Friday, March 8, 2013

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ 2013_ ದಕ್ಷಿಣಕನ್ನಡ ಶೇಕಡಾ 66.21 ಮತದಾನ

ಮಂಗಳೂರು, ಮಾರ್ಚ್.08:-ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ 2013 : ಚುನಾವಣೆ ಮಾರ್ಚ್ 7 ರಂದು  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದು ಜಿಲ್ಲೆಯ 1 ಮಹಾನಗರಪಾಲಿಕೆ,4 ಪುರಸಭೆಗಳು,2 ಪಟ್ಟಣ ಪಂಚಾಯತ್ಗಳಿಗೆ  ಒಟ್ಟು 189 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸರಾಸರಿ ಶೇಕಡಾ 66.21 ಮತದಾನವಾಗಿದೆ. ಗರಿಷ್ಠ ಸುಳ್ಯ ಪಟ್ಟಣ ಪಂಚಾಯತ್ನಲ್ಲಿ ಶೇಕಡಾ 80.10 ಮತದಾನವಾಗಿದ್ದರೆ ಕನಿಷ್ಠ 63.29 ಶೇಕಡಾ ಮತದಾನ ಮಂಗಳೂರು ಮಹಾನಗರಪಾಲಿಕೆಯಲ್ಲಿ ದಾಖಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಕಡೆ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿ ಮತ ಚಲಾಯಿಸಿರುವುದು ವಿಶೇಷ. ಜಿಲ್ಲೆಯಲ್ಲಿ ಒಟ್ಟು 464298 ಮತದಾರರಲ್ಲಿ 307428 ಮತದಾರರು/ 226172 ಪುರುಷ ಮತದಾರರ ಪೈಕಿ 148163 ಪುರುಷರು,238126 ಮಹಿಳಾ ಮತದಾರರಲ್ಲಿ 159265 ಮಹಿಳಾ ಮತದಾರರು ಮತದಾನ ಮಾಡಿ ಒಟ್ಟು ಶೇಕಡಾ 66.21 ಮತದಾನವಾಗಿದೆ.
 ಮಂಗಳೂರು ಮಹಾನಗರಪಾಲಿಕೆಯು 60 ವಾರ್ಡ್ಗಳನ್ನು ಹೊಂದಿದ್ದು,326995 ಮತದಾರರಲ್ಲಿ 158121 ಪುರುಷರು ಮತ್ತು 168874 ಮಹಿಳೆಯರು ಸೇರಿದ್ದಾರೆ. ಇದರಲ್ಲಿ 99422 ಪುರುಷರು(63.29ಶೇಕಡಾ) 107539 ಮಹಿಳೆಯರು(63.68ಶೇಕಡಾ) ಮತದಾನ ಮಾಡಿ ಒಟ್ಟು 206961 ಮತದಾರರು ಮತದಾನ ಮಾಡಿ, ಒಟ್ಟು 63.29 ಶೇಕಡಾ ಮತದಾನವಾಗಿದೆ.
ಉಳ್ಳಾಲ ಪುರಸಭೆಗೆ ನಡೆದ ಮತದಾನದಲ್ಲಿ 18645 ಪುರುಷ ಹಾಗೂ 19370 ಮಹಿಳಾ ಮತದಾರರು ಸೇರಿ ಒಟ್ಟು 38015 ಮತದಾರರಿದ್ದು ಇವರಲ್ಲಿ 12723 ಪುರುಷರು ಶೇಕಡಾ 68.24) ಹಾಗೂ 13918 ಮಹಿಳೆಯರು (ಶೇಕಡಾ 71.35) ಮತದಾರರು ಮತ ಚಲಾಯಿಸಿದರು.
ಪುರಸಭೆ ಮೂಡಬಿದ್ರೆಯಲ್ಲಿ ಒಟ್ಟು ಮತದಾರರ ಸಂಖ್ಯೆ 19022 ಇದ್ದು 9103 ಪುರುಷ 9919 ಮಹಿಳಾ ಮತದಾರರಿದ್ದಾರೆ. ಇವರಲ್ಲಿ 7444 ಪುರುಷ ಶೇಕಡಾ 72.53 ಹಾಗೂ 14046 ಮಹಿಳಾ( 75.05)   ಮತದಾರರು ಮತಚಲಾಸಿದ್ದಾರೆ.
 ಬಂಟ್ವಾಳ ಪುರಸಭೆಯಲ್ಲಿ 14,244 ಪುರುಷ ಹಾಗೂ 14017 ಮಹಿಳಾ ಮತದಾರರು ಸೇರಿ ಒಟ್ಟು 28,261 ಮತದಾರರಿದ್ದು, ಮತದಾನದಲ್ಲಿ 10,505 ಪುರುಷ(ಶೇ.73.75) ಹಾಗೂ 10999ಮಹಿಳಾ (ಶೇ.78.47)ಮತದಾರರು ಮತ ಚಲಾಯಿಸುವ ಮೂಲಕ ಶೇ.76.09% ರಷ್ಟು ಮತದಾನ ದಾಖಲಾಗಿದೆ.
ಪುತ್ತೂರು ಪುರಸಭೆ ವ್ಯಾಪ್ತಿಯಲ್ಲಿ 34,482 ಒಟ್ಟು ಮತದಾರರ ಪೈಕಿ 17,249 ಪುರುಷ ಹಾಗೂ 17,233 ಮಹಿಳಾ ಮತದಾರರು ಇದ್ದಾರೆ. ಇವರಲ್ಲಿ 12,056 ಪುರುಷ(69.89%) ಹಾಗೂ 12433 ಮಹಿಳಾ (ಶೇ.72.15) ಮತದಾರರು ಮತ ಚಲಾಯಿಸುವ ಮೂಲಕ (ಶೇ.71.02)ರಷ್ಟು ಮತದಾನವಾಗಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ 5390 ಒಟ್ಟು ಮತದಾರರ ಪೈಕಿ 2650 ಪುರುಷ ಹಾಗೂ 2740 ಮಹಿಳಾ ಮತದಾರರು ಇದ್ದಾರೆ, ಇವರಲ್ಲಿ 1943 ಪುರುಷ (ಶೇ.73.32)ಹಾಗೂ 2126 ಮಹಿಳಾ (ಶೇ.77.59) ಮತದಾರರು ತಮ್ಮ ಮತ ಚಲಾಯಿಸುವ ಮೂಲಕ ಒಟ್ಟು ಶೇ.75.49 ಮತದಾನ ದಾಖಲಾಗಿದೆ.
ಸುಳ್ಯ ಪಟ್ಟಣ ಪಂಚಾಯತ್ನಲ್ಲಿ 12,133 ಒಟ್ಟು ಮತದಾರರಿದ್ದಾರೆ. ಇವರಲ್ಲಿ 6,160 ಪುರುಷ ಹಾಗೂ 5,973 ಮಹಿಳಾ ಮತದಾರರು. 4912 ಪುರುಷರು(ಶೇ.79.74) ಹಾಗೂ 4806 ಮಹಿಳಾ (ಶೇ.80.46)ಮತದಾರರು ಮತ ಚಲಾಯಿಸುವ ಮೂಲಕ ಅತ್ಯಧಿಕ ಶೇ.80.10 ರಷ್ಟು ಮತದಾನ ದಾಖಲಾಗಿದೆ.