Friday, February 10, 2012

ಗೇರು ಕೃಷಿ ಹೆಕ್ಟೇರ್ ಗೆ 20 ಸಾವಿರ ಸಹಾಯಧನ-ಸಂಪತ್ ಸಾಮ್ರಾಜ್ಯ

ಮಂಗಳೂರು,ಫೆಬ್ರವರಿ.10 :ಕರಾವಳಿ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಗೇರು ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗೇರು ಕೃಷಿ ಕೈಗೊಳ್ಳುವ ರೈತರಿಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ವತಿಯಿಂದ ಹೆಕ್ಟೇರ್ಗೆ ರೂ.20,000/- ಸಹಾಯಧನ ದೊರಕಲಿದೆಯೆಂದು ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಎಸ್.ಡಿ.ಸಂಪತ್ ಸಾಮ್ರಾಜ್ಯ ಅವರು ಹೇಳಿದ್ದಾರೆ.ಅವರು ಇಂದು ತೋಟ ಗಾರಿಕೆ ವಿಜ್ಞಾ ನಗಳ ವಿಶ್ವ ವಿದ್ಯಾಲಯ ,ಬಾಗಲ ಕೋಟೆ ,ತೋಟ ಗಾರಿಕೆ ಸಂಶೋ ಧನಾ ಕೇಂದ್ರ ಉಳ್ಳಾಲ,ಮಂಗ ಳೂರು ಹಾಗೂ ವಿವಿಧ ಇಲಾಖೆ ಗಳ ಸಂಯು ಕ್ತಾಶ್ರ ಯದಲ್ಲಿ ಉಳ್ಳಾಲ ತೋಟ ಗಾರಿಕಾ ಸಂಶೋ ಧನಾಲಯದಲ್ಲಿ ಏರ್ಪಡಿಸಿದ್ದ ಗೇರು ಮೇಳ-2012 ಗೇರುಬೆಳೆ ತರಬೇತಿ ಹಾಗೂ ಗೇರು ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.ಗೇರು ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿರುವುದರಿಂದ, ದೇಶ ಪ್ರತೀವರ್ಷ 3525 ಕೋಟಿಗೂ ಅಧಿಕ ವಿದೇಶಿ ವಿನಿಮಯ ಗಳಿಸುತ್ತಿದೆ.ಆದರೆ ವಿಪರ್ಯಾಸವೆಂದರೆ ನಮ್ಮಲ್ಲಿ ಗೇರು ಕೃಷಿ ಇನ್ನೂ ಅಭಿವೃದ್ಧಿ ಹೊಂದದ ಕಾರಣ, ಕಚ್ಚಾ ಗೇರು ಆಮದು ಮಾಡುತ್ತಿರುವ ಪ್ರಮಾಣ ಸಹ ರೂ.3700/- ಕೋಟಿಗಳಾಗಿದೆ. ಆದ್ದರಿಂದ ಹೆಚ್ಚು ಬೇಡಿಕೆ ಇರುವ ಗೇರು ಕೃಷಿಯನ್ನು ರೈತರು ವೈಜ್ಞಾನಿಕ ರೀತಿಯಲ್ಲಿ ಬೆಳೆದಷ್ಟೇ ಆದಲ್ಲಿ ಅವರಿಗೂ ಹೆಚ್ಚು ಆದಾಯ ದೊರಕಿ ದೇಶಕ್ಕೂ ಹೆಚ್ಚು ವಿದೇಶಿ ವಿನಿಮಯ ದೊರಕಲಿದೆಯೆಂದರು.ಮಹಾರಾಷ್ಟ್ರದಲ್ಲಿ ಪ್ರತೀ ಹೆಕ್ಟೇರಿಗೆ 1200 ಕೆಜಿಯಷ್ಟು ಗೇರು ಬೆಳೆಯಾಗುತ್ತಿದ್ದರೆ ನಮ್ಮ ರಾಜ್ಯದಲ್ಲಿ ರೈತರು ಗೇರು ಕೃಷಿಯನ್ನು ಕಾಡು ಉತ್ಪನ್ನ ಎನ್ನುವ ರೀತಿ ತಾತ್ಸಾರ ಮಾಡಿರುವುದರಿಂದ ಹೆಕ್ಟೇರಿಗೆ ಕೇವಲ 500 ಕೆಜಿ ಪಡೆಯಲಾಗುತ್ತಿದೆಯೆಂದರು.ರೈತರು ಒಂದೇ ಬೆಳೆಗೆ ಜೋತು ಬೀಳದೆ ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿ ಕೃಷಿ ಲಾಭದಾಯಕವಾಗಲಿದೆಯೆಂದರು.ಕರ್ನಾಟಕ ರಾಜ್ಯದಲ್ಲಿ ಗೇರು ಕೃಷಿಗೆ ವಿಪುಲ ಅವಕಾಶಗಳಿರುವುದರಿಂದ ರೈತರು ಕಡಿಮೆ ಖರ್ಚಿನ ಅಧಿಕ ಆದಾಯ ತರುವ ಗೇರು ಕೃಷಿಯನ್ನು ಬೆಳೆಯಬಹುದೆಂದು ರೈತರಿಗೆ ಕಿವಿಮಾತು ಹೇಳಿದರು.
ಸಮಾ ರಂಭದ ಅಧ್ಯಕ್ಷ ತೆಯನ್ನು ತೋಟ ಗಾರಿಕಾ ವಿಜ್ಞಾ ನಗಳ ವಿಶ್ವ ವಿದ್ಯಾ ಲಯದ ವಿಸ್ತ ರಣಾ ನಿರ್ದೇ ಶಕ ರಾದ ಡಾ.ವೈ.ಕೆ.ಕೋ ಟಿಕಲ್ ವಹಿಸಿ ದ್ದರು.ಮಂಗ ಳೂರು ತಾಲೂಕು ಕೃಷಿ ಸಹಾ ಯಕ ನಿರ್ದೇ ಶಕ ರಾದ ಡಾ.ನಾರಾ ಯಣ ಶೆಟ್ಟಿ,ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ.ಕೆ.ಆರ್.ಚಂದ್ರಶೇಖರ್,ಪ್ರಗತಿ ಪರ ರೈತ ರೋಹಿತಾಕ್ಷ ರೈಕುಳಾಯಿ ಗುತ್ತು,ಉಳ್ಳಾಲ ಪುರಸಭೆ ಅಧ್ಯಕ್ಷರಾದ ಬಾಜಿಲ್ ಡಿ ಸೋಜಾ ಮುಂತಾದವರು ಭಾಗವಹಿಸಿದ್ದರು. ಉಳ್ಳಾಲ ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ಲಕ್ಷ್ಮಣ್ ಸ್ವಾಗತಿಸಿದರೆ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರಾದ ಡಾ. ಎಚ್.ಹನುಮಂತಪ್ಪ ವಂದಿಸಿದರು.