Saturday, January 28, 2012

ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ:ಮುಖ್ಯಮಂತ್ರಿ ಸದಾನಂದ ಗೌಡ

ಮಂಗಳೂರು,ಜನವರಿ.28:ಪ್ರತಿಭಾನ್ವಿತ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಇಂಜನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಮೂಲ ವಿಜ್ಞಾನ ಕ್ಷೇತ್ರವು ಪ್ರತಿಭಾ ಕೊರತೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೂಲ ವಿಜ್ಞಾನದಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಹಂತದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನೀಡುವ ಶಿಷ್ಯ ವೇತನಕ್ಕಾಗಿ 2012-13ನೆ ಸಾಲಿಗೆ ರಾಜ್ಯ ಸರಕಾರ ಎರಡು ಕೋಟಿ ರೂ.ಗಳ ವಿಶೇಷ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಘೋಷಿಸಿದ್ದಾರೆ.ಜ್ಞಾನಾ ಧಾರಿತ ಮಾಹಿತಿ ಹಾಗೂ ಜೈವಿಕ ತಂತ್ರ ಜ್ಞಾನ ಕ್ಷೇತ್ರ ದಲ್ಲಿ ಬೆಂಗ ಳೂರು ವಿಶ್ವ ಮಾನ್ಯತೆ ಪಡೆ ದಿರು ವುದು ರಾಜ್ಯಕ್ಕೆ ಹೆ ಮ್ಮೆಯ ಸಂ ಗತಿ ಎಂದು ಹೇಳಿದ ಅವರು, ನ್ಯಾನೋ ತಂತ್ರ ಜ್ಞಾನ 21ನೆ ಶತ ಮಾನ ದಲ್ಲಿ ಎಲ್ಲಾ ಕ್ಷೇ ತ್ರದಲ್ಲಿ ಕ್ರಾಂತಿ ಕಾರಿ ಬದಲಾವಣೆ ತರುವ ನಿರೀಕ್ಷೆಯಿದೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡಿದಂತೆ ಈ ಭರವಸೆಯ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸುಸಜ್ಜಿತ ನ್ಯಾನೋಪಾರ್ಕಿಂಗ್ ನಿರ್ಮಾಣಕ್ಕೆ ಸರಕಾರ ಕ್ರಮ ಕೈಗೊಂಡಿದೆ ಎಂದವರು ತಿಳಿಸಿದರು.
ರಾಜ್ಯವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ಬರಗಾಲ, ಜಲಕ್ಷಾಮ, ಕೃಷಿ ಕ್ಷೇತ್ರದ ಸಮಸ್ಯೆಗಳು, ಸಮುದ್ರದ ಕೃಷಿ ಉತ್ಪನ್ನಗಳ ಸಂಗ್ರಹಣೆ, ಮೌಲ್ಯವರ್ಧನೆಗಾಗಿ ನಿರಂತರ ಹಸಿರು ಕ್ರಾಂತಿ, ಸಮುದ್ರದ ಮೀನು ಉತ್ಪಾದನೆಯ ಸುಸ್ಥಿರ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ವಿದ್ಯುತ್ ಸಮಸ್ಯೆ, ಹವಾಮಾನ ಬದಲಾವಣೆ ಮೊದಲಾದವುಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಹೊಸ ಸಂಶೋಧನೆ ಮತ್ತು ಅವಿಷ್ಕಾರಗಳು ಮೂಡಿಬರಬೇಕಾಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಿಸಿದರು.ವಿಜ್ಞಾನ ಜಾಗೃತಿ ಮತ್ತು ವಿಜ್ಞಾನ ಶಿಕ್ಷಣಕ್ಕೆ ರಾಜ್ಯ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾ ಕ್ಷೇತ್ರದಲ್ಲಿ ನೀಡುವ ಅನುದಾನದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದವರು ಈ ಸಂದರ್ಭ ತಿಳಿಸಿದರು.ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಮಾತನಾಡಿ, ಕುಡಿಯುವ ನೀರು, ಬಡತನೆ, ಅಪೌಷ್ಠಿಕತೆ, ವಿದ್ಯುತ್ ಮೊದಲಾದ ಸಮಸ್ಯೆಗಳನ್ನು ಎದುರಿಸುವಲ್ಲಿ ವಿಜ್ಞಾನಿಗಳು ಸೂಕ್ತ ಮಾಹಿತಿಯನ್ನು ನೀಡಬೇಕಾಗಿದೆ ಎಂದರು.
