Tuesday, March 5, 2013

ಸ್ಥಳೀಯ ಸಂಸ್ಥೆ ಚುನಾವಣೆ: ಬಿಗಿ ಪೊಲೀಸ್ ಕಣ್ಗಾವಲು

ಮಂಗಳೂರು,ಮಾರ್ಚ್.05:- ನಗರ ಸ್ಥಳೀಯ ಸಂಸ್ಥೆಗಳಿಗೆ ಮಾರ್ಚ್7ರಂದು ನಡೆಯಲಿರುವ ಚುನಾವಣೆ ಹಿನ್ನಲೆಯಲ್ಲಿ ಬಿಗು ಪೊಲೀಸ್  ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಚುನಾವಣಾ ವೀಕ್ಷಕರಾದ ಎ ಕೆ ಮೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಮಹಾನಗರಪಾಲಿಕೆ ಕಚೇರಿಯ ಮಂಗಳ ಸಭಾಂಗಣದಲ್ಲಿ ಪೊಲೀಸ್ ಮತ್ತು ಸೆಕ್ಟರ್ ಅಧಿಕಾರಿಗಳ ವಿಶೇಷ ಪೂರ್ವಭಾವಿ ಸಭೆ ನಡೆಯಿತು.
ಪೊಲೀಸ್ ಗುಪ್ತಾ ಚಾರ ವಿಭಾಗ (ಇಂಟೆಲಿ ಜೆನ್ಸ್ ವಿಂಗ್) ಹೆಚ್ಚು ಜಾಗೃತ ವಾಗಿರ ಬೇಕು. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾ ವಣೆಗೆ ಮತ್ತು ನಿರ್ಭೀತ ವಾತಾ ವರಣ ನಿರ್ಮಾ ಣಕ್ಕೆ ಒತ್ತು ನೀಡಿ ಮುನ್ನೆ ಚ್ಚರಿಕಾ ಕ್ರಮ ಗಳು ಸಮ ರ್ಪಕವಾಗಿ ರಬೇಕು ಎಂದು ಎಚ್ಚರಿಕೆ ನೀಡಿದ ಚುನಾವಣಾ ವೀಕ್ಷಕರು, ಗೊಂದಲಗಳಿಲ್ಲದೆ ಚುನಾವಣೆ ಸಮರ್ಪಕವಾಗಿ ನಡೆಸಲು ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿಗಳ ನಡುವೆ ಸಮನ್ವಯತೆ ಹಾಗೂ ಸಂವಹನ ಸ್ಪಷ್ಟವಾಗಿರಬೇಕೆಂದು ಹೇಳಿದರು.
ಚುನಾವಣಾ ಕರ್ತವ್ಯ ನಿರ್ಲಕ್ಷಿಸಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಎಲ್ಲ ಸೆಕ್ಟರ್ ನ ಪೊಲೀಸ್ ಅಧಿಕಾರಿಗಳೊಂದಿಗೆ ಅವರ ವ್ಯಾಪ್ತಿಯಲ್ಲಿರುವ ಕಾನೂನು ಸುವ್ಯವಸ್ಥೆ ಪಾಲನೆ ಸಂಬಂಧ ಮಾಹಿತಿಯನ್ನು ಪಡೆದುಕೊಂಡು ವಿಶೇಷ ನಿಗಾ ಇರಿಸಲು ಸೂಚನೆ ನೀಡಿದರು.
ಎಲ್ಲ ಮತ ದಾನ ಕೇಂದ್ರ ಗಳ ಸುರ ಕ್ಷೆಯ ಹೊಣೆ ಯನ್ನು ಖಚಿತ ಪಡಿಸಿ ಕೊಳ್ಳಲು ನಿರ್ದೇ ಶನ  ನೀಡಿದ ಚುನಾ ವಣಾ ವೀಕ್ಷ ಕರು, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶ ಗಳ ಬಗ್ಗೆ ಪೊಲೀಸ್ ರಿಂದ ಮಾಹಿತಿ ಪಡೆ ದರು. ರಾಜ್ಯ ಚುನಾ ವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಸಮಾನ ಮಹತ್ವವನ್ನು ನೀಡಿದು, ಈ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯೂ ಸುಲಲಿತವಾಗಲಿದೆ ಎಂದರು.
ಅತಿ ಸೂಕ್ಷ್ಮವೆಂದು ಪೊಲೀಸರು ಗುರುತಿಸಿರುವ ಪ್ರದೇಶಗಳಲ್ಲಿ ಶಾಂತಿ ಸಮಿತಿ ಸಭೆಗಳನ್ನು ನಡೆಸಿ, ಮುಂದೆ ಜನಪ್ರತಿನಿಧಿಗಳಾಗುವವರು ಗಲಾಟೆ ಮಾಡಿದರೆ ಆಗುವ ಪರಿಣಾಮಗಳ ಬಗ್ಗೆಯೂ ವಿವರಿಸಿ; ಎಚ್ಚರಿಕೆ ನೀಡಿ ಎಂದರು.
ಇಂದು ರಾತ್ರಿಯಿಂದಲೇ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು, ಪೊಲೀಸ್ ಕಮಿಷನರ್ ಜೊತೆಯಾಗಿ ಮತದಾನದ ಪೂರ್ವತಯಾರಿ ವೀಕ್ಷಣೆ ನಡೆಸಲಿರುವರು ಎಂದೂ ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಎನ್ ಪ್ರಕಾಶ್, ಪೊಲೀಸ್ ಕಮಿಷನರ್ ಮನೀಷ್ ಕರ್ಬೀಕರ್, ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ್, ಮನಾಪ ಆಯುಕ್ತ ಡಾ ಹರೀಶ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.
ವ್ಯವಸ್ಥಿತ ಚುನಾವಣೆಗೆ ಸೆಕ್ಟರ್ ಅಧಿಕಾರಿಗಳ ಸಭೆ
 ಮತದಾನ ಕೇಂದ್ರಗಳಲ್ಲಿ ಮತದಾನಕ್ಕೆ ಪೂರಕವಾಗಿ ಹಾಗೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಖಾತರಿಪಡಿಸಿಕೊಳ್ಳಿ ಎಂದು ಚುನಾವಣಾ ವೀಕ್ಷಕರಾದ ಎ ಕೆ ಮೊನ್ನಪ್ಪ ಅವರು ಸೂಚಿಸಿದರು.
ಮತದಾನ ಕೇಂದ್ರ ಗಳಲ್ಲಿ ಮತ ದಾನದ ವ್ಯವಸ್ಥೆ ಗಳನ್ನು ಇಂದು ರಾತ್ರಿ ಯೊಳಗೆ ಸಂಪೂರ್ಣ ಗೊಳಿಸಿ. ನಾಳೆ ಮತ ದಾನ ಕೇಂದ್ರ ಗಳಿಗೆ ತಲು ಪಿದ ಬಳಿಕ ಕೀ ಗಳನ್ನು ಹುಡುಕು ವಂತಹ ವ್ಯವಸ್ಥೆ ಇರ ಬಾರದು. ಮತದಾನ ನಿರಂತಕವಾಗಿ ನಡೆಯಬೇಕು. ನಾಳೆ ಮತದಾನ ಕೇಂದ್ರಗಳಿಗೆ ತಲುಪುವವರೆಗೆ 7 ಸಂದೇಶಗಳು ಸೆಕ್ಟರ್ ಅಧಿಕಾರಿಗಳಿಂದ ಬರಬೇಕು. ಅದು ಇತರ ಅಧಿಕಾರಿಗಳು ನೀಡುವ ಸಂದೇಶಗಳೊಂದಿಗೆ ತಾಳೆಯಾಗಬೇಕು. ಹಾಗಾಗಿ ಎಚ್ಚರಿಕೆಯಿಂದಿರಿ ಎಂದ ಅವರು, ನಾಳೆಯಿಂದ ಚುನಾವಣೆ ಮುಗಿಯವವರೆಗೆ ಯಾವುದೇ ತೊಂದರೆ ಚುನಾವಣೆಯಲ್ಲಿ ಆಗದಂತೆ ಎಚ್ಚರವಹಿಸಿ ಎಂದರು.ಈಗಾಗಲೇ ಖುದ್ದಾಗಿ ಹಲವು ಮತದಾನ ಕೇಂದ್ರಗಳಿಗೆ ಖುದ್ದು ತೆರಳಿರುವ ಚುನಾವಣಾ ವೀಕ್ಷಕರು, ಹಲವು ಕೇಂದ್ರಗಳಲ್ಲಿ ಆಗಬೇಕಿರುವ ಪೂರ್ವಸಿದ್ದತೆಗಳ ಬಗ್ಗೆ ಸೂಚನೆ ನೀಡಿದರು.