Monday, October 8, 2012

ಸ್ವಾವಲಂಬಿ ಭಾರತ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ: ಸಿ ಟಿ ರವಿ

ಮಂಗಳೂರು,ಅಕ್ಟೋಬರ್.08 :ರಾಜ್ಯ ಸರ್ಕಾರ ವೃತ್ತಿ ಶಿಕ್ಷಣಕ್ಕೆ ಅತೀ ಹೆಚ್ಚು ಪ್ರಾಧಾನ್ಯತೆ ನೀಡಿದ್ದು, ಶಿಕ್ಷಣದಿಂದ ಮಾತ್ರ ಸ್ವಾವಲಂಬಿ ಭಾರತ ಮತ್ತು ಸಮೃದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಉನ್ನತ ಶಿಕ್ಷಣ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಅವರು ಹೇಳಿದರು.
          ಅವರಿಂದು ಬಂಟ್ವಾಳ ತಾಲೂ ಕಿನಲ್ಲಿ ವಗ್ಗ ದಲ್ಲಿ ಕರ್ನಾ ಟಕ ವಸತಿ ಶಿಕ್ಷಣ ಸಂಸ್ಥೆ ಗಳ ಸಂಘ ಮತ್ತು ಹಿಂದು ಳಿದ ವರ್ಗ ಗಳ ಕಲ್ಯಾಣ ಇಲಾ ಖೆಯ ಆಶ್ರಯ ದಲ್ಲಿ  ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟ ಡದ ಶಂಕು ಸ್ಥಾಪನೆ ನೆರ ವೇರಿಸಿ ಮಾತ ನಾಡು ತ್ತಿದ್ದರು.
ಕೆಪಿಟಿ ಕಟ್ಟಡಕ್ಕೆ ಸಚಿವರಿಂದ ಶಿಲನ್ಯಾಸ
ಪ್ರತಿ ಯೊಬ್ಬ ರನ್ನೂ ಸ್ವಾವ ಲಂಬಿ ಗಳನ್ನಾ ಗಿಸಲು ಹಾಗೂ ಶಿಕ್ಷಣ ದಿಂದ ಮಾತ್ರ ಅಭಿ ವೃದ್ಧಿ ಸಾಧ್ಯ ಎಂಬು ದನ್ನು ನಂಬಿದ ಸರ್ಕಾರ ಈ ನಿಟ್ಟಿ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ. ರಾಜ್ಯ ದಲ್ಲಿ ಒಟ್ಟು 281 ವೃತ್ತಿ ಶಿಕ್ಷಣ ಸಂಸ್ಥೆ ಗಳಿದ್ದು, 81 ಸಂಸ್ಥೆ ಗಳನ್ನು ನಮ್ಮ ಸರ್ಕಾರ ಬಂದ ಮೇಲೆ ಆರಂಭಿಸಿದೆ. 43 ಹೊಸದಾಗಿ ಮಂಜೂರು ಮಾಡಿದ ಸಂಸ್ಥೆಗಳಲ್ಲಿ ಇಂದಿನದ್ದೂ ಒಂದು ಎಂದರು.
ನಾಲ್ಕು ವರ್ಷಗಳಲ್ಲಿ 194 ಪಿ ಯು ಕಾಲೇಜುಗಳನ್ನು ಆರಂಭಿಸಲಾಗಿದೆ. ತಾಂತ್ರಿಕ ನೈಪುಣ್ಯತೆ ಮೌಲ್ಯವನ್ನು ವರ್ಧಿಸುತ್ತದೆ ಎಂಬುದನ್ನು ಗಮನದಲ್ಲಿರಿಸಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕೆಂದು ಸಚಿವರು ಸಲಹೆ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ  ರಮಾನಾಥ ರೈ ಅವರು, ಶೈಕ್ಷಣಿಕ ಕಾರ್ಯಕ್ರಮ ವ್ಯಾಪಕವಾಗಿ ಹಮ್ಮಿಕೊಂಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಸಭೆಯಲ್ಲಿ ನಗರಸಭೆ ಅಧ್ಯಕ್ಷ ಬಿ ದಿನೇಶ್ ಭಂಡಾರಿ, ಮೂಡಾ ಅಧ್ಯಕ್ಷ ಗೋವಿಂದ ಪ್ರಭು, ಬಾಲಭವನ ಸೊಸೈಟಿ ಅಧ್ಯಕ್ಷರಾದ ಸುಲೋಚನಾ ಭಟ್, ತಾಲೂಕಪಂಚಾಯತ್ ಅಧ್ಯಕ್ಷರಾದ ಶೈಲಜಾ ಶೆಟ್ಟಿ, ಉಪಾಧ್ಯಕ್ಷರಾದ ದಿನೇಶ್ ಅಮ್ಟೂರ್, ಶಾಸಕ ಮೋನಪ್ಪಭಂಡಾರಿ, ಪಕ್ಷಾಧ್ಯಕ್ಷ ಪದ್ಮನಾಭ ಕೊಟ್ಟಾರಿ,ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಎಚ್ ಯು ದಳವಾಯಿ ಅವರನ್ನೊಳಗೊಂಡಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ ಎಚ್ ಚನ್ನಗಿರಿ ಗೌಡ ಸ್ವಾಗತಿಸಿದರು. ಕಟ್ಟಡದ ಬಗ್ಗೆ ಎಕ್ಸಿಕ್ಯೂಟಿವ್ ಇಂಜಿನಿಯರ್  ಗೋಪಾಲ್ ನಾಯಕ್ ಅವರು ಮಾಹಿತಿ ನೀಡಿದರು.