ರಾಜ್ಯ ಸರಕಾರವು ವಿಜ್ಞಾನ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ವಿವರ ನೀಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮೀನುಗಾರಿಕಾ ಸಚಿವ ಆನಂದ್ ವಸಂತ್ ಅಸ್ನೋಟಿಕ್,ಪ್ರತಿ ಜಿಲ್ಲೆಯಲ್ಲಿಯೂ ವಿಜ್ಞಾನ ಉಪ ಕೇಂದ್ರಗಳ ನಿರ್ಮಾಣಕ್ಕೆ ರಾಜ್ಯ ಸರಕಾರವು ತಲಾ 2.6 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದ್ದು, ಈಗಾಗಲೇ ತಲಾ 1.3 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಧಾರವಾಡದ ವಿಜ್ಞಾನಕೇಂದ್ರ ಫೆಬ್ರವರಿಯಲ್ಲಿ ಆರಂಭಗೊಳ್ಳಲಿದ್ದರೆ, ಪಿಲಿಕುಳ ವಿಜ್ಞಾನ ಕೇಂದ್ರ ಜೂನ್ ತಿಂಗಳಲ್ಲಿ ಆರಂಭಗೊಳ್ಳುವುದಾಗಿ ತಿಳಿಸಿದರು.ಕರ್ನಾ ಟಕ ವಿಜ್ಞಾನ ಮತ್ತು ತಂತ್ರ ಜ್ಞಾನ ಅಕಾ ಡೆಮಿ ಆಶ್ರಯ ದಲ್ಲಿ `ವಿಜ್ಞಾನ ಮತ್ತು ತಂತ್ರ ಜ್ಞಾನದ ಹೊಸ ದಿಗಂ ತಗಳು: ಅವ ಕಾಶ ಗಳು ಮತ್ತು ಸವಾಲು ಗಳು' ಎಂಬ ವಿಷ ಯದಲ್ಲಿ ನಡೆ ಯಲಿ ರುವ ಎರಡು ದಿನ ಗಳ ಸಮ್ಮೇ ಳನ ವನ್ನು ಮಂಗ ಳೂರು ವಿಶ್ವ ವಿದ್ಯಾ ನಿಲ ಯದ ವಿಜ್ಞಾನ ಸಂ ಕೀರ್ಣ ಆವ ರಣ ದಲ್ಲಿ ಅವ ರಿಂದು ಉದ್ಘಾ ಟಿಸಿ ಮಾತ ನಾಡಿ ದರು.ಸ್ಪರ್ಧಾ ತ್ಮಕ ಜಗತ್ತಿ ನಲ್ಲಿ ಸವಾ ಲುಗ ಳನ್ನು ಸ್ವೀ ಕರಿ ಸುವ ಪ್ರವೃತ್ತಿ ಯುವ ಕರಲ್ಲಿ ಮೂಡಿ ಬಂದರೆ ಅವ ಕಾಶ ಗಳು ತನ್ನಿಂದ ತಾನಾ ಗಿಯೇ ಒದಗಿ ಬರು ತ್ತದೆ ಎನ್ನುತ್ತಾ ಅವ ಕಾಶಗಳನ್ನು ಉಪಯೋಗಿಸಿಕೊಳ್ಳುವಂತೆ ಯುವ ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, 40-50 ವರ್ಷಗಳಲ್ಲಿ ಆಗಿರುವ ಸಂಶೋಧನೆಗಳು, ಅವಿಷ್ಕಾರಗಳು ಒಂದು ವರ್ಷದಲ್ಲಿ ಆಗುವ ಸಾಧ್ಯತೆಗಳು ನಮ್ಮ ಎದುರಿಗಿದೆ ಎಂದವರು ಹೇಳಿದರು.ಈ ಸಮ್ಮೇಳನದಲ್ಲಿ ಮೂಡಿ ಬರುವ ವಿಜ್ಞಾನ-ತಂತ್ರಜ್ಞಾನದ ಬದಲಾವಣೆ ಜನಜೀವನವನ್ನು ಉತ್ತಮ ಪಡಿಸಲು ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬಳಸಲು ಸಹಕಾರಿಯಾಗಲಿ. ಕರಾವಳಿಯ ನಿರ್ವಹಣೆ ಹಾಗೂ ಸಮುದ್ರದ ಮೀನುಗಾರಿಕೆಯ ಬಗ್ಗೆಯೂ ಚರ್ಚೆಯಾಗಲಿದ್ದು, ಇದು ಕರಾವಳಿಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂಬುದಾಗಿ ಸಮ್ಮೇಳನದ ಬಗ್ಗೆ ಆಶಯ ವ್ಯಕ್ತಪಡಿಸಿದರು.ಸಮಾ ರಂಭ ದಲ್ಲಿ ಆಹಾರ ಸಂಸ್ಕ ರಣಾ ತಂತ್ರ ಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮೈ ಸೂರಿನ ಕೇಂ ದ್ರೀಯ ಆಹಾರ ತಂತ್ರ ಜ್ಞಾನ ಸಂಶೋ ಧನಾ ಸಂಸ್ಥೆಯ ನಿವೃತ್ತ ನಿರ್ದೇ ಶಕ, ನ್ಯೂಟ್ರಿ ಷನ್ ಸೊಸೈಟಿ ಆಫ್ ಇಂಡಿ ಯಾದ ಅಧ್ಯಕ್ಷ ಪದ್ಮಶ್ರೀ ಡಾ.ವಿ. ಪ್ರಕಾಶ್ ಅವರಿಗೆ ಜೀವ ಮಾನ ಸಾಧನೆ ಪ್ರಶಸ್ತಿ ಯನ್ನು ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ನೀಡಿ ಗೌರವಿಸಿದರು.ಮಂಗ ಳೂರು ವಿಶ್ವ ವಿದ್ಯಾ ನಿಲ ಯದ ಕುಲ ಪತಿ ಪ್ರೊ.ಟಿ.ಸಿ. ಶಿವ ಶಂಕ ರಮೂರ್ತಿ ಸಮಾ ರಂಭದ ಅಧ್ಯ ಕ್ಷತೆ ವಹಿ ಸಿದ್ದರು.ರಾಜ್ಯ ಸರ ಕಾರದ ಪ್ರಧಾನ ಕಾರ್ಯ ದರ್ಶಿ ಎಂ.ಎನ್. ವಿದ್ಯಾ ಶಂಕರ್, ಜಿಲ್ಲಾ ಉಸ್ತು ವಾರಿ ಸಚಿವ ಕೃಷ್ಣ ಜೆ. ಪಾಲೆ ಮಾರ್, ಅಕಾ ಡೆಮಿ ಅಧ್ಯಕ್ಷ ಪದ್ಮ ಭೂಷಣ ಪ್ರೊ. ಯು.ಆರ್. ರಾವ್,ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಡಾ.ಎಚ್. ಹೊನ್ನೇಗೌಡ,ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಕೆ. ಚಿನ್ನಪ್ಪ ಗೌಡ ಉಪಸ್ಥಿತರಿದ್ದರು.