ಕುಕ್ಕೆ ಸುಬ್ರಹಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನತೀರ್ಥರು ದಿವ್ಯ ಸಾನಿಧ್ಯ ವಹಿಸಿದ್ದರು. ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರಾ ಸ್ವಾಗತಿಸಿದರು.ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮುದ್ರಾಡಿ ಅಂಬಾತನಯ,ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್ ಮುಂತಾದವರು ಹಾಜರಿದ್ದರು.