Wednesday, March 13, 2013

'ಸಾಂದ್ರಕೃಷಿಯಿಂದ ಹೆಚ್ಚು ಲಾಭ'

ಮಂಗಳೂರು,ಮಾರ್ಚ್.13:- ಕೃಷಿಯಲ್ಲಿ ಹೆಚ್ಚಿನ ಇಳುವರಿಗೆ ಆದ್ಯತೆ ನೀಡಬೇಕು. ಸಾಂದ್ರ ಕೃಷಿಯಿಂದ ಕೃಷಿಕರಿಗೆ ಅನುಕೂಲವಾಗಲಿದೆ. ಒಂದು ಹೆಕ್ಟೇರ್ಗೆ 400 ಗೇರುಗಿಡ ನೆಡುವುದರಿಂದ ಉತ್ಪನ್ನ ಜಾಸ್ತಿಯಾಗಲಿದೆ ಎಂದು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಎಸ್ ಡಿ ಸಂಪತ್ ಸಾಮ್ರಾಜ್ಯ ಅವರು ಹೇಳಿದರು.
              ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ಬಾಗಲಕೋಟೆ, ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಇದರ ಆಶ್ರಯದಲ್ಲಿ ಬುಧವಾರ ನಡೆದ `ಗೇರು ಮೇಳ-ಗೇರು ಬೆಳೆ ತರಬೇತಿ ಮತ್ತು ಕ್ಷೇತ್ರೋತ್ಸವ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ಸಲಹೆಗಳನ್ನು ಕೃಷಿಕರು ಅನುಸರಿಸುವುದರಿಂದ ಕೃಷಿಕರಿಗೆ ಅನುಕೂಲವಾಗಲಿದೆ ಎಂದ ಅವರು, ಕಳೆದ ಸಾಲಿನಲ್ಲಿ ಉಳ್ಳಾಲದ ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ ಲಕ್ಷ್ಮಣ್ ಅವರು 40 ಲಕ್ಷ ಆದಾಯವನ್ನು ಗೇರು ಬೆಳೆಯಿಂದ ಗಳಿಸಿ ಸಂಸ್ಥೆಗೆ ನೀಡಿದ್ದಾರೆ. ರೈತರಿಗೆ ಪ್ರಸ್ತುತ ಹವಾಗುಣ ವೈಪರಿತ್ಯ ಪೆಟ್ಟು ನೀಡುತ್ತಿದ್ದು, ಈಬಗ್ಗೆ ಪರಿಹಾರ ರೂಪಿಸಬೇಕಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಹೆಚ್. ಧನಕೀರ್ತಿ ಬಲಿಪ ಅವರು ಮಾತನಾಡಿ,  ನಮ್ಮ ವಿಜ್ಞಾನಿಗಳು ಚಂದ್ರಲೋಕಕ್ಕೆ ಹೋಗಿ ಬಂದಿದ್ದಾರೆ. ಆದರೆ ಅಡಿಕೆ, ತೆಂಗಿನಮರಕ್ಕೆ ಏರುವ ಸಮರ್ಪಕ ಸಾಧನ ಕಂಡು ಹಿಡಿಯಲು ಇನ್ನೂ ಸಾಧ್ಯವಾಗಿಲ್ಲ. ರೈತನಿಗೆ ಪೂರಕವಾಗಿರದ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿಯಿಂದ ಏನು ಪ್ರಯೋಜನ? ಇದ್ದ ಕೃಷಿಭೂಮಿಯನ್ನು ಕೈಗಾರಿಕೆಗಳಿಗೆ ಕೊಟ್ಟು ಏನು ಅಭಿವೃದ್ಧಿ ಸಾಧಿಸುತ್ತೀರಿ? ನಮ್ಮ ಮೂಲಭೂತ ಸಮಸ್ಯೆಗಳಿಗೆ ವಿಜ್ಞಾನಿಗಳು ಉತ್ತರ ನೀಡಬೇಕು. ತಮ್ಮ ಇಸ್ರೇಲ್ ಭೇಟಿಯಲ್ಲಿ ಖರ್ಜೂರ ಕೀಳಲು ಬಳಸುತ್ತಿದ್ದ ಮೆಷಿನ್ ನಿಂದ ಪ್ರೇರಿತರಾಗಿದ್ದ ಅವರು, ನಾವು ಬೆಳೆ ಬೆಳೆಯುತ್ತೇವೆ. ಬೆಳೆ ಕೀಳಲು ಪೂರಕ ಸಾಮಗ್ರಿಗಳಿಲ್ಲ. ಮಾನವ ಸಂಪನ್ಮೂಲದ ಕೊರತೆ ಇಂದು ಕೃಷಿಯನ್ನು ತೀವ್ರವಾಗಿ ಬಾಧಿಸುತ್ತಿದೆ. ಬೆಳೆ ಕಟಾವು ನಡೆಸುವ ಸಾಮಗ್ರಿಗಳನ್ನು ನಮಗೆ ನೀಡಿ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ಭೂಮಿ ನಾಶವಾಗುತ್ತಲೇ ಇದೆ. ಇದ್ದ ಕೃಷಿ ಭೂಮಿಯನ್ನು ಕಳಕೊಂಡು ಅಧೀರನಾಗಿರುವ ರೈತನ ನೋವಿಗೆ ಸ್ಪಂದನೆ ಸಿಗುತ್ತಿಲ್ಲ. ವಿಜ್ಞಾನಿಗಳಿಂದ ರೈತನನ್ನು ತಯಾರು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಕೃಷಿಕನಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ಬೆಳೆದ ಬೆಳೆಗೆ ವೈಜ್ಞಾನಿಕ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಇಂದು ಎಲ್ಲರೂ ರಬ್ಬರ್ ನ ಹಿಂದೆ ಬಿದ್ದಿದ್ದಾರೆ. ಏಕಬೆಳೆಯನ್ನು ನಂಬುವುದರಿಂದಾಗುವ ಅನಾಹುತಗಳ ನಿದರ್ಶನಗಳು ನಮ್ಮ ಮುಂದಿದ್ದರೂ ಮತ್ತೆ ಅಂತಹುದೇ ತಪ್ಪನ್ನು ಮಾಡುತ್ತೇವೆ ಎಂದರು.
