Saturday, January 7, 2012

ನಂದಿನಿ ಹಾಲು ದರ ಏರಿಕೆ

ಮಂಗಳೂರು,ಜನವರಿ.07:ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಲೀಟರ್ ಹಾಲು ಉತ್ಪಾದನೆಗೆ ಹೆಚ್ಚುತ್ತಿರುವ ವೆಚ್ಚವನ್ನು ಸಾಧ್ಯವಾದಷ್ಟು ಸರಿದೂಗಿಸುವುದು ಪ್ರಸಕ್ತ ಪರಿಸ್ಥಿತಿಯಲ್ಲಿ ಅತ್ಯವಶ್ಯಕವಾಗಿರುತ್ತದೆ.

ತೀವ್ರ ವಾಗಿ ಇಳಿ ಮುಖ ವಾಗು ತ್ತಿರುವ ಹಾಲು ಉತ್ಪಾ ದನೆ ಉತ್ತೇಜಿಸಿ ಹೆಚ್ಚಿಸುವ ದೃಷ್ಠಿ ಯಿಂದ ಹಾಗೂ ಡೈರಿಯಲ್ಲಿ ಆಗುತ್ತಿರುವ ಅಧಿಕ ಸಾಗಾಣಿಕೆ / ಇಂಧನ/ ಸಿಬ್ಬಂದಿ / ವಿದ್ಯುಚ್ಚಕ್ತಿ ಇತ್ಯಾದಿ ವೆಚ್ಚಗಳನ್ನು ಭರಿಸಬೇಕಾದ ಅನಿವಾರ್ಯತೆಯಿಂದ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರಿಗೆ ರೂ.3.00 ಹೆಚ್ಚಿಸಲು ಕರ್ನಾಟಕ ಸರ್ಕಾರವು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ,ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರಿಗೆ ಕನಿಷ್ಟ ರೂ.3.00 ಹೆಚ್ಚಿಸಲು ಕರ್ನಾಟಕ ಹಾಲು ಮಹಾಮಂಡಳಿಯು ತೀರ್ಮಾನಿಸಿರುತ್ತದೆ. ಅದರಂತೆ ದಿನಾಂಕ 08.01.2012 ರ ಬೆಳಗಿನ ಸರದಿಯಿಂದ ಅನ್ವಯವಾಗುವಂತೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವು ಈ ಕೆಳಕಂಡಂತಿರುತ್ತದೆ. ನಂದಿನಿಯ ಅಧಿಕೃತ ಡೀಲರುಗಳು ನಿಗದಿತ ದರದಲ್ಲಿಯೇ ನಂದಿನಿ ಹಾಲು ಮತ್ತು ಮೊಸರನ್ನು ಮಾರಾಟ ಮಾಡಲು ತಿಳಿಸಲಾಗಿದೆ.
ಕ್ರ. ಸಂ. ವಿವರ ಹಳೆಯ ದರ `. ಪರಿಷ್ಕೃತ ದರ `.
1 ನಂದಿನಿ ಟೋನ್ಡ್ ಹಾಲು (500 ಮಿ.ಲೀ. ಸ್ಯಾಚೆಟ್) 11.00 12.50
2 ನಂದಿನಿ ಟೋನ್ಡ್ ಹಾಲು (1000 ಮಿ.ಲೀ. ಸ್ಯಾಚೆಟ್) 22.00 25.00
3 ನಂದಿನಿ ಹೋಮೊಜಿನೈಸ್ಡ್ ಹಸುವಿನ ಹಾಲು (500 ಮಿ.ಲೀ. ಸ್ಯಾಚೆಟ್) 12.00 14.00
4 ನಂದಿನಿ ಹೋಮೊಜಿನೈಸ್ಡ್ ಹಸುವಿನ ಹಾಲು (6 ಲೀ. ಜಂಬೋ ಸ್ಯಾಚೆಟ್) 144.00 168.00
5 ನಂದಿನಿ ಶುಭಂ ಹಾಲು (500 ಮಿ.ಲೀ. ಸ್ಯಾಚೆಟ್) 13.50 15.50
6 ಮೊಸರು (200 ಗ್ರಾಂ) 7.00 8.00
7 ಮೊಸರು (400 ಗ್ರಾಂ) 12.00 14.00
8 ಮೊಸರು (1 ಕೆಜಿ) 28.00 32.00
9 ಮೊಸರು (6 ಕೆಜಿ ಜಂಬೋ ಸ್ಯಾಚೆಟ್) 162.00 186.00

ಒಕ್ಕೂಟದಲ್ಲಿ ಈಗಾಗಲೇ ದಾಸ್ತಾನಿರುವ ಹಳೆಯ ದರ ನಮೂದಿಸಿರುವ ಪ್ಯಾಕಿಂಗ್ ಫಿಲಂ ಮುಗಿಯುವವರೆಗೆ ಅದೇ ಫಿಲಂನಲ್ಲಿ ನಂದಿನಿ ಹಾಲು ಮತ್ತು ಮೊಸರನ್ನು ಸರಬರಾಜು ಮಾಡಲಾಗುವುದು. ಎಲ್ಲಾ ಗ್ರಾಹಕರು ಹಾಗೂ ನಂದಿನಿ ಹಾಲಿನ ಅಧಿಕೃತ ಡೀಲರುಗಳು ಪರಿಷ್ಕೃತ ದರದಲ್ಲಿಯೇ ವ್ಯವಹರಿಸಿ ಒಕ್ಕೂಟದೊಂದಿಗೆ ಸಹಕರಿಸಲು ವಿನಂತಿಸಲಾಗಿದೆ.