Wednesday, March 20, 2013

ಜನಜಾಗೃತಿ ರಥ ಉದ್ಘಾಟನೆ

ಮಂಗಳೂರು,ಮಾರ್ಚ್.20: ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ವಯ 14 ವರ್ಷದೊಳಗಿನ ಮಕ್ಕಳನ್ನು ದುಡಿಸುವುದು ಅಪರಾಧ.  ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲೀಕರಿಗೆ ರೂ.10,000 ರಿಂದ 20,000 ವರೆಗೆ ದಂಡ ಹಾಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು. ಈ ಬಗ್ಗೆ ಜನ ಜಾಗೃತಿ ಮೂಡಿ ಸಲು ದಕ್ಷಿಣ ಕನ್ನಡ ಜಿಲ್ಲಾ ಡಳಿತ, ಮಂಗ ಳೂರು ಹಾಗೂ ಜಿಲ್ಲಾ ಚೈಲ್ಡ್ ಲೇಬರ್ ಪ್ರಾ ಜೆಕ್ಟ್  ಸೊಸೈಟಿ,ಕಾರ್ಮಿಕ ಇಲಾಖೆ ಮಂಗ ಳೂರು ಇವರ ಸಂಯು ಕ್ತಾಶ್ರ ಯದಲ್ಲಿ ಜಿಲ್ಲಾ ಧಿಕಾರಿ ಕಚೇರಿ ಆವ ರಣ ದಲ್ಲಿ ಜನ ಜಾಗೃತಿ ರಥಕ್ಕೆ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಇಂದು ಚಾಲನೆ ನೀಡಿದರು.
          `` ಶಿಕ್ಷಣ ನಮ್ಮ ಮಕ್ಕಳ ಜನ್ಮ ಸಿದ್ಧ ಹಕ್ಕು, ಬಾಲ ಕಾರ್ಮಿಕ ಪದ್ಧತಿ ಅಳಿಯಲಿ,ಮಕ್ಕಳ ದುಡಿತ ಭವಿಷ್ಯಕ್ಕೆ ಚ್ಯುತಿ,ಕೆಲಸ ಸಾಕು ಶಿಕ್ಷಣ ಬೇಕು,ಶಿಕ್ಷಣವಿಲ್ಲದ ಬಾಳು ಅಂಧಕಾರದ ಗೋಳು'' ಎಂಬ ಧ್ಯೇಯ ವಾಕ್ಯಗಳೊಂದಿಗೆ ಜಿಲ್ಲೆಯಾದ್ಯಂತ 10 ದಿನಗಳ ಕಾಲ ಜನ ಜಾಗೃತಿ ರಥ ಸಂಚರಿಸಲಿದೆ.   ದಿನಾಂಕ 20-3-13 ರಂದು ಮಂಗಳೂರು ನಗರ,21-3-13 ರಂದು ಮೂಡಬಿದ್ರೆ ಗ್ರಾಮಾಂತರ,22,23-3-13 ರಂದು ಬಂಟ್ವಾಳ,24,25-3-13 ರಂದು ಪುತ್ತೂರು ,26,27-3-13 ರಂದು ಸುಳ್ಯ ಹಾಗೂ 28,29-3-13 ರಂದು ಬೆಳ್ತಂಗಡಿ ತಾಲೂಕಿನಲ್ಲಿ ಜನಜಾಗೃತಿ ರಥ ಸಂಚರಿಸಲಿದೆಯೆಂದು ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ನಾಗೇಶ್ ಈ ಸಂದರ್ಭದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್, ದಕ್ಷಿಣಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ  ದಯಾನಂದ್.ಕೆ.ಎ., ಕಾರ್ಮಿಕ ಅಯುಕ್ತರಾದ ಡಾ.ಬಾಲಕೃಷ್ಣ, ಕಾರ್ಮಿಕ ಅಧಿಕಾರಿಗಳಾದ ಆನಂದಮೂರ್ತಿ,ಕುಮಾರ್ ಜ್ಞಾನೇಶ್,ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ಶ್ರೀನಿವಾಸ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.