Friday, October 19, 2012

ಮಲೇರಿಯಾ ನಿಯಂತ್ರಣ:ಶ್ಲಾಘನೆ

ಮಂಗಳೂರು, ಅಕ್ಟೋಬರ್19 :-ಮಂಗಳೂರು ಮಲೇರಿಯಾ ನಿಯಂತ್ರಣ ಕುರಿತು ಮಂಗಳೂರು ನಗರದಲ್ಲಿ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದ ಕಾರ್ಯ ವೈಖರಿ ಹಾಗೂ ನಿಯಂತ್ರಣದ ಅಧ್ಯಯನ ನಡೆಸಿ ಮಲೇರಿಯಾ ನಿಯಂತ್ರಣ ವಿಧಾನಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶಿಫಾರಸು ನೀಡಲು ಕರ್ನಾಟಕ ಸರಕಾರದ ಪ್ರಧಾನ ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು)  ಮದನ್ ಗೋಪಾಲ್ ಇವರ ನಿರ್ದೇಶನದ ಮೇರೆಗೆ  ಕಳೆದ ಒಂದು ವಾರದಿಂದ ಡಾ.ಘೋಷ್,ಸಯಂಟಿಸ್ಟ್(ಐಸಿಎಂಆರ್) ಬೆಂಗಳೂರು ಇವರ ನೇತೃತ್ವದಲ್ಲಿ ಅಧ್ಯಯನ ನಡೆಸಲಾಯಿತು.
 ಮಹಾನಗರಪಾಲಿಕೆ ಆರೋಗ್ಯಾಧಿಕಾರಿ,ವಿಜ್ಞಾನಿಗಳು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಜೊತೆಗೆ ಚರ್ಚಿಸಿ ಪ್ರಸ್ತುತ ನಡೆಯುತ್ತಿರುವ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಹಾಗೂ ಮನೆ ಭೇಟಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಮಲೇರಿಯಾ ಹತೋಟಿಗೆ ಬರಲು ಪ್ರಮುಖ ಪಾತ್ರ ವಹಿಸಿದೆ. ಇದೇ ರೀತಿ ಚಟುವಟಿಕೆ ಮುಂದುವರಿಸಲು ಶಿಫಾರಸು ಮಾಡಿರುತ್ತಾರೆ.
           2012 ಜೂನ್ನಲ್ಲಿ ನಡೆಸಿದ ಅಧ್ಯಯನಕ್ಕೆ ಹೋಲಿಸಿದಾಗ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೊಳ್ಳೆಯ ಉತ್ಪತ್ತಿ ಕಂಡು ಬರುತ್ತಿದ್ದರೂ, ಸಹ ಸಾಂದ್ರತೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳು, ಪಾಲಿಕೆಯ ಕ್ರಮಗಳು ಹಾಗೂ ವೈದ್ಯಾಧಿಕಾರಿಗಳ ಅನುಷ್ಠಾನ ಕ್ರಮಗಳ ಬಗ್ಗೆ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.