Sunday, March 31, 2013

ಸುಭದ್ರ ಪ್ರಜಾಪ್ರಭುತ್ವಕ್ಕೆ ಪ್ರತಿಯೊಬ್ಬರೂ ಮತದಾನ ಮಾಡಿ: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.31: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡಿ. ಮತದಾನ ಪ್ರತಿಯೊಬ್ಬರ ಕರ್ತವ್ಯ ಹಾಗೂ ಹಕ್ಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಹರ್ಷ ಗುಪ್ತ ಅವರು ಹೇಳಿದರು.
 ಅವ ರಿಂದು ನಗ ರದ ಬಿಜೈ ಯಲ್ಲಿ ರುವ ಭಾರತ್ ಮಾಲ್  ನಲ್ಲಿ ಸ್ವೀಪ್ ಕಾರ್ಯ ಕ್ರಮ ದಡಿ ಆಯೋ ಜಿಸ ಲಾದ ಯಕ್ಷ ಗಾನದ ಮೂಲಕ ಜಾಗೃತಿ ಕಾರ್ಯ ಕ್ರಮಕ್ಕೆ ಚೆಂಡೆ ಬಾರಿ ಸುವುದರ ಮೂಲಕ ಉದ್ಘಾಟಿಸಿದರು.
ಪ್ರಜಾಪ್ರಭುತ್ವ ಬಲಗೊಳ್ಳಲು ಪ್ರತಿಯೊಬ್ಬರು ಮತದಾನ ಮಾಡುವಂತೆ ಪ್ರೇರೆಪಿಸಲು ಜಿಲ್ಲಾಡಳಿತ ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಜಾಗೃತಿ ಕಾರ್ಯಕ್ರಮಗಳು ಫಲ ನೀಡುವಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು.
 ಅರ್ಹ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ ಪ್ರಜಾಪ್ರಭುತ್ವವನ್ನು ಸುಭದ್ರ ಪಡಿಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ವೀಪ್ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲಾಗುತ್ತಿದೆ,
ಜಿಲ್ಲಾ ಪಂಚಾಯತ್ ಸಿಇಓ ಡಾ. ವಿಜಯ ಪ್ರಕಾಶ್, ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್, ಜನ ಶಿಕಣ ಟ್ರಸ್ಟ್ ನ ಕೃಷ್ಣ ಮೂಲ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಶು ಕಲ್ಯಾಣ ಅಭಿವೃದ್ಧಿ ಅಧಿಕಾರಿ ಶ್ಯಾಮಲ ಅವರು ಸ್ವಾಗತಿಸಿದರು. ರೋಶನಿಲಯ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ವಿನೀತಾ ಅವರ  ನೇತ್ರತ್ವದಲ್ಲಿ ಹವ್ಯಾಸಿ ಬಳಗ ಕದ್ರಿ ಮತ್ತು ವಿದ್ಯಾರ್ಥಿಗಳು ಯಕ್ಷಗಾನ ಕಾರ್ಯಕ್ರಮ ನಡೆಸಿಕೊಟ್ಟರು.