Tuesday, October 30, 2012

ರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ: ಡಾ.ಚನ್ನಪ್ಪ ಗೌಡ

ಮಂಗಳೂರು,ಅಕ್ಟೋಬರ್. 30 :ಮಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ದಿಕ್ಕಿನಲ್ಲಿ ಈಗಾಗಲೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು,ನವೆಂಬರ್ 1 ರ ಕನ್ನಡ ರಾಜ್ಯೋತ್ಸವವನ್ನು ಪ್ಲಾಸ್ಟಿಕ್ ನಿಷೇಧಿಸಿ ಎಂಬ ಧ್ಯೇಯದೊಂದಿಗೆ  ಆಚರಿಸಲು  ಸಿದ್ಧತೆಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಾಜ್ಯೋತ್ಸವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ಡಾ.ಎನ್.ಎಸ್.ಚನ್ನಪ್ಪ ಗೌಡರು ತಿಳಿಸಿದ್ದಾರೆ.
                ಅವರು ಇಂದು ಈ ಸಂಬಂಧ ತಮ್ಮ ಕಚೇರಿ ಯಲ್ಲಿ ನಡೆದ ಪೂರ್ವ ಭಾವೀ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಸುಮಾರು 250 ಕ್ಕೂ ಹೆಚ್ಚು ಶಾಲಾ ಮಕ್ಕಳು,ವಿವಿಧ ಕಲಾ ಪ್ರಕಾ ರಗಳ ಆಕ ರ್ಷಕ ವಾದ್ಯ ಕುಣಿತ ಗಳು ಸೇರಿದಂತೆ 10ಕ್ಕೂ ಹೆಚ್ಚು ಸ್ಥಬ್ಧ ಚಿತ್ರಗ ಳಿಂದೊ ಡಗೂ ಡಿದ ಅತ್ಯಾ ಕರ್ಷಕ ಮೆರ ವಣಿಗೆ ಯು ನವೆಂಬರ್ 1 ರಂದು ಬೆಳಿಗ್ಗೆ 7.45 ಕ್ಕೆ ಜ್ಯೋತಿ ವೃತ್ತದಿಂದ ಹೊರಟು ನೆಹರೂ ಮೈದಾನ ಸೇರಲಿದೆ.ಶಾಲಾ ಮಕ್ಕಳಿಂದ ನಾಡಗೀತೆಗಳ ಗಾಯನ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
 ಉನ್ನತ ಶಿಕ್ಷಣ ಸಚಿವರು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಸಿ.ಟಿ.ರವಿಯವರು ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡುವರು.ಪೋಲೀಸ್ ಸ್ಕೌಟ್ಸ್ ಗೈಡ್ಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಲಿದೆ. ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.  ಅಂದು ಪುರಭವನದಲ್ಲಿ  ಸಂಜೆ 5 ಗಂಟೆಯಿಂದ 6 ಗಂಟೆಯ ವರೆಗೆ ನಗರದ ಆಯ್ದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಧ್ವಜಗಳನ್ನು ಕಡ್ಡಾಯವಾಗಿ ಬಳಸದಂತೆ ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.