ತೋಟಗಾರಿಕಾ ಇಲಾಖಾ ಉಪ ನಿರ್ದೇಶಕ ಯೋಗೇಶ್ ಎಚ್. ಆರ್. ಮಾತ ನಾಡಿ,  ಗೇರು ಬೆಳೆ ಉತ್ತೇ ಜಿಸಲು ಗೇರು ಬೆಳೆ ಪುನ ಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆದರೆ ನಿರೀಕ್ಷೆಗೆ ತಕ್ಕಂತೆ ಅರ್ಜಿಗಳು ಬರುತ್ತಿಲ್ಲ.ಗೇರು ಪುನಶ್ಚೇತನಕ್ಕೆ ಹೆಕ್ಟೇರ್ ಗೆ ರೂ.15ಸಾವಿರ ಸಹಾಯಧನ ನೀಡಲಾಗುತ್ತಿದೆ. ಗೇರು ಬೆಳೆ ವಿಸ್ತರಣೆಗೆ ಮೂರುವರ್ಷ ಅವಧಿಗೆ ಹೆಕ್ಟೇರ್ ಗೆ 15ರಿಂದ 20ಸಾವಿರ ರೂ ಸಹಾಯಧನ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಕೃಷಿಕರು ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭ ವೈಜ್ಞಾನಿಕ ಗೇರುಕೃಷಿ ಕುರಿತ ಇಂಗ್ಲಿಷ್ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಸಹಾಯಕ ಕೃಷಿ ನಿದರ್ೇಶಕ ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜೆಡ್ಎಚ್ಆರ್ಇಸಿ ಮೂಡಿಗೆರೆ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಡಿ.ರಂಗಸ್ವಾಮಿ, ದ.ಕ. ಜಿಲ್ಲಾ ಹಿರಿಯ ಸಹಾಯಕ ತೋಟಗಾರಿಕಾ ನಿದರ್ೇಶಕ ಸಂಜೀವ ನಾಯ್ಕ್, ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಎಚ್.ಹನುಮಂತಪ್ಪ, ಪ್ರಗತಿಪರ ಗೇರು ಕೃಷಿಕ ಯು.ಎಸ್.ಮಹೇಶ್ ಮುಖ್ಯ ಅತಿಥಿಗಳಾಗಿದ್ದರು.
ಉಳ್ಳಾಲ ತೋಟ ಗಾರಿಕಾ ಸಂಶೋ ಧನಾ ಕೇಂದ್ರ ದ ಮುಖ್ಯಸ್ಥ ಡಾ.ಲಕ್ಷ್ಮಣ್ ಸ್ವಾಗ ತಿಸಿದರು. ಪ್ರವೀಣ್ ಎಸ್.ಕಾರ್ಯ ಕ್ರಮ ನಿರೂಪಿಸಿದರು.ಕ್ಷೇತ್ರೋತ್ಸವದಲ್ಲಿ ವಿವಿಧ ಗೇರು ತಳಿಗಳ ಪ್ರಾತ್ಯಕ್ಷಿಕೆ, ಮಣ್ಣು ಪರೀಕ್ಷೆ ಮತ್ತು ನೀರು ಸಂರಕ್ಷಣೆ, ಗೇರು ಮರಗಳ ಸವರುವಿಕೆ ಹಾಗೂ ಆಕಾರ ನೀಡುವಿಕೆ, ಗೊಬ್ಬರಗಳನ್ನು ಕೊಡುವ ವಿಧಾನ ಮತ್ತು ಕೀಟ ನಿಯಂತ್ರಣ, ಗೇರು ಸಸಿ ಮಡಿ ನಿರ್ವಹಣೆ ಹಾಗೂ ಕಸಿ ಕಟ್ಟುವ ವಿಧಾನ, ಗೇರು ಹಣ್ಣಿನ ಸಂಸ್ಕರಣಾ ಮಾಹಿತಿಯನ್ನು ನೀಡಲಾಯಿತು.