Thursday, October 4, 2012

ಆರೋಗ್ಯ ಸಚಿವರಿಂದ ಎಂಡೋಸಂತ್ರಸ್ತರ ಭೇಟಿ

ಮಂಗಳೂರು,ಅಕ್ಟೋಬರ್.04: ಆರೋಗ್ಯ ಸಚಿವರಾದ ಅರವಿಂದ ಲಿಂಬಾವಳಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿನ ಎಂಡೋ ಸಂತ್ರಸ್ತರ ಪಾಲನಾ ಕೇಂದ್ರಕ್ಕೇ ಬುಧವಾರ ಭೇಟಿ ನೀಡಿ  ಎಂಡೋ ಸಲ್ಫಾನ್  ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.
          ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ತಿಂಗಳೊಳಗೆ ಎಂಡೋ ಸಲ್ಫಾನ್ ಪೀಡಿತರ  ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಮತ್ತು ನಂತರ ಪರಿಹಾರ ನೀಡುವ ಕಾರ್ಯ ಆರಂಭಗೊಳ್ಳುವುದು. ಎಂಡೋ ಸಂತ್ರಸ್ತರ ಶಾಶ್ವತ ಪಾಲನಾ ಕೆಂದ್ರಕ್ಕೆ ಪುತ್ತೂರು ತಾಲೂಕಿನಲ್ಲಿ 5 ಎಕ್ರೆ ಜಾಗವನ್ನು ಗುರುತ್ತಿ ಸಲಾಗಿದೆ ಶೀಘ್ರದಲ್ಲೇ ಇಲ್ಲಿ ಪಾಲನಾ ಕೇಂದ್ರ ಆರಂಭ ವಾಗಲಿದೆ ಮತ್ತು ಇದಕ್ಕೆ ಬೇಕಾದ ಪೂರ್ಣ ಪ್ರಮಾ ಣದ ವೈದ್ಯರು ಮತ್ತು ಇತರ ಸಿಬಂದಿ ಗಳನ್ನು ನೇಮಕ ಮಾಡಲಾ ಗುವುದು ಎಂದು ಸಚಿ ವರು ನುಡಿದರು. ಜಿಲ್ಲಾಧಿ ಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಜಿಲ್ಲಾ ಆರೋಗ್ಯಾ ಧಿಕಾರಿ ಡಾ. ಓ. ಶ್ರೀ ರಂಗಪ್ಪ ಮತ್ತಿತರ ಅಧಿಕಾ ರಿಗಳು ಉಪ ಸ್ಥಿತರಿದ್ದರು.