Tuesday, October 9, 2012

ಏಳು ದಿನಗಳೊಳಗೆ ಎಂಡೋ ಸಮೀಕ್ಷೆ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ

ಮಂಗಳೂರು, ಅಕ್ಟೋಬರ್.09 :- ಜಿಲ್ಲೆಯ ಎಂಡೋ ಸಲ್ಫಾನ್ ಪೀಡಿತರನ್ನು ಗುರುತಿಸಲು ಏಳು ದಿನಗಳೊಳಗಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಸೂಚಿಸಿದರು.
ಇಂದು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಸಭೆಯಲ್ಲಿ ಸೂಚನೆ ನೀಡಿದ ಜಿಲ್ಲಾಧಿ ಕಾರಿ ಗಳು, ಸರ್ಕಾ ರದ ಸೂಚನೆ ಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಂಡೋ ಸಲ್ಫಾನ್ ಪೀಡಿತರ ಸಮಗ್ರ ಸಮೀಕ್ಷೆ ನಡೆ ಸುವ ಸಂಬಂಧ ಪುತ್ತೂರು ಉಪ ವಿಭಾಗಾ ಧಿಕಾ ರಿಗಳ ನೇತೃ ತ್ವದಲ್ಲಿ ತಾಲೂಕು ಆರೋಗ್ಯಾ ಧಿಕಾರಿ ಗಳು, ತಹ ಸೀಲ್ದಾರ್  ಮತ್ತು  ತಾಲೂಕು ಕಾರ್ಯ ನಿರ್ವ ಹಣಾ ಧಿಕಾ ರಿಗಳ ಸಮಿತಿ ಯನ್ನು ರಚಿ ಸಲು ಜಿಲ್ಲಾಧಿ ಕಾರಿ ಗಳು ಸೂಚನೆ ನೀಡಿದರು. ಸಮೀಕ್ಷೆಗೆ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರ ತಂಡಗಳನ್ನು ಕಿರಿಯ ಆರೋಗ್ಯ ಸಹಾಯಕರ ನೇತೃತ್ವದಲ್ಲಿ ನಾಳೆಯೊಳಗೆ ರಚಿಸಲು ತಾಲೂಕು ಮಟ್ಟದ ತಂಡಕ್ಕೆ ಆದೇಶ ನೀಡಿದ ಜಿಲ್ಲಾಧಿಕಾರಿಗಳು ಇವರಿಗೆ ಸಮೀಕ್ಷೆಯ ಸಂಬಂಧ ನಾಳೆಯೇ ತರಬೇತಿಯನ್ನು ಆಯೋಜಿಸಿ ಎಂದರು. 1000 ಜನರಿಗೆ ಒಂದು ತಂಡದಂತೆ ಸಮೀಕ್ಷಾ ತಂಡ ರಚನೆಯಾಗಲಿದ್ದು, ಒಂದು  ತಂಡಕ್ಕೆ 250ರಿಂದ 300 ಮನೆಗಳ ಸಮೀಕ್ಷೆ ಹೊಣೆ ವಹಿಸಲಾಗಿದೆ.  ಪೂರಕ ಮಾಹಿತಿಗಾಗಿ ಹಿಂದಿನ ಸಮೀಕ್ಷೆಗಳ ವರದಿ ಹಾಗೂ ಎಂಡೋಸಲ್ಫಾನ್ ವಿರುದ್ದ ಹೋರಾಟ ನಡೆಸುತ್ತಿರುವ ಶ್ರೀಧರ ಗೌಡರ ಬಳಿ ಇರುವ ಮಾಹಿತಿಯನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಮೀ ಕ್ಷೆಯ ಬಳಿಕ ಹೃದಯ, ಅಪ ಸ್ಮಾರ ದಂತಹ ಕಣ್ಣಿಗೆ ಕಾಣದ ರೋಗ ಗಳ ತಪಾ ಸಣೆಗೆ ನವೆಂ ಬರ್ ಎರ ಡನೇ ಅಥವಾ ಮೂರನೇ ವಾರ ದಲ್ಲಿ ವಿಶೇಷ ಕ್ಯಾಂಪ್ ನಲ್ಲಿ ಆರೋಗ್ಯ ಪರೀಕ್ಷೆ ನಡೆ ಸಲು ಸಭೆ ನಿರ್ಧ ರಿಸಿತು.  ಸಭೆ ಯಲ್ಲಿ ಸಮೀಕ್ಷೆ ಸಂಗ್ರ ಹಕ್ಕೆ ರೂಪು ಗೊಳಿಸಿ ರುವ ಮಾಹಿತಿ ಯನ್ನು ಪ್ರದ ರ್ಶಿಸಿ ಸಲಹೆ ಗಳನ್ನು ಸ್ವೀಕ ರಿಸಲಾ ಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀಧರ ಗೌಡ ಅವರು ಮಾತನಾಡಿ, ರೋಗದ ವ್ಯಾಪಕತೆ, ಮಾನಸಿಕ ರೋಗಗಳು ಹಾಗೂ ದೇಹದೊಳಗಿನ ವೈಕಲ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ರೋಗ ಪೀಡಿತ 92 ಗ್ರಾಮಗಳ ಸಮೀಕ್ಷೆಯಾಗಬೇಕು. ಅನರ್ಹರು ಈ ಪಟ್ಟಿಯಲ್ಲಿ ಸೇರಬಾರದು. ಗರ್ಭಕೋಶದಲ್ಲಿ ಗೆಡ್ಡೆ, ಜನನಾಂಗದ ತೊಂದರೆಗಳ ಮಾಹಿತಿ ಸಂಗ್ರಹಕ್ಕೆ ಪ್ರತ್ಯೇಕ ಕಾಲಂ ರಚಿಸಬೇಕು ಎಂದರು.
ಕಾಲಮಿತಿಯೊಳಗೆ ಮಾಹಿತಿ ಸಲ್ಲಿಕೆ ಅಗತ್ಯ ಎಂದ ಅವರು, ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕಿದೆ ಎಂದ ಜಿಲ್ಲಾಧಿಕಾರಿಗಳು ಈ ಸಮೀಕ್ಷೆ ವೇಳೆ ಕರ್ತವ್ಯ ಲೋಪ ಸಲ್ಲದು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಕೆ,ಎ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಓ ಆರ್ ಶ್ರೀರಂಗಪ್ಪ, ಪುತ್ತೂರು ಉಪವಿಭಾಗಾಧಿಕಾರಿ ಪ್ರಸನ್ನ ಅವರು ಉಪಸ್ಥಿತರಿದ್ದರು.