Sunday, March 24, 2013

ಚುನಾವಣಾ ಖರ್ಚು ವೆಚ್ಚ: ಆಯೋಗದ ಹದ್ದಿನ ಕಣ್ಣು


ಮಂಗಳೂರು, ಮಾರ್ಚ್. 24: ಪ್ರತ್ಯಕ್ಷ ಹಾಗೂ ಪರೋಕ್ಷ ಚುನಾವಣಾ ವೆಚ್ಚದ ಬಗ್ಗೆ ಹೆಚ್ಚಿನ ನಿಗಾ ಇರಿಸಲು ಭಾರತ ಚುನಾವಣಾ ಆಯೋಗ ಪ್ರತ್ಯೇಕ ಖರ್ಚು ವೆಚ್ಚ ವಿಭಾಗವನ್ನೇ ರಚಿಸಿದ್ದು, ವಿಶೇಷ ಫ್ಲೈಯಿಂಗ್ ಸ್ಕ್ವಾಡ್ ಮೂಲಕ ವಿಶೇಷ ನಿಗಾ ಇರಿಸಲಿದೆ ಎಂದು ಖರ್ಚು ವೆಚ್ಚ ವೀಕ್ಷಣಾ ಸಮಿತಿ ಅಧ್ಯಕ್ಷರಾದ  ಪಿ.ಕೆ ದಾಸ್ ಅವರು ಹೇಳಿದರು.
                                          ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಪಡೆದರು.
ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಪಡೆದು ನಂತರ ಏನೂ ಕ್ರಮಕೈಗೊಳ್ಳಾಗುತ್ತಿಲ್ಲ ಎಂಬ ಸಾರ್ವಜನಿಕ ಆರೋಪಕ್ಕೆ ಈ ಬಾರಿಯ ಚುನಾವಣೆಯಲ್ಲಿ ಉತ್ತರಿಸಬೇಕಿದೆ. ಹಾಗಾಗಿ ಕಟ್ಟುನಿಟ್ಟಿನ ಕ್ರಮ ಹಾಗೂ ಪೂರ್ವಭಾವಿ ಸಿದ್ಧತೆಗಳನ್ನು ಆಯೋಗ ಮಾಡಿದೆ; ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾಯರ್ೋನ್ಮುಖರಾಗಬೇಕಿದೆ ಎಂದು ನಿರ್ದೇಶನ ನೀಡಿದ ಅವರು, ವಾಣಿಜ್ಯ ತೆರಿಗೆ ಇಲಾಖೆ, ಆದಾಯ ತೆರಿಗೆ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ಇಲಾಖೆ ಸಮನ್ವಯ ಹಾಗೂ ಸಹಕಾರದಿಂದ ಸೂಕ್ಷ್ಮವಾಗಿ ಬೆಳವಣಿಗೆಗಳನ್ನು ಗಮನಿಸಬೇಕಿದೆ.
ಚುನಾವಣೆ ಅಧಿಕಾರಿಗಳಿಗೆ ಹೊಸದಲ್ಲದಿದ್ದರೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ಇನ್ನಷ್ಟೂ ವಿನೂತನವಾಗಿ ಚಿಂತಿಸಿ ಅಕ್ರಮ ತಡೆಯಲು ಎಲ್ಲ ನಿಟ್ಟಿನಲ್ಲೂ ಕ್ರಮಕೈಗೊಳ್ಳಬೇಕು. ತಪ್ಪಿತಸ್ತರನ್ನು ಗುರುತಿಸಿ ಶಿಕ್ಷೆಯಾಗುವಾಗ ಶಿಕ್ಷೆ ನೀಡಿದ ಬಗ್ಗೆ ಪ್ರಚಾರ ನೀಡುವ ಕೆಲಸವಾಗಬೇಕು. ಮಾಹಿತಿಯೂ ಎಲ್ಲರಿಗೂ ತಲುಪಬೇಕು ಎಂದು ಅವರು ಜಿಲ್ಲಾಧಿಕಾರಿಗಳು ತಿಳಿಸಿದರು.
ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ 50,000 ಕ್ಕೂ ಹೆಚ್ಚು ನಗದು ವ್ಯವಹಾರಗಳಾದಾಗ ಈ ಬಗ್ಗೆ ದಾಖಲಿಸಬೇಕು. ಅಭ್ಯರ್ಥಿಗಳ ಆಸ್ತಿ ವಿವರದ ಅಫಿದವಿತ್ ಜೊತೆಗೆ ಕ್ರಿಮಿನಲ್ ವಿವರಗಳ ಮಾಹಿತಿಯಿದ್ದರೆ ಜೊತೆಗೆ ಎರಡು ಅಫಿದಾವಿತ್ ಗಳನ್ನು ಸಲ್ಲಿಸಬೇಕು. ಇದನ್ನು 24 ಗಂಟೆಯೊಳಗೆ ವೆಬ್ ಸೈಟ್ ಗೆ ಅಪಲೋಡ್ ಮಾಡುವ ಬಗ್ಗೆ ಕ್ರಮಗಳಾಗಬೇಕು. ಖಚರ್ುವೆಚ್ಚದ ಬಗ್ಗೆಗಿನ ಏನೇ ಸಂದೇಹಗಳಿದ್ದರೂ ತನ್ನ ಗಮನಕ್ಕೆ ಖುದ್ದಾಗಿ ತರಬಹುದೆಂದು ಮೊಬೈಲ್ ನಂಬರ ನ್ನೂ ನೀಡಿದರು.
24 ಗಂಟೆ ದೂರು ಕೋಶ, 50,000ಕ್ಕಿಂತ ಹೆಚ್ಚು ರೂಪಾಯಿಗಳ ನಗದು ವ್ಯವಹಾರ ಈ ಎಲ್ಲ  ಮಾಹಿತಿಗಳನ್ನು ಸಂಬಂಧಪಟ್ಟವರಿಗೆ ತಲುಪಿಸಲು ಸೂಕ್ತ ಕ್ರಮ, ಬ್ಯಾಂಕ್ ಅಧಿಕಾರಿಗಳ ಸಭೆ ತಕ್ಷಣವೇ ಆಗಬೇಕು ಎಂದು ನಿರ್ದೇಶಿಸಿದ ಅವರು, ಅಬಕಾರಿ ಇಲಾಖೆಯ ಜೊತೆಯೂ ಸಮನ್ವಯ ಅಗತ್ಯ. ಅವರದ್ದೇ ಪ್ರತ್ಯೇಕ ವ್ಯವಸ್ಥೆ ಚುನಾವಣೆಯಲ್ಲಿ ಅಕ್ರಮ ಮದ್ಯ ತಡೆಗೆ ಇದ್ದರೂ ಇನ್ನಿತರ ಅಧಿಕಾರಿಗಳೊಂದಿಗೆ ಸಮನ್ವಯ ಹಾಗೂ ಪತ್ತೆಯಾದುದನ್ನು ಜನತೆಗೆ ತಿಳಿಸುವ ಕೆಲಸವಾಗಬೇಕು. ಚುನಾವಣಾ ಅಕ್ರಮ ತಡೆಗೆ ಕೇಂದ್ರ ಚುನಾವಣಾ ಆಯೋಗ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿದ್ದು, ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಪಾಸಣೆಯ ವೇಳೆ ಶಾಂತಿ ಹಾಗೂ ಸಂಯಮದಿಂದ ವರ್ತಿಸುವ ಮುಖಾಂತರ ಘರ್ಷಣೆಗೆ ಅವಕಾಶ ನೀಡಬಾರದು ಎಂದರು.
ಮಂಗಳೂರಿನಲ್ಲಿ ವಿಮಾನ ನಿಲ್ದಾಣವಿರುವುದರಿಂದ ಇಲ್ಲೂ ವಿಶೇಷ ತಪಾಸಣೆ ಅಗತ್ಯವಿದೆ. ರೈಲ್ವೇ ನಿಲ್ದಾಣ ಹಾಗೂ ಎಲ್ಲ ರೀತಿಯ ಸಂವಹನಗಳ ಬಗ್ಗೆ ನಿಗಾ ಇರಿಸಬೇಕಿದೆ. ಕೇರಳ ಗಡಿ ಪ್ರದೇಶದ ಸ್ಥಳಗಳಲ್ಲಿ ವಿಶೇಷ ಚೆಕ್ ಪೋಸ್ಟ್ ಬೇಕಿದೆ ಎಂದರು. ಉತ್ತರಿಸಿದ ಪೊಲೀಸ್ ಕಮಿಷನರ್ ಮನೀಷ್ ಕರ್ಬೀಕರ್ ಅವರು, ಚುನಾವಣೆ ಹಿನ್ನಲೆಯಲ್ಲಿ 5 ವಿಶೇಷ ಚೆಕ್ ಪೋಸ್ಟ್ ಗಳನ್ನು ರಚಿಸಲಾಗಿದೆ. ಕೋಸ್ಟ್ ಗಾರ್ಡ್ ನವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕಳೆದ ಜನವರಿಯಿಂದ ಒಟ್ಟು 170 ಕೇಸ್ ಗಳನ್ನು ಹಾಕಲಾಗಿದೆ. ಕ್ರಿಮಿನಲ್ ಶಕ್ತಿಗಳ ವಿರುದ್ಧ ಕಣ್ಣಿಡಲಾಗಿದೆ ಎಂಬ ಮಾಹಿತಿ ನೀಡಿದರು.
ಮತಪಟ್ಟಿಯಲ್ಲಿ ಹೆಸರು ಸೇರಿಸುವಾಗ ಅಕ್ರಮವಾಗಬಾರದು ಎಂಬುದನ್ನು ಸ್ಪಷ್ಟವಾಗಿ ಹೇಳಿದ ಅವರು, ಜಿಲ್ಲಾ ಚುನಾವಣಾಧಿಕಾರಿಗಳು ಕರಡು ಪಟ್ಟಿಯನ್ನು ಖುದ್ದಾಗಿ ಒಮ್ಮೆ ನೋಡಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಅಧಿಕಾರಿಗಳು ತಮ್ಮ ಕಣ್ಣು ಹಾಗೂ ಕಿವಿಗಳನ್ನು ಮುಕ್ತವಾಗಿರಿಸಿಕೊಂಡು ಕೆಲಸ ಮಾಡಬೇಕು. ಕರ್ನಾಟಕದಲ್ಲೂ ಚುನಾವಣಾ ಅಕ್ರಮ ನಡೆಯುತ್ತಿದೆ ಎಂಬುದು ಕೇಂದ್ರ ಚುನಾವಣಾ ಆಯೋಗ್ ಗಮನಿಸಿದ್ದು, ನಿರ್ಲಕ್ಷ್ಯ ವಹಿಸಿದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಲಿದೆ ಎಂದರು.
ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಸ್ವೀಪ್ ನ ಅಧ್ಯಕ್ಷರು ಆದ ಡಾ ಕೆ ಎನ್ ವಿಜಯಪ್ರಕಾಶ್ ಹಾಗೂ ಮನಾಪ ಆಯುಕ್ತ ಡಾ ಹರೀಶ್ ಅವರನ್ನೊಳಗೊಂಡಂತೆ ಚುನಾವಣಾ ಖರ್ಚು ವೆಚ್ಚ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿರುವ